ಫ್ರೆಂಚ್​ ನೆಲದಿಂದ ಗಗನಕ್ಕೆ ಹಾರಲಿದೆ ಭಾರತದ ಅತೀ ಹೆಚ್ಚು ಭಾರದ ಉಪಗ್ರಹ

news18
Updated:August 6, 2018, 5:35 PM IST
ಫ್ರೆಂಚ್​ ನೆಲದಿಂದ ಗಗನಕ್ಕೆ ಹಾರಲಿದೆ ಭಾರತದ ಅತೀ ಹೆಚ್ಚು ಭಾರದ ಉಪಗ್ರಹ
news18
Updated: August 6, 2018, 5:35 PM IST
ನ್ಯೂಸ್ 18 ಕನ್ನಡ

ನವದೆಹಲಿ (ಆಗಸ್ಟ್ 06): ಭಾರತೀಯ ಬ್ಯಾಹ್ಯಾಕಾಶ ಸಂಸ್ಥೆ ಇಸ್ರೋ ಅತಿ ಭಾರವಾದ ಉಪಗ್ರಹ ಉಡಾವಣೆಗೆ ಸಜ್ಜುಗೊಂಡಿದೆ. 5.7 ಟನ್ ಭಾರದ ಜಿ–ಸ್ಯಾಟ್ 11 ಉಪಗ್ರಹವನ್ನು ಯೂರೋಪಿಯನ್ ಬಾಹ್ಯಾಕಾಶ ನೆಲೆ ಫ್ರೆಂಚ್ ಗಯಾನದಿಂದ ನವೆಂಬರ್ 30ಕ್ಕೆ ಉಡಾವಣೆ ಮಾಡಲಿದೆ. ಈ ಮೂಲಕ ವಿಶ್ವದಲ್ಲೇ ಮೊದಲ ಬಾರಿಗೆ ಅತೀ ತೂಕದ ಉಪಗ್ರಹ ಉಡಾವಣೆ ಮಾಡಿದ ಕೀರ್ತಿಗೆ ಭಾರತ ಭಾಜನವಾಗಲಿದೆ.

ಜಿ- ಸ್ಯಾಟ್ 11 ಉಡ್ಡಯನದಿಂದ  ಸಂವಹನ ಮತ್ತು ಪ್ರಸಾರ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಇರಾದೆಯನ್ನು ಹೊಂದಿದೆ. ಈ ಉಡಾವಣೆಯಿಂದ ಅಂತರ್ಜಾಲ ಕ್ಷೇತ್ರದಲ್ಲಿ ಭಾರೀ ಬದಲಾವಣೆ ಆಗುವ ಸಾಧ್ಯತೆಯಿದೆ. ದೇಶದಲ್ಲಿ ಅತ್ಯಂತ ವೇಗವಾಗಿ ಡೇಟಾ ವಿನಿಮಯ ಮಾಡಲು ಸಾಧ್ಯವಾಗಲಿದೆ. ಕಳೆದ  ಏಪ್ರಿಲ್​ನಲ್ಲಿ ಜಿ –ಸ್ಯಾಟ್ 6 ಉಡಾವಣೆ ವಿಫಲವಾದ ಹಿನ್ನೆಲೆಯಲ್ಲಿ ಇಸ್ರೋ ಈ ಬಾರಿ ಎಚ್ಚರಿಕೆಯ ಹೆಜ್ಜೆಯನ್ನು ಇಟ್ಟಿದೆ.

ಕಳೆದ ಬಾರಿಯ ಅನುಭವದ ಹಿನ್ನೆಲೆಯಲ್ಲಿ  ಜಿ- ಸ್ಯಾಟ್ 11 ಉಡಾವಣೆಗೂ ಮುನ್ನ ಎಲ್ಲ ಆಯಾಮಗಳಿಂದ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಸಾಧಕ ಬಾಧಕಗಳ ಬಗ್ಗೆಯೂ ಕೂಲಂಕುಷವಾದ ಪ್ರಯೋಗಗಳು ನಡೆಯುತ್ತಿವೆ. ಅಷ್ಟೇ ಅಲ್ಲ, ಇದು ಅತೀ ಭಾರದ  ಸ್ಯಾಟ್​ಲೈಟ್​ ಆಗಿರುವುದರಿಂದ ಅದರ ಎಲೆಕ್ಟ್ರಿಕಲ್ ಸರ್​ಕ್ಯೂಟ್ ಸೇರಿದಂತೆ ಎಲ್ಲವನ್ನ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಸಿವನ್ ಹೇಳಿದ್ದಾರೆ. ಹಲವು ಹಂತಗಳ ಮಾತುಕತೆ ಬಳಿಕ ಅಂತಿವಾಗಿ ಜಿ –ಸ್ಯಾಟ್ ಉಡಾವಣೆ ನವೆಂಬರ್ 30 ಫಿಕ್ಸ್ ಆಗಿದೆ ಎಂದು ಸಿವನ್ ಹೇಳಿದ್ದಾರೆ.

ಉಪಗ್ರಹದ ವಿಶೇಷತೆಗಳು :

ಈ ಉಪಗ್ರಹ 40 ಟ್ರಾನ್ಸ್​ಪಾಂಡರ್ಸ್​ಳಿದ್ದು ಅದರಲ್ಲಿ ku  ಬ್ಯಾಂಡ್ ಫ್ರಿಕ್ವೆನ್ಸಿಗಳನ್ನು ಒಳಗೊಂಡಿರುತ್ತದೆ. ಇದು ಹೈ ಬ್ಯಾಂಡ್​ವಿಡ್ತ್ ಕನೆಕ್ಟಿವಿಟಿ ಕೊಡಲಿದ್ದು, ಪ್ರತಿ ಸೆಕೆಂಡಿಗೆ 40 ಗಿಗಾಬೈಟ್ ಡೇಟಾವನ್ನು ಟ್ರಾನ್ಸ್​ಪರ್ ಮಾಡಲಿದೆ.  ಈ ಉಪಗ್ರಹದಲ್ಲಿ ನಾಲ್ಕು ಮೀಟರ್​ ಸೋಲಾರ್ ಪ್ಯಾನಲ್​ಗ​ಳಿದ್ದು, ಇಷ್ಟೇ ಉದ್ದದ ನಾಲ್ಕು ರೂಮ್​ಗಳಿವೆ ಎಂದು ಇಸ್ರೋ ಹೇಳಿದೆ. ಒಟ್ಟಿನಲ್ಲಿ ಉಡಾವಣೆ ಯಶಸ್ವಿಯಾದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಭಾರತದಿಂದ ಇನ್ನೊಂದು ದೊಡ್ಡ ಕೊಡುಗೆ ನೀಡಿದಂತಾಗುತ್ತದೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...