Crime News: ಪ್ರತಿ ರಾತ್ರಿ ಬಂಗಲೆಗೆ ಹೆಣ್ಮಕ್ಕಳ ಕಳುಹಿಸಲು ಹೇಳಿದ್ರಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್? ಹಾಸ್ಟೆಲ್ ವಾರ್ಡನ್ ಆರೋಪ

ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಆಗಿರುವ ಆಗಿನ ಜಿಲ್ಲಾ ಸಂಯೋಜಕರು (ಬಿಜೇಂದ್ರ ಸಿಂಗ್ ಯಾದವ್) ನನಗೆ ರಾತ್ರಿ ಹಾಸ್ಟೆಲ್‌ನ ವಿದ್ಯಾರ್ಥಿಗಳನ್ನು ಕರೆತರಲು ಹೇಳಿದರು. ನಾನು ನಿರಾಕರಿಸಿದಾಗ ಅವರು ನನ್ನನ್ನು ಒಂದು ರಾತ್ರಿ ಅವರ ನಿವಾಸಕ್ಕೆ ಭೇಟಿ ನೀಡಲು ಕೇಳಿದರು ಎಂದು ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಸರ್ಕಾರಿ ಬಾಲಕಿಯರ ಹಾಸ್ಟೆಲ್‌ನ ಮಾಜಿ ವಾರ್ಡನ್ ಆರೋಪಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭೊಪಾಲ್(ಆ.12): ಪ್ರಸ್ತುತ ಶಿವಪುರಿಯಲ್ಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಆಗಿರುವ ಆಗಿನ ಜಿಲ್ಲಾ ಸಂಯೋಜಕರು (ಬಿಜೇಂದ್ರ ಸಿಂಗ್ ಯಾದವ್) ನನಗೆ ರಾತ್ರಿ ಹಾಸ್ಟೆಲ್‌ನ ವಿದ್ಯಾರ್ಥಿಗಳನ್ನು (Student) ಕರೆತರಲು ಹೇಳಿದರು. ನಾನು ನಿರಾಕರಿಸಿದಾಗ ಅವರು ನನ್ನನ್ನು ಒಂದು ರಾತ್ರಿ ಅವರ ನಿವಾಸಕ್ಕೆ ಭೇಟಿ ನೀಡಲು ಕೇಳಿದರು ಎಂದು ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಸರ್ಕಾರಿ ಬಾಲಕಿಯರ ಹಾಸ್ಟೆಲ್‌ನ (Govt Girls Hostel) ಮಾಜಿ ವಾರ್ಡನ್ ಆರೋಪಿಸಿದ್ದಾರೆ. ಈ ಆರೋಪ ಈಗ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಮಾಜಿ ವಾರ್ಡನ್ ಯಾದವ್, ಪಿಚೋರ್‌ನ ಎಸ್‌ಡಿಎಂ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಅವರು ಈ ಹಿಂದೆ ಶಿವಪುರಿಯಲ್ಲಿ ಜಿಲ್ಲಾ ಸಂಯೋಜಕರಾಗಿ ನೇಮಕಗೊಂಡಿದ್ದರು.

ಸರ್ಕಾರಿ ಹಾಸ್ಟೆಲ್​ನಿಂದ ಹೆಣ್ಮಕ್ಕಳ ಸಪ್ಲೈ

ಈ ವರ್ಷದ ಮೇ ಮತ್ತು ಜೂನ್‌ನಲ್ಲಿ ಯಾದವ್ ಅವರು ಹಾಸ್ಟೆಲ್ ವಾರ್ಡನ್‌ಗಳೊಂದಿಗೆ ಕೆಲಸ ಮಾಡುವಾಗ ಪಕ್ಷಪಾತದಿಂದ ವರ್ತಿಸಿದ್ದಾರೆ. ತನಗೆ ಹುಡುಗಿಯರನ್ನು ಸರಬರಾಜು ಮಾಡಲು ಕೇಳಿಕೊಂಡಿದ್ದರು ಎಂದು ಮಾಜಿ ವಾರ್ಡನ್ ಆರೋಪಿಸಿದ್ದಾರೆ.

ಹಾಸ್ಟೆಲ್ ವಾರ್ಡನ್​ಗಳ ಜೊತೆ ಹರಟೆ

ನಿಗದಿತ ಸಮಯದ ನಂತರ ಯಾದವ್ ಬಾಲಕಿಯರ ಹಾಸ್ಟೆಲ್‌ಗಳಿಗೆ ಭೇಟಿ ನೀಡುತ್ತಿದ್ದರು . ರಾತ್ರಿಯಲ್ಲಿ ಇತರ ಹಾಸ್ಟೆಲ್‌ಗಳ ವಾರ್ಡನ್‌ಗಳೊಂದಿಗೆ ಹರಟೆ ಹೊಡೆಯುವುದನ್ನು ಕಾಣಬಹುದು ಎಂದು ಅವರು ಆರೋಪಿಸಿದ್ದಾರೆ.

2016ರಲ್ಲಿ ಆರಂಭವಾದ 6 ಹಾಸ್ಟೆಲ್

2016 ರಲ್ಲಿ, ಸರ್ಕಾರವು ಜಿಲ್ಲಾಡಳಿತದ ಮೇಲ್ವಿಚಾರಣೆಯಲ್ಲಿ ಶಿವಪುರಿ ಜಿಲ್ಲೆಯಲ್ಲಿ ಆರು ಹಾಸ್ಟೆಲ್‌ಗಳನ್ನು (ಬಾಲಕಿಯರಿಗೆ ನಾಲ್ಕು ಮತ್ತು ಗಂಡುಮಕ್ಕಳಿಗೆ ಎರಡು) ಪ್ರಾರಂಭಿಸಿತು.

ಇದನ್ನೂ ಓದಿ: Bihar Politics: ಬಿಹಾರದಲ್ಲಿ ಸರ್ಕಾರ ಬದಲಾವಣೆಯಿಂದ NDAಗೆ ಭಾರೀ ನಷ್ಟ, 286 ಸ್ಥಾನ ಗೆಲ್ಲೋದು ಡೌಟ್​!

ಯಾದವ್ ಅವರು ಈ ವರ್ಷದ ಆರಂಭದಲ್ಲಿ ಹಾಸ್ಟೆಲ್‌ಗಳ ಉಸ್ತುವಾರಿಯನ್ನು ಪುನರಾರಂಭಿಸಿದ್ದರು. ಆದರೆ 29 ಜುಲೈ 2022 ರಂದು ಕರ್ತವ್ಯದಿಂದ ಮುಕ್ತರಾದರು. ಶಿವಪುರಿಯಲ್ಲಿ ಪಿಚ್ಚೋರ್‌ನ SDM ಆಗಿ ನಿಯೋಜಿಸಲ್ಪಟ್ಟರು. ಆರೋಪಗಳನ್ನು ಎಸ್​​ಡಿಎಂ ನಿರಾಕರಿಸಿದ್ದು ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಹಾಸ್ಟೆಲ್ ಖಾಸಗಿ ಕಟ್ಟಡದಿಂದ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರ

ಎಸ್‌ಡಿಎಂ ಯಾದವ್, ಮಾಜಿ ವಾರ್ಡನ್ ಹಾಸ್ಟೆಲ್ ಅನ್ನು ಖಾಸಗಿ ಕಟ್ಟಡದಿಂದ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸಲು ಆದೇಶಿಸಿದ್ದರಿಂದ ಕೋಪಗೊಂಡರು. ಶಿವಪುರಿಯಲ್ಲಿರುವ ಬುಡಕಟ್ಟು ಕಲ್ಯಾಣ ಇಲಾಖೆಯ ಕಚೇರಿಗೆ ಅವರನ್ನು ನಿಯೋಜಿಸಿದ್ದರು ಎಂದಿದ್ದಾರೆ.

ಇದನ್ನೂ ಓದಿ: Jammu Kashmir: ರಾಂಬನ್‌ನಲ್ಲಿ ಮೇಘಸ್ಫೋಟ, ಭೂಕುಸಿತ, ಇಬ್ಬರು ಸಾವು ಮತ್ತು ಹಲವರಿಗೆ ಗಾಯ!

ಈ ವರ್ಷದ ಆರಂಭದಲ್ಲಿ ನನಗೆ ಹಾಸ್ಟೆಲ್‌ಗಳ ಉಸ್ತುವಾರಿ ನೀಡಲಾಯಿತು. ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿರುವ ಆರು ಹಾಸ್ಟೆಲ್‌ಗಳ ಪೈಕಿ ನಾಲ್ಕು ಹಾಸ್ಟೆಲ್‌ಗಳನ್ನು ಸರ್ಕಾರಿ ಕಟ್ಟಡಗಳಿಗೆ ಸ್ಥಳಾಂತರಿಸಲು ಆದೇಶಿಸಲಾಗಿತ್ತು. ಇದರಿಂದ ವಾರ್ಡನ್‌ ಕೋಪಗೊಂಡಿದ್ದರು. ಆದ್ದರಿಂದ ಅವರು ನನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.

ಆರೋಪದ ಜೊತೆಗೆ ಫೋಟೋ

ಮಾಜಿ ವಾರ್ಡನ್ ತನ್ನ ದೂರುಗಳೊಂದಿಗೆ ಲಗತ್ತಿಸಿರುವ ಛಾಯಾಚಿತ್ರಗಳ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿ, ಈ ವರ್ಷ ಮೇ-ಜೂನ್‌ನಲ್ಲಿ ಬೇಸಿಗೆ ರಜೆಯಲ್ಲಿ ಹಾಸ್ಟೆಲ್‌ಗಳಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿಗಳನ್ನು ಪರಿಶೀಲಿಸಲು ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ್ದೆ. ಹಾಸ್ಟೆಲ್‌ಗೆ ಪ್ರವೇಶಿಸಲೇ ಇಲ್ಲ. ಹೊರಗೆ ಕುಳಿತಿದ್ದೆ ಎಂದಿದ್ದಾರೆ. ಮಾಜಿ ವಾರ್ಡನ್ ಕಳುಹಿಸಿದ ದೂರಿನ ನಂತರ, ಶಿವಪುರಿ ಕಲೆಕ್ಟರ್ ಅಕ್ಷಯ್ ಸಿಂಗ್ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

ಈ ಆರೋಪ ಹೊಸ ವಿವಾದಕ್ಕೆ ದಾರಿ ಮಾಡಿದ್ದರೂ ಈ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಇನ್ನೂ ಲಭ್ಯವಾಗಿಲ್ಲ. ಆದರೆ ಆರೋಪ ಸರ್ಕಾರಿ ಹಾಸ್ಟೆಲ್​ನಲ್ಲಿರುವ ಹೆಣ್ಮಕ್ಕಳ ಸುರಕ್ಷತೆ ಬಗ್ಗೆ ಪ್ರಶ್ನೆ ಎತ್ತಿದೆ.
Published by:Divya D
First published: