Kerala Rains: ಇಡುಕ್ಕಿ, ಮುಲ್ಲಪೆರಿಯರ್​ ಡ್ಯಾಂ ನೀರಿನ ಮಟ್ಟ ಹೆಚ್ಚಳ; ಮತ್ತೊಂದು ಪ್ರವಾಹ ಭೀತಿ

ಕೊಲ್ಲಂ, ಆಲಪ್ಪುಳ, ಎರ್ನಾಕುಲಂ, ತಿರುವನಂತಪುರಂ, ತ್ರಿಶೂರ್ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ  ಭಾರೀ ಮಳೆಯಾಗುವ ಮುನ್ಸೂಚನೆ ಆಗುವ ಹಿನ್ನಲೆ ಯೆಲ್ಲೋ ಆಲರ್ಟ್​ ಅನ್ನು ಘೋಷಿಸಲಾಗಿದೆ.

ಕೇರಳದಲ್ಲಿ ಭಾರೀ ಮಳೆ ಮತ್ತು ಭೂಕುಸಿತ

ಕೇರಳದಲ್ಲಿ ಭಾರೀ ಮಳೆ ಮತ್ತು ಭೂಕುಸಿತ

  • Share this:
    ತಿರುವನಂತಪುರಂ (ಅ. 22): ಕೇರಳದಲ್ಲಿ ಮುಂಗಾರು ಮಳೆ (Kerala Rains) ಅಬ್ಬರಕ್ಕೆ ಈಗಾಗಲೇ 40 ಮಂದಿ ಸಾವನ್ನಪ್ಪಿದ್ದಾರೆ. ಈ ನಡುವೆ ನಿರಂತರ ಮಳೆಗೆ ಇಡುಕ್ಕಿ (Idukki Dam) ಮತ್ತು ಮುಲ್ಲಪೆರಿಯರ್​ ಜಲಾಶಯ (Mullaperiyar Dam) ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಜನರಲ್ಲಿ ಪ್ರವಾಹದ ಆತಂಕ ಮನೆ ಮಾಡಿದೆ. ಅಕ್ಟೋಬರ್​ 30ರವರೆಗೆ ಮಳೆಯಾಗುವ ಸಾಧ್ಯತೆ ಇದ್ದು, ಪ್ರವಾಹದ ಎಚ್ಚರಿಕೆಯನ್ನು ನೀಡಲಾಗಿದೆ. ಈ ನಡುವೆ ಹಿಂದೆ ಇಡುಕ್ಕಿ ಜಲಾಶಯದಿಂದ ಆದ ಅನಾಹುತದಿಂದ ಪಾಠ ಕಲಿತಿರುವ ಕೇರಳ ಈ ಬಾರಿ ಈಗಾಗಲೇ ಅಣೆಕಟ್ಟಿನ ಗೇಟನ್ನು 5 ಬಾರಿ ತೆರೆಯುವ ಮೂಲಕ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗದಂತೆ ಮುನ್ನೆಚ್ಚರಿಕೆ ವಹಿಸಿದೆ. ಜೊತೆಗೆ ತಗ್ಗು ಮತ್ತು ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಸೂಚನೆ ನೀಡಿದೆ.

    ಮುಂದುವರೆದ ಮಳೆ

    ಗುರುವಾರ ಕೂಡ ಕೇರಳದ ಹಲವು ಭಾಗಗಳಲ್ಲಿ ಗುಡುಗು ಮತ್ತು ಮಿಂಚಿನಿಂದ ಕೂಡಿದ್ದ ಭಾರೀ ಮಳೆಯಾಗಿದೆ. ಇಡುಕ್ಕಿ, ಪಾಲಕ್ಕಾಡ್, ಪತ್ತನಂತಿಟ್ಟ, ಕೊಟ್ಟಾಯಂ, ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್ ಮತ್ತು ಕಣ್ಣೂರು ಎಂಟು ಜಿಲ್ಲೆಗಳಲ್ಲಿ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ.

    ಪ್ರಧಾನಿ ನೆರವಿನ ಭರವಸೆ

    ಭಾರೀ ಮಳೆ ಮತ್ತು ಭೂ ಕುಸಿತದಿಂದ ತತ್ತರಿಸಿರುವ ಕೇರಳಕ್ಕೆ ಸಕಲ ನೆರವು ನೀಡುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ. ಈ ಸಂಬಂಧ ಕೇರಳ ಮುಖ್ಯಮಂತ್ರಿ ಪಿಣರಾಇ ವಿಜಯನ್​​ ಜೊತೆ ದೂರವಾಣಿ ಸಂಪರ್ಕ ನಡೆಸಿರುವ ಅವರು, ಅಲ್ಲಿನ ಪರಿಸ್ಥಿತಿಯ ವಿವರಣೆ ಪಡೆದಿದ್ದಾರೆ.

    ಸಿಎಂ ತುರ್ತು ಸಭೆ

    ಹಲವು ಜಿಲ್ಲೆಗಳಲ್ಲಿ ಭೂ ಕುಸಿತ ಸಂಭವಿಸುತ್ತಿರುವುದು ಸಾಕಷ್ಟು ಆತಂಕ ಮೂಡಿಸಿದೆ. ಈ ಸಂಬಂಧ ಮುಖ್ಯಮಂತ್ರಿ ವಿಜಯನ್​ ಇಂದು ತುರ್ತು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಜನರ ಜೀವ ಉಳಿಸಲು ಎಲ್ಲಾ ಪ್ರಯತ್ನ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಕೊಲ್ಲಂ, ಆಲಪ್ಪುಳ, ಎರ್ನಾಕುಲಂ, ತಿರುವನಂತಪುರಂ, ತ್ರಿಶೂರ್ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ  ಭಾರೀ ಮಳೆಯಾಗುವ ಮುನ್ಸೂಚನೆ ಆಗುವ ಹಿನ್ನಲೆ ಯೆಲ್ಲೋ ಆಲರ್ಟ್​ ಅನ್ನು ಘೋಷಿಸಲಾಗಿದೆ.

    ಇದನ್ನು ಓದಿ: 100 ಕೋಟಿ ಲಸಿಕೆ ಸಾಧನೆ; ದೇಶದ ಜನರಿಗೆ ಮೋದಿ ಶುಭಾಶಯ; ಇಲ್ಲಿದೆ ಪ್ರಧಾನಿ ಭಾಷಣದ ಹೈಲೈಟ್ಸ್​​

    ಏರಿಕೆಯಾದ ನೀರಿನ ಮಟ್ಟ

    ಕಳೆದ ಕೆಲವು ದಿನಗಳಿಂದ, ಮುಲ್ಲಪೆರಿಯಾರ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ನಿರಂತರವಾಗಿ ಏರುತ್ತಿದ್ದು, ಕೇರಳದಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೇರಳದ ಐದು ಜಿಲ್ಲೆಗಳಾದ ಇಡುಕ್ಕಿ, ಕೊಟ್ಟಾಯಂ, ಎರ್ನಾಕುಲಂ, ಅಲಪುಳ ಮತ್ತು ತ್ರಿಶೂರ್, ಮುಲ್ಲಪೆರಿಯಾರ್ ಅಣೆಕಟ್ಟು ಒಡೆದರೆ ಹೆಚ್ಚಿನ ಅನಾಹುತ ಸಂಭವಿಸಲಿದೆ.

    ಇದನ್ನು ಓದಿ: Amazon Prime Subscription ದರ ಹೆಚ್ಚಳ; ಮಾಸಿಕ ಸೇರಿದಂತೆ ವಾರ್ಷಿಕ ಪ್ಲಾನ್​ ಬೆಲೆ ಇಂತಿದೆ

    ಗರಿಷ್ಠಮಟ್ಟ ತಲುಪಿದ ಮುಲ್ಲ ಪೆರಿಯರ್​ ಜಲಾಶಯ

    ಮುಲ್ಲ ಪೆರಿಯರ್​ ಜಲಾಶಯದ ಗರಿಷ್ಠ ನೀರಿನ ಮಟ್ಟ 142 ಅಡಿಗಳಿದೆ. ಗುರುವಾರ ಸಂಜೆ 5 ಗಂಟೆಗೆ, ಅಣೆಕಟ್ಟಿನ ಜಲಾಶಯದಲ್ಲಿ 135.10 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಇನ್ನು ಈ ಜಲಾಶಯದ ತಮಿಳುನಾಡು ಉಸ್ತುವಾರಿಯಲ್ಲಿದೆ. ಕೇಂದ್ರ ಜಲ ಆಯೋಗದ ಆದೇಶದಂತೆ ತಮಿಳುನಾಡು ವರ್ಷಕ್ಕೆ ಎರಡು ಬಾರಿ 142 ಅಡಿಗಳಷ್ಟು ನೀರಿನ ಮಟ್ಟವನ್ನು ಉಳಿಸಿಕೊಳ್ಳಬಹುದು. ಈ ಗುರುತು ತಲುಪಿದರೆ ಮಾತ್ರ ಅದು ಬಾಗಿಲು ತೆರೆಯಬಹುದು

    ನಿಯಮವಳಿಯಂತೆ, ಕೇರಳ ಸರ್ಕಾರ ಜಲಾಶಯದ ನೀರಿನ ಮಟ್ಟ 136 ಅಡಿ ತಲುಪಿದಾಗ ತಮಿಳುನಾಡು ಸರ್ಕಾರವನ್ನುಎಚ್ಚರಿಸುತ್ತದೆ. ಈ ನೀರಿನ ಮಟ್ಟ 138 ಅಡಿಗಳಿಗೆ ದಾಖಲಿಸಿದಾಗ ಎರಡನೇ ಎಚ್ಚರಿಕೆಯನ್ನು ನೀಡಲಾಗುವುದು. 140 ಅಡಿ ಮತ್ತು 141 ಅಡಿ. ನೀರಿನ ಮಟ್ಟ 142 ಅಡಿ ತಲುಪಿದರೆ, ಅಣೆಕಟ್ಟೆಯ ಬಾಗಿಲುಗಳನ್ನು ತೆರೆಯಲಾಗುತ್ತದೆ
    ಪೆರಿಯಾರ್ ನದಿಯ ಮೂಲಕ ಒಳಹರಿವಿನ ನೀರಿನ ಪ್ರಮಾಣ ಹೆಚ್ಚಾದ ಹಿನ್ನಲೆ, ಇಡುಕ್ಕಿ ಜಲಾಶಯದ ನೀರಿನ ಮಟ್ಟವು ಹೆಚ್ಚಿದೆ. ಪರಿಣಾಮ ಚೆರುತೋನಿ ಜಲಾಶಯದ ಬಾಗಿಲು ತೆರೆಯಲಾಗಿದೆ.
    Published by:Seema R
    First published: