12 ಸೀಟು ಕೇಳಿದ್ದೇನೆ, ಹತ್ತಾನ್ನಾದರೂ ಕೊಡಲಿ; ರಾಹುಲ್​ ಭೇಟಿ ಬಳಿಕ ದೇವೇಗೌಡರ ಮಾತು

ನಮ್ಮಲ್ಲಿ ಒಟ್ಟು 28 ಸೀಟುಗಳು ಇವೆ. ಮೊದಲು ಜೆಡಿಎಸ್ 12 ಸೀಟು ಕೇಳಿತ್ತು. ರಾಹುಲ್ ಬಳಿಯೂ ನಾನು 12 ಸೀಟು ಕೇಳಿದ್ದೇನೆ. ಕೊನೆಗೆ ಕನಿಷ್ಠ 10 ಸೀಟುಗಳನ್ನಾದರೂ ಕೊಡಲಿ- ದೇವೇಗೌಡ

ರಾಹುಲ್​ ಗಾಂಧಿ ಜೊತೆ ಚರ್ಚಿಸುತ್ತಿರುವ ದೇವೇಗೌಡರು, ಜೊತೆಯಲ್ಲಿ ಡ್ಯಾನಿಷ್​ ಆಲಿ ಮತ್ತು ಕೆ.ಸಿ.ವೇಣುಗೋಪಾಲ್​

ರಾಹುಲ್​ ಗಾಂಧಿ ಜೊತೆ ಚರ್ಚಿಸುತ್ತಿರುವ ದೇವೇಗೌಡರು, ಜೊತೆಯಲ್ಲಿ ಡ್ಯಾನಿಷ್​ ಆಲಿ ಮತ್ತು ಕೆ.ಸಿ.ವೇಣುಗೋಪಾಲ್​

  • News18
  • Last Updated :
  • Share this:
ಧರಣೀಶ್​ ಬೂಕನಕೆರೆ

ನವದೆಹಲಿ,(ಮಾ.06): ಮೈತ್ರಿ ಸರ್ಕಾರದಲ್ಲಿ ಕಗ್ಗಂಟಾಗಿರುವ ಸೀಟು ಹಂಚಿಕೆ ವಿಚಾರವಾಗಿ ಇಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನವದೆಹಲಿಯ ತಮ್ಮ ನಿವಾಸದಲ್ಲಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಜೊತೆ ಚರ್ಚೆ ನಡೆಸಿದ್ದಾರೆ.

ರಾಹುಲ್​ ಜೊತೆ ಚರ್ಚೆ ಮಾಡಿದ ಬಳಿಕ ಜೆಡಿಎಸ್​​ ವರಿಷ್ಠ ದೇವೇಗೌಡ ಸುದ್ದಿಗಾರರೊಂದಿಗೆ ಮಾತನಾಡಿದರು. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷಗಳ ನಡುವಿನ ಸೀಟು ಹಂಚಿಕೆ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಜೊತೆ ಚರ್ಚಿಸಿದ್ದೇನೆ. ಇದು ಮೊದಲ ಚರ್ಚೆಯಾಗಿದೆ ಎಂದರು.

ನಮ್ಮಲ್ಲಿ ಒಟ್ಟು 28 ಸೀಟುಗಳು ಇವೆ. ಮೊದಲು ಜೆಡಿಎಸ್ 12 ಸೀಟು ಕೇಳಿತ್ತು. ರಾಹುಲ್ ಬಳಿಯೂ ನಾನು 12 ಸೀಟು ಕೇಳಿದ್ದೇನೆ. ಕೊನೆಗೆ ಕನಿಷ್ಠ 10 ಸೀಟುಗಳನ್ನಾದರೂ ಕೊಡಲಿ. ಗೆಲ್ಲುವ ದೃಷ್ಟಿಯಿಂದ ನಾನು ರಾಹುಲ್ ಗಾಂಧಿ ಜೊತೆ​ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು.

ದೇವೇಗೌಡ-ರಾಹುಲ್ ಗಾಂಧಿ ಭೇಟಿ; ವಾರದೊಳಗೆ ಸೀಟು ಹಂಚಿಕೆಗೆ ಅಂತಿಮ ಅಂಕಿತ

ಜೆಡಿಎಸ್​ ಪಕ್ಷದ ಮಹಾಪ್ರಧಾನ ಕಾರ್ಯದರ್ಶಿ ಹಾಗೂ ಸಮನ್ವಯ ಸಮಿತಿಯ ಸದಸ್ಯ ಡ್ಯಾನಿಷ್​ ಆಲಿ ಹಾಗೂ  ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ.ವೇಣುಗೋಪಾಲ್​ ಸೀಟು ಹಂಚಿಕೆ ಬಗ್ಗೆ ಚರ್ಚಿಸಲಿದ್ದಾರೆ. ಅವರು ಪರಸ್ಪರ ಚರ್ಚೆ ನಡೆಸಿದ ಬಳಿಕ ಅಂತಿಮ ತೀರ್ಮಾನ ಮಾಡುತ್ತಾರೆ. ನಾನು ಈಗಾಗಲೇ ಡ್ಯಾನಿಷ್​ ಆಲಿಗೆ ಸೂಚನೆ ನೀಡಿದ್ದೇನೆ ಎಂದರು.

ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ಜೆಡಿಎಸ್‌ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನೀಶ್‌ ಆಲಿ ಭಾಗವಹಿಸಿದ್ದರು.

First published: