• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Healthcare Costs: ಭಾರತೀಯರಿಗೆ ಆರೋಗ್ಯ ಕಾಪಾಡೋದೇ ದೊಡ್ಡ ಸವಾಲು, ಖರ್ಚು ನಿಭಾಯಿಸಲಾಗದೆ ಸಾಲಗಾರನಾಗುತ್ತಿದ್ದಾನೆ ಶ್ರೀಸಾಮಾನ್ಯ

Healthcare Costs: ಭಾರತೀಯರಿಗೆ ಆರೋಗ್ಯ ಕಾಪಾಡೋದೇ ದೊಡ್ಡ ಸವಾಲು, ಖರ್ಚು ನಿಭಾಯಿಸಲಾಗದೆ ಸಾಲಗಾರನಾಗುತ್ತಿದ್ದಾನೆ ಶ್ರೀಸಾಮಾನ್ಯ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವೈದ್ಯಕೀಯ ಸೌಲಭ್ಯ ಇಂದಿನ ದಿನಗಳಲ್ಲಿ ಎಲ್ಲರಿಗೂ ಅನಿವಾರ್ಯವಾಗಿದೆ. ಒಂದು ಜೀವವನ್ನು ಉಳಿಸಲು ಆಸ್ತಿ, ಮನೆ, ಮಾರಾಟ ಮಾಡಲು ಸಹ ಹಿಂದೆ ಮುಂದೆ ನೋಡುವುದಿಲ್ಲ. ಈ ಮಧ್ಯೆ ಇದೀಗ ಮತ್ತೆ ಆರೋಗ್ಯ ವೆಚ್ಚದಲ್ಲಿ ಏರಿಕೆ ಮಾಡಿದ್ದಾರೆ. ಇದರಿಂದ ಸಾಮಾನ್ಯ ಜನರು ಸಾಲದ ಹೊರೆಯನ್ನು ಎದುರಿಸುವಂತಾಗಿದೆ.

ಮುಂದೆ ಓದಿ ...
  • Share this:

ಆರೋಗ್ಯವೇ (Health) ಭಾಗ್ಯ. ಮನುಷ್ಯನಿಗೆ ಆರೋಗ್ಯ ಇಲ್ಲದೇ ಎಷ್ಟೇ ಆಸ್ತಿ, ಸಂಪತ್ತು, ದುಡ್ಡು ಇದ್ದರೂ ಅದು ವ್ಯರ್ಥ. ಹೀಗಾಗಿ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತಾರೆ. ಸ್ವಲ್ಪ ಆರೋಗ್ಯದಲ್ಲಿ ಏರು-ಪೇರು ಕಂಡು ಬಂದರು ಆಸ್ಪತ್ರೆಗಳತ್ತ ಓಡುತ್ತಾರೆ. ಈಗಂತೂ ಆಸ್ಪತ್ರೆಗಳ (Hospital), ಔಷಧಿಗಳ ಬೆಲೆ ಕೂಡ ಗಗನಕ್ಕೇರಿದೆ. ಸ್ವಲ್ಪ ಜ್ವರ ಅಂತಾ ಒಂದೆರೆಡು ದಿನ ಆಸ್ಪತ್ರೆಗೆ ದಾಖಲಾದರೂ ಜೇಬಿನಲ್ಲಿರೋ ದುಡ್ಡು ಖಾಲಿ ಆಗಿ ಬೇರೆ ಕಡೆ ಮತ್ತೆ ಸಾಲ (Loan) ಮಾಡುವ ಸ್ಥಿತಿ ಇದೆ. ಮನುಷ್ಯನಾದವನಿಗೆ ಜೀವನವಿರುವುದು ಒಂದು. ಈ ಸಮಯದಲ್ಲಿ ಆರೋಗ್ಯವೇ ಸರಿಯಿಲ್ಲದಿದ್ದರೆ ಎಷ್ಟೆಲ್ಲಾ ಚಿಂತೆಯಾಗುತ್ತದೆ. ಆದರೆ ಈಗ ಔಷಧಿಗಳ (Medicine) ಬೆಲೆ ಸಹ ಹೆಚ್ಚಾಗಿದೆಯೆಂದರೆ ಸಾಮಾನ್ಯ ಜನರು ಏನು ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ.


ಆರೋಗ್ಯ ವೆಚ್ಚ ಹೆಚ್ಚುತ್ತಿದ್ದಂತೆ ಬಡವರಿಗೆ ಸಹಾಯ ಆಗಲೆಂದು ಹಲವು ಯೋಜನೆಗಳನ್ನು ಜಾರಿಗೆ ತಂದರೂ ಸಹ ಖಾಸಗಿ ಆಸ್ಪತ್ರೆಗಳ ಹಾವಳಿಯಿಂದಾಗಿ ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ.


ಗಗನಕ್ಕೇರಿದ ವೈದ್ಯಕೀಯ ವೆಚ್ಚ


ವೈದ್ಯಕೀಯ ಸೌಲಭ್ಯ ಇಂದಿನ ದಿನಗಳಲ್ಲಿ ಎಲ್ಲರಿಗೂ ಅನಿವಾರ್ಯವಾಗಿದೆ. ಒಂದು ಜೀವವನ್ನು ಉಳಿಸಲು ಆಸ್ತಿ, ಮನೆ, ಮಾರಾಟ ಮಾಡಲು ಸಹ ಹಿಂದೆ ಮುಂದೆ ನೋಡುವುದಿಲ್ಲ. ಜನರಿಗೆ ಮತ್ತೊಂದು ದೊಡ್ಡ ಸಮಸ್ಯೆ ಎಂದರೆ ಈ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಆಯ್ಕೆ. ಹೆಚ್ಚಿನವರು ಅತ್ತ ಸರಕಾರಿ ಆಸ್ಪತ್ರೆಗೂ ಹೋಗಲಾರರು. ಇತ್ತ ಖಾಸಗಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನೂ ಭರಿಸಲಾರರು.


ಇದನ್ನೂ ಓದಿ: ಸಂಸದ ಸ್ಥಾನದಿಂದ ಅನರ್ಹಗೊಂಡ ರಾಹುಲ್‌ ಗಾಂಧಿ; ಯಾವೆಲ್ಲಾ ಸರ್ಕಾರಿ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾರೆ?


ಅದರಲ್ಲೂ ಕೆಳ ಮಧ್ಯಮ ವರ್ಗದವರ ಪಾಡಂತೂ ಇನ್ನೂ ಅಸಹನೀಯ. ಒಮ್ಮೆ ಆಸ್ಪತ್ರೆಗೆ ಹೋದರೆ ವೈದ್ಯರ ಬಿಲ್‌ ಐನೂರು ರೂಪಾಯಿಕ್ಕಿಂತ ಕಡಿಮೆ ಇರುವುದಿಲ್ಲ. ಇನ್ನೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ ಅಷ್ಟಕಷ್ಟೆ ಎಂದು ಜನ ಹಣ ಖರ್ಚಾದರೂ ಪರವಾಗಿಲ್ಲ ಅಂತಾ ಖಾಸಗಿ ಆಸ್ಪತ್ರೆ ಕಡೆ ಮುಖ ಮಾಡುತ್ತಾರೆ.


ಆರೋಗ್ಯ ವಿಮೆ ಇಲ್ಲದಿದ್ದರೆ ಖರ್ಚು ಭರಿಸುವುದೇ ಕಷ್ಟ


ಹೌದು, ಭಾರತದಲ್ಲಿ ಆರೋಗ್ಯ ವಿಮೆ ಇಲ್ಲದಿದ್ದರೆ ಆಸ್ಪತ್ರೆ ಮತ್ತು ಆರೋಗ್ಯ ವೆಚ್ಚಗಳನ್ನು ಭರಿಸುವುದು ತುಂಬಾನೇ ಕಷ್ಟವಾಗಿ ಬಿಟ್ಟಿದೆ. ಕೆಲ ಅಧ್ಯಯನದ ಪ್ರಕಾರ ಕೆಳ ಮಧ್ಯಮ ಆದಾಯ ಹೊಂದಿರುವ 50 ರಾಷ್ಟ್ರಗಳಲ್ಲಿ ತಮ್ಮ ಕೈಯಿಂದ ಆರೋಗ್ಯಕ್ಕಾಗಿ ವೆಚ್ಚ ಮಾಡುವ ಜನರ ಪೈಕಿ ಭಾರತೀಯರು ಆರನೇ ಸ್ಥಾನದಲ್ಲಿದ್ದಾರೆ ಎಂದು ವರದಿಯಾಗಿದೆ.


41% ಭಾರತೀಯ ಕುಟುಂಬಗಳಲ್ಲಿ ಒಬ್ಬರೇ ವಿಮೆ ಹೊಂದಿದ್ದಾರೆ - ವರದಿ


ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ, ಕೇವಲ 41% ಭಾರತೀಯ ಕುಟುಂಬಗಳಲ್ಲಿ ಕನಿಷ್ಠ ಒಬ್ಬ ಕುಟುಂಬದ ಸದಸ್ಯರು ಮಾತ್ರ ಆರೋಗ್ಯ ವಿಮೆಯನ್ನು ಹೊಂದಿದ್ದಾರೆ ಎಂದು ಹೇಳಿದೆ.


ಆಸ್ಪತ್ರೆ ಹಣ ತೂಗಿಸಲು ಸಾಲ, ಆಸ್ತಿ ಮಾರಾಟ


ಅಷ್ಟೇ ಅಲ್ಲ ತಮ್ಮ ಕೈಯಲ್ಲಿನ ಹಣ ಖರ್ಚಾಗಿ ಸಾಲ ಮಾಡಿದವರು, ಆಸ್ತಿ, ಬಂಗಾರ-ಬೆಳ್ಳಿ ಮಾರಿದವರ ಬೇಕಾದಷ್ಟು ನಿದರ್ಶನಗಳಿವೆ. 2014ರ ಡೇಟಾ ಪ್ರಕಾರ, ಪ್ರತಿ ಆಸ್ಪತ್ರೆಗೆ ಒಳರೋಗಿಗಳ ಆರೈಕೆಯ ಸರಾಸರಿ ವೆಚ್ಚವು ನಗರ ಪ್ರದೇಶಗಳಲ್ಲಿ 26,475 ರೂ. ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 16,676 ರೂ ಆಗಿದೆ. ಆದರೆ ಪ್ರಸ್ತುತ ಈ ಬೆಲೆ ಏರಿಕೆಯಿಂದಾಗಿ ಈ ಹಣ ಈಗ ದ್ವಿಗುಣಗೊಂಡಿದೆ ಎನ್ನಬಹುದು.


ಸಾಂಕೇತಿಕ ಚಿತ್ರ


ಆರೋಗ್ಯ ವೆಚ್ಚ ಸರಿದೂಗಿಸಲು ಹಲವರು ಹಲವು ರೀತಿಯಲ್ಲಿ ಪರದಾಡುತ್ತಿದ್ದಾರೆ. ಅದರಲ್ಲಿ ಗಜಾಲಾ ಮತ್ತು ಆಕೆಯ ಸಹೋದರಿ ಕೂಡ ಒಬ್ಬರು. ಅವರ ತಂದೆಯನ್ನು ಕ್ಯಾನ್ಸರ್ ಮುಕ್ತರನ್ನಾಗಿ ಮಾಡಲು ತಮ್ಮ ಎಲ್ಲಾ ಚಿನ್ನವನ್ನು ಮಾರಾಟ ಮಾಡಿ ತಂದೆಗೆ ಚಿಕಿತ್ಸೆ ಕೊಡಿಸಿದರು.


ಇದಿಷ್ಟು ಹಣ ಸಾಲದೇ ಮತ್ತೆ ಸಹೋದರಿಯರು ಮೈತುಂಬಾ ಸಾಲ ಮಾಡಿಕೊಂಡರು. ಇದೇ ವೇಳೆ ಸಹೋದರಿಗೆ ಮದುವೆ ಕೂಡ ನಿಶ್ಚಯವಾಗಿತ್ತು. "ಉಳಿತಾಯದ ಹಣವೆಲ್ಲಾ ಅಪ್ಪನ ಚಿಕಿತ್ಸೆಗೆ ಖರ್ಚಾಗಿತ್ತು, ಸಹೋದರಿಗೆ ಒಂದಿಷ್ಟು ಬಂಗಾರದಂತಹ ಉಡುಗೊರೆ ನೀಡದೇ ಸಾಲ ಮಾಡಿ ಮದುವೆ ಮಾಡಿದೆ" ಎನ್ನುತ್ತಾರೆ ಗಜಾಲಾ ನೆನಪಿಸಿಕೊಳ್ಳುತ್ತಾರೆ.


ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ


ವೈದ್ಯಕೀಯ ವೆಚ್ಚಗಳು ಗಗನಕುಸುಮವಾಗಿರುವುದರ ಜೊತೆ ಈ ಸರ್ಕಾರಿ ಆಸ್ಪತ್ರೆಗಲ್ಲಿ ಮೂಲಭೂತ ಸವಲತ್ತುಗಳು ಇಲ್ಲದಿರುವುದು ಈ ವೆಚ್ಚ ಹೆಚ್ಚಳಕ್ಕೆ ಮತ್ತೊಂದು ಕಾರಣ.


ಸವಲತ್ತು, ಸಿಬ್ಬಂದಿ ಕೊರತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಎದ್ದು ಕಾಣುವಂತದ್ದು. ಗ್ರಾಮೀಣ ಭಾಗದಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ 84.7% ಮತ್ತು ಉಪ-ಜಿಲ್ಲಾ ಆಸ್ಪತ್ರೆಗಳಲ್ಲಿ 79.4% ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ.


ಇದು ಸಿಬ್ಬಂದಿ ಕೊರತೆಗೆ ಮುಖ್ಯ ಕಾರಣವಾಗಿದೆ. ಗ್ರಾಮೀಣ ಭಾಗದ ಜನ ಆಸ್ಪತ್ರೆಗೆ ಹೋದರೆ ಕನಿಷ್ಠ ಸೌಲಭ್ಯ ಪಡೆಯುವುದು ಕೂಡ ಕಷ್ಟವಾಗಿದೆ. ಆಸ್ಪತ್ರೆಗೆ ಹೋದರೆ ಆಂಕೊಲಾಜಿಸ್ಟ್‌ಗಳಂತಹ ತಜ್ಞರನ್ನು ಕಂಡುಹಿಡಿಯುವುದು ಕಷ್ಟ ಎಂದು ಉತ್ತರ ಪ್ರದೇಶದ ಉಂಚಹಾರ್ ಬಳಿಯ ಹಳ್ಳಿಯ ಹೀನಾ ಹೇಳಿದ್ದಾರೆ. ಈಕೆ ಲ್ಯುಕೇಮಿಯಾದಿಂದ ಬಳಲುತ್ತಿದ್ದು, ಚಿಕಿತ್ಸೆ ವೆಚ್ಚ ಭರಿಸಲು ಹೆಣಗಾಡುತ್ತಿದ್ದಾರೆ.


ಆರೋಗ್ಯಕ್ಕಾಗಿ ಆಸ್ತಿ ಮಾರುವ ರೋಗಿಗಳು


ಭಾರತದಲ್ಲಿ ಆರೋಗ್ಯ ವೆಚ್ಚಕ್ಕಾಗಿ ಹೇಗೆಲ್ಲಾ ಕಷ್ಟಪಡುತ್ತಿದ್ದಾರೆ ಎಂಬುದಕ್ಕೆ ಹೀನಾ ಪ್ರತ್ಯಕ್ಷ ಸಾಕ್ಷಿ. ಈಕೆಗೆ ಅಸ್ಥಿಮಜ್ಜೆಯ ಕಸಿ ಅಗತ್ಯವಿದ್ದು, ಕಾರ್ಯವಿಧಾನದ ವೆಚ್ಚವನ್ನು ವಿಮೆಯಿಂದ ಭರಿಸಲಾಯಿತು.


ಆದರೆ ಶಸ್ತ್ರಚಿಕಿತ್ಸೆ ನಂತರ ಚುಚ್ಚುಮದ್ದು, ಔಷಧಿಗಳನ್ನು ಭರಿಸಲು ಈಕೆಗೆ ಹಣದ ಕೊರತೆ ಉಂಟಾಯಿತು. ಮುಂದಿನ ಚಿಕಿತ್ಸೆ ಭರಿಸಲು ಹೀನಾಳ ತಾಯಿ ಉತ್ತರ ಪ್ರದೇಶದಲ್ಲಿ ಕುಟುಂಬದ ಭೂಮಿಯನ್ನು ಮಾರಾಟ ಮಾಡಿ ಅಗತ್ಯವಿರುವ 2.5 ಲಕ್ಷ ರೂಪಾಯಿಯನ್ನು ಹೊಂದಿಸಿದರು ಎಂದು ಹೀನಾ ಹೇಳಿದ್ದಾರೆ.


ಆರೋಗ್ಯ ವಿಮೆ ಇಲ್ಲದೇ ಶಸ್ತ್ರಚಿಕಿತ್ಸೆಯ ಗೋಜಿಗೆ ಹೋಗುತ್ತಿಲ್ಲ ಹಲವು ರೋಗಿಗಳು


ಮತ್ತೊಬ್ಬ ರೋಗಿ ಖದೀಜಾ ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿತ್ತು. ವೃತ್ತಿಯಲ್ಲಿ ಮನೆಗೆಲಸ ಮಾಡುತ್ತಿದ್ದ ಇವರಿಗೆ ಯಾವುದೇ ಆರೋಗ್ಯ ವಿಮೆ ಇರಲಿಲ್ಲ, ಅವರು ಕೂಡ ಯಾವುದೇ ಆರೋಗ್ಯ ವಿಮೆ ಮಾಡಿಸಿಕೊಂಡಿರಲಿಲ್ಲ.


ಹೀಗಾಗಿ ಹಣದ ಒಂದೇ ಒಂದು ಕೊರತೆಯಿಂದಾಗಿ ಮಾಡಿಸಿಕೊಳ್ಳಬೇಕಾದ ಶಸ್ತ್ರಚಿಕಿತ್ಸೆಯನ್ನೇ ಆಕೆ ಮುಂದೂಡುತ್ತ ಆರೋಗ್ಯದಲ್ಲಿ ಸಂಕಷ್ಟ ಎದುರಿಸುತ್ತಿದ್ದಾಳೆ. ಇದು ಕೇವಲ ಖದೀಜಾ ಒಬ್ಬರ ಉದಾಹರಣೆಯಷ್ಟೇ. ಆರೋಗ್ಯ ವೆಚ್ಚಗಳನ್ನು ಭರಿಸಲಾಗದೇ ಸಾವನ್ನಪ್ಪುತ್ತಿರುವವರು ನಮ್ಮ ದೇಶದಲ್ಲಿ ಸಾಕಷ್ಟು ಮಂದಿ ಇದ್ದಾರೆ.


ಆರೋಗ್ಯ ವೆಚ್ಚ.. 63 ಮಿಲಿಯನ್ ಭಾರತೀಯರಿಗೆ ಬಡತನ


ಕೇವಲ ಸಾವಲ್ಲ ಹಲವರು ಸಾಲಕ್ಕೂ ಗುರಿಯಾಗಿದ್ದಾರೆ. ಸರ್ಕಾರದ ಅಂದಾಜಿನ ಪ್ರಕಾರ, ಕೇವಲ ಆರೋಗ್ಯ ವೆಚ್ಚಗಳ ಕಾರಣದಿಂದಾಗಿ 63 ಮಿಲಿಯನ್ ಭಾರತೀಯರು ಪ್ರತಿ ವರ್ಷ ಬಡತನವನ್ನು ಎದುರಿಸುತ್ತಿದ್ದಾರೆ.




"ವಿಮೆಯು ನಿಜವಾಗಿಯೂ ಹಣದ ಹೊರಗಿನ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡಿಲ್ಲ. ಆರೋಗ್ಯ ವಿಮೆಯೊಂದಿಗೆ ಫಲಾನುಭವಿಗಳ ಶೋಷಣೆಗೆ ಅವಕಾಶವಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಮಗೆ ಹೆಚ್ಚಿನ ನಿಯಂತ್ರಣದ ಅಗತ್ಯವಿದೆ ”ಎಂದು ಆರೋಗ್ಯ ಭದ್ರತೆಯನ್ನು ಭದ್ರಪಡಿಸುವ ಕೆಲಸ ಮಾಡುವ ಸಂಸ್ಥೆಯಾದ ಪ್ರಯಾಸ್‌ನ ಕಾರ್ಯಕರ್ತ ಛಾಯಾ ಪಚೌಲಿ ಹೇಳುತ್ತಾರೆ.


ಚಿಕಿತ್ಸೆಗೆ ಆರೋಗ್ಯ ಸೌಲಭ್ಯಗಳು, ವೈದ್ಯರು ಮತ್ತು ವೈದ್ಯಕೀಯ ಆರೈಕೆದಾರರು, ಔಷಧ ಪೂರೈಕೆ, ಇತ್ಯಾದಿ. ವಿಮಾ ಪ್ಯಾಕೇಜ್‌ಗಳ ಭಾಗವಾಗಿರುವ ಗುಪ್ತ ನಿಯಮಗಳು ಮತ್ತು ಷರತ್ತುಗಳಾದ ಕಾಯುವ ಅವಧಿ, ಮರುಪಾವತಿ ಬಡವರಿಗೆ ಮತ್ತು ಕಡಿಮೆ ವಿದ್ಯಾವಂತರಿಗೆ ಹೆಚ್ಚು ಸಹಾಯಕವಾಗುವುದಿಲ್ಲ ಎಂಬುದು ಅವರ ಮತಾಗಿದೆ.


ಆರೋಗ್ಯ ಸೇವೆ ಕೈಗೆಟುಕುವಂತಿಲ್ಲ


ರಾಷ್ಟ್ರೀಯ ಅಂಕಿಅಂಶ ಕಚೇರಿಯ ದತ್ತಾಂಶದ ಆಧಾರದ ಮೇಲೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪಾಲಿಸಿಯ ಅರ್ಥಶಾಸ್ತ್ರಜ್ಞರ ಈ ಲೇಖನದ ಪ್ರಕಾರ, ಆರೋಗ್ಯ ವೆಚ್ಚಗಳ ಕಾರಣದಿಂದ ಎಲ್ಲಾ ಭಾರತೀಯ ಕುಟುಂಬಗಳಲ್ಲಿ ಸುಮಾರು 8%-9% ಬಡತನ ರೇಖೆಗಿಂತ ಕೆಳಕ್ಕೆ ಇರಿಸಿವೆ ಎಂದಿದೆ.


"ನನ್ನ ದತ್ತಾಂಶದ ವಿಶ್ಲೇಷಣೆಯ ಪ್ರಕಾರ, ಆರೋಗ್ಯ ವೆಚ್ಚಗಳು ಒಟ್ಟು ಬಳಕೆಯ ವೆಚ್ಚದ 10% (ವಿಪತ್ತಿನ ವೆಚ್ಚಕ್ಕೆ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಮಿತಿ) ಗಿಂತ ಹೆಚ್ಚಿವೆ.


ಆರೋಗ್ಯ ವೆಚ್ಚಗಳನ್ನು ಸೇರಿಸುವ ಮೂಲಕ ಬಡತನ ರೇಖೆಯನ್ನು ಮರುವ್ಯಾಖ್ಯಾನಿಸಿದರೆ, ಬಡತನದಿಂದ ಬಳಲುತ್ತಿರುವ ಜನಸಂಖ್ಯೆಯ ಪಾಲಿನಲ್ಲಿ ಭಾರಿ ಏರಿಕೆ ಕಂಡುಬರುತ್ತದೆ ”ಎಂದು ಪತ್ರಿಕೆಯ ಲೇಖಕರಲ್ಲಿ ಒಬ್ಬರಾದ ದುಬೆ ಹೇಳುತ್ತಾರೆ. ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ಹೆಚ್ಚುತ್ತಿದ್ದು, ನಾಗರಿಕರ ಬದುಕು ದುಸ್ತರವಾಗಿದೆ. ಸಾಲದ ಸುಳಿಯಲ್ಲಿ ಸಿಲುಕುವ ಭಯದಿಂದ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ.


ಭಾರತದ ಬಡವರು ಸಾಲವನ್ನು ಅನುಭವಿಸಲು ಒಂದು ಪ್ರಮುಖ ಕಾರಣವೆಂದರೆ ಆರೋಗ್ಯ ರಕ್ಷಣೆಯ ವೆಚ್ಚ, ಇದು ಆದಾಯಕ್ಕೆ ಅಸಮಾನವಾಗಿ ಹೆಚ್ಚಳವಾಗುತ್ತಿದೆ ಎಂದು ಹಲವು ಅಧ್ಯಯನಗಳು ಹೇಳಿವೆ. ಭಾರತದಲ್ಲಿ ಖದೀಜಾ, ಹೀನಾ, ಗಜಾಲಾ ಥರ ಹಲವು ಜನ ಇದ್ದು, ಆರೋಗ್ಯ ಭಾಗ್ಯ ಆಗಬೇಕಾಗಿದ್ದು ಸಾಲದ ಹೊರೆಯಾಗಿ ಬಿಟ್ಟಿದೆ.

First published: