Hospital Beds: ಭಾರತದಲ್ಲಿ ದುಬಾರಿಯಾಗುತ್ತಿದೆ ಆರೋಗ್ಯ ಸೇವೆ, ಆಸ್ಪತ್ರೆ ಕೊಠಡಿಗೂ GST

ಕೋವಿಡ್‌ -19 ಸಾಂಕ್ರಾಮಿಕ ರೋಗ ಬಂದಾಗಿನಿಂದ ಆಸ್ಪತ್ರೆಗಳಿಗೆ, ವೈದ್ಯರು ಮತ್ತು ನರ್ಸ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಸಾಮಾನ್ಯ ಜನರಿಗೆ ಆಸ್ಪತ್ರೆಗೆ ಹೋಗುವುದು ಎಂದರೆ ಭಯವೇ ಸರಿ. ಕೆಲವು ಸಲ ಈ ಆಸ್ಪತ್ರೆ ಖರ್ಚು ನೋಡಿ ತಲೆ ತಿರುಗುವುದೊಂದು ಬಾಕಿ ಇರುತ್ತದೆ. ಈ ಖಾಸಗಿ ಆಸ್ಪತ್ರೆಗಳು ಏಕಿಷ್ಟು ದುಬಾರಿ ಎಂದುಕೊಳ್ಳುತ್ತಿರುವವರಿಗೆ ಒಂದಿಷ್ಟು ಮಾಹಿತಿ ಇಲ್ಲಿ ನೀಡುತ್ತಿದ್ದೇವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೋವಿಡ್‌ -19 ಸಾಂಕ್ರಾಮಿಕ ರೋಗ ಬಂದಾಗಿನಿಂದ ಆಸ್ಪತ್ರೆಗಳಿಗೆ (Hospital), ವೈದ್ಯರು ಮತ್ತು ನರ್ಸ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಸಾಮಾನ್ಯ ಜನರಿಗೆ ಆಸ್ಪತ್ರೆಗೆ ಹೋಗುವುದು ಎಂದರೆ ಭಯವೇ ಸರಿ. ಕೆಲವು ಸಲ ಈ ಆಸ್ಪತ್ರೆ ಖರ್ಚು ನೋಡಿ ತಲೆ ತಿರುಗುವುದೊಂದು ಬಾಕಿ ಇರುತ್ತದೆ. ಈ ಖಾಸಗಿ ಆಸ್ಪತ್ರೆಗಳು (Private Hospital) ಏಕಿಷ್ಟು ದುಬಾರಿ ಎಂದುಕೊಳ್ಳುತ್ತಿರುವವರಿಗೆ ಒಂದಿಷ್ಟು ಮಾಹಿತಿ ಇಲ್ಲಿ ನೀಡುತ್ತಿದ್ದೇವೆ. ಸೋಮವಾರದಿಂದ ಒಂದು ದಿನಕ್ಕೆ 5,000 ರೂ.ಗಿಂತ ಹೆಚ್ಚು ವೆಚ್ಚ ಬರುವ ಎಲ್ಲಾ ಐಸಿಯು (ICU) ಅಲ್ಲದ ಆಸ್ಪತ್ರೆಯ ಕೊಠಡಿಗಳ ಮೇಲೆ ಸರ್ಕಾರವು (Government) 5 % ಸರಕು ಮತ್ತು ಸೇವಾ ತೆರಿಗೆಯನ್ನು (GST) ವಿಧಿಸಲು ಪ್ರಾರಂಭಿಸಿರುವುದರಿಂದ ಭಾರತದಲ್ಲಿ (India) ಆರೋಗ್ಯ ಸೇವೆಯು ಹೆಚ್ಚು ದುಬಾರಿಯಾಗಿದೆ.

ಐಸಿಯು ಅಲ್ಲದ ಆಸ್ಪತ್ರೆಯ ಕೊಠಡಿಗಳ ಮೇಲೆ ಸರ್ಕಾರವು 5 % ಜಿ.ಎಸ್.ಟಿ 
ಜೂನ್ 28 ಮತ್ತು 29 ರಂದು ನಡೆದ 47ನೇ ಸರಕು ಮತ್ತು ಸೇವಾ ತೆರಿಗೆಯು (GST) ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವು ಮಧ್ಯಮ ವರ್ಗದ ಆರೋಗ್ಯ ವೆಚ್ಚವನ್ನು ಹೆಚ್ಚಿಸುವುದರಿಂದ ಇದಕ್ಕೆ ಪರಿಹಾರವನ್ನು ನೀಡುವಂತೆ ಎಫ್‌ಐಸಿಸಿಐ ಉದ್ಯಮ ಸಂಸ್ಥೆಯು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಪತ್ರ ಬರೆದಿದ್ದರೂ ಸಹ ಅದಕ್ಕೆ ಉತ್ತರ ನೀಡದೆ ಈ ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಶಿಫಾರಸುಗಳು ಇನ್ನು ವೆಚ್ಚವನ್ನು ಹೆಚ್ಚಿಸುತ್ತವೆ ಮತ್ತು ಗೊಂದಲವನ್ನು ಸೃಷ್ಟಿಸುತ್ತವೆ ಎಂದು ಎಫ್‌ಐಸಿಸಿಐ ಹೇಳಿದೆ.

ಇದನ್ನೂ ಓದಿ: Air Ambulance: ₹ 1 ಕೋಟಿಗಿಂತ ಹೆಚ್ಚು ಖರ್ಚು ಮಾಡಿ ಅಮೆರಿಕಾದಿಂದ ಭಾರತಕ್ಕೆ ಹೃದಯ ಚಿಕಿತ್ಸೆಗೆ ಬಂದ ಮಹಿಳೆ!

ಭಾರತೀಯ ವೈದ್ಯಕೀಯ ಸಂಘ (IMA) ಕೂಡ ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಭಾರತೀಯರು ಖಾಸಗಿ ಆರೋಗ್ಯ ರಕ್ಷಣೆಯ ಮೇಲೆ ಹೆಚ್ಚು ಅವಲಂಬಿತರಾಗಿರುವುದರಿಂದ ಈ ಹಂತವು ರೋಗಿಗಳ ಆರ್ಥಿಕತೆಯ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಈ ಆಸ್ಪತ್ರೆಯ ಖರ್ಚು ಅವರು ಮಾಡುವ ಅತಿ ಹೆಚ್ಚು ಹಣದ ಖರ್ಚುಗಳಲ್ಲಿ ಒಂದಾಗಿದೆಎಂದಿದೆ.ದೇಶದಲ್ಲಿ ಪ್ರಸ್ತುತ ಆರೋಗ್ಯ ವೆಚ್ಚದಲ್ಲಿ 29 % ಖಾಸಗಿ ಆಸ್ಪತ್ರೆಗಳಿಗೆ ವೆಚ್ಚವಾಗಿದ್ದರೆ, ಕೇವಲ 17 % ಮಾತ್ರ ಸರ್ಕಾರಿ ಆಸ್ಪತ್ರೆಗಳಿಗೆ ವೆಚ್ಚವಾಗಿದೆ. 10 ನಗರಗಳಲ್ಲಿ ಕನಿಷ್ಠ ಐದು ಕುಟುಂಬಗಳು ಮತ್ತು 40 % ಗ್ರಾಮೀಣ ಕುಟುಂಬಗಳು ಖಾಸಗಿ ಆರೋಗ್ಯ ಸೇವೆಯನ್ನು ಪಡೆಯುತ್ತವೆ.

ಐಸಿಯು ಅಲ್ಲದ ಆಸ್ಪತ್ರೆಯ ಕೊಠಡಿಗಳಿಗೆ ಈಗ ಆಗುತ್ತಿರುವ ವೆಚ್ಚ ಎಷ್ಟು?
ಐಸಿಯು ಅಲ್ಲದ ಆಸ್ಪತ್ರೆಯ ಬೆಡ್‌ಗೆ ರೂ 5,000 ವೆಚ್ಚವಾಗಿದ್ದರೆ, ರೋಗಿಯು ಒಂದು ದಿನಕ್ಕೆ 5 % ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ. ಅದು 250 ರೂ. ಗೆ ಸಮವಾಗಿರುತ್ತದೆ.. ಹಾಗೆಯೇ, ರೋಗಿಯನ್ನು ಎರಡು ದಿನಗಳವರೆಗೆ ದಾಖಲಿಸಿದರೆ, ಅವರು 500 ರೂ. ಸರಕು ಮತ್ತು ಸೇವಾ ತೆರಿಗೆ (GST) ಅನ್ನು ಪಾವತಿಸಬೇಕಾಗುತ್ತದೆ. ಆದರೆ ನಾಲ್ಕು ದಿನಗಳು ಇದ್ದರೆ 1,000 ರೂ. ಜಿಎಸ್‌ಟಿಯನ್ನು ಪಾವತಿಸಬೇಕು ಎಂದು ಸೂಚಿಸುತ್ತದೆ.

ಭಾರತದ ಆರೋಗ್ಯ ರಕ್ಷಣೆಯ ಮೇಲಿನ ವೆಚ್ಚವು 60 % ದಿಂದ 48-50 % ಕ್ಕೆ ಕಡಿಮೆಯಾಗಿದೆಯಾದರೂ, ಇದು ಜಾಗತಿಕವಾಗಿ ಸುಮಾರು 18 % ಕ್ಕೆ ಹೋಲಿಸಿದರೆ, ಇದು ವಿಶ್ವದಲ್ಲೇ ಅತಿ ಹೆಚ್ಚು ಎಂದು ಹೇಳಲಾಗುತ್ತದೆ. ಸರ್ಕಾರದ ಪ್ರಸ್ತುತ ಆರೋಗ್ಯ ವೆಚ್ಚವು ಜಿಡಿಪಿಯ 1.3 % ಎಂದು ಅಂದಾಜಿಸಲಾಗಿದೆ, ಇದು ಜಿಡಿಪಿಯ 1.6 % ದಷ್ಟು ಮನೆಯ ಹೊರಗಿನ ವೆಚ್ಚಕ್ಕಿಂತ ಕಡಿಮೆಯಾಗಿದೆ. ಈಗಾಗಲೇ ಆಸ್ಪತ್ರೆಗಳು ಹಣದುಬ್ಬರ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಹೆಚ್ಚಿನ ನಿರ್ವಹಣಾ ವೆಚ್ಚವನ್ನು ಎದುರಿಸುತ್ತಿವೆ.

ಆರೋಗ್ಯದ ಮೇಲಿನ ಹೆಚ್ಚಿನ ತೆರಿಗೆ ಸಾಧ್ಯತೆ ಕುರಿತು ಒಂದು ವಿಶ್ಲೇಷಣೆ
ಆರೋಗ್ಯ ಸೇವೆ ಮೇಲೆ ವಿಧಿಸಿರುವ ತೆರಿಗೆ ಕುರಿತು ವಿವಿಧ ಕಡೆಯಿಂದ ದೂರುಗಳು ಬಂದಿದ್ದರೂ, ಸರ್ಕಾರವು ತನ್ನ ಜಿಎಸ್‌ಟಿ ನಿರ್ಧಾರವನ್ನು ಮುಂದುವರಿಸಲು ನಿರ್ಧರಿಸಿದೆ. ಸರ್ಕಾರದ ಪ್ರಕಾರ, ರೋಗಿಯು ರೂ 5,000 ಮೌಲ್ಯದ ಕೊಠಡಿಯಲ್ಲಿ ಇರಲು ಸಾಧ್ಯವಾದರೆ, ಅವರು ಈ ಜಿಎಸ್‌ಟಿ ಅನ್ನು ಪಾವತಿಸಲು ಸಮರ್ಥರಾಗಿರುತ್ತಾರೆ. ಇದುವರೆಗೆ GST ಯಿಂದ ಹೆಚ್ಚಾಗಿ ವಿನಾಯಿತಿ ಪಡೆದಿರುವ ಆರೋಗ್ಯ ಮತ್ತು ಇದಕ್ಕೆ ಸಂಬಂಧಿತ ಸೇವೆಗಳ ಮೇಲೆ ಇನ್ನು ಮುಂದೆ ಹೆಚ್ಚಿನ ತೆರಿಗೆಗೆ ಇದು ದಾರಿ ಮಾಡಿಕೊಡಬಹುದು ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: Uttara Kannada Jobs: ಉದ್ಯೋಗದ ಹೊಳೆ ಹರಿಸುತ್ತಿದೆ ಗೋದಾವರಿ ಸೊಸೈಟಿ! ಉತ್ತರ ಕನ್ನಡಿಗರೇ ಮಿಸ್ ಮಾಡ್ಕೋಬೇಡಿ

ಇದಕ್ಕೆ ದೀರ್ಘಕಾಲೀನ ಪರಿಹಾರವೆಂದರೆ ರೋಗಿಗಳಿಗೆ ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆಯಲು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು ಮಾತ್ರವೇ ಆಗಿದೆ.
Published by:Ashwini Prabhu
First published: