Dengue: ಮಳೆಯಿಂದ ಹೆಚ್ಚುತ್ತಲೇ ಇದೆ ಡೆಂಘಿ ಜ್ವರ; ಉತ್ತರಾಖಂಡದಲ್ಲಿ 4 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು

ಸೊಳ್ಳೆಗಳಿಂದ ಹರಡುವ ರೋಗವಾದ ಡೆಂಘೆ ಇತ್ತೀಚೆಗೆ ಇನ್ನಷ್ಟು ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಮನುಷ್ಯನಿಗೆ ಈಡೀಸ್ ಎಂಬ ಹೆಣ್ಣುಸೊಳ್ಳೆ ಕಚ್ಚುವುದರಿಂದ ಡೆಂಘೆ ಹರಡುತ್ತದೆ. ರಾಜ್ಯದಲ್ಲಿಯೂ ಡೆಂಘೆ ಪ್ರಕರಣಗಳು ಕಳೆದೆರಡು ತಿಂಗಳಿನಿಂದ ಜಾಸ್ತಿ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿದೆ.

Sushma Chakre | news18-kannada
Updated:September 27, 2019, 10:50 AM IST
Dengue: ಮಳೆಯಿಂದ ಹೆಚ್ಚುತ್ತಲೇ ಇದೆ ಡೆಂಘಿ ಜ್ವರ; ಉತ್ತರಾಖಂಡದಲ್ಲಿ 4 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು
ಡೆಂಘೆ ಹರಡುವ ಸೊಳ್ಳೆ
Sushma Chakre | news18-kannada
Updated: September 27, 2019, 10:50 AM IST
ದೇಶದಲ್ಲಿ 2-3 ತಿಂಗಳಿಂದ ಭಾರೀ ಮಳೆ ಸುರಿಯುತ್ತಿರುವುದರಿಂದ ಕೆಲವು ರಾಜ್ಯಗಳಲ್ಲಿ ಡೆಂಘಿ ಮಾರಕ ರೋಗ ಹೆಚ್ಚಾಗುತ್ತಿದೆ. ಉತ್ತರಾಖಂಡದಲ್ಲಿ ಮಳೆ ಮತ್ತು ಪ್ರವಾಹ ಏರ್ಪಟ್ಟಿತ್ತು. ಈ ಕಾರಣದಿಂದ ಆರೋಗ್ಯ ಸಮಸ್ಯೆಗಳೂ ಅಧಿಕಗೊಳ್ಳುತ್ತಿದೆ. ಆಂಧ್ರಪ್ರದೇಶದ ಬಳಿಕ ಉತ್ತರಾಖಂಡದಲ್ಲಿ ಅತಿಹೆಚ್ಚು ಜನರಿಗೆ ಡೆಂಘಿ ರೋಗ ಕಾಣಿಸಿಕೊಂಡಿದೆ. ಉತ್ತರಾಖಂಡದಲ್ಲಿ ಈ ವರ್ಷ ಇದುವರೆಗೆ 4 ಸಾವಿರ ಡೆಂಘೆ ಪ್ರಕರಣಗಳು ಪತ್ತೆಯಾಗಿವೆ.

ಗುಡ್ಡಗಾಡು ಪ್ರದೇಶವಾದ ಉತ್ತರಾಖಂಡದಲ್ಲಿ ಇದುವರೆಗೂ 4,500 ಡೆಂಘಿ ಪ್ರಕರಣಗಳು ಪತ್ತೆಯಾಗಿವೆ. ಇವುಗಳಲ್ಲಿ 4,398 ಪ್ರಕರಣಗಳು ಅಧಿಕೃತವಾಗಿ ಆಸ್ಪತ್ರೆಗಳಲ್ಲಿ ದಾಖಲಾಗಿವೆ. ಡೆಹ್ರಾಡೂನ್​ ಒಂದರಲ್ಲೇ 2,923 ಡೆಂಘಿ ಪ್ರಕರಣಗಳು ಕಾಣಿಸಿಕೊಂಡಿವೆ.

ಸೊಳ್ಳೆಗಳಿಂದ ಹರಡುವ ರೋಗವಾದ ಡೆಂಘಿ ಇತ್ತೀಚೆಗೆ ಇನ್ನಷ್ಟು ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಮನುಷ್ಯನಿಗೆ ಈಡೀಸ್ ಎಂಬ ಹೆಣ್ಣುಸೊಳ್ಳೆ ಕಚ್ಚುವುದರಿಂದ ಡೆಂಘಿ ಹರಡುತ್ತದೆ. ರಾಜ್ಯದಲ್ಲಿಯೂ ಡೆಂಘಿ ಪ್ರಕರಣಗಳು ಕಳೆದೆರಡು ತಿಂಗಳಿನಿಂದ ಜಾಸ್ತಿ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿದೆ. ಮಳೆಗಾಲದಲ್ಲಿ ಅಲ್ಲಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳ ಸಂಖ್ಯೆಯೂ ಹೆಚ್ಚುತ್ತದೆ. ಕೊಳೆತ ನೀರಿನಲ್ಲಿ ಮೊಟ್ಟೆಗಳಿಡುವ ಸೊಳ್ಳೆಗಳಲ್ಲಿ ಡೆಂಘಿ ಸೋಂಕು ಕಾಣಿಸಿಕೊಂಡಿದ್ದರೆ ಅದು ಮೊಟ್ಟೆಗಳಿಗೆ ಹರಡುತ್ತದೆ.

ಅಮ್ಮ ಕ್ಷಮಿಸು ಎಂದು ಸಾವಿನ ಪತ್ರ ಬರೆದಿಟ್ಟು 5ನೇ ಮಹಡಿಯಿಂದ ಕೆಳಗೆ ಜಿಗಿದ 8ನೇ ತರಗತಿ ಬಾಲಕಿ

ಈಡೀಸ್ ಎಂಬ ಹೆಣ್ಣು ಸೊಳ್ಳೆಯ ಮೈಮೇಲೆ ಕಪ್ಪು-ಬಿಳಿ ಬಣ್ಣದ ಪಟ್ಟೆ ಅಥವಾ ಗೆರೆಗಳಿರುತ್ತವೆ. ಹೀಗಾಗಿ, ಇವುಗಳನ್ನು ಟೈಗರ್ ಸೊಳ್ಳೆಗಳು ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಈ ಸೊಳ್ಳೆಗಳು ಹಗಲು ವೇಳೆ ಮಾತ್ರ ಕಚ್ಚುವುದರಿಂದ ಜನರು ಎಚ್ಚರಿಕೆಯಿಂದಿರಬೇಕು. ಸಾಮಾನ್ಯವಾಗಿ ಈ ಸೊಳ್ಳೆ ಸೂರ್ಯ ಹುಟ್ಟುವ ಮತ್ತು ಮುಳುಗುವ ಎರಡು ಗಂಟೆ ಮುಂಚಿತವಾಗಿ ಮನುಷ್ಯನಿಗೆ ಕಡಿಯುತ್ತದೆ. ಈ ಸೊಳ್ಳೆಯ ಜೀವಿತಾವಧಿ ಎರಡು ವಾರಗಳು ಮಾತ್ರ. ಆದರೆ, ಈ ಸೊಳ್ಳೆಗಳು ತಮ್ಮ ಜೀವಿತ ಅವಧಿಯಲ್ಲಿ ಮೂರು ಬಾರಿ ಮೊಟ್ಟೆ ಇಡುತ್ತವೆ. ಒಮ್ಮೆಲೆ ಸುಮಾರು ನೂರು ಮೊಟ್ಟೆಗಳನ್ನು ಇಡುತ್ತವೆ.

ಈ ಸೊಳ್ಳೆಗಳು ಇಡುವ ಮೊಟ್ಟೆ ಇದರಿಂದ ಹುಟ್ಟುವ ಮರಿ ಸೊಳ್ಳೆಗಳು ಕೂಡ ಸೋಂಕಿತ ಸೊಳ್ಳೆಗಳಾಗುತ್ತವೆ. ಸಾಮಾನ್ಯವಾಗಿ ಮುಂಗಾರು ಮಳೆ ಅಥವಾ ಪ್ರವಾಹ ಸಂದರ್ಭದಲ್ಲಿ ಮೊಟ್ಟೆಯೊಡೆದು ಬಂದು ಮತ್ತೆ ಡೆಂಘಿ ಸೋಂಕಿತ ಸೊಳ್ಳೆಗಳಾಗಿ ಬದಲಾಗುತ್ತವೆ.

ಒಂದೇ ತಿಂಗಳಿನಲ್ಲಿ 23 ಬಾರಿ ಮದುವೆ ಮತ್ತು ಡಿವೋರ್ಸ್; ಈ ಘಟನೆ ನಡೆದಿದ್ದು ಎಲ್ಲಿ ಗೊತ್ತಾ..?
Loading...

ಟೈಮ್ಸ್​ ಆಫ್ ಇಂಡಿಯಾ ವರದಿ ಪ್ರಕಾರ, ಡೆಹ್ರಾಡೂನ್ ಮತ್ತು ನೈನಿತಾಲ್​ನಲ್ಲಿ ಈ ವರ್ಷ ತೀವ್ರವಾಗಿ ಸೆಪ್ಟೆಂಬರ್ 23ರವರೆಗೆ ಡೆಹ್ರಾಡೂನ್​ನಲ್ಲಿ 2,768 ಪ್ರಕರಣಗಳು ದಾಖಲಾಗಿವೆ. ನೈನಿತಾಲ್​ನಲ್ಲಿ 1189 ಡೆಂಘಿ ಪ್ರಕರಣಗಳು ದಾಖಲಾಗಿವೆ. ಕಳೆದ 4 ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಉತ್ತರಾಖಂಡದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಡೆಂಘಿ ರೋಗ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳಲ್ಲೂ ಡೆಂಘಿ ರೋಗಕ್ಕೆ ತುರ್ತಾಗಿ ಸೂಕ್ತ ಚಿಕಿತ್ಸೆ ನೀಡಲು ಅಲ್ಲಿನ ರಾಜ್ಯ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.

ಡೆಂಘಿ ಲಕ್ಷಣಗಳು:

ಜ್ವರ ಕಾಣಿಸಿಕೊಂಡ 7 ದಿನಗಳೊಳಗೆತೀವ್ರ ತಲೆನೋವು, ಕಣ್ಣುಗುಡ್ಡೆಯಲ್ಲಿ ನೋವು, ಸ್ನಾಯು ಸೆಳೆತ (ಮೈ-ಕೈ ನೋವು), ಕೀಲು ನೋವು, ಚರ್ಮ ಕೆಂಪಾಗುವುದು, ಮೂಗು ಮತ್ತು ವಸಡುಗಳಲ್ಲಿ ರಕ್ತಸ್ರಾವ ಲಕ್ಷಣಗಳು ಕಂಡುಬಂದರೆ ವೈದ್ಯರಲ್ಲಿ ತೋರಿಸಿಕೊಳ್ಳುವುದು ಒಳಿತು.

ಮೊಣಕಾಲುದ್ದದ ಕೂದಲಿಗೆ ಕತ್ತರಿ ಹಾಕಿದ ಕೇರಳ ಪೊಲೀಸ್ ಅಧಿಕಾರಿ; ಕಾರಣವೇನು ಗೊತ್ತಾ?

ತುಂಬಾ ಹೊಟ್ಟೆನೋವು, ಚರ್ಮದ ಮೇಲಿನ ಕೆಂಪುಗುಳ್ಳೆ ಅಥವಾ ಮಚ್ಚೆ, ಬಾಯಿ ಅಥವಾ ಮೂಗಿನಿಂದ ರಕ್ತಸ್ರಾವ, ರಕ್ತ ಮಿಶ್ರಿತ ವಾಂತಿ, ಕಪ್ಪುಬಣ್ಣದ ಮಲ ವಿಸರ್ಜನೆ, ತುಂಬಾ ಸಪ್ಪೆಯಾಗಿ ವರ್ತಿಸುವುದು, ತಣ್ಣಗಾದ ಅಥವಾ ಒಣ ಚರ್ಮ, ಉಸಿರಾಟಕ್ಕೆ ತೊಂದರೆ. ಇಂತಹ ಸಂದರ್ಭದಲ್ಲಿ ಮಾಡಬೇಕಾದದ್ದು ಪ್ರತಿ ಗಂಟೆಗೊಮ್ಮೆ ರೋಗಿ ತಪಾಸಣೆ, ಪ್ಲೇಟ್‍ಲೆಟ್ ಚೆಕ್ ಮಾಡುವುದು, ಇವಿ ಪ್ಯೂಯೆಡ್ಸ್ ಅಥವಾ ಪ್ಲೇಟ್‍ಲೆಟ್ ಮರುಪೂರಣ ಮಾಡಬಹುದು.

ಉತ್ತರಾಖಂಡದಲ್ಲಿ 2016ರಲ್ಲಿ 204 ಡೆಂಘಿ ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 4 ಮಂದಿ ಸಾವನ್ನಪ್ಪಿದ್ದರು. 2017ರಲ್ಲಿ 848 ಪ್ರಕರಣಗಳು ಬೆಳಕಿಗೆ ಬಂದಿದ್ದವು. 2018ರಲ್ಲಿ 591 ಪ್ರಕರಣಗಳು ಬೆಳಕಿಗೆ ಬಂದಿದ್ದು, ಇಬ್ಬರು ಸಾವನ್ನಪ್ಪಿದ್ದರು.

First published:September 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...