ಕೆನಡಾದಲ್ಲಿ ಕರಗುತ್ತಿವೆ ರಸ್ತೆಗಳು-ಮನೆಗಳು: ಕಾರಣವೇನು ಗೊತ್ತಾ?

ಕೆನಡಾದಲ್ಲಿ ದಾಖಲಾಗುತ್ತಿರುವ ಬಿಸಿಗಾಳಿಯಿಂದಾಗಿ (ಶಾಖ ಅಲೆ) ಶಾಲೆ ಮತ್ತು ಉದ್ಯೋಗಕ್ಕೆ ತೆರಳುತ್ತಿರುವವರು ಮನೆಯಿಂದ ಹೊರಗೆ ಕಾಲಿಡದಂತಾಗಿದೆ. ಹೊರಾಂಗಣ ಕೊಳಗಳು ಮತ್ತು ಐಸ್ ಕ್ರೀಮ್ ಪಾರ್ಲರ್‌ಗೆ ತೆರಳಿ ಅಲ್ಲಿನವರು ಬಿಸಿ ಗಾಳಿಯಿಂದ ರಕ್ಷಣೆ ಪಡೆಯುತ್ತಿದ್ದಾರೆ.

ಕರಗುತ್ತಿರುವ ರಸ್ತೆಯ ಚಿತ್ರ

ಕರಗುತ್ತಿರುವ ರಸ್ತೆಯ ಚಿತ್ರ

  • Share this:
ಕೆನಡಾದ ಕೆಲವೆಡೆಗಳಲ್ಲಿ ಬಿಸಿಗಾಳಿ ಪ್ರಖರವಾಗಿದ್ದು ರಸ್ತೆಗಳು ಕರಗಿ ಸುರಂಗವನ್ನು ಕೊರೆದಿವೆ. ರಸ್ತೆಯಲ್ಲಿ ಅಳವಡಿಸಿರುವ ಲೋಹದ ಸಾಮಾಗ್ರಿಗಳು ವಿಸ್ತಾರಗೊಳ್ಳುತ್ತಿದ್ದು ಮನೆಗಳ ಮೇಲೂ ಇದರ ಪರಿಣಾಮ ತೀವ್ರವಾಗಿದೆ. ಬ್ರಿಟಿಷ್ ಕೊಲಂಬಿಯಾದಲ್ಲಿರುವ ಲಿಟನ್ ಹಳ್ಳಿಯು ಅತ್ಯಧಿಕ ತಾಪಮಾನವನ್ನು ದಾಖಲಿಸುವ ಮೂಲಕ ಹಿಂದಿನ ದಾಖಲೆಗಳನ್ನು ಪುಡಿಮಾಡಿದೆ. 116 ಫ್ಯಾರನ್‌ಹೀಟ್ ತಾಪಮಾನ ದಾಖಲಾಗಿದೆ. ಮನೆ ಮತ್ತು ರಸ್ತೆಗಳಲ್ಲಿ ಬಿಸಿ ಗಾಳಿ ಮಾಡುತ್ತಿರುವ ಹಾನಿಯ ಕುರಿತಾಗಿ ಜನರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆನಡಾ ಮಾತ್ರವಲ್ಲದೆ ಸಂಪೂರ್ಣ ಪೆಸಿಫಿಕ್ ವಾಯವ್ಯ ಪ್ರದೇಶಗಳು ಸರಿಸುಮಾರು 42 ಡಿಗ್ರಿ ಸೆಲ್ಸಿಯಸ್​ನಷ್ಟು ತಾಪಮಾನವನ್ನು ದಾಖಲಿಸುತ್ತಿವೆ.

ಕೆನಡಾದಲ್ಲಿ ದಾಖಲಾಗುತ್ತಿರುವ ಬಿಸಿಗಾಳಿಯಿಂದಾಗಿ (ಶಾಖ ಅಲೆ) ಶಾಲೆ ಮತ್ತು ಉದ್ಯೋಗಕ್ಕೆ ತೆರಳುತ್ತಿರುವವರು ಮನೆಯಿಂದ ಹೊರಗೆ ಕಾಲಿಡದಂತಾಗಿದೆ. ಹೊರಾಂಗಣ ಕೊಳಗಳು ಮತ್ತು ಐಸ್ ಕ್ರೀಮ್ ಪಾರ್ಲರ್‌ಗೆ ತೆರಳಿ ಅಲ್ಲಿನವರು ಬಿಸಿ ಗಾಳಿಯಿಂದ ರಕ್ಷಣೆ ಪಡೆಯುತ್ತಿದ್ದಾರೆ.

Heatwave, Temperature, Canada, Northern Pacific, Air condition, ಶಾಖ ಅಲೆ, ತಾಪಮಾನ, ಕೆನಡಾ, ಏರ್ ಕಂಡೀಷನ್, Heat Wave is causing roads and homes to melt in Canada and northwestern US ae
ಕರಗುತ್ತಿರುವ ರಸ್ತೆಯ ಚಿತ್ರ


ಹವಾಮಾನ ಶಾಸ್ತ್ರಜ್ಞರ ಪ್ರಕಾರ ಬಿಸಿಗಾಳಿ ಪೆಸಿಫಿಕ್ ವಾಯವ್ಯ ಪ್ರದೇಶದಲ್ಲಿ ಇದೀಗ ತಾನೇ ಪ್ರಾರಂಭವಾಗಿದೆ. ಕೆನಡಾ ತನ್ನೆಲ್ಲ ಬಿಸಿ ಗಾಳಿ ದಾಖಲಾತಿಯನ್ನು ಪ್ರತಿ ವರ್ಷ ಮುರಿಯುವುದು ಮಾತ್ರವಲ್ಲದೆ ಅದು +1.6 ಡಿಗ್ರಿಯನ್ನು ಕೂಡ ತಲುಪುತ್ತದೆ. ಇದು ಕನಿಷ್ಠ ಪಕ್ಷ 24 ಗಂಟೆಗಳ ಕಾಲವಿರುತ್ತದೆ. ಬಿಸಿ ಗಾಳಿ ಈಗ ಪ್ರಾರಂಭವಾಗಿದೆ ಅಷ್ಟೇ. ಹೆಚ್ಚಿನ ತಾಪಮಾನ ದಾಖಲಾಗುವುದು ಜುಲೈ ತಿಂಗಳಿನಲ್ಲಿ ಎಂದು ಹವಾಮಾನ ಶಾಸ್ತ್ರಜ್ಞರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಹವಾಮಾನ ಬದಲಾವಣೆಯಿಂದಾಗಿ ಹದಗೆಟ್ಟಿರುವ ಶಾಖದ ಅಲೆಯು ವಾಯುವ್ಯದ ಮೇಲೆ ತೀವ್ರ ಒತ್ತಡವನ್ನುಂಟು ಮಾಡುತ್ತಿದೆ. ಹೀಗಾಗಿ ಫೆಸಿಫಿಕ್ ವಾಯುವ್ಯದಲ್ಲಿ ಬಿಸಿಗಾಳಿ ಉಂಟಾಗುತ್ತಿದೆ ಎಂದು ಹವಮಾನ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: ಶರ್ಟ್​ಲೆಸ್​ ಫೋಟೋ ಶೇರ್ ಮಾಡಿದ ಹೃತಿಕ್​ ರೋಷನ್: ಕಮೆಂಟ್​ ಮಾಡಿದ ಮಾಜಿ ಮಡದಿ ಸುಸೈನ್​ ಖಾನ್

ಉತ್ತರ ಕ್ಯಾಲಿಫೋರ್ನಿಯಾದ ಬರ್ಕ್ಲಿಯು ಕಳೆದ ಅರ್ಧಶತಮಾನದಲ್ಲಿ ಸುಮಾರು 1.7 ಸೆಲ್ಸಿಯಿಂದ ಸುಡುತ್ತಿದೆ. ಇಂತಹ ಪ್ರಕೋಪ ತಾಪಮಾನದಿಂದಾಗಿ ರಸ್ತೆಗಳು ವಿಸ್ತಾರಗೊಳ್ಳುತ್ತಿದ್ದು ಸುರಂಗಗಳನ್ನು ಏರ್ಪಡಿಸಿವೆ. ಮನೆಯಲ್ಲಿರುವ ಸಾಮಾಗ್ರಿಗಳು ವಿಸ್ತಾರಗೊಳ್ಳುತ್ತಿವೆ. ಹೆಚ್ಚಿನ ಬಿಸಿಗೆ ರಸ್ತೆಗಳು ಕರಗುತ್ತಿವೆ ಇನ್ನು ಕಾರ್ಮಿಕರು ರಸ್ತೆಯನ್ನು ತಂಪಾಗಿಸುವ ನಿಟ್ಟಿನಲ್ಲಿ ದಿನಕ್ಕೆ ಎರಡು ಬಾರಿ ಟ್ಯಾಂಕರ್‌ ಟ್ರಕ್‌ಗಳಲ್ಲಿ ನೀರು ತುಂಬಿ ಸುರಿಯುತ್ತಿದ್ದಾರೆ.

ಬಿಸಿಗಾಳಿಯಿಂದ ರಕ್ಷಣೆ ಪಡೆದುಕೊಳ್ಳಲು ಏರ್ ಕಂಡೀಷನರ್ ಇರುವ ಮಳಿಗೆಗಳಿಗೆ ಹೋಗಿ ರಕ್ಷಣೆ ಪಡೆದುಕೊಳ್ಳಿ. ಹೊರಗಿನ ಚಟುವಟಿಕೆಗಳನ್ನು ನಿರ್ಬಂಧಿಸಿ ಆದಷ್ಟು ಹಗುರವಾದ ಬಟ್ಟೆಗಳನ್ನು ಧರಿಸಿ ತಂಪಾಗಿರುವ ಪ್ರದೇಶಗಳಿಗೆ ಪ್ರಯಾಣಿಸಿ, ಸಾಧ್ಯವಾದಷ್ಟು ದ್ರವ ಪದಾರ್ಥಗಳನ್ನು ಸೇವಿಸಿ. ಮುಚ್ಚಿದ ಕಾರುಗಳಲ್ಲಿ ಜನರು ಇಲ್ಲವೇ ಪ್ರಾಣಿಗಳನ್ನು ಬಿಟ್ಟುಹೋಗದಿರಿ ಎಂದು ಕೆನಡಾ ಸರ್ಕಾರ ಜನರನ್ನು ಕೇಳಿಕೊಳ್ಳುತ್ತಿದೆ.

ಇದನ್ನೂ ಓದಿ: Bigg Boss 8: ಕಾಲು ಕೆರೆದು ಜಗಳ ತೆಗೆಯೋದು ಅಂದ್ರೆ ಇದೇ ಇರಬೇಕು: ಕಾರಣವಿಲ್ಲದೆ ಪ್ರಿಯಾಂಕಾ ಮೇಲೆ ಕೂಗಾಡಿದ ಚಕ್ರವರ್ತಿ

ಇನ್ನು ಮನೆಯೊಳಗೆ ಕೂಡ ಫ್ಯಾನ್‌ನ ಅಡಿಯಲ್ಲಿಯೇ ಸಂರಕ್ಷಣೆ ಪಡೆದುಕೊಳ್ಳದಿರಿ ಮನೆಯ ಕಿಟಕಿಗಳಿಗೆ ಪರದೆಗಳನ್ನು ಹಾಕಿ ಬಿಸಿಯಿಂದ ರಕ್ಷಣೆ ಪಡೆಯುವ ವಿಧಾನಗಳನ್ನು ಅನುಸರಿಸಿ. ಸರಕಾರ ಬಿಡುಗಡೆ ಮಾಡುವ ಮಾರ್ಗಸೂಚಿಗಳನ್ನು ಅನುಸರಿಸಿ. ಏರ್ ಕಂಡೀಷನರ್ ಇರುವ ಸ್ಥಳಗಳೆಂದರೆ ಲೈಬ್ರರಿ, ಶಾಪಿಂಗ್ ಮಾಲ್‌ಗಳು, ಕಮ್ಯುನಿಟಿ ಸೆಂಟರ್‌ಗಳು ನಿಮಗೆ ಬಿಸಿಯಿಂದ ರಕ್ಷಣೆ ನೀಡಬಲ್ಲುದು. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಬಿಸಿಯಿಂದ ಸಂರಕ್ಷಣೆ ಪಡೆಯಿರಿ ಎಂದು ಸರಕಾರ ಸಲಹೆ ನೀಡಿದೆ.

ನ್ಯೂಸ್18 ಕನ್ನಡ ಕಳಕಳಿ:

ಕೊರೋನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Anitha E
First published: