ಮೂರು ದಿನಗಳಿಂದ ಕಾಣೆಯಾಗಿರುವ ಎಚ್​​ಡಿಎಫ್​ಸಿ ಬ್ಯಾಂಕ್​ ಉಪಾಧ್ಯಕ್ಷನ ಕಾರು ಮುಂಬೈನಲ್ಲಿ ಪತ್ತೆ

news18
Updated:September 8, 2018, 4:59 PM IST
ಮೂರು ದಿನಗಳಿಂದ ಕಾಣೆಯಾಗಿರುವ ಎಚ್​​ಡಿಎಫ್​ಸಿ ಬ್ಯಾಂಕ್​ ಉಪಾಧ್ಯಕ್ಷನ ಕಾರು ಮುಂಬೈನಲ್ಲಿ ಪತ್ತೆ
news18
Updated: September 8, 2018, 4:59 PM IST
-ನ್ಯೂಸ್​ 18 ಕನ್ನಡ

ಮುಂಬೈ,(ಸೆ. 08): ಬುಧವಾರದಿಂದ ನಾಪತ್ತೆಯಾಗಿರುವ ಎಚ್​ಡಿಎಫ್​ಸಿ ಬ್ಯಾಂಕ್​ ಕಾರ್ಯನಿರ್ವಾಹಕನ ಕಾರು ನವಮುಂಬೈನಲ್ಲಿ ಪತ್ತೆಯಾಗಿದ್ದು, ಕಾರಿನ ಹಿಂಭಾಗದ ಸೀಟಿನಲ್ಲಿ ರಕ್ತದ ಕಲೆಗಳಿರುವುದು ಬೆಳಕಿಗೆ ಬಂದಿದೆ.

ಸಿದ್ದಾರ್ಥ್​ ಸಾಂಘವಿ (38) ಈ ಮೊದಲು ಎಚ್​ಡಿಎಫ್​ಸಿ ಬ್ಯಾಂಕ್​ನ ಉಪಾಧ್ಯಕ್ಷರಾಗಿದ್ದರು. ದಕ್ಷಿಣ ಮುಂಬೈನ ಮಲಬಾರ್​ ಹಿಲ್​ ಏರಿಯಾದಲ್ಲಿ ವಾಸವಿದ್ದ ಸಿದ್ದಾರ್ಥ್​​, ಬುಧವಾರ ಬೆಳಿಗ್ಗೆ 8.30 ರ ಸಮಯದಲ್ಲಿ ಕೆಲಸಕ್ಕೆ ತೆರಳಿದ್ದಾರೆ. ಆದರೆ ಮನೆಗೆ ವಾಪಸ್​ ಬರಲಿಲ್ಲ ಎಂದು ಆತನ ಹೆಂಡತಿ ಮುಂಬೈನ ಎನ್​ ಎಂ ಜೋಶಿ ಮಾರ್ಗ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ.

ಎಚ್​ಡಿಎಫ್​ಸಿ ಬ್ಯಾಂಕ್​ ಉಪಾಧ್ಯಕ್ಷ ಸಿದ್ದಾರ್ಥ್​ ಸಾಂಘವಿ


ಸಾಂಘವಿಯ ನೀಲಿ ಬಣ್ಣದ ಮಾರುತಿ ಇಗ್ನಿಸ್​ ಕಾರನ್ನು ಗುರುವಾರ ನವಮುಂಬೈನ ಏರೋಲಿಯಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಾರಿನ ಸೀಟಿನಲ್ಲಿ ಚಾಕು ಮತ್ತು ರಕ್ತದ ಕಲೆಗಳು ಕಂಡುಬಂದಿವೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಬೈ ಪೊಲೀಸರು ನವಮುಂಬೈ ಪೊಲೀಸರ ಸಹಾಯ ಪಡೆದು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೂ ಯಾವುದೇ ಮಾಹಿತಿಯನ್ನು ಶೇರ್ ಮಾಡುವುದಿಲ್ಲ ಎಂದು ಹಿರಿಯ ಪೊಲೀಸ್​ ಅಧಿಕಾರಿ ಪಂಡಿತ್​ ಥೋರಟ್​ ಹೇಳಿದ್ದಾರೆ.
ಕಾರಿನಲ್ಲಿ ಪತ್ತೆಯಾದ ರಕ್ತದ ಕಲೆ ಸಾಂಘವಿ ಅವರದ್ದಾ ಎಂದು ಖಚಿತಪಡಿಸಿಕೊಳ್ಳಲು, ಆ ರಕ್ತದ ಮಾದರಿಯನ್ನು ಫೋರೆನ್ಸ್​ ಪರೀಕ್ಷೆಗೆ ಕಳುಹಿಸಲಾಗಿದೆ.
Loading...

ಸಾಂಘವಿ ಕೆಲಸ ಮಾಡುತ್ತಿದ್ದ ಸ್ಥಳ ಕಮಲ ಮಿಲ್ಸ್​​ ಕಾಂಪೌಂಡ್​ ಬಳಿಯಿದ್ದ ಸಿಸಿಟಿವಿ ದೃಶ್ಯಾವಳಿಯನ್ನು ತನಿಖಾಧಿಕಾರಿಗಳು ಪರೀಕ್ಷಿಸಿದ್ದಾರೆ. ಆತ ಸಂಜೆ 7.30 ರ ಸಮಯದಲ್ಲಿ ಬ್ಯಾಂಕ್​ನಿಂದ ಹೊರ ಬಂದಿದ್ದಾನೆ. ಬ್ಯಾಂಕ್​ನ ಆವರಣ ಬಿಟ್ಟು ಕಾರು ಮುಂದೆ ಹೋಗಿಲ್ಲ. ಸಾಂಘವಿಯ ಕೊನೆಯ ಮೊಬೈಲ್​ ಟವರ್​ ಸ್ಥಳವನ್ನು ಟ್ರೇಸ್​ ಮಾಡಿದಾಗ, ಸಂಜೆ 7 ಗಂಟೆಗೆ ಕಮಲ ಮಿಲ್ಸ್​ ಬಳಿ ತೋರಿಸಿತ್ತು. ನಂತರ ಸ್ವಿಚ್​ ಆಫ್​ ಆಗಿತ್ತು ಎನ್ನಲಾಗಿದೆ.

ಸಾಂಘವಿಯ ಫೋನ್​ ಕಾಲ್​ ರೆಕಾರ್ಡಿಂಗ್ಸ್​ಗಳನ್ನು ಸುಳಿವಿಗಾಗಿ ವಿಶ್ಲೇಷಣೆ ಮಾಡಲಾಗಿದೆ. ಕಾಣೆಯಾಗಿರುವ ವ್ಯಕ್ತಿಯನ್ನು ಪತ್ತೆ ಹಚ್ಚುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
First published:September 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...