• Home
  • »
  • News
  • »
  • national-international
  • »
  • Cardiac Valve Replacement: ಶಸ್ತ್ರ ಚಿಕಿತ್ಸೆ ಮಾಡದೆ ಹೃದಯದ ಕವಾಟ ಬದಲಿಸಿದ ವೈದ್ಯರು!​

Cardiac Valve Replacement: ಶಸ್ತ್ರ ಚಿಕಿತ್ಸೆ ಮಾಡದೆ ಹೃದಯದ ಕವಾಟ ಬದಲಿಸಿದ ವೈದ್ಯರು!​

ಶಸ್ತ್ರ ಚಿಕಿತ್ಸೆ ನಡೆಸದೆ ಹೃದಯ ಕವಾಟ ಬದಲು

ಶಸ್ತ್ರ ಚಿಕಿತ್ಸೆ ನಡೆಸದೆ ಹೃದಯ ಕವಾಟ ಬದಲು

15 ವರ್ಷದ ಬಾಲಕನಿಗೆ ಸೇನಾ ಆಸ್ಪತ್ರೆಯ ತಜ್ಞರು ತೆರೆದ ಶಸ್ತ್ರ ಚಿಕಿತ್ಸೆ ನಡೆಸದೆಯೇ ಹೃದಯ ಕವಾಟ ಬದಲಿಸುವ ಮೂಲಕ ಹೊಸ ದಾಖಲೆ ನಿರ್ವಿುಸಿದ್ದಾರೆ. ಕರ್ನಲ್ ಹರ್ಮೀತ್ ನೇತೃತ್ವದ ಕಾರ್ಯಾಚರಣೆ ತಂಡ ಸಿಂಗ್ ಅರೋರಾ, ಪೀಡಿಯಾಟ್ರಿಕ್ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಹಾನಿರ್ದೇಶಕ, ಶಸ್ತ್ರಚಿಕಿತ್ಸಕ ವೈಸ್ ಅಡ್ಮಿರಲ್ ರಜತ್ ದತ್ತಾ ಅವರ ಮಾರ್ಗದರ್ಶನದಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ.

ಮುಂದೆ ಓದಿ ...
  • Share this:

ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ 15 ವರ್ಷದ ಬಾಲಕನಿಗೆ ಸೇನಾ ಆಸ್ಪತ್ರೆಯ (Army Hospital) ತಜ್ಞರು ತೆರೆದ ಶಸ್ತ್ರ ಚಿಕಿತ್ಸೆ ನಡೆಸದೆಯೇ ಹೃದಯ ಕವಾಟ (Heart valve) ಬದಲಿಸುವ ಮೂಲಕ ಹೊಸ ದಾಖಲೆ ನಿರ್ವಿುಸಿದ್ದಾರೆ. ಕರ್ನಲ್ ಹರ್ಮೀತ್ ಸಿಂಗ್ ಅರೋರಾ (Harmeet Singh Arora) ನೇತೃತ್ವದ ಕಾರ್ಯಾಚರಣೆ ತಂಡ , ಪೀಡಿಯಾಟ್ರಿಕ್ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಹಾನಿರ್ದೇಶಕ, ಶಸ್ತ್ರಚಿಕಿತ್ಸಕ ವೈಸ್ ಅಡ್ಮಿರಲ್ ರಜತ್ ದತ್ತಾ ಅವರ ಮಾರ್ಗದರ್ಶನದಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ. ಇವರು ಸಶಸ್ತ್ರ ಪಡೆಗಳಲ್ಲಿ ಹೃದ್ರೋಗ ತಜ್ಞರಾಗಿಯೂ (Cardiologist) ಸೇವೆ ಸಲ್ಲಿಸುತ್ತಿದ್ದಾರೆ.


'ಟ್ರಾನ್ಸ್‌ಕ್ಯಾಥೆಟರ್ ಪಲ್ಮನರಿ ವಾಲ್ವ್ ಇಂಪ್ಲಾಂಟೇಶನ್' ವಿಧಾನ ಬಳಕೆ
ಬಾಲಕ ಹುಟ್ಟುವಾಗಲೇ ಜನ್ಮಜಾತ ಪರಿಧಮನಿಯ ಹೃದಯ ಕಾಯಿಲೆ ದೋಷದೊಂದಿಗೆ (CHD ̲coronary heart disease ) ಜನಿಸಿದ್ದನು. ಹೀಗಾಗಿ ಬಾಲಕನಿಗೆ ಈ ಮೊದಲೇ ಎರಡು ಬಾರಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಈ ಚಿಕಿತ್ಸೆಯಲ್ಲಿ ಹೃದಯದಿಂದ ಶ್ವಾಸಕೋಶಕ್ಕೆ ರಕ್ತವನ್ನು ಪೂರೈಸಲು ಕೃತಕ 'ವಾಹಿನಿ'ಯನ್ನು ಅಳವಡಿಸಲಾಗಿತ್ತು.


ಕಾಲಾನಂತರದಲ್ಲಿ, ಈ ವಾಹಕವು ಕ್ಷೀಣಿಸುತ್ತಾ ಬಂದಿದ್ದರಿಂದ, ಹೃದಯ ವೈಫಲ್ಯಕ್ಕೆ ಕಾರಣವಾಗುತ್ತದೆ ಎಂಬುದರ ಬಗ್ಗೆ ವೈದ್ಯರು ಎಚ್ಚರಿಸಿದ್ದರು. ಮೂರನೇ ಬಾರಿ ಶಸ್ತ್ರ ಚಿಕಿತ್ಸೆ ನಡೆಸುವುದು ಅಪಾಯವೆಂದು ತಿಳಿದ ಸೇನಾ ಆಸ್ಪತ್ರೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಲು, 'ಟ್ರಾನ್ಸ್‌ಕ್ಯಾಥೆಟರ್ ಪಲ್ಮನರಿ ವಾಲ್ವ್ ಇಂಪ್ಲಾಂಟೇಶನ್' ಎಂಬ ನವೀನ ವಿಧಾನವನ್ನು ಕೈಗೊಂಡಿತು. 'ಟ್ರಾನ್ಸ್‌ಕ್ಯಾಥೆಟರ್ ಪಲ್ಮನರಿ ವಾಲ್ವ್ ಇಂಪ್ಲಾಂಟೇಶನ್' ಎಂಬ ವಿಧಾನದಲ್ಲಿ ತೊಡೆಸಂದಿನ ಸಣ್ಣ ಛೇದನದ ಮೂಲಕ ಕೃತಕ ಕವಾಟವನ್ನು ಸೇರಿಸಿ ಎದೆಯನ್ನು ತೆರೆಯದೆಯೇ ಚಿಕಿತ್ಸೆ ನಡೆಸಿತು. ಸಶಸ್ತ್ರ ಪಡೆ ಸೇರಿದಂತೆ ಸರ್ಕಾರಿ ವಲಯದಲ್ಲಿ ಇದೇ ಮೊದಲ ಬಾರಿಗೆ ಈ ವಿಧಾನವನ್ನು ಕೈಗೊಳ್ಳಲಾಗಿದೆ ಎನ್ನಲಾಗಿದೆ.


ಇದನ್ನೂ ಓದಿ:  Algae Cultivation: 2050ರ ವೇಳೆಗೆ 10 ಬಿಲಿಯನ್ ಜನರಿಗೆ ಆಹಾರ ಒದಗಿಸುತ್ತಂತೆ ಪಾಚಿ ಸಾಕಣೆ ಕೇಂದ್ರಗಳು!


ಪೀಡಿಯಾಟ್ರಿಕ್ ಇಂಟೆನ್ಸಿವಿಸ್ಟ್ ಮತ್ತು ಪೀಡಿಯಾಟ್ರಿಕ್ ವಿಭಾಗದ ಮುಖ್ಯಸ್ಥ ಕರ್ನಲ್ ಸಂದೀಪ್ ಧಿಂಗ್ರಾ, ಮಾತನಾಡಿ "ಪೀಡಿಯಾಟ್ರಿಕ್ ಕಾರ್ಡಿಯಾಲಜಿ ತಂಡದ ಈ ಸಾಧನೆಯು ಸಂಕೀರ್ಣ ಪರಿಧಮನಿಯ ಹೃದಯ ಕಾಯಿಲೆ ಹೊಂದಿರುವ ಮಕ್ಕಳಲ್ಲಿ ಸುಧಾರಿತ ಸಮಗ್ರ ಹೃದಯ ಆರೈಕೆಯನ್ನು ಒದಗಿಸುವ ನಿಟ್ಟಿನಲ್ಲಿ ಇದು ಒಂದು ಮೈಲಿಗಲ್ಲಾಗಿದೆ ಮತ್ತು ಶಸ್ತ್ರಚಿಕಿತ್ಸಕವಲ್ಲದ ಮಧ್ಯಸ್ಥಿಕೆಗಳಲ್ಲಿ ಹೊಸ ಯುಗವನ್ನು ಪ್ರಾರಂಭಿಸುತ್ತದೆ" ಎಂದು ಹೇಳಿದರು.


"ಶಸ್ತ್ರಚಿಕಿತ್ಸೆಯ ಬದಲಿ ಉತ್ತಮ ಪರ್ಯಾಯವಿದು"
ಲೆಫ್ಟಿನೆಂಟ್ ಜನರಲ್ ಅಶೋಕ್ ಜಿಂದಾಲ್ ಕಮಾಂಡೆಂಟ್, ಸೇನಾ ಆಸ್ಪತ್ರೆ ಈ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸುವಲ್ಲಿ ಕಾರ್ಯಾಚರಣಾ ತಂಡವನ್ನು ಪೂರಕಗೊಳಿಸಿದರು ಮತ್ತು ಸುಧಾರಿತ ಮಕ್ಕಳ ಹೃದಯ ಆರೈಕೆಯನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರಲು ಅವರನ್ನು ಪ್ರೋತ್ಸಾಹಿಸಿದರು.


"ಈ ಹೃದಯ ಶಸ್ತ್ರ ಚಿಕಿತ್ಸೆ ನಡೆಸದೆಯೇ ಮಾಡಲಾಗುವ ಈ ವಿಧಾನವು ಪರಿಧಮನಿಯ ಹೃದಯ ಕಾಯಿಲೆ (CHD )ಗಳೊಂದಿಗಿನ ರೋಗಿಗಳಿಗೆ ಹೊಸ ಜೀವನವನ್ನು ನೀಡುತ್ತದೆ ಮತ್ತು ಹೆಚ್ಚಿನ ಅಪಾಯದ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಲು ಕಾರಣವಾಗುತ್ತದೆ, ಹೀಗಾಗಿ ಜೀವನದ ಗುಣಮಟ್ಟವನ್ನು ತೀವ್ರವಾಗಿ ಸುಧಾರಿಸುತ್ತದೆ" ಎಂದು ಕರ್ನಲ್ ಹರ್ಮೀತ್ ಹೇಳಿದರು.


'ಟ್ರಾನ್ಸ್‌ಕ್ಯಾಥೆಟರ್ ಪಲ್ಮನರಿ ವಾಲ್ವ್ ಇಂಪ್ಲಾಂಟೇಶನ್' ಹೇಗೆ ನಡೆಯುತ್ತದೆ?
'ಟ್ರಾನ್ಸ್‌ಕ್ಯಾಥೆಟರ್ ಪಲ್ಮನರಿ ವಾಲ್ವ್ ಇಂಪ್ಲಾಂಟೇಶನ್' ರೋಗಿಗಳಲ್ಲಿ ರಕ್ತದ ಹರಿವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ. ಶಸ್ತ್ರಚಿಕಿತ್ಸಾ ಮಹಾಪಧಮನಿಯ ಕವಾಟದ ಬದಲಾವಣೆಯಿಂದ (ತೆರೆದ ಹೃದಯ ಶಸ್ತ್ರಚಿಕಿತ್ಸೆ) ತೊಡಕುಗಳ ಅಪಾಯದಲ್ಲಿರುವವರಿಗೆ ಈ ವಿಧಾನ ಒಂದು ವರದಾನವಾಗಿದೆ.


ಇದನ್ನೂ ಓದಿ:  Skeletons: ಅಂಗಡಿ ಅಡಿಗಿತ್ತು 240ಕ್ಕೂ ಹೆಚ್ಚು ಅಸ್ಥಿಪಂಜರ!


ಇಲ್ಲಿ ಎದೆಯನ್ನು ಶಸ್ತ್ರಚಿಕಿತ್ಸೆಯಿಂದ ತೆರೆಯುವ ಬದಲು ಎಕ್ಸ್-ರೇ ಮಾರ್ಗದರ್ಶನದಲ್ಲಿ ನಿಮ್ಮ ಕಾಲಿನ ಅಭಿಧಮನಿಯಿಂದ ನಿಮ್ಮ ಹೃದಯಕ್ಕೆ ಹೊಸ ಕವಾಟವನ್ನು ಸೇರಿಸಲು ನಿಮ್ಮ ತೊಡೆಸಂದು ಚರ್ಮದ ಸಣ್ಣ ಛೇದನದ ಮೂಲಕ ಕಾರ್ಯವಿಧಾನವನ್ನು ನಡೆಸಲಾಗುತ್ತದೆ.


ಈ ಹಿಂದೆಯೂ ನಡೆದಿತ್ತು ಇಂಥದ್ದೇ ಚಿಕಿತ್ಸೆ
ಇದೇ ರೀತಿಯ ಚಿಕಿತ್ಸೆ ಈ ಹಿಂದೆಯೂ ನಡೆದಿದ್ದಾಗಿ ವರದಿಗಳು ತಿಳಿಸಿವೆ. ಚೆನ್ನೈನಲ್ಲಿ ಮಹಾಪಧಮನಿಯ ಮತ್ತು ಮಿಟ್ರಲ್ ಎಂಬ ಎರಡು ಹೃದಯ ಕವಾಟಗಳನ್ನು ಬದಲಾಯಿಸುವ ಮೂಲಕ 61 ವರ್ಷದ ರೋಗಿಗೆ ಎದೆಯನ್ನು ತೆರೆಯದೆ ಚಿಕಿತ್ಸೆ ನೆಡೆಸಿದ್ದಾಗಿ ವರದಿಗಳು ತಿಳಿಸಿವೆ.

Published by:Ashwini Prabhu
First published: