Mumbain Rain: ನಿನ್ನೆಯಿಂದ ಬಿಡದೇ ಸುರಿಯುತ್ತಿರುವ ಮಳೆ ವಾಣಿಜ್ಯ ನಗರಿ ಮುಂಬೈನ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಭಾರೀ ಮಳೆಯ ಪರಿಣಾಮ ಇದುವರಗೆ ಕನಿಷ್ಠ 22 ಜನ ಜೀವಚೆಲ್ಲಿದ್ದು 6 ಜನ ಗಾಗೊಂಡಿದ್ದಾರೆ. ಪ್ರಮುಖವಾಗಿ ಭೂಕುಸಿತ ಮತ್ತು ಗೋಡೆ ಕುಸಿತ ಉಂಟಾದ ಬಗ್ಗೆ ವರದಿಯಾಗಿದೆ. ಒಂದೇ ದಿನದಲ್ಲಿ ಮುಂಬೈನ 11 ಕಡೆಗಳಲ್ಲಿ ಗೋಡೆ ಕುಸಿತ ಮತ್ತು ಭೂ ಕುಸಿತ ಉಂಟಾಗಿದೆ. 13 ಕಡೆ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು 9 ಕಡೆ ಮರಗಳು ಧರೆಗುರುಳಿವೆ. ಇವಿಷ್ಟೂ ಕೇವಲ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನವರೆಗಿನ ಅವಘಡಗಳಾಗಿವೆ. ಮುಂಬೈನ ಮಾಹುಲ್ನ ನ್ಯೂ ಭಾರತ್ ನಗರ್ನಲ್ಲಿ ನಿರಂತರ ಮಳೆಯಿಂದಾಗಿ ಗೋಡೆಯೊಂದು ಕುಸಿದ ಪರಿಣಾಮ 17 ಜನ ಸಾವನ್ನಪಪ್ಇದ್ದು ಇಬ್ಬರು ಆಸ್ಪತ್ರೆ ಸೇರಿದ್ದಾರೆ. ವಿಖ್ರೋಲಿ ಈಸ್ಟ್ನ ಸೂರ್ಯನಗರದ ಪಂಚಶೀಲ್ ಚಾಲ್ನಲ್ಲಿ ಕೆಲ ಗುಡಿಸಲುಗಳು ನೆಲಸಮವಾಗಿದ್ದು 3 ಜನ ಸಾವನ್ನಪ್ಪಿದ್ದಾರೆ.
ಚಾಂದಿವಲಿಯಲ್ಲಿ ಮತ್ತೊಂದೆಡೆ ಗೋಡೆ ಕುಸಿದಿದ್ದು ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಅಂಧೇರಿ ವೆಸ್ಟ್ನ ಫಿರ್ದೌಸ್ ಮಿಠಾಯಿ ಶಾಪ್ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ವ್ಯಕ್ತೊಯೊಬ್ಬ ಸಾವನ್ನಪ್ಪಿದ್ದಾನೆ. ಈ ಎಲ್ಲಾ ಅವಘಡಗಳಿಗೆ ಪ್ರಧಾನಿ ಮೋದಿ ವ್ಯಾಪಕ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ರಾಷ್ಟ್ರೀಯ ವಿಪತ್ತು ಪರಿಹಾರ ಫಂಡ್ನಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಗಾಯಾಳುಗಳಿಗೆ 50,000 ರೂಪಾಯಿ ಪರಿಹಾರ ಘೋಷಣೆಯಾಗಿದೆ. ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಕೂಡಾ ಅವಘಡಗಳಿಗೆ ಸಂತಾಪ ಸೂಚಿಸಿದ್ದಾರೆ.
ಇದನ್ನೂ ನೋಡಿ: Unlock Karnataka: ಮತ್ತಷ್ಟು ನಿಯಮ ಸಡಿಲ, ರಾತ್ರಿ 10ರಿಂದ ನೈಟ್ ಕರ್ಫ್ಯೂ ಸಿನಿಮಾ ಥಿಯೇಟರ್, ಕಾಲೇಜುಗಳು ಓಪನ್
ಹವಾಮಾನ ಇಲಾಖೆ ಮುಂಬೈಗೆ ರೆಡ್ ಅಲರ್ಟ್ ಘೋಷಿಸಿತ್ತು. ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದಾಗಿ ಮುಂಬೈನ ಬಹುತೇಕ ರಸ್ತೆಗಳು ಜಲಾವೃತಗೊಂಡಿವೆ. ಲೋಕಲ್ ರೈಲುಗಳು ಮತ್ತು ರಸ್ತೆ ಮೇಲಿನ ವಾಹನಗಳು ನಿಂತಲ್ಲೇ ನಿಲ್ಲುವಂತಾಯ್ತು. ನಗರದ 5 ಸ್ಥಳಗಳಲ್ಲಿ ಇರುವ ಮಳೆಮಾಪನ ಕೇಂದ್ರಗಳಲ್ಲಿ ಬೆಳಗ್ಗಿನ ಜಾವ 1ರಿಂದ 2 ಗಂಟೆಯ ವೇಳೆಗೆ 100 ಮಿ.ಮೀ ಮಳೆಯಾಗಿರುವುದು ದಾಖಲಾಗಿದೆ. ಚೂನಾಭಾಟ್ಟಿ, ಸಯಾನ್, ದಾದರ್, ಗಾಂಧಿ ಮಾರ್ಕೆಟ್, ಚೆಂಬೂರ್, ಕುರ್ಲಾ ಮುಂತಾದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಅನಾಹುತವಾಗಿದೆ. 12 ಗಂಟೆಗಳ ಕಾಲ ಸತತವಾಗಿ ಸುರಿದ ಮಳೆ ಬೆಳಗ್ಗೆ 6.30ರವರಗೆ 120 ಮಿ.ಮೀನಷ್ಟು ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಮಳೆಯ ಆರ್ಭಟ ಇನ್ನೂ ಮುಂದುವರೆಯಲಿದೆ ಎಂದು ಎಚ್ಚರಿಕೆಯನ್ನೂ ನೀಡಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ