• Home
  • »
  • News
  • »
  • national-international
  • »
  • Rajasthan: ಗೆಹ್ಲೋಟ್​ ಮೋದಿಯನ್ನು ಹೊಗಳಿಲ್ಲ, ಪೈಲಟ್​ ಆರೋಪಕ್ಕೆ ಕಾಂಗ್ರೆಸ್​ ಸ್ಪಷ್ಟನೆ

Rajasthan: ಗೆಹ್ಲೋಟ್​ ಮೋದಿಯನ್ನು ಹೊಗಳಿಲ್ಲ, ಪೈಲಟ್​ ಆರೋಪಕ್ಕೆ ಕಾಂಗ್ರೆಸ್​ ಸ್ಪಷ್ಟನೆ

ಒಂದೇ ವೇದಿಕೆಯಲ್ಲಿ ಗೆಹ್ಲೋಟ್, ಮೋದಿ

ಒಂದೇ ವೇದಿಕೆಯಲ್ಲಿ ಗೆಹ್ಲೋಟ್, ಮೋದಿ

ಅಶೋಕ್ ಗೆಹ್ಲೋಟ್ ಮತ್ತು ಪ್ರಧಾನಿ ಮೋದಿ ಬಗ್ಗೆ ಸಚಿನ್ ಪೈಲಟ್ ಹೇಳಿಕೆ ಕುರಿತು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೆಟ್, 'ಪ್ರಧಾನಿ ಮೋದಿ ಅವರು ಗೆಹ್ಲೋಟ್​ ಅವರನ್ನು ಅತ್ಯಂತ ಅನುಭವಿ ಮುಖ್ಯಮಂತ್ರಿ ಎಂದು ಅಲ್ಲಿ ಖಂಡಿತಾ ಹೇಳಿದ್ದಾರೆ. ಅವರು ಅತ್ಯಂತ ಅನುಭವಿ ಮುಖ್ಯಮಂತ್ರಿ ಹೌದು ಕೂಡಾ. ಹೀಗಾಗೇ ಅವರು ಮೋದಿಗೆ ಕನ್ನಡಿ ಹಿಡಿದಿದ್ದಾರೆ ಎಂದಿದ್ದಾರೆ.

ಮುಂದೆ ಓದಿ ...
  • Share this:

ಜೈಪುರ(ನ.03): ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Rajasthan Chief Minister Ashok Gehlot) ಪ್ರಧಾನಿಯನ್ನು ವೇದಿಕೆಯಿಂದ ಹೊಗಳಿಲ್ಲ, ಅವರಿಗೆ ಕನ್ನಡಿ ತೋರಿಸಿದ್ದಾರೆ ಎಂದು ಕಾಂಗ್ರೆಸ್ ಬುಧವಾರ ಹೇಳಿದೆ. ಆದರೆ ಅತ್ತ ಸಚಿನ್ ಪೈಲಟ್​ (Sachin Pilot) ಅವರು ಅಶೋಕ್ ಗೆಹ್ಲೋಟ್ ಅವರನ್ನು ಪ್ರಧಾನಿ ಮೋದಿ ಹೊಗಳಿದ್ದು ಕುತೂಹಲಕಾರಿ ಬೆಳವಣಿಗೆಯಾಗಿದೆ ಎಂದು ಸಚಿನ್ ಪೈಲಟ್ ಹೇಳಿದ್ದಾರೆ. ಈ ಕುರಿತಾಗಿ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೆಟ್, 'ಪ್ರಧಾನಿ ಮೋದಿ ಅವರು ಗೆಹ್ಲೋಟ್​ ಅವರನ್ನು ಅತ್ಯಂತ ಅನುಭವಿ ಮುಖ್ಯಮಂತ್ರಿ ಎಂದು ಅಲ್ಲಿ ಖಂಡಿತಾ ಹೇಳಿದ್ದಾರೆ. ಅವರು ಅತ್ಯಂತ ಅನುಭವಿ ಮುಖ್ಯಮಂತ್ರಿ ಹೌದು ಕೂಡಾ. ಯಾಕೆಂದರೆ ಅದೇ ವೇದಿಕೆಯಲ್ಲಿ ತುಂಬಿದ್ದ ಜನಸಮೂಹದ ಮುಂದೆ ಅಶೋಕ್ ಗೆಹ್ಲೋಟ್ ಜಿ ಮೋದಿಜಿ ಅವರು ಗಾಂಧಿಯವರ ದೇಶದಿಂದ ಬಂದಿದ್ದಾರೆಂಬ ಕಾರಣದಿಂದ ವಿದೇಶದಲ್ಲಿ ಗೌರವಾನ್ವಿತರಾಗಿದ್ದಾರೆ. ಅವರು ನೆಹರೂ, ಮೌಲಾನಾ ಆಜಾದ್, ಚಂದ್ರಶೇಖರ್ ಆಜಾದ್, ಸರ್ದಾರ್ ಪಟೇಲ್, ಬಾಬಾ ಸಾಹೇಬರ ದೇಶವಾದ ಭಾರತದಿಂದ ಬಂದವರು, ಅಲ್ಲಿ 70 ವರ್ಷಗಳ ನಂತರವೂ ಪ್ರಜಾಪ್ರಭುತ್ವದ ಬೇರುಗಳು ಬಲವಾಗಿವೆ ಎಂದೂ ಹೇಳಿದ್ದಾರೆ ಎಂದಿದ್ದಾರೆ.


ಇದು ನಾಚಿಕೆಗೇಡಿನ ವಿಚಾರ


ಸಚಿನ್ ಪೈಲಟ್ ಅವರ ಈ ಹೇಳಿಕೆಗೆ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೆಟ್, 'ರಾಜಸ್ಥಾನದ ಮುಖ್ಯಮಂತ್ರಿ ಮೋದಿಜಿಗೆ ಕನ್ನಡಿ ತೋರಿಸುವ ಕೆಲಸವನ್ನು ಸಭೆಯಲ್ಲಿ ಮಾಡಿದ್ದಾರೆ ಎಂದು ನನಗೆ ತೋರುತ್ತದೆ. ಯಾವ ಪ್ರಜಾಪ್ರಭುತ್ವವನ್ನು ಮೋದಿಜೀ ಕ್ಷಣ ಕ್ಷಣಕ್ಕೂ ನಾಶಪಡಿಸುತ್ತಾರೋ, ಅದೇ ಪ್ರಜಾಪ್ರಭುತ್ವವನ್ನು ಪ್ರಸ್ತಾಪಿಸಿ, ಗಾಂಧಿ ಮತ್ತು ನೆಹರೂ ದೇಶವನ್ನು ಉಲ್ಲೇಖಿಸಿ ಕನ್ನಡಿ ತೋರಿಸಿದ್ದಾರೆ ಎಂದಿದ್ದಾರೆ.


ಇದನ್ನೂ ಓದಿ: Narendra Modi: ಒಂದು ರ‍್ಯಾಲಿಯಿಂದ ಮೂರು ರಾಜ್ಯಗಳ ವೋಟ್​ಬ್ಯಾಂಕ್​ ಮೇಲೆ ಬಿಜೆಪಿ ಕಣ್ಣು!


ನಾಚಿಕೆಗೇಡಿನ ವಿಚಾರ


ಇದಕ್ಕೆ ಸಂಬಂಧಿಸಿದ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಸುಪ್ರಿಯಾ, 'ತುಂಬಿದ ಸಭೆಯಲ್ಲಿ ಪಕ್ಕದಲ್ಲಿರುವವರಿಗೆ ನಿಮ್ಮ ಗೌರವ ನಿಮ್ಮಿಂದ ಇರುವುದಲ್ಲ. ನೀವು ಗಾಂಧೀಜಿ ದೇಶದವರು, ನೆಹರೂ ಅವರ ದೇಶದಿಂದ ಬಂದವರು, ಅಂಬೇಡ್ಕರ್ ಜಿ ಅವರ ದೇಶದವರು, ಪ್ರಜಾಪ್ರಭುತ್ವ ಅತ್ಯಂತ ಪ್ರಬಲವಾಗಿರುವ ದೇಶದವರು ಹೀಗಾಗಿ ನಿಮಗೆ ಗೌರವ ಇದೆ ಎಂಬುವುದು ಹೊಗಳಿಕೆಯಲ್ಲ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ನಾನು ಭಾವಿಸುತ್ತೇನೆ. ಇದರಲ್ಲಿ ಯಾರಿಗೆ ಗೌರವ ಕಾಣಿಸುತ್ತದೆ ಎಂದು ನನಗೆ ತಿಳಿದಿಲ್ಲ ಎಂದಿದ್ದಾರೆ.


'ಆಸಕ್ತಿದಾಯಕ ಬೆಳವಣಿಗೆ' ಎಂದಿದ್ದ ಪೈಲಟ್


ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಬುಧವಾರ ಮುಖ್ಯಮಂತ್ರಿ ಗೆಹ್ಲೋಟ್ ಅವರನ್ನು "ಹೊಗಳಿದ್ದಕ್ಕಾಗಿ" ಪ್ರಧಾನಿ ಗೆಹ್ಲೋಟ್ ಅವರನ್ನು ವ್ಯಂಗ್ಯವಾಡಿದರು, ಇದು "ಆಸಕ್ತಿದಾಯಕ ಬೆಳವಣಿಗೆ" ಎಂದು ಕರೆದರು. ಇನ್ನು ಈ ಹಿಂದೆ ಪೈಲಟ್ ಸೆಪ್ಟೆಂಬರ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯನ್ನು ಬಹಿಷ್ಕರಿಸಿದರು ಮತ್ತು ಗೆಹ್ಲೋಟ್ ಅವರನ್ನು ಬೆಂಬಲಿಸಿ ಶಕ್ತಿ ಪ್ರದರ್ಶನದ ನೇತೃತ್ವ ವಹಿಸಿದ್ದ ರಾಜಸ್ಥಾನದ ನಾಯಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರೆಂಬುವುದು ಉಲ್ಲೇಖನೀಯ.


ಇದನ್ನೂ ಓದಿ: ISIS Terrorist: ಭಾರತದ ಮಹಾನಾಯಕನ ಹತ್ಯೆಗೆ ಸ್ಕೆಚ್, ರಷ್ಯಾದಲ್ಲಿ ಐಸಿಸ್ ಬಾಂಬರ್ ಅರೆಸ್ಟ್!


ಪ್ರಧಾನಿ ಮೋದಿ ಹೇಳಿದ್ದೇನು?


‘ಗೌರವ್ ಗಾಥಾ ಆಫ್ ಮಂಗರ್ ಧಾಮ್’ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರು ಬನ್ಸ್ವಾರಾ ಬಳಿಯ ಮಂಗರ್ ಧಾಮ್‌ಗೆ ಹೋಗಿದ್ದರು ಎಂಬುದು ಉಲ್ಲೇಖಾರ್ಹ. ಆಗ ಅವರು, 'ಮುಖ್ಯಮಂತ್ರಿಯಾಗಿದ್ದಾಗ ನಾನು ಮತ್ತು ಅಶೋಕ್ ಗೆಹ್ಲೋಟ್ ಜಿ ಒಟ್ಟಿಗೆ ಕೆಲಸ ಮಾಡುತ್ತಿದ್ದೆವು. ಅಶೋಕ್ ಜಿ ಅವರು ನಮ್ಮ ಮುಖ್ಯಮಂತ್ರಿಗಳ ಗುಂಪಿನಲ್ಲಿ ಅತ್ಯಂತ ಹಿರಿಯರಾಗಿದ್ದರು, ಅದರಲ್ಲಿಯೂ ಅಶೋಕ್ ಜಿ ಅವರು ಹಿರಿಯ ಮುಖ್ಯಮಂತ್ರಿಗಳಲ್ಲಿ ಒಬ್ಬರು ಎಂದಿದ್ದರು.

Published by:Precilla Olivia Dias
First published: