‘ಹುಡುಗಿಯನ್ನು ಕಿಡ್ನಾಪ್​​ ಮಾಡುತ್ತೇನೆ’ ಎಂದು ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ: ಮಹಿಳೆಯರಿಂದ ಛೀಮಾರಿ

ಹುಡುಗಿ ನಿರಾಕರಿಸಿದರೆ ಕರೆ ಮಾಡಿ, ಕೂಡಲೇ ಕಿಡ್ನಾಪ್​ ಮಾಡಿ ತಂದು ಕೊಡ್ತೀನಿ’- ಬಿಜೆಪಿ ಶಾಸಕ


Updated:September 6, 2018, 6:26 PM IST
‘ಹುಡುಗಿಯನ್ನು ಕಿಡ್ನಾಪ್​​ ಮಾಡುತ್ತೇನೆ’ ಎಂದು ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ: ಮಹಿಳೆಯರಿಂದ ಛೀಮಾರಿ
ಹುಡುಗಿ ನಿರಾಕರಿಸಿದರೆ ಕರೆ ಮಾಡಿ, ಕೂಡಲೇ ಕಿಡ್ನಾಪ್​ ಮಾಡಿ ತಂದು ಕೊಡ್ತೀನಿ’- ಬಿಜೆಪಿ ಶಾಸಕ

Updated: September 6, 2018, 6:26 PM IST
ನ್ಯೂಸ್​-18 ಕನ್ನಡ

ಬೆಂಗಳೂರು(ಸೆಪ್ಟೆಂಬರ್​​.06): ‘ಹುಡುಗಿ ನಿರಾಕರಿಸಿದರೆ ಕರೆ ಮಾಡಿ, ಕೂಡಲೇ ಕಿಡ್ನಾಪ್​ ಮಾಡಿ ತಂದು ಕೊಡ್ತೀನಿ’ ಎಂದು ಮಹಿಳಾ ವಿರೋಧಿ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕನ ವಿರುದ್ಧ ಸಾರ್ವಾಜನಿಕರು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಮಹಾರಾಷ್ಟ್ರದ ಘಟ್ಕೋಪರ್ ಕ್ಷೇತ್ರದ ಶಾಸಕ ರಾಮ್‌ ಕದಮ್‌ ಮಹಿಳೆಯರ ವಿರೋಧಿ ಧೋರಣೆ ಹೇಳಿಕೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಛೀಮಾರಿ ಹಾಕಲಾಗುತ್ತದೆ.

ಪುಣೆ ಮೂಲದ ಮೀನಾಕ್ಷಿ ಪಾಟೀಲ್‌ ಎಂಬ ಯುವತಿಯೋರ್ವಳು ಫೇಸ್‌ಬುಕ್‌ನಲ್ಲಿ ವಿಡಿಯೋ ಮಾಡಿ ಶಾಸಕನಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾಳೆ. ಸದ್ಯ ವಿಡಿಯೋ ಭಾರೀ ವೈರಲ್‌ ಆಗಿದ್ದು, 28 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ 360ಕ್ಕೂ ಮಂದಿ ಅದನ್ನು ಶೇರ್‌ ಮಾಡಿದ್ದಾರೆ ಎನ್ನಲಾಗಿದೆ.ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಮೇಂಟ್​​ ಮಾಡಿರುವ ಕೆಲವರು 'ಹೆಣ್ಣಿನ ಬಗ್ಗೆ ನಿಂದಿಸಿರುವ ರಾಮ್‌ ಕದಂ ಅವರನ್ನು ಸಾರ್ವಜನಿಕವಾಗಿ ಥಳಿಸಬೇಕು' ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಂದೆಡೆ ಈ ರೀತಿ ಕೀಳಾಗಿ ಮಾತನಾಡುವವರಿಗೆ ಬುದ್ಧಿ ಕಲಿಸಬೇಕೆಂದರೆ, ನಿಮ್ಮಂಥ ಹುಡುಗಿಯರು ಧೈರ್ಯದಿಂದ ಮುಂದೆ ಬರಬೇಕು ಎಂದು ಬೆಂಬಲ ನೀಡಿದ್ಧಾರೆ.

ಇನ್ನು ಮೀನಾಕ್ಷಿ ಪಾಟೀಲ್‌ ಎಂಬಾಕೆ ಹುಡುಗಿಯನ್ನು ಕಿಡ್ನಾಪ್‌ ಮಾಡಿ ಕೊಡುತ್ತೀನಿ' ಎಂದು ನೀವು ಹೇಗೆ ಹೇಳಿದ್ರಿ? ಎಂದು ಪ್ರಶ್ನಿಸಿದ್ದಾರೆ. ನಿಮಗೆ ತಾಖತ್ತಿದ್ರೆ ನನ್ನನ್ನು ಕಿಡ್ನಾಪ್​​ ಮಾಡಿ, ಅದರ ಮುಂದಿನ ಪರಿಣಾಮ ಏನಾಗಲಿದೆ? ಎಂಬುದು ನಿಮಗೆ ಗೊತ್ತಾಗಲಿದೆ ಎಂದು ಬಹಿರಂಗ ಸವಾಲ್​ ಹಾಕಿದ್ದಾರೆ.
Loading...

ಮಹಾರಾಷ್ಟ್ರದಲ್ಲಿ ಹೆಣ್ಣನ್ನು ದೇವರಂತೆ ಪೂಜಿಸುತ್ತಾರೆ. ಇಂತಹ ನಾಡಿನಲ್ಲಿ ಬೆಳೆದು ಹೀಗೆ ಯೋಚಿಸುತ್ತೀರಲ್ಲ, ನಿಮಗೆ ನಾಚಿಕೆ ಆಗೋದಿಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಈ ರೀತಿ ಅಮಾನುಷ ಹೇಳಿಕೆ ನೀಡುವ ನಿಮ್ಮಂತವರಿಗೆ ಮಹಾರಾಷ್ಟ್ರದಲ್ಲಿರಲು ಅವಕಾಶವಿಲ್ಲ ಎಂದು ಶಾಸಕರಿಗೆ ಚಾಟಿ ಬೀಸಿದ್ದಾರೆ.

ಈ ವಿಷಯಕ್ಕೆ ಸಬಂಧಿಸಿದಂತೆ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಂಡ ರಾಜ್ಯ ಮಹಿಳಾ ಆಯೋಗ, ಬುಧವಾರ ಶಾಸಕರಿಗೆ ನೋಟಿಸ್ ನೀಡಿದೆ. ಈ ಬೆನ್ನಲ್ಲೇ ರಾಮ್​ ಕದಮ್​ ಕ್ಷಮೆ ಕೋರಿದ್ದಾರೆ. ಅಲ್ಲದೇ 'ನನ್ನ ಹೇಳಿಕೆ ತಿರುಚಿ, ತಾಯಿ-ಸಹೋದರಿಯರ ಭಾವನೆಗಳಿಗೆ ಘಾಸಿ ಉಂಟುಮಾಡಲಾಗಿದೆ. ಈ ಸ್ಥಿತಿಯನ್ನು ನನ್ನ ರಾಜಕೀಯ ವಿರೋಧಿಗಳು ಸೃಷ್ಟಿಸಿದ್ದಾರೆ ಎಂದು ಶಾಸಕರು ವಿಷಾದ ವ್ಯಕ್ತಪಡಿಸಿದ್ಧಾರೆ ಎನ್ನುತ್ತಿವೆ ಮೂಲಗಳು.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...