ಪಿಎಂಸಿ ಬ್ಯಾಂಕ್​​​ ಹಗರಣ: ಎಚ್​​ಡಿಐಎಲ್​​ ಕಂಪನಿ ನಿರ್ದೇಶಕರಾದ ಸರಾಂಗ್​​​-ರಾಕೇಶ್ ವಾಧವನ್​​​​ ಬಂಧನ​​

ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್ ಉನ್ನತಾಧಿಕಾರಿಗಳ ವಿರುದ್ಧ 4,355 ಕೋಟಿ ರೂ.ಗಳ ವಂಚನೆ ಆರೋಪ ಕೇಳಿ ಬಂದಿತ್ತು. ಬಳಿಕ ಭಾರತೀಯ ರಸರ್ವ್​​​ ಬ್ಯಾಂಕ್​​ ನೇಮಿಸಿದ್ದ ಆಡಳಿತಗಾರ ದಾಖಲಿಸಿದ ದೂರಿನ ಆಧಾರದಲ್ಲಿ ಮುಂಬೈ ನಗರ ಪೊಲೀಸ್ ಆರ್ಥಿಕ ಅಪರಾಧ ದಳವೂ ಎಫ್ಐಆರ್​​ ದಾಖಲಿಸಿಕೊಂಡಿತ್ತು.

news18-kannada
Updated:October 3, 2019, 8:12 PM IST
ಪಿಎಂಸಿ ಬ್ಯಾಂಕ್​​​ ಹಗರಣ: ಎಚ್​​ಡಿಐಎಲ್​​ ಕಂಪನಿ ನಿರ್ದೇಶಕರಾದ ಸರಾಂಗ್​​​-ರಾಕೇಶ್ ವಾಧವನ್​​​​ ಬಂಧನ​​
ಪಿಎಂಸಿ ಬ್ಯಾಂಕ್​​
  • Share this:
ನವದೆಹಲಿ(ಅ.03): ಬಹುಕೋಟಿ ಪಿಎಂಸಿ ಬ್ಯಾಂಕ್ ವಂಚನೆ​​​ ಪ್ರಕರಣ ಸಂಬಂಧ ಮುಂಬೈ ಪೊಲೀಸರು, ಎಚ್​​ಡಿಐಎಲ್​​ ನಿರ್ದೇಶಕರಾದ ಸರಾಂಗ್​​ ಮತ್ತು ರಾಕೇಶ್ ವಾಧವನ್ ಎಂಬುವರನ್ನು ಬಂಧಿಸಿದ್ದಾರೆ. ಪಂಜಾಬ್‌ ಮತ್ತು ಮಹಾರಾಷ್ಟ್ರ ಕೋಪರೇಟಿವ್‌ ಬ್ಯಾಂಕ್‌ನಲ್ಲಿ ಭಾರೀ ಅಕ್ರಮ ನಡೆದಿತ್ತು. ಈ ಅಕ್ರಮ ಬೆಳಕಿಗೆ ಬರುತ್ತಿದ್ದಂತೆಯೇ ಮುಂಬೈ ಪೊಲೀಸರು, ಬ್ಯಾಂಕ್​​​ನ ಹಿಂದಿನ ಆಡಳಿತ ಮಂಡಳಿ ಹಾಗೂ ಎಚ್​​​ಡಿಐಎಲ್​​​​​​​​​ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ಬೆನ್ನತ್ತಿದ್ದ ಪೊಲೀಸರೀಗ ಸರಾಂಗ್​​​ ಮತ್ತು ರಾಕೇಶ್​​ ವಾಧವನ್ ಎಂಬಿಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್ ಉನ್ನತಾಧಿಕಾರಿಗಳ ವಿರುದ್ಧ 4,355 ಕೋಟಿ ರೂ.ಗಳ ವಂಚನೆ ಆರೋಪ ಕೇಳಿ ಬಂದಿತ್ತು. ಬಳಿಕ ಭಾರತೀಯ ರಸರ್ವ್​​​ ಬ್ಯಾಂಕ್​​ ನೇಮಿಸಿದ್ದ ಆಡಳಿತಗಾರ ದಾಖಲಿಸಿದ ದೂರಿನ ಆಧಾರದಲ್ಲಿ ಮುಂಬೈ ನಗರ ಪೊಲೀಸ್ ಆರ್ಥಿಕ ಅಪರಾಧ ದಳವೂ ಎಫ್ಐಆರ್​​ ದಾಖಲಿಸಿಕೊಂಡಿತ್ತು.

ಪಿಎಂಸಿ ಬ್ಯಾಂಕ್‌ಗೆ ಸೇರಿದ  ಆರು ಅಧಿಕಾರಿಗಳು 21,049 ನಕಲಿ ಖಾತೆಗಳನ್ನು ತೆರೆದಿದ್ದರು. ಅಲ್ಲದೇ ಸುಮಾರು 10 ವರ್ಷಗಳ ಕಾಲ ಆರ್‌ಬಿಐಗೆ ತಪ್ಪು ವರದಿ ಸಲ್ಲಿಸುತ್ತಿದ್ದರು. ಬ್ಯಾಂಕ್​​​ ಸಾಲ ಮುಚ್ಚಿಡಲು ಈ ನಕಲಿ ಖಾತೆಗಳನ್ನು ತೆರೆಯಲಾಗಿತ್ತು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಪಿಎಂಸಿ ಬ್ಯಾಂಕ್ ಗ್ರಾಹಕರು​ ಹಣ ಹಿಂಪಡೆಯುವಿಕೆ ಮಿತಿಯನ್ನು 10 ಸಾವಿರಕ್ಕೆ ಹೆಚ್ಚಿಸಿದ ಆರ್​ಬಿಐ

ಕೋಟ್ಯಂತರ ರೂಪಾಯಿ ಸಾಲ ಮರುಪಾವತಿಯಾಗದೇ ಅನೇಕ ವರ್ಷಗಳಿಂದ ಸುಸ್ತಿಯಾಗಿದೆ. ಆದರೂ, ಈ ಸಾಲ ವಸೂಲಿಯಾಗಿಲ್ಲ ಎಂದು ಆರ್​​ಬಿಐಗೆ ತಪ್ಪು ಮಾಹಿತಿ ನೀಡಿದ್ದಾರೆ. ಪಿಎಂಸಿ ಬ್ಯಾಂಕ್‍ನಲ್ಲಿ ಸಹಸ್ರಾರು ಮಂದಿ ಕೋಟ್ಯಂತರ ರೂ.ಗಳ ಠೇವಣಿ ಇಟ್ಟಿದ್ದವರಿಗೆ, ಈ ಅಧಿಕಾರಿಗಳೇ ವಂಚಿಸಿದ್ದಾರೆ.

ಮುಂಬೈ ಮೂಲದ ಎಚ್‌ಡಿಐಎಲ್‌ ಎಂಬ ಕಂಪನಿಯೂ ಪಂಜಾಬ್‌ ಮತ್ತು ಮಹಾರಾಷ್ಟ್ರ ಕೋಪರೇಟಿವ್‌ ಬ್ಯಾಂಕ್‌ನಿಂದ 6,500 ಕೊಟಿ ರೂ. ಸಾಲ ಪಡೆದಿದೆ. ಈ ಕಂಪನಿ ಸಾಲ ಮರುಪಾವತಿಸದ ಕಾರಣ, ಈ ಅವ್ಯವಹಾರ ನಡೆದಿದೆ. ಅಧಿಕಾರಿಗಳು ಆರೇಳು ವರ್ಷದಿಂದು ಆರ್​​ಬಿಐ ಬ್ಯಾಂಕ್​​ಗೆ ತಪ್ಪು ಮಾಹಿತಿ ನೀಡುತ್ತಾ ಬಂದಿದ್ದಾರೆ.
-----------
First published: October 3, 2019, 7:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading