• Home
  • »
  • News
  • »
  • national-international
  • »
  • Bus Driver: ಬಸ್ ಡ್ರೈವಿಂಗ್ ವೇಳೆ ಮೊಬೈಲ್‌ನಲ್ಲಿ ಡ್ರೈವರ್ ಬ್ಯುಸಿ, ಅಧಿಕಾರಿಗಳಿಂದ ಚಾಲಕನಿಗೆ ಕ್ಲಾಸ್!

Bus Driver: ಬಸ್ ಡ್ರೈವಿಂಗ್ ವೇಳೆ ಮೊಬೈಲ್‌ನಲ್ಲಿ ಡ್ರೈವರ್ ಬ್ಯುಸಿ, ಅಧಿಕಾರಿಗಳಿಂದ ಚಾಲಕನಿಗೆ ಕ್ಲಾಸ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೇರಳದ ಕೊಚ್ಚಿಯಲ್ಲಿ ಬಸ್ಸ್ ಡ್ರೈವರ್ ಬಸ್ಸ್ ಚಲಿಸುತ್ತಿರುವಾಗ ಮೊಬೈಲ್ ಚಾಟಿಂಗ್ ಮಾಡುತ್ತಿದ್ದ ಫೋಟೊ ವೈರಲ್ ಆಗಿತ್ತು. ಇದೀಗ ಆತನನ್ನು ಸಾರಿಗೆ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.

  • Share this:

    ಕೇರಳದ ( Kerala) ಕೊಚ್ಚಿಯಲ್ಲಿ (Kocchi) ಬಸ್ ಡ್ರೈವರ್ (Bus Driver) ಬಸ್ ಚಲಿಸುತ್ತಿರುವಾಗ ಮೊಬೈಲ್ ಚಾಟಿಂಗ್ ಮಾಡುತ್ತಿದ್ದ ಫೋಟೊ ವೈರಲ್ ಆಗಿದ್ದು ಇದೀಗ ಆತನ್ನು ಸಾರಿಗೆ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.  ಬಸ್ ಚಾಲಕನ ಹೆಸರು ರುಬೀಶ್ (Rubish) ಎನ್ನಲಾಗಿದೆ. ಈತ ಅಲುವಾ ಮತ್ತು ಥಿವಾರ ರಸ್ತೆಯಲ್ಲಿ ಚಲಿಸುತ್ತಿದ್ದ ವೇಳೆಯಲ್ಲಿ ಮೊಬೈಲ್ (Mobile) ಬಳಕೆ ಮಾಡುತ್ತಿದ್ದ ದೃಶ್ಯವನ್ನು ಚಾಲಕನ ಪಕ್ಕದಲ್ಲಿದ್ದ ಸೀಟ್​ನಲ್ಲಿ ಕುಳಿತ್ತಿದ್ದ ವ್ಯಕ್ತಿ ಫೋಟೋ ತೆಗೆದು  ಸಾಮಾಜಿಕ ಜಾಲತಾಣದಲ್ಲಿ (Social Media) ಶೇರ್​ ಮಾಡಿದ್ದಾನೆ. ಈ ಫೋಟೋ ವೈರಲ್ ಆದ ಬಳಿಕ ಸಾರಿಗೆ ಆಧಿಕಾರಿಗಳಿಗೆ ಈ ಫೋಟೋ ತಲುಪಿದೆ. ಬಳಿಕ ರುಬೀಶ್​ನನ್ನು ವಶಕ್ಕೆ ಪಡೆಯಲಾಯಿತು.


    ಡ್ರೈವಿಂಗ್ ಸಂದರ್ಭದಲ್ಲಿ ಮೊಬೈಲ್ ಬಳಕೆ ಮಾಡುವುದು ಕಾನೂನಿನ ಉಲ್ಲಂಘನೆ ಎಂಬ ಅರಿವು ಇಲ್ಲದೆೇ ಚಲಾಯಿಸಿದ್ದು, ಚೇಸಿಂಗ್ ಮಾಡುವ ಮೂಲಕ ಅಧಿಕಾರಿಗಳು ಆತನನ್ನು ಹಿಡಿದಿದ್ದಾರೆ. ಇದರ ಜೊತೆಗೆ ಬಸ್ ಅನ್ನು ಕೂಡ ಸೀಜ್ ಮಾಡಲಾಗಿದೆ. ಆತನ್ನು ತನಿಖೆ ಮಾಡಿದ ಸಂದರ್ಭದಲ್ಲಿ ಆತ ವೇಗವಾಗಿ ಬಸ್ ಚಲಾಯಿಸುತ್ತಾನೆ ಎಂಬ ವಿಷಯವು ತಿಳಿದುಬಂದಿದೆ.

    The authorities arrested the driver who was using a mobile phone while driving
    ಸಾಂದರ್ಭಿಕ ಚಿತ್ರ


    ಇದನ್ನೂ ಓದಿ: Conductor Death: ಚೆಕ್ಕಿಂಗ್​ ಇನ್ಸ್​ಪೆಕ್ಟರ್​ ಕಂಡು ಕಂಡಕ್ಟರ್​ಗೆ ಹಾರ್ಟ್​ ಅಟ್ಯಾಕ್; ಬಸ್‌ನಲ್ಲೇ ಹೋಯ್ತು ಪ್ರಾಣ!


    ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ವೈರಲ್ ಆಗಿದ್ದು ಚಾಲಕನಿಗೆ ಶಿಕ್ಷೆಯಾಗಬೇಕು. ಅನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೇರಳದಲ್ಲಿ ಈ ಘಟನೆ ನಡೆದದ್ದು ಕೇರಳ ಜನರ ಕೆಂಗಣ್ಣಿಗೆ ಚಾಲಕ ಗುರಿಯಾಗಿದ್ದಾನೆ.

     ಹೃದಯಾಘಾತವಾದರೂ ಬಸ್‌ನಲ್ಲಿದ್ದ 30 ಮಂದಿ ಪ್ರಯಾಣಿಕರ ಜೀವ ಉಳಿಸಿದ ಚಾಲಕ


    ಒಬ್ಬ ಚಾಲಕನ ಮೇಲೆ ಎಷ್ಟೊಂದು ಜನರ ಪ್ರಾಣದ ಜವಾಬ್ದಾರಿ ಇರುತ್ತದೆ ಎಂದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತಹ ವಿಚಾರವೇ, ಆದರೆ ಆ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವುದು ಸುಲಭದ ಮಾತಂತೂ ಅಲ್ಲವೇ ಅಲ್ಲ. ತಮಿಳುನಾಡಿನಲ್ಲಿ ನಡೆದ ಒಂದು ಘಟನೆಯಲ್ಲಿ ಒಬ್ಬ ಬಸ್ ಚಾಲಕ ಹೇಗೆ ತನಗೆ ಹೃದಯಾಘಾತವಾದರೂ ತನ್ನ ಬಸ್ ನಲ್ಲಿದ್ದ 30 ಪ್ರಯಾಣಿಕರ ಪ್ರಾಣವನ್ನು ಕಾಪಾಡಿದ್ದಾರೆ


    44 ವರ್ಷದ ಅರುಮುಗಮ್ ಅವರು 30 ಪ್ರಯಾಣಿಕರೊಂದಿಗೆ ಅರಪ್ಪಲಾಯಂನಿಂದ ಕೊಡೈಕೆನಾಲ್ ಗೆ ಟಿಎನ್ಎಸ್ ಟಿಸಿ ಬಸ್ ಓಡಿಸುತ್ತಿದ್ದರು. ಬಸ್ ಅರಪ್ಪಲಾಯಂದಿಂದ ಬೆಳಿಗ್ಗೆ 6 ಗಂಟೆ 20 ನಿಮಿಷಕ್ಕೆ ಹೊರಡುತ್ತಿದ್ದಂತೆ ಚಾಲಕನಿಗೆ ತೀವ್ರ ಎದೆ ನೋವು ಆಗುತ್ತಿದೆ ಎಂದು ದೂರು ನೀಡಿದರು ಮತ್ತು ಅವರು ಎದೆ ನೋವಿನಿಂದ ಕೆಳಕ್ಕೆ ಕುಸಿಯುವ ಮೊದಲು ಹೇಗೋ ವಾಹನವನ್ನು ರಸ್ತೆ ಬದಿಯಲ್ಲಿ ತಂದು ನಿಲ್ಲಿಸಿದರು. ಬಸ್ ಕಂಡಕ್ಟರ್ ತಕ್ಷಣ ಆಂಬ್ಯುಲೆನ್ಸ್ ಗೆ ಕರೆ ಮಾಡಿದನು, ಆದರೆ ಅದು ಬರುವ ಹೊತ್ತಿಗೆ, ಚಾಲಕ ಅರುಮುಗಮ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು.


    ಪ್ರಯಾಣಿಕರ ಪ್ರಾಣ ಉಳಿದಿದೆ


    ಮಧುರೈನ ಟಿಎನ್ಎಸ್ ಟಿಸಿ ಡೆಪ್ಯುಟಿ ಮ್ಯಾನೇಜರ್ ಯುವರಾಜ್ ಅವರು "ಅರುಮುಗಮ್ ಅವರು ಟಿಎನ್ಎಸ್ ಟಿಸಿ ಯಲ್ಲಿ ಚಾಲಕನಾಗಿ 12 ವರ್ಷಗಳ ಅನುಭವ ಹೊಂದಿದ್ದರು ಮತ್ತು ರಸ್ತೆ ಬದಿಯಲ್ಲಿ ಬಸ್ ನಿಲ್ಲಿಸಿದ್ದರಿಂದ 30 ಪ್ರಯಾಣಿಕರ ಪ್ರಾಣ ಉಳಿದಿದೆ ಮತ್ತು ಇದು ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ.


    ಇದನ್ನೂ ಓದಿ: Success Story: ಬದುಕು ಬದಲಿಸಿದ ಪಾನಿಪೂರಿ! ಇದು ಬಸ್ ಚಾಲಕ ಯಶಸ್ವಿ ಉದ್ಯಮಿಯಾದ ಕಥೆ


     ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ವರ್ಗಾಯಿಸಲಾಗಿದ್ದು, ಕರಿಮೆಡು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಪ್ರಾರಂಭಿಸಿದ್ದಾರೆ. ಶವವನ್ನು ಜಿಆರ್ ಎಚ್ ಆಸ್ಪತ್ರೆಗೆ ಸ್ಥಳಾಂತರಿಸುವ ಮೊದಲು ಅರುಮುಗಮ್ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Published by:Harshith AS
    First published: