ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಸಜ್ಜನ್​ ಕುಮಾರ್​ ಶರಣಾಗತಿಗೆ ಕಾಲಾವಕಾಶ ನೀಡಲು ಹೈಕೋರ್ಟ್​ ನಕಾರ

ಶರಣಾಗತಿಗೆ 1 ತಿಂಗಳಿಗೂ ಹೆಚ್ಚಿನ ಕಾಲಾವಕಾಶ ನೀಡುವಂತೆ ಸಜ್ಜನ್​ ಕುಮಾರ್ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು. ಆ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ ಡಿ. 31ಕ್ಕೂ ಹೆಚ್ಚು ಸಮಯ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

Sushma Chakre | news18
Updated:December 21, 2018, 12:26 PM IST
ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಸಜ್ಜನ್​ ಕುಮಾರ್​ ಶರಣಾಗತಿಗೆ ಕಾಲಾವಕಾಶ ನೀಡಲು ಹೈಕೋರ್ಟ್​ ನಕಾರ
ಸಜ್ಜನ್ ಕುಮಾರ್
  • News18
  • Last Updated: December 21, 2018, 12:26 PM IST
  • Share this:
ನವದೆಹಲಿ (ಡಿ. 21): 1984ರ ಸಿಖ್​  ವಿರೋಧಿ ಹತ್ಯಾಕಾಂಡ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕಾಂಗ್ರೆಸ್​ನ ಮಾಜಿ ನಾಯಕ ಸಜ್ಜನ್​ ಕುಮಾರ್​ ಶರಣಾಗತಿಯಾಗಲು ಸಮಯ ಕೇಳಿದ್ದರು. ಆದರೆ, ಅವರಿಗೆ ಕಾಲಾವಕಾಶ ನೀಡಲು ದೆಹಲಿ ಹೈಕೋರ್ಟ್​ ನಿರಾಕರಿಸಿದೆ.

ಸಿಖ್​ ಹತ್ಯಾಕಾಂಡದಲ್ಲಿ ದೋಷಿ ಎಂದು ಘೋಷಿಸಿದ್ದ ಹೈಕೋರ್ಟ್​ ಕಳೆದ ಸೋಮವಾರ 73 ವರ್ಷದ ಸಜ್ಜನ್ ಕುಮಾರ್​ ಅವರಿಗೆ​ ಜೀವಾವಧಿ ಶಿಕ್ಷೆ ವಿಧಿಸಿತ್ತು. ಡಿಸೆಂಬರ್​ 31ರೊಳಗೆ ಅಧಿಕಾರಿಗಳ ಎದುರು ಶರಣಾಗಬೇಕು ಎಂದು ನ್ಯಾಯಾಲಯ ನಿರ್ಬಂಧ ವಿಧಿಸಿತ್ತು. ಆದರೆ, ಶರಣಾಗತಿಗೆ 1 ತಿಂಗಳಿಗೂ ಹೆಚ್ಚಿನ ಕಾಲಾವಕಾಶ ನೀಡುವಂತೆ ಸಜ್ಜನ್​ ಕುಮಾರ್ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು. ಆ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ ಡಿ. 31ಕ್ಕೂ ಹೆಚ್ಚು ಸಮಯ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಜೀವಾವಧಿ ಶಿಕ್ಷೆ ಬೆನ್ನಲ್ಲೇ ಕಾಂಗ್ರೆಸ್​ಗೆ ರಾಜೀನಾಮೆ ನೀಡಿ ರಾಹುಲ್​ ಗಾಂಧಿಗೆ ಪತ್ರ ಬರೆದ ಸಜ್ಜನ್​ ಕುಮಾರ್​

ಜೀವಾವಧಿ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಸಜ್ಜನ್ ಕುಮಾರ್​ ಕಾಂಗ್ರೆಸ್​ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಹೈಕೋರ್ಟ್​ ನೀಡಿರುವ ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲು ಸಜ್ಜನ್​ ಕುಮಾರ್​ ನಿರ್ಧರಿಸಿದ್ದರು.

1984ರಲ್ಲಿ ನವೆಂಬರ್​ 1 ಮತ್ತು 2ರಂದು ದೆಹಲಿಯ ಕಂಟೋನ್ಮೆಂಟ್​ ಏರಿಯಾದ ಪಾಲಂ ಕಾಲೋನಿಯಲ್ಲಿ ಐವರು ಸಿಖ್ ಧರ್ಮೀಯರನ್ನು ಹತ್ಯೆ ಮಾಡಲಾಗಿತ್ತು. 1984ರ ಅಕ್ಟೋಬರ್​ 31ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಸಿಖ್​ ಧರ್ಮದ ಅವರ ಅಂಗರಕ್ಷಕ ಗುಂಡಿಕ್ಕಿ ಕೊಂದ ನಂತರ ಸೇಡು ತೀರಿಸಿಕೊಳ್ಳಲೆಂದು ಈ ಕೃತ್ಯ ಎಸಗಲಾಗಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು.

ಇದನ್ನೂ ಓದಿ: 1984 ಸಿಖ್​ ಗಲಭೆ: ಕಾಂಗ್ರೆಸ್​ ನಾಯಕ ಸಜ್ಜನ್​ ಕುಮಾರ್​ಗೆ ಜೀವಾವಧಿ ಶಿಕ್ಷೆ ವಿಧಿಸಿದ ದೆಹಲಿ ಹೈ ಕೋರ್ಟ್​​

 
First published:December 21, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading