Kerala Rain: ಮಳೆಯ ಅಬ್ಬರಕ್ಕೆ ಕೇರಳ ತತ್ತರ, 4 ಮಂದಿ ಸಾವು: 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಕೇರಳದ ಕೊಟ್ಟಾಯಂ, ಪತ್ತನಂತಿಟ್ಟದಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ಅಬ್ಬರಕ್ಕೆ ನಾಲ್ವರು ಬಲಿಯಾಗಿದ್ದಾರೆ. ಒಬ್ಬರಿಗೆ ಗಂಭೀರ ಗಾಯಗಳಾಗಿವೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರಾಜ್ಯದ ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ.

ಕೇರಳದಲ್ಲಿ ಮಳೆಯ ಅಬ್ಬರ

ಕೇರಳದಲ್ಲಿ ಮಳೆಯ ಅಬ್ಬರ

  • Share this:
ದೇಶದ ಹಲವು ಜಿಲ್ಲೆಗಳಲ್ಲಿ ವರುಣ ಆರ್ಭಟ ಹೆಚ್ಚಾಗಿ. ಭಾರೀ ಮಳೆ (Heavy Rain)ಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗುತ್ತಿವೆ. ಕರ್ನಾಟಕ (Karnataka)ದಲ್ಲೂ ಮಳೆ ಬರುತ್ತಿದ್ದು, ಜನ ತತ್ತರಿಸಿ ಹೋಗಿದ್ದಾರೆ. ಜಮ್ಮು-ಕಾಶ್ಮೀರದಲ್ಲೂ ಮಳೆ ಅವಾಂತರವನ್ನು ಸೃಷ್ಟಿಸುತ್ತಿದ್ದು, ನಿನ್ನ ಇಬ್ಬರು ಬಾಲಕರು ಸಾವನ್ನಪ್ಪಿದ್ದರು. ಮೂವರು ನಾಪತ್ತೆಯಾಗಿದ್ರು. ಇನ್ನು ಕೇರಳ (Kerala)ದ ಕೊಟ್ಟಾಯಂ, ಪತ್ತನಂತಿಟ್ಟದಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ಅಬ್ಬರಕ್ಕೆ ನಾಲ್ವರು ಬಲಿ (4 Dead)ಯಾಗಿದ್ದಾರೆ. ಒಬ್ಬರಿಗೆ ಗಂಭೀರ ಗಾಯಗಳಾಗಿವೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರಾಜ್ಯದ ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್  (Red alert) ಘೋಷಿಸಿದೆ. ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ. ತಗ್ಗು ಪ್ರದೇಶದ ನಿವಾಸಿಗಳು ಜೀವ ಕೈಯಲ್ಲಿಡಿದು ಬದುಕುತ್ತಿದ್ದಾರೆ.

ನಾಲ್ವರು ಸಾವು, ಒಬ್ಬರಿಗೆ ಗಾಯ
ಕೇರಳದ ಕೊಟ್ಟಾಯಂ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ನಿರಂತರ ಮಳೆಯಿಂದಾಗಿ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ. ಕೊಲ್ಲಂ ಜಿಲ್ಲೆಯ ಕುಂಭವುರುಟ್ಟಿ ಜಲಪಾತದಲ್ಲಿ ಪ್ರವಾಹಕ್ಕೆ ಸಿಲುಕಿ ತಮಿಳುನಾಡು ಮೂಲದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.

ಕಾಲುವೆಗೆ ಕಾರು ಬಿದ್ದು ಮೂವರು ಸಾವು
ಕೇರಳದ ಪಥನಂತಿಟ್ಟ ಜಿಲ್ಲೆಯಲ್ಲಿ ರಭಸದ ಮಳೆ ನಡುವೆಯೂ, ಬಸ್ ಅನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದ್ದಾಗ, ಕಾರು ತುಂಬಿ ಹರಿಯುತ್ತಿದ್ದ ಕಾಲುವೆಗೆ ಬಿದ್ದಿದೆ. ಕಾರು ಬಿದ್ದ ರಭಸಕ್ಕೆ ಮೂವರು ಸಾವನ್ನಪ್ಪಿದ್ದಾರೆ.

heavy rain in Kerala, 4 people dead due to rain, red alert announced, ಕೇರಳದಲ್ಲಿ ಮಳೆಯ ಅಬ್ಬರ, ಮಳೆಯ ಅಬ್ಬರಕ್ಕೆ ನಾಲ್ವರು ಬಲಿ, Kannada news, Karnataka news,
ಕಾಲುವೆಗೆ ಕಾರು ಬಿದ್ದು ಮೂವರು ಸಾವು


ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
ಕೇರಳದ ಎಲ್ಲಾ ದಕ್ಷಿಣ ಮಧ್ಯ ಜಿಲ್ಲೆಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ತಿರುವನಂತಪುರಂನಿಂದ ಇಡುಕ್ಕಿವರೆಗಿನ ಏಳು ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಯಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. ತ್ರಿಶೂರ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಇದನ್ನೂ ಓದಿ:  Karnataka Weather: ಇಂದು ಗುಡುಗು ಸಹಿತ ಮಳೆ; ಈ ಭಾಗದಲ್ಲಿರಲಿದೆ ವರುಣನ ಅಬ್ಬರ

ನೀರಿನ ಮಟ್ಟ ಏರಿಕೆ, ಭೂಕುಸಿತು
ಕೊಟ್ಟಾಯಂ ಜಿಲ್ಲೆಯ ಮೂನಿಲವು ಗ್ರಾಮದಲ್ಲಿ ಭೂಕುಸಿತ ಸಂಭವಿಸಿದೆ. ಮೂನಿಲಾವು ಪಟ್ಟಣದಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರೂ, ಜಿಲ್ಲೆಯಲ್ಲಿ ಯಾವುದೇ ಗಂಭೀರ ಹಾನಿ ಸಂಭವಿಸಿಲ್ಲ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಮಹಿತಿ ನೀಡಿದೆ.

heavy rain in Kerala, 4 people dead due to rain, red alert announced, ಕೇರಳದಲ್ಲಿ ಮಳೆಯ ಅಬ್ಬರ, ಮಳೆಯ ಅಬ್ಬರಕ್ಕೆ ನಾಲ್ವರು ಬಲಿ, Kannada news, Karnataka news,
ಕೊಟ್ಟಾಯಂ ಜಿಲ್ಲೆಯ ಮೂನಿಲವು ಗ್ರಾಮದಲ್ಲಿ ಭೂಕುಸಿತ


ಅಚ್ಚನ್‍ಕೋವಿಲ್ ನದಿಯಲ್ಲಿ ನೀರಿನ ಮಟ್ಟ ಏರಿಕೆಯ ಜೊತೆಗೆ, ಕೂಡಲ್, ಕಳಂಜೂರು ಮತ್ತು ಕೊನ್ನಿಯ ಜಲಾನಯನ ಪ್ರದೇಶಗಳಲ್ಲೂ ಭಾರಿ ಪ್ರಮಾಣದ ಹರಿವು ಕಂಡುಬಂದಿದೆ.

ಕರ್ನಾಟಕದಲ್ಲೂ ಮಳೆ
ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಜೋರು ಮಳೆಯಾಗುತ್ತಿದೆ. ಅದರಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಸಂಜೆಯ ನಂತರ ಸುರಿಯುವ ಮಳೆಗೆ ವಾಹನ ಸವಾರರು ಹೈರಾಣು ಆಗ್ತಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್, ಕಾಪೆರ್Çೀರೇಷನ್, ಶಾಂತಿ ನಗರ, ರಾಜಾಜಿ ನಗರ, ಕೆಆರ್ ಮಾರ್ಕೆಟ್, ಯಶವಂತಪುರ, ಜಾಲಹಳ್ಳಿ, ಆರ್ ಟಿ ನಗರ ಸುತ್ತಮುತ್ತ ಮಳೆಯಾಗಿದೆ. ಇಂದು ಸಹ ಇದೇ ರೀತಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇನ್ನುಳಿದಂತೆ ಮಂಗಳೂರು, ಉಡುಪಿ, ಹಾಸನ, ಶಿವಮೊಗ್ಗ ಭಾಗದಲ್ಲಿಯೂ ಮಳೆಯಾಗುತ್ತಿದೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿಯೂ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಚದುರಿದ ರೀತಿಯಲ್ಲಿ ಮಳೆಯಾಗಿದೆ.

ಇದನ್ನೂ ಓದಿ: Jammu and Kashmir: ಜಮ್ಮು-ಕಾಶ್ಮೀರದಲ್ಲಿ ಹೆಚ್ಚಿದ ಪ್ರವಾಹ; ಇಬ್ಬರು ಮಕ್ಕಳು ಸಾವು, ಮೂವರು ನಾಪತ್ತೆ!

ಯಾದಗಿರಿಯಲ್ಲಿ ಮುಳುಗಿದ್ದ ಸೇತುವೆ
ಯಾದಗಿರಿ ತಾಲೂಕಿನ ಹೆಡಗಿಮದ್ರಾ ಗ್ರಾಮದ ಹೊರಭಾಗದಲ್ಲಿರುವ ಹೆಡಗಿಮದ್ರಾ ಹಾಗೂ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನಿನ್ನೆ ಜಲಾವೃತವಾಗಿತ್ತು .ಸೇತುವೆ ಮುಳುಗಡೆಯಾದ ಹಿನ್ನೆಲೆ ವಿದ್ಯಾರ್ಥಿಗಳು ಹಾಗೂ ಜನರು ಊರಿಗೆ ತೆರಳಲು ಪರದಾಡುವಂತಾಗಿದೆ. ನಂತರ ನೀರಿನ ಹರಿವು ಕಡಿಮೆಯಾದ ನಂತರ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟು ವಿದ್ಯಾರ್ಥಿಗಳು ಹರಿಯುವ ನೀರಿನಲ್ಲಿಯೇ ಸೇತುವೆ ಮೂಲಕ ಶಾಲೆ ಹಾಗೂ ಕಾಲೇಜುಗೆ ತೆರಳಿದರು.
Published by:Savitha Savitha
First published: