ಮುಂಬೈ(ಫೆ.13): ನವವಿವಾಹಿತ ಸೊಸೆಗೆ ಹಾನಿಕಾರಕ ಔಷಧ ನೀಡಿ, ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ಉತ್ತರ ಪ್ರದೇಶ ಮೂಲದ ಕುಟುಂಬದ 16 ಆರೋಪಿಗಳಲ್ಲಿ ಮೂವರಿಗೆ ಬಂಧನ ಪೂರ್ವ ಜಾಮೀನು ನಿರಾಕರಿಸಿದೆ.
ಕುಟುಂಬದ ವಿರುದ್ಧ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ಈ ಹಿಂದೆ ನಿರಾಕರಿಸಿದ್ದನ್ನು ಗಮನಿಸಿದ ನ್ಯಾಯಾಲಯವು, ಫೆಬ್ರವರಿ 8 ರಂದು ಮಹಿಳೆಯ ಮಾವ ಮತ್ತು ಸಂತ್ರಸ್ತೆಯ ಪತಿ ಸೇರಿದಂತೆ ಆತನ ಇಬ್ಬರು ಗಂಡುಮಕ್ಕಳಿಗೆ ಮುಂಜಾಗ್ರತಾ ಜಾಮೀನು ನಿರಾಕರಿಸಿತು. ಜೊತೆಗೆ ಅವರ ವಿರುದ್ಧದ ಅಪರಾಧಗಳು ಗಂಭೀರ ಮತ್ತು ನ್ಯಾಯಾಂಗ ವಿಚಾರಣೆಯ ಅಗತ್ಯವಿದೆ ಎಂದು ಹೇಳಿದೆ.
ಫೆಬ್ರವರಿ 8 ರಂದು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಸಾರಂಗ್ ವಿ ಕೊಟ್ವಾಲ್ ಅವರ ಏಕ-ನ್ಯಾಯಾಧೀಶರ ನ್ಯಾಯಪೀಠ, ಮಹಿಳೆಯ ಮಾವ ಮತ್ತು ಅವರ ಇಬ್ಬರು ಗಂಡುಮಕ್ಕಳೊಂದಿಗೆ ಜಾಮೀನು ಕೋರಿ ಈ ಆದೇಶವನ್ನು ಜಾರಿಗೊಳಿಸಿದೆ. ಜೂನ್ 6, 2020 ರಂದು ಪೊಲೀಸರು ಈ ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿದ್ದರು.
2019 ರಲ್ಲಿ, ತನ್ನ ಪೋಷಕರ ಮನೆಯಲ್ಲಿ ವಾಸವಾಗಿದ್ದಾಗ, ತನ್ನ ಭಾವಿ ಮಾವನವರು ವರದಕ್ಷಿಣೆಗಾಗಿ ಒತ್ತಡ ಹೇರಿದ್ದರು ಎಂದು ಸಂತ್ರಸ್ತೆ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾಳೆ. ನಂತರ, ಆಕೆಯ ತಂದೆ ಅದೇ ವರ್ಷ ಜುಲೈ 6 ರಂದು ಸುಮಾರು 20 ಲಕ್ಷ ರೂ. ಹಣ ನೀಡಿದ್ದರು. ನಂತರ 2019 ರ ಜುಲೈ 8 ರಂದು ಮದುವೆ ನಡೆಯಿತು ಎಂದು ಹೇಳಿದ್ದಾರೆ.
ಅಲ್ಲದೆ, ಅವರ ವಿವಾಹದ ನಂತರ, ಅವರ ಪತಿ ಅವರೊಂದಿಗೆ ಯಾವುದೇ ದೈಹಿಕ ಸಂಬಂಧವನ್ನು ಹೊಂದಲು ನಿರಾಕರಿಸಿದರು ಮತ್ತು ಅವರು ದುರ್ಬಲತೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಗ ತಿಳಿದುಬಂದಿತು. ಮದುವೆಯಾದ ನಂತರವೂ ವರದಕ್ಷಿಣೆ ಕಿರುಕುಳ ಮುಂದುವರೆಯಿತು. 2020 ರ ಜನವರಿ 22 ರಂದು ಆಕೆಯ ಅತ್ತೆ, ಗಂಡ ಮತ್ತು ಮಾವ ತನ್ನ ಕೋಣೆಗೆ ಪ್ರವೇಶಿಸಿದರು. ನಂತರ ವೈದ್ಯರು ಆಗಿರುವ ನನ್ನ ಮಾವ ನನಗಿಷ್ಟವಿಲ್ಲದಿದ್ದರೂ ಚುಚ್ಚುಮದ್ದು ನೀಡಿದರು. ಬಳಿಕ ನನ್ನ ಮಾವ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ.
ಭೂಕಂಪನವಾಗಿ ಭೂಮಿ ಕಂಪಿಸಿದರೂ ಜಪ್ಪಯ್ಯ ಎನ್ನದ ರಾಹುಲ್ ಗಾಂಧಿ…! ವಿಡಿಯೋ ನೋಡಿ
ನಂತರ, ಆ ತಿಂಗಳ ಕೊನೆಯಲ್ಲಿ ಆಕೆಯನ್ನು ತನ್ನ ಪೋಷಕರ ಮನೆಗೆ ಕಳುಹಿಸಲಾಯಿತು ಮತ್ತು ವರದಕ್ಷಿಣೆ ಬೇಡಿಕೆಗಳನ್ನು ಈಡೇರಿಸದ ಹೊರತು, ಮತ್ತೆ ತನ್ನ ಗಂಡನ ಮನೆಗೆ ಕರೆದೊಯ್ಯಲಾಗುವುದಿಲ್ಲ ಎಂದು ಆಕೆಯ ಪೋಷಕರಿಗೆ ತಿಳಿಸಲಾಯಿತು. ತರುವಾಯ, ಅವರು ಮಾರ್ಚ್ 2020 ರಲ್ಲಿ ಮುಂಬೈಗೆ ಬಂದರು ಮತ್ತು ಆಕೆ ನಡೆದ ಘಟನೆ ಬಗ್ಗೆ ಸಹೋದರಿಗೆ ತಿಳಿಸಿದರು. ನಂತರ ಜೂನ್ 2020 ರಲ್ಲಿ ಎಫ್ಐಆರ್ ದಾಖಲಿಸಿದೆ ಎಂದೂ ಮಹಿಳೆ ಹೇಳಿದ್ದಾರೆ.
“ಈ ಹಂತದಲ್ಲಿ, ಮಾಹಿತಿದಾರರ ಆರೋಪಗಳು ಸುಳ್ಳು ಎಂದು ಗಮನಿಸಲು ಸಾಧ್ಯವಿಲ್ಲ, ಸ್ವಲ್ಪ ವಿಳಂಬದ ನಂತರ ಎಫ್‌ಐಆರ್ ದಾಖಲಾಗಿರುವುದರಿಂದ ಅಂತಹ ಸಂದರ್ಭಗಳಲ್ಲಿ, ಎಫ್‌ಐಆರ್ ದಾಖಲಿಸುವಲ್ಲಿನ ವಿಳಂಬದ ಬಗ್ಗೆ ಸಂತ್ರಸ್ಥೆ ವಿವರಿಸಬಹುದು. ಆದರೆ ಅದನ್ನು ವಿಚಾರಣೆಯ ಸಮಯದಲ್ಲಿ ಪರಿಗಣಿಸಬೇಕಾಗಿದೆ. ಇದು ನಿರೀಕ್ಷಿತ ಜಾಮೀನಿನ ಹಂತವಾಗಿದೆ. ಅಪರಾಧವನ್ನು ಕಡೆಗಣಿಸಲಾಗುವುದಿಲ್ಲ. " ಎಂದು ನ್ಯಾಯಮೂರ್ತಿ ಕೊತ್ವಾಲ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ