ಜಾರ್ಖಂಡ್​ನಲ್ಲಿ ಕುಡಿದು ತಾಯಿಯನ್ನೇ ಕೊಂದ ಪಾಪಿ: ಚಿತೆ ಮೇಲೆ ಚಿಕನ್ ರೋಸ್ಟ್ ಮಾಡಿ ತಿಂದ ಮಗ!

ಆರೋಪಿ ಪ್ರಧಾನ್ ತನ್ನ ವ್ಯಸನದ ಬಗ್ಗೆ ಮಾತನಾಡಿದ ತಾಯಿಯನ್ನು ಕೋಪದಿಂದ ಕೊಂದಿದ್ದಾನೆ ಎಂದು ಮನೋಹರಪುರ ಪೊಲೀಸ್ ಠಾಣೆಯ ಅಧಿಕಾರಿ ಹೇಳಿದ್ದಾರೆ. ತಾಯಿಯನ್ನು ದಹಿಸಿದ ಒಲೆಯಲ್ಲೇ 'ಚಿಕನ್ ರೋಸ್ಟ್' ಮಾಡಿಕೊಂಡು ತಿಂದಿರುವ ಆರೋಪದ ಬಗ್ಗೆ ವಿಚಾರಣೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  35 ವರ್ಷದ ವ್ಯಕ್ತಿಯೊಬ್ಬ ತನ್ನ ತಾಯಿಯನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಕುಡಿದು ಮನೆಗೆ ಬಂದಿದ್ದ ಪ್ರಧಾನ್, ತನ್ನ ತಾಯಿ ಸುಮಿ ಜತೆಗೆ ಜಗಳವಾಡಿದ್ದಾನೆ. ಈ ವೇಳೆ ಆಕ್ರೋಶಗೊಂಡ ಕುಡುಕ ಮಗ ಮರದ ಕೋಲಿನಲ್ಲಿ, ತನ್ನ 60 ವರ್ಷದ ತಾಯಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಬಳಿಕ ತಾಯಿಯ ಮೃತದೇಹವನ್ನು ಒಲೆಯಲ್ಲೇ ದಹಿಸಿದ್ದಾನೆ. ಈ ವೇಳೆ ಅದೇ ಒಲೆಯ ಮೇಲೆ ಚಿಕನ್ ರೋಸ್ಟ್ ಮಾಡಿಕೊಂಡು ತಿಂದಿದ್ದಾನೆ ಎನ್ನಲಾಗಿದೆ.

  ಕುಡಿದು ಮನೆಗೆ ಬರಬೇಡ ಎಂದು ತಾಯಿ ಮಗನನ್ನು ಕೇಳಿಕೊಂಡಿದ್ದರು. ಆದರೆ, ತಾಯಿ ಮಾತು ಕೇಳದ ಮಗ ಕುಡಿದು ಮನೆಗೆ ಬಂದಿದ್ದಲ್ಲದೆ, ತಾಯಿಗೆ ಹೊಡೆದು ಕೊಂದು ಹಾಕಿದ್ದಾನೆ. ಅಲ್ಲದೇ, ಆಕೆಯ ಚಿತೆ ಮೇಲೆ ಚಿಕನ್ ಅನ್ನು ರೋಸ್ಟ್ ಮಾಡಿಕೊಂಡು ತಿಂದಿದ್ದಾನೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

  ಮರುದಿನ ಬೆಳಗ್ಗೆ, ಪ್ರಧಾನ್ ಸುಟ್ಟ ದೇಹದ ಉಳಿದ ಭಾಗಗಳನ್ನು ಒಲೆಯ ಮೇಲೆ ಸುಡಲು ಪ್ರಯತ್ನಿಸುತ್ತಿರುವ ವೇಳೆ, ಆತನ ಸಹೋದರಿ ಆ ಹೀನ ಕೃತ್ಯವನ್ನು ಕಣ್ಣಾರೆ ಕಂಡಿದ್ದಾರೆ. ಕೂಡಲೇ ಆಕೆ ನೆರೆಹೊರೆಯವರನ್ನು ಕರೆದಿದ್ದಾರೆ. ಬಳಿಕ ಎಲ್ಲರೂ ಸೇರಿ ತಾಯಿಯನ್ನು ಕೊಂದ ಪಾಪಿಯನ್ನು ಮಗನನ್ನು ಕಟ್ಟಿಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

  ಆರೋಪಿ ಪ್ರಧಾನ್ ತನ್ನ ವ್ಯಸನದ ಬಗ್ಗೆ ಮಾತನಾಡಿದ ತಾಯಿಯನ್ನು ಕೋಪದಿಂದ ಕೊಂದಿದ್ದಾನೆ ಎಂದು ಮನೋಹರಪುರ ಪೊಲೀಸ್ ಠಾಣೆಯ ಅಧಿಕಾರಿ ಹೇಳಿದ್ದಾರೆ. ತಾಯಿಯನ್ನು ದಹಿಸಿದ ಒಲೆಯಲ್ಲೇ 'ಚಿಕನ್ ರೋಸ್ಟ್' ಮಾಡಿಕೊಂಡು ತಿಂದಿರುವ ಆರೋಪದ ಬಗ್ಗೆ ವಿಚಾರಣೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಆರೋಪಿ ಪ್ರಧಾನ್ ತನ್ನ 60 ವರ್ಷದ ತಂದೆ ಗೋಪಾಲ್ ರಾಯ್ ಅವರನ್ನೂ ಕೊಲೆ ಮಾಡಿದ್ದ ಎಂದು ತಿಳಿದುಬಂದಿದೆ.

  ಇದನ್ನು ಓದಿ: Banglore Crime: ಬೆಂಗಳೂರಿನ ಎಟಿಎಂನಲ್ಲಿ ಜ್ಯೋತಿ ಮೇಲೆ ಹಲ್ಲೆ ಪ್ರಕರಣ; ಅಪರಾಧಿಗೆ 12 ವರ್ಷ ಜೈಲು ಶಿಕ್ಷೆ!

  ಪುಟ್ಟ ಕಂದಮ್ಮನನ್ನೇ ಕೊಂದಿದ್ದ ತಂದೆ

  ಜಾರ್ಖಂಡ್​ನಲ್ಲಿ ಕಳೆದ ಡಿಸೆಂಬರ್​ನಲ್ಲಿ ಅಳುತ್ತಿದ್ದ ಒಂದೂವರೆ ವರ್ಷದ ಮಗಳನ್ನೇ ಕುಡುಕ ತಂದೆ ಕೊಲೆ ಮಾಡಿದ್ದನು. ಕೊಲೆ ಆರೋಪಿ ಗೌತಮ್​ನನ್ನು ನೆರೆಹೊರೆಯವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಮಗು ಅಳುವುದು ನಿಲ್ಲಿಸದಿದ್ದಾಗ ಕೋಪಗೊಂಡ ರಾಂಚಿಯ ಚುಟಿಯಾ ಪೊಲೀಸ್ ಠಾಣೆ ಪ್ರದೇಶದ ಮುಖುಂಡೋಲಿ ಪ್ರದೇಶದ ನಿವಾಸಿ ಗೌತಮ್ (40), ತನ್ನ ಮಗಳನ್ನು ನೆಲದ ಮೇಲೆ ಎಸೆದಿದ್ದ. ಆಕೆ ನೆಲದ ಮೇಲೆ ಬಿದ್ದಾಗ ಇನ್ನೂ ಅಳುತ್ತಿದ್ದರಿಂದ ಸಿಟ್ಟಿಗೆದ್ದ ತಂದೆ ಕತ್ತು ಹಿಸುಕಿ ಕೊಲೆ ಮಾಡಿದ್ದನು.

  ಘಟನೆಯ ನಂತರ ಮಗುವಿನ ತಾಯಿ ಜೋರಾಗಿ ಅತ್ತಾಗ ನೆರೆಹೊರೆಯವರು ಜಮಾಯಿಸಿದ್ದಾರೆ. ಜನರು ಆರೋಪಿ ಗೌತಮ್ ನನ್ನು ಹಿಡಿದು, ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.
  Published by:HR Ramesh
  First published: