ತಮಿಳುನಾಡಿ(Tamil nadu)ನಲ್ಲಿ ಅಬ್ಬಿರಿಸಿ ಬೊಬ್ಬಿರಿದ್ದಿದ್ದ ರಣ ಮಳೆ(Rain) ಈಗ ಆಂಧ್ರ ಪ್ರದೇಶದಲ್ಲಿ ತನ್ನ ರುದ್ರ ನರ್ತನ ತೋರುತ್ತಿದೆ. ಕಂಡು ಕೇಳರಿಯದ ಮಳೆ ಆಂಧ್ರಪ್ರದೇಶ ತತ್ತರಿಸಿ ಹೋಗಿದೆ. ತಿರುಪತಿ ತಿಮ್ಮಪ್ಪ(Tirupati Timmappa)ನಿಗೂ ವರುಣ ದೇವ ದಿಗ್ಭಂಧನ ಹಾಕಿದ್ದಾನೆ. ಎಲ್ಲಿ ನೋಡಿದರೂ ನೀರು ಹರಿಯುತ್ತಿದೆ. ಭಾರೀ ಮಳೆಯಿಂದಾಗಿ ದಕ್ಷಿಣ ಆಂಧ್ರಪ್ರದೇಶ(Andhra Pradesh)ದ ರಾಯಲಸೀಮೆ ಭಾಗದ ಜಿಲ್ಲೆಗಳಾದ ಚಿತ್ತೂರು(Chittoor), ಕಡಪ(Kadapa), ನೆಲ್ಲೂರು( Nellore) ಮತ್ತು ಅನಂತಪುರ(Anantapur) ಜಿಲ್ಲೆಗಳು ತತ್ತರಿಸಿವೆ. ಇದುವರೆಗೆ ಸುಮಾರು 20,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಮತ್ತು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ನೂರಕ್ಕೂ ಹೆಚ್ಚು ಗ್ರಾಮಗಳ ವರುಣನ ಅಬ್ಬರಕ್ಕೆ ಜಲಾವೃತವಾಗಿದೆ. ಇನ್ನೂ ರಣಮಳೆಗೆ 25 ಮಂದಿ ಮೃತ(Dead)ಪಟ್ಟಿದ್ದಾರೆ. 17 ಮಂದಿ ಕಣ್ಮರೆಯಾಗಿದ್ದಾರೆ. ನಾಪತ್ತೆಯಾಗಿರುವವರು ಇನ್ನೂ ಪತ್ತೆಯಾಗಿರದ ಕಾರಣ, ಸಾವಿನ ಸಂಖ್ಯೆ ಏರುವ ಅಪಾಯವಿದೆ. ಪ್ರವಾಹದಲ್ಲಿ ಅಸಂಖ್ಯ ಜಾನುವಾರಗಳು ಕೊಚ್ಚಿಹೋಗಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರದ ಅಧಿಕಾರಿಗಳ ಮಾಹಿತಿ ಆಧರಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ!
ಭಾರೀ ಮಳೆಯಿಂದ ಹತ್ತಾರು ಜನ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದಾರೆ. ಒಟ್ಟು 25 ಮಂದಿ ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ಸರ್ಕಾರ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ. ಭಾರತೀಯ ವಾಯುಪಡೆ, ಎನ್ಡಿಆರ್ಎಫ್, ಎಸ್ಡಿಆರ್ಎಫ್, ಪೊಲೀಸ್ ಮತ್ತು ಅಗ್ನಿಶಾಮಕ ಸೇವೆಗಳ ಸಿಬ್ಬಂದಿ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಅನಂತಪುರ, ಕಡಪ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ ಸಂಭವಿಸಿದ ಭಾರಿ ಪ್ರವಾಹದಿಂದ ಇದುವರೆಗೆ ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ ಕನಿಷ್ಠ 64 ಜನರನ್ನು ರಕ್ಷಿಸಲಾಗಿದೆ ಎಂದು ಸರ್ಕಾರ ಟಿಪ್ಪಣಿಯಲ್ಲಿ ತಿಳಿಸಿದೆ.
ಜಗನ್ ಮೋಹನ್ ರೆಡ್ಡಿ ವೈಮಾನಿಕ ಸಮೀಕ್ಷೆ
ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ನಿನ್ನೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದು, ಜಿಲ್ಲಾಧಿಕಾರಿಗಳೊಂದಿಗೆ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದರು. ಕಡಪ ಮತ್ತು ಚಿತ್ತೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಹಾನಿಯ ಬಗ್ಗೆ ವಿವರಗಳನ್ನುಪಡೆದಿದ್ದಾಋಎ. ಪ್ರವಾಹದ ಕಡಿಮೆಯಾದ ತಕ್ಷಣ ಬೆಳೆ ನಷ್ಟದ ಲೆಕ್ಕಾಚಾರವನ್ನು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಚಿತ್ತೂರು ಮತ್ತು ಕಡಪದಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.
ತಿರುಪತಿಯಲ್ಲಿ ಮಹಾಪ್ರವಾಹ, ವಿಡಿಯೋಗಳು ವೈರಲ್
ದೇವಸ್ಥಾನ ನಗರಿ ತಿರುಪತಿ ಹಾಗೂ ನೆಲ್ಲೂರು ನಗರದಲ್ಲಿ ವಿಪರೀತ ಮಳೆಯಾಗಿದೆ. ಆಂಧ್ರ ಪ್ರದೇಶದದ ಕರಾವಳಿ ಹಾಗೂ ರಾಯಲಸೀಮಾ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಸುತ್ತ ಮುತ್ತಲ ಜಿಲ್ಲೆಗಳಲ್ಲೂ ಮಳೆ ಆರ್ಭಟ ಜೋರಾಗಿಯೇ ಇದೆ. ತಿರುಪತಿ ದೇಗುಲ ಹಾಗೂ ಸುತ್ತಮುತ್ತ ಕೂಡ ವರಣನ ಅಬ್ಬರ ಜೋರಾಗಿದ್ದು, ತಿರುಪತಿ ಭಾಗಶಃ ಮುಳುಗಿದ ಹಾಗೆ ಭಾಸವಾಗುತ್ತಿದೆ. ತಿರುಪತಿಯ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರೀ ಮಳೆಯಿಂದಾಗಿ ತಿರುಮಲ ಬೆಟ್ಟ ಘಾಟಿ ರಸ್ತೆ ಬಂದ್ ಮಾಡಲಾಗಿದೆ.
ನೀರಿನಲ್ಲಿ ಕೊಚ್ಚಿಹೋದ ಎಮ್ಮೆಗಳು!
ಮನುಷ್ಯರಾದರು ಮಳೆ ಬಂದರೆ ಏನು ಮಾಡಬೇಕು, ಮಾಡಬಾರದು ಎಂದು ತಿಳಿದಿದ್ದಾನೆ. ಆದರೆ ಮೂಕ ಪ್ರಾಣಿಗಳು ಏನು ಮಾಡಬೇಕು. ಮಾತು ಬಾರದೆ ರಣ ಮಳೆಯಲ್ಲಿ ಎಲ್ಲಿ ಹೋಗಬೇಕು ತಿಳಿಯದೇ, ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ. ವೈರಲ್ ಆದ ವಿಡಿಯೋವೊಂದರಲ್ಲಿ ಎಮ್ಮೆಗಳು ನೀರಿನಲ್ಲಿ ಕೊಚ್ಚಿಹೋಗಿವೆ.
ಸದ್ಯತಿರುಪತಯಲ್ಲಿ ಕೊಂಚ ಮಟ್ಟಿಗೆ ಮಳೆ ಕಡಿಮೆಯಾಗಿದೆ. ಆದರೆ ಮತ್ತೆ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಇಲ್ಲಿನ ಜನರು ಈಗಾಗಲೇ ಕಂಗಲಾಗಿದ್ದಾರೆ. ಮತ್ತೆ ಮಳೆಯಾದರೆ ದೇವರೇ ಗತಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ