Afghanistan Crisis: ಕಾಬೂಲ್ ವಿಮಾನ ನಿಲ್ದಾಣದಲ್ಲಿ ನೂಕುನುಗ್ಗಲು ವೇಳೆ ಪುಟ್ಟ ಕಂದಮ್ಮ ಅನಾಥ!

ಪ್ಲಾಸ್ಟಿಕ್ ಕ್ರೇಟ್‌ನಲ್ಲಿ ಮಗು ಅಳುತ್ತಿರುವ ಫೋಟೋ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 7 ತಿಂಗಳ ಹೆಣ್ಣು ಮಗು ಅನಾರೋಗ್ಯದಿಂದ ಬಳಲುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಆಯುಧದ ಜೊತೆಗೆ ತಾಲಿಬಾನಿ.

ಆಯುಧದ ಜೊತೆಗೆ ತಾಲಿಬಾನಿ.

  • Share this:
ತಾಲಿಬಾನಿ ಉಗ್ರರು ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಕ್ಕೆ ಪಡೆಯುತ್ತಲೇ ಅಫ್ಘನ್​ ಪ್ರಜೆಗಳು ನಡುಗಿ ಹೋಗಿದ್ದಾರೆ. ಹೇಗಾದರು ದೇಶವನ್ನು ತೊರೆದು ಪಾರಾದರೆ ಸಾಕು ಎಂದು ವಿಮಾನ ನಿಲ್ದಾಣಕ್ಕೆ ದೌಡಾಯಿಸಿದ್ದಾರೆ. ನಿನ್ನೆ ಕಾಬೂಲ್​ ವಿಮಾನ ನಿಲ್ದಾಣದಲ್ಲಿ ವಿಮಾನವೇರಲು ನೂಕುನುಗ್ಗಲು ನಡೆಸಿದ್ದು ಇನ್ನು ಕಣ್ಣ ಮುಂದೆಯೇ ಇದೆ. ಮತ್ತಷ್ಟು ಭಯಾನಕ ಫೋಟೋಗಳು, ವಿಡಿಯೋಗಳು ಅಫ್ಘಾನಿಸ್ತಾನದಲ್ಲಿ ಸೃಷ್ಟಿಯಾಗಿರುವ ಅರಾಜಕತೆಗೆ ಸಾಕ್ಷಿ ಹೇಳುತ್ತಿವೆ. ನಿನ್ನೆ ಯುಸ್​ ವಿಮಾನವೇರಲು ಅಫ್ಘನ್​ ಪ್ರಜೆಗಳು ಹರಸಾಹಸಪಟ್ಟಿದ್ದರು. ವಿಮಾನದ ಚಕ್ರಗಳನ್ನು ಹಿಡಿದು ಪ್ರಯಾಣಿಸಲು ಯತ್ನಿಸಿದ ಇಬ್ಬರು ವಿಮಾನ ಟೇಕ್​ ಆಫ್​ ಆಗುತ್ತಲೇ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದರು. ಈ ವಿಡಿಯೋ ಇಡೀ ವಿಶ್ವವೇ ಬೆಚ್ಚಿ ಬೀಳುವಂತೆ ಮಾಡಿತ್ತು.

ತಾಲಿಬಾನಿಗಳು ಬಂದೂಕುಗಳೊಂದಿಗೆ ಅಫ್ಘಾನಿಸ್ತಾನದ ಸಂಸತ್​ ಪ್ರವೇಶಿಸಿ ಎಲ್ಲಂದರಲ್ಲಿ ಕೂತಿದ್ದರು. ಅಧ್ಯಕ್ಷರ ಕುರ್ಚಿ ಮೇಲೆ ಕುಳಿತ್ತಿದ್ದ ಫೋಟೋಗಳು ಬಯಲಾಗಿದ್ದವು. ಇಂದು ಕಾಬೂಲ್​ನಲ್ಲಿರುವ ಅಮ್ಯೂಸ್​ಮೆಂಟ್​ ಪಾರ್ಕ್​​ಗಳಿಗೆ ಪ್ರವೇಶಿಸಿರುವ ಉಗ್ರರು ಮೋಜುಮಸ್ತಿಯಲ್ಲಿ ತೊಡಗಿರುವ ವಿಡಿಯೋ ಬಯಲಾಗಿದೆ. ಇವರ ಈ ಅಟ್ಟಹಾಸಕ್ಕೆ ಹೆದರಿರುವ ಅಘ್ಫನ್​ ಪ್ರಜೆಗಳು ದೇಶವನ್ನು ತೊರೆಯಲು ವಿಮಾನ ನಿಲ್ದಾಣಕ್ಕೆ ಗಂಟುಮೂಟೆಗಳ ಜೊತೆ ದೌಡಾಯಿಸುತ್ತಿದ್ದಾರೆ. ಬಸ್​​, ರೈಲುಗಳನ್ನು ಏರುವಂತೆ ಜನಸಂದಣಿ ಮಧ್ಯೆ ವಿಮಾನವನ್ನು ಏರಲು ಪ್ರಯತ್ನಿಸುತ್ತಿದ್ದಾರೆ. ಈ ದೊಂಬಿಯಲ್ಲಿ 7 ತಿಂಗಳ ಪುಟ್ಟ ಕಂದಮ್ಮ ಅನಾಥವಾಗಿರುವ ಫೋಟೋ ಸದ್ಯ ಕರುಳು ಹಿಂಡುತ್ತಿದೆ.

ಪ್ಲಾಸ್ಟಿಕ್ ಕ್ರೇಟ್‌ನಲ್ಲಿ ಮಗು ಅಳುತ್ತಿರುವ ಫೋಟೋ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 7 ತಿಂಗಳ ಹೆಣ್ಣು ಮಗು ಅನಾರೋಗ್ಯದಿಂದ ಬಳಲುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನಿನ್ನೆ ವಿಮಾನ ನಿಲ್ದಾಣದಲ್ಲಿ ನಡೆದ ನೂಕುನುಗ್ಗಲು ವೇಳೆ ಪುಟ್ಟ ಕಂದಮ್ಮ ಹೆತ್ತವರಿಂದ ಬೇರ್ಪಟ್ಟಿದೆ. ಪೋಷಕರು ಮಗು ಕಾಣೆಯಾಗಿರುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ತಿಳಿಸಿದ್ದರು. ಸುದ್ದಿ ಮಾಧ್ಯಮಗಳು ಮಗುವನ್ನು ಹುಡುಕುವಲ್ಲಿ ಕುಟುಂಬಸ್ಥರಿಗೆ ಸಹಾಯ ಮಾಡಿದೆ.  ಮಗುವಿನ ಪೋಷಕರು ಕಾಬೂಲ್‌ನ ಪಿಡಿ -5 ನಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕೊನೆಯದಾಗಿ ಅಫ್ಘನ್​​ನಿಂದ ಅಮೆರಿಕಾಗೆ ಹಾರಿದ ವಿಮಾನದಲ್ಲಿ ಕುರಿಮಂದೆಯಂತೆ ಪ್ರಯಾಣ.. ವಿಶ್ವದ ಮನಕಲುಕಿದ ಫೋಟೋ

ಮಗುವಿನ ಫೋಟೋ ಅಫ್ಘಾನಿಸ್ತಾನದ  ಸದ್ಯದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗಿದೆ. ಟ್ವಿಟರ್ ಬಳಕೆದಾರರು ಈ ಫೋಟೋವನ್ನು ಇಂದಿನ ಅತ್ಯಂತ ದುಃಖಕರ ಚಿತ್ರ ಎಂದು ಕರೆದಿದ್ದಾರೆ. ಮತ್ತೊಬ್ಬ ನೆಟ್ಟಿಗರು ನಾವು ಎಂತಹ ಕ್ರೂರ ಯುಗವನ್ನು ನೋಡುತ್ತಿದ್ದೇವೆ ಮತ್ತು ಬದುಕುತ್ತಿದ್ದೇವೆ ಎಂದು ಟ್ವೀಟ್​ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ವಿಶ್ವಸಂಸ್ಥೆ ಮತ್ತು ಮುಖ್ಯ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಇಡೀ ಜಗತ್ತು ನೋಡುತ್ತಿದೆ, ನಾವು ಹೇಗೆ ಸಾಯುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಈ ಮಗು ಇರುವುದು ತಾಲಿಬಾನ್‌ನ ವೈಫಲ್ಯ, ಅಮೆರಿಕಾದ ವೈಫಲ್ಯ ಮತ್ತು ತಾಲಿಬಾನಿಸಂನ ವೈಫಲ್ಯದ ಸಂಕೇತ ಎಂದು ಕಿಡಿಕಾರಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: