Photo Viral: ಡಿವೈಎಸ್ಪಿ ಮಗಳಿಗೆ ಕೆಲಸದ ವೇಳೆ ಸಲ್ಯೂಟ್ ಹೊಡೆದ ಇನ್ಸ್ಪೆಕ್ಟರ್ ಅಪ್ಪ
ತಿರುಪತಿಯಲ್ಲಿ ರಾಜ್ಯ ಪೊಲೀಸ್ ಕರ್ತವ್ಯ ಸಭೆಯನ್ನು ಆಯೋಜಿಸಲಾಗಿತ್ತು. ಇಗ್ನೈಟ್ ಎಂಬ ಹೆಸರಿನಲ್ಲಿ ಈ ಸಭೆಯನ್ನು ನಡೆಸಲಾಗುತ್ತಿದೆ. ಜನವರಿ 4ರಿಂದ ಪ್ರಾರಂಭವಾಗಿ 7ರವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಸರ್ಕಲ್ ಇನ್ಸ್ಪೆಕ್ಟರ್ ವೈ ಶ್ಯಾಮ್ ಸುಂದರ್ ಅವರು ತಮ್ಮ ಮಗಳನ್ನು ಕಂಡು ಹತ್ತಿರ ಬಂದು ಸಲ್ಯೂಟ್ ಹೊಡೆದಿದ್ದಾರೆ. ತಂದೆ ತನಗೆ ಸಲ್ಯೂಟ್ ಹೊಡೆಯುತ್ತಿರುವದನ್ನು ಗಮನಿಸಿದ ಡಿವೈಎಸ್ಪಿ ಜೆಸ್ಸಿ ಪ್ರಶಾಂತಿ ಅವರು ಅಪ್ಪ ಎಂದು ಕರೆದಿದ್ದಾರೆ.
ಸರ್ಕಲ್ ಇನ್ಸ್ಪೆಕ್ಟರ್ ವೈ ಶ್ಯಾಮ್ ಸುಂದರ್-ಗುಂಡೂರ್ ಜಿಲ್ಲೆಯ DYSPಎಂಡ್ಲೂರು ಜೆಸ್ಸಿ ಪ್ರಶಾಂತಿ
ಸರ್ಕಲ್ ಇನ್ಸ್ಪೆಕ್ಟರ್ ಆಗಿರುವ ತಂದೆ ಡಿವೈಎಸ್ಪಿ ಹುದ್ದೆಯಲ್ಲಿರುವ ಮಗಳಿಗೆ ಸಲ್ಯೂಟ್ ಹೊಡೆದ ಅದ್ಭುತ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸರ್ಕಲ್ ಇನ್ಸ್ಪೆಕ್ಟರ್ ಆಗಿರುವ ವೈ ಶ್ಯಾಮ್ ಸುಂದರ್ ಅವರು ಗುಂಟೂರ್ ಜಿಲ್ಲೆಯ ಉಪ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಯಲ್ಲಿರುವ(DYSP) ಮಗಳು ಎಂಡ್ಲೂರು ಜೆಸ್ಸಿ ಪ್ರಶಾಂತಿ ಅವರಿಗೆ ಸಲ್ಯೂಟ್ ಹೊಡೆದಿದ್ದಾರೆ. ತಿರುಪತಿಯಲ್ಲಿ ನಡೆದ ಇಗ್ನೈಟ್ ಕಾರ್ಯಕ್ರಮದ ವೇಳೆ ಹಾಜರಾಗಿದ್ದ ತಂದೆ-ಮಗಳ ಅದ್ಭುತ ದೃಶ್ಯವನ್ನು ನೆರೆದಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಕ್ಯಾಮೆರಾದ ಮೂಲಕ ಸೆರೆಹಿಡಿದಿದ್ದಾರೆ.
ತಿರುಪತಿಯಲ್ಲಿ ರಾಜ್ಯ ಪೊಲೀಸ್ ಕರ್ತವ್ಯ ಸಭೆಯನ್ನು ಆಯೋಜಿಸಲಾಗಿತ್ತು. Ignite ಎಂಬ ಹೆಸರಿನಲ್ಲಿ ಈ ಸಭೆಯನ್ನು ನಡೆಸಲಾಗುತ್ತಿದೆ. ಜನವರಿ 4ರಿಂದ ಪ್ರಾರಂಭವಾಗಿ 7ರವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಸರ್ಕಲ್ ಇನ್ಸ್ಪೆಕ್ಟರ್ ವೈ ಶ್ಯಾಮ್ ಸುಂದರ್ ಅವರು ತಮ್ಮ ಮಗಳನ್ನು ಕಂಡು ಹತ್ತಿರ ಬಂದು ಸಲ್ಯೂಟ್ ಹೊಡೆದಿದ್ದಾರೆ. ತಂದೆ ತನಗೆ ಸಲ್ಯೂಟ್ ಹೊಡೆಯುತ್ತಿರುವದನ್ನು ಗಮನಿಸಿದ ಡಿವೈಎಸ್ಪಿ ಜೆಸ್ಸಿ ಪ್ರಶಾಂತಿ ಅವರು ಅಪ್ಪ ಎಂದು ಕರೆದಿದ್ದಾರೆ.
ಈ ಬಗ್ಗೆ ಮಾತನಾಡಿದ್ದ ಗುಂಟೂರು ಡಿವೈಎಸ್ಸಿ ಜೆಸ್ಸಿ ಪ್ರಶಾಂತಿ, ನನ್ನ ತಂದೆ ನನಗೆ ಸಲ್ಯೂಟ್ ಮಾಡಿದರು . ನಾವು ಕರ್ತವ್ಯದಲ್ಲಿರುವಾಗ ಭೇಟಿ ಆಗುತ್ತಿರುವುದು ಇದೇ ಮೊದಲು. ತಂದೆ ನನಗೆ ಸಲ್ಯೂಟ್ ಹೊಡೆದಾಗ ನಾನು ಆರಾಮಧಾಯವಾಗಿರಲಿಲ್ಲ. ನನಗೆ ನಮಸ್ಕರಿಸಬೇಡಿ ಎಂದು ಹೇಳಿದೆ. ಮತ್ತೆ ನಾನು ಕೂಡ ಅವರಿಗೆ ಸೆಲ್ಯೂಟ್ ಹೊಡೆದೆ ಎಂದು ಹೇಳಿದರು.
ನಂತರ ಮಾತು ಮುಂದುವರಿಸಿದ ಅವರು, ನನ್ನ ತಂದೆ ನನಗೆ ಸ್ಫೂರ್ತಿ, ಅವರು ಪಟ್ಟು ಬಿಡದೆ ಸೇವೆ ಸಲ್ಲಿಸುತ್ತಿರುವುದನ್ನು ಕಂಡು ನಾನು ಬೆಳೆದಿದ್ದೇನೆ. ಅವರು ಅನೇಕರಿಗೆ ತಮ್ಮ ಕೈಯಲ್ಲಾದಷ್ಟು ಸಹಾಯ ಮಾಡುತ್ತಾ ಬಂದಿದ್ದಾರೆ. ಅದನ್ನು ಕಂಡ ನಾನು ಈ ವಿಭಾಗವನ್ನು ಆಯ್ಕೆ ಮಾಡಲು ಕಾರಣವೆಂದು ಹೇಳಬಹುದು. ಇಲಾಖೆಯ ಬಗ್ಗೆ ನನಗೆ ಸಕಾರಾತ್ಮಕ ದೃಷ್ಟಕೋನವಿದೆ ಎಂದರು.
Circle Inspector Shyam Sundar salutes his own daughter Jessi Prasanti who is a Deputy Superintendent of Police with pride and respect at #IGNITE which is being conducted at #Tirupati.