ತಮಿಳುನಾಡಿನ ವೈಗಾರು ಗುಂಡಾರು ನದಿ ಜೋಡಣೆಗೆ ಕೇಂದ್ರ ಅವಕಾಶ ನೀಡಿರುವುದು ದುರಂತ: HD Devegowda

ಕೇಂದ್ರ ಸರ್ಕಾರ ತಮಿಳುನಾಡಿಗೆ ಸುಪ್ರೀಂ ಕೋರ್ಟ್ ಆದೇಶ ಅನ್ವಯ ನೀರು ಬಿಡುವುದಾಗಿ ಹೇಳಿದೆ. ಆದರೂ ತಮಿಳುನಾಡು ವಿರೋಧ ವ್ಯಕ್ತಪಡಿಸಿದೆ. ಈ ನಡುವೆ ಮೂರು ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಮಾಜಿ ಪ್ರಧಾನಿ ದೇವೇಗೌಡ

ಮಾಜಿ ಪ್ರಧಾನಿ ದೇವೇಗೌಡ

  • Share this:
ನವದೆಹಲಿ, ಫೆ. 9: ತಮಿಳುನಾಡಿನ ವೈಗಾರು ಗುಂಡಾರು ನದಿ ಜೋಡಣೆಗೆ ಕೇಂದ್ರ ಸರ್ಕಾರ (Union Government) ಅವಕಾಶ ಕೊಟ್ಟಿರುವುದು ದುರಂತ. ಕರ್ನಾಟಕದಲ್ಲಿರುವ ಕಾವೇರಿ ಜಲಾನಯನ ಪ್ರದೇಶದಲ್ಲಿ ರಾಜ್ಯದ ಹಣಕಾಸನ್ನು ಬಳಸಿ ಯೋಜನೆ ರೂಪಿಸಲಾಗುತ್ತಿದೆ. ಹಿಂದೆ ಇದ್ದ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅಥವಾ ಡಾ.‌‌ ಮನಮೋಹನ್ ಸಿಂಗ್ (Dr. Manamohan Sing) ಅವರಾಗಲಿ, ಅಥವಾ ಈಗಿನ ನರೇಂದ್ರ ಮೋದಿ (Narendara Modi) ಅವರಾಗಲಿ ಕರ್ನಾಟಕಕ್ಕೆ ಯಾರು ಸಹಾಯ ಮಾಡಿಲ್ಲ ಎಂದು ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ (Former Prime Minister and JDS Supremo H.D. Devegowda) ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮಲ್ಲಿ ಐಕ್ಯತೆ ಇಲ್ಲ
ದೆಹಲಿಯ ತಮ್ಮ‌ ನಿವಾಸದಲ್ಲಿ ಸುದ್ದಿಗೋಷ್ಠಿ‌ ಉದ್ದೇಶಿಸಿ ಮಾತನಾಡಿದ ಎಚ್.ಡಿ. ದೇವೇಗೌಡರು, ನಾವು ಒಗ್ಗಟ್ಟಾಗಿ ಚರ್ಚೆ ಮಾಡದಿದ್ದರೇ ಏನು ಲಾಭ ಇಲ್ಲ.‌ ನಮ್ಮಲ್ಲಿ ಐಕ್ಯತೆ ಇಲ್ಲ, ಪಕ್ಷಾತೀತವಾಗಿ ಹೋರಾಟ ಮಾಡುವುದಿಲ್ಲ. ಕೇಂದ್ರ ಸರ್ಕಾರ ತಮಿಳುನಾಡಿಗೆ ಕುಡಿಯುವ ನೀರಿನ ಭರವಸೆ ನೀಡಿದೆ. ಸುಪ್ರೀಂ ಕೋರ್ಟ್ ಆದೇಶ ಅನ್ವಯ ನೀರು ಬಿಡುವುದಾಗಿ ಹೇಳಿದೆ. ಆದರೂ ತಮಿಳುನಾಡು ವಿರೋಧ ವ್ಯಕ್ತಪಡಿಸಿದೆ. ಈ ನಡುವೆ ಮೂರು ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನು ಓದಿ: ಅಪಘಾತಕ್ಕೆ ಒಳಗಾದ ಯುವಕನ ಪ್ರಾಣ ರಕ್ಷಿಸಿದ Sonu Sood; ನಟನ ಮಾನವೀಯತೆಗೆ ಶ್ಲಾಘನೆ

ರಾಜ್ಯದ ಪಾಲು ತಿಳಿಸಬೇಕು
ನಾವು ಕುಡಿಯುವ ನೀರು ಕೇಳುತ್ತಿದ್ದೇವೆ. ತಮಿಳುನಾಡಿಗೆ ಕೇಂದ್ರ ನದಿ ಜೋಡಿಸಿ ನೀರು ಕೃಷಿಗೆ ಬಳಸಿಕೊಳ್ಳಲು ಅನುಮತಿ ನೀಡಿದೆ. ಸುಮಾರು 130 ಟಿಎಂಸಿ ನೀರು ಕರ್ನಾಟಕಕ್ಕೆ ಬರಬೇಕು. ಕೃಷ್ಣ ಗೋದಾವರಿ ಸಂಪರ್ಕದಿಂದ 27 ಟಿಎಂಸಿ ಕೃಷಿಗೆ ಸಿಗಲಿದೆ. ನದಿ ಜೋಡಣೆಗೂ ಮುನ್ನ  ನಮ್ಮ ನೀರಿದ ಹಕ್ಕು ತಿಳಿಸಬೇಕು.‌ ರಾಜ್ಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಮಾಡಬೇಕು. ಈ ಸಂಬಂಧ ಡಿಪಿಆರ್ ಮಾಡಬೇಕು, ರಾಜ್ಯದ ಪಾಲು ತಿಳಿಸಬೇಕು ಎಂದು ದೇವೇಗೌಡರು ಹೇಳಿದರು.

ಇದನ್ನು ಓದಿ: ಪಂಚರಾಜ್ಯಗಳಲ್ಲಿ ಬಿಜೆಪಿ ಗೆಲ್ಲಲ್ಲಿದೆ; ಪ್ರಧಾನಿ ಮೋದಿ ವಿಶ್ವಾಸ

ಸುಪ್ರೀಂ ಕೋರ್ಟೇ ಸುಪ್ರೀಂ
ಕಾಂಗ್ರೆಸ್ ಮೇಕೆದಾಟು ಬಗ್ಗೆ ದೊಡ್ಡ ಹೋರಾಟ ಮಾಡಿತು. ಈ ಬಗ್ಗೆ ಸುಪ್ರೀಂ ಕೋರ್ಟ್ ಮುಂದೆ ಪ್ರಕರಣವಿದೆ. ಮೂರು ರಾಜ್ಯಗಳು ಯೋಜನೆಗೆ ವಿರೋಧ ವ್ಯಕ್ತಪಡಿಸಿವೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮಾಡುವ ಹೋರಾಟದಿಂದ ಫಲ ಸಿಗುವುದಿಲ್ಲ. ಆ ಸಾಧ್ಯತೆಗಳು ಬಹಳಷ್ಟು ಕಡಿಮೆ ಇದೆ. ಸುಪ್ರೀಂ ಕೋರ್ಟ್ ಏನು ಹೇಳುತ್ತೆ ಗೊತ್ತಿಲ್ಲ. ನಾನು ಈ ಬಗ್ಗೆ ಕರುಣಾನಿಧಿ ಕಾಲದಲ್ಲಿ ಪ್ರಯತ್ನಿಸಿದ್ದೆ. ಅವರು ಅದಕ್ಕೆ ಒಪ್ಪಿದ್ದರು, ಆದರೆ ಜಯಲಲಿತಾ ಒಪ್ಪಿಗೆ ನೀಡಲಿಲ್ಲ. ರಾಜಕಾರಣ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ನಾನೇ ಪ್ರಧಾನಿಯಾಗಿದ್ದಾಗ ಅರ್ಜಿ ಸಲ್ಲಿಸಲಾಯಿತು.‌‌ ಕೋರ್ಟ್ ಯಾವುದು ನಿರ್ಧಾರ ತೆಗೆದುಕೊಳ್ಳಲಿಲ್ಲ. ಈಗ ಸುಪ್ರೀಂಕೋರ್ಟ್ ಏನ್ ಮಾಡುತ್ತೆ ನೋಡಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರದ ಬಗ್ಗೆ ದೇವೇಗೌಡ ಕಿಡಿ
ಏಳು ನದಿಗಳ ಜೋಡಣೆ ಮತ್ತು ಮೇಕೆದಾಟು ಯೋಜನೆಯ ಬಗ್ಗೆ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ. ಈ ಬಗ್ಗೆ 24 ನಿಮಿಷ ಮಾತನಾಡಲು ಅವಕಾಶ ಸಿಕ್ಕಿತು. ನಾನು ಮಾತನಾಡುವಾಗ‌ ಡಿಎಂಕೆ ಮತ್ತು ಎಐಡಿಎಂಕೆ ಪಕ್ಷದವರು ಕೂಡ ಇದ್ದರು. ‌ನಾನು ಮಾತನಾಡುವಾಗ ಅವರು ಸಹಕರಿಸಿದರು. ಭದ್ರಾ ಮೇಲ್ದಂಡೆ ಯೋಜನೆ ಮತ್ತು ಕೃಷ್ಣ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ರಾಜ್ಯ ಸರ್ಕಾರ ಮನವಿ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ತಿರ್ಮಾನ ತೆಗೆದುಕೊಂಡಿಲ್ಲ‌ ಎಂದು ದೇವೇಗೌಡ ಆರೋಪಿಸಿದರು.
Published by:Seema R
First published: