ದೆಹಲಿ ಹಿಂಸಾಚಾರ: ಪ್ರಚೋದನಕಾರಿ ಭಾಷಣ; ಕೇಂದ್ರ, ದಿಲ್ಲಿ ಸರ್ಕಾರ ಮತ್ತು ಪೊಲೀಸರಿಗೆ ಹೈಕೋರ್ಟ್​ ನೋಟಿಸ್​​

ಈ ರಾಜಕೀಯ ನಾಯಕರ ದ್ವೇಷ ಪೂರಿತ ಭಾಷಣಗಳಿಂದಲೇ ಕೋಮು ಗಲಭೆಗಳು ಸಂಭವಿಸುತ್ತಿದೆ. ಕೂಡಲೇ ದೆಹಲಿ ಹೈಕೋರ್ಟ್​ ನಮ್ಮ ಮನವಿ ಪುರಸ್ಕರಿಸಬೇಕೆಂದು ವಾಯ್ಸ್ ಆಫ್ ಲಾಯರ್ಸ್ ಸಲ್ಲಿಸಿದ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.

ಸೋನಿಯಾ ಮತ್ತು ರಾಹುಲ್​​

ಸೋನಿಯಾ ಮತ್ತು ರಾಹುಲ್​​

  • Share this:
    ನವದೆಹಲಿ(ಫೆ.18): ರಾಷ್ಟ್ರ ರಾಜಧಾನಿಯಲ್ಲಿ ಶಾಂತಿ ಕದಡುವ ಹೇಳಿಕೆಗಳನ್ನು ನೀಡುತ್ತಿರುವ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಕಾಂಗ್ರೆಸ್​​ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರಾ ಮತ್ತಿತರರ ವಿರುದ್ದ ಎಫ್‌ಐಆರ್ ದಾಖಲಿಸಬೇಕೆಂದು ಕೋರಿ ವಾಯ್ಸ್ ಆಫ್ ಲಾಯರ್ಸ್ ದೆಹಲಿ ಹೈಕೋರ್ಟ್​​ ಮೊರೆ ಹೋಗಿದೆ. ಈ ಸಂಬಂಧದ ಅರ್ಜಿ ವಿಚಾರಣೆ ನಡೆಸಿದ ಇಲ್ಲಿನ ಹೈಕೋರ್ಟ್​​ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ಹಾಗೂ ಪೊಲೀಸರಿಗೆ ನೋಟಿಸ್​​ ನೀಡಿದೆ.

    ದ್ವೇಷ ಪೂರಿತ ಭಾಷಣ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕರ ವಿರುದ್ಧ ಎಫ್​​ಐಆರ್​ ದಾಖಲಿಸುವಂತೆ ವಾಯ್ಸ್ ಆಫ್ ಲಾಯರ್ಸ್ ಅರ್ಜಿ ಸಲ್ಲಿಸಿದ್ದರು. ಇಂದು ಶುಕ್ರವಾರ ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಾಟೀಲ್ ಮತ್ತು ನ್ಯಾಯಮೂರ್ತಿ ಸಿ. ಹರಿಶಂಕರ್ ನೇತೃತ್ವದ ದ್ವಿಸದಸ್ಯ ಪೀಠ ಸಂಬಂಧಪಟ್ಟವರಿಗೆ ನೋಟಿಸ್​​ ಜಾರಿಗೊಳಿಸಿದೆ. ಹಾಗೆಯೇ ಅರ್ಜಿ ವಿಚಾರಣೆಯನ್ನು ಏಪ್ರಿಲ್​​​​ 13ಕ್ಕೆ ಮುಂದೂಡಿದೆ.

    ಇನ್ನು ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಕ್ರಮಕ್ಕೆ ವಿಶೇಷ ತನಿಖಾ ತಂಡ ರಚಿಸಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕು. ಎಎಪಿ ನಾಯಕರಾದ ಮನೀಷ್ ಸಿಸೋಡಿಯ, ಅಮಾನುಲ್ಲಾ ಖಾನ್, ಎಐಎಂಐಎಂ ನಾಯಕರಾದ ಅಕ್ಬರುದ್ದೀನ್ ಓವೈಸಿ, ವಾರೀಸ್ ಪಠಾಣ್ ಹಾಗೂ ವಕೀಲ ಮೆಹಮೂದ್ ಪರೇಚಾ ವಿರುದ್ದ ಪ್ರಕರಣ ದಾಖಲಿಸಲು ಆದೇಶಿಸಬೇಕು. ಈ ರಾಜಕೀಯ ನಾಯಕರ ದ್ವೇಷ ಪೂರಿತ ಭಾಷಣಗಳಿಂದಲೇ ಕೋಮು ಗಲಭೆಗಳು ಸಂಭವಿಸುತ್ತಿದೆ. ಕೂಡಲೇ ದೆಹಲಿ ಹೈಕೋರ್ಟ್​ ನಮ್ಮ ಮನವಿ ಪುರಸ್ಕರಿಸಬೇಕೆಂದು ವಾಯ್ಸ್ ಆಫ್ ಲಾಯರ್ಸ್ ಸಲ್ಲಿಸಿದ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.

    ಇದನ್ನೂ ಓದಿ: ದೆಹಲಿ ಹಿಂಸಾಚಾರ: ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ; ಸುಪ್ರೀಂಕೋರ್ಟ್​ ಆದೇಶ

    ಈಗಾಗಲೇ ದೆಹಲಿಯಲ್ಲಿ ಶಾಂತಿ ಕದಡುವ ಹೇಳಿಕೆಗಳನ್ನು ಯಾರೇ ನೀಡಲಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತೆ ದೆಹಲಿ ಪೊಲೀಸರಿಗೆ ಸುಪ್ರೀಂಕೋರ್ಟ್ ಖಡಕ್​ ಸೂಚನೆ ನೀಡಿದ್ದಾರೆ. ಸಿಎಎ ಮತ್ತು ಎನ್​​ಆರ್​​ಸಿ ಪರ ವಿರೋಧಿ ಗುಂಪುಗಳಿಂದ ಹೊತ್ತಿ ಉರಿಯುತ್ತಿರುವ ದೆಹಲಿ ಬಗ್ಗೆ ಅಸಮಾಧಾನ ಹೊರಹಾಕಿದ ನ್ಯಾಯಮೂರ್ತಿ ಎಸ್ ಕೆ ಕೌಲ್ ಮತ್ತು ಕೆ ಎಂ ಜೋಸೆಫ್ ನೇತೃತ್ವದ ದ್ವಿಸದಸ್ಯ ಪೀಠ ಹೀಗೆ ಆದೇಶ ಹೊರಡಿಸಿತ್ತು.

    ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ಕಾಯ್ದೆ ಪರ-ವಿರೋಧಿ ಗುಂಪುಗಳ ನಡುವಿನ ಘರ್ಷಣೆಯಿಂದ ದೆಹಲಿಯಲ್ಲಿ ಹಿಂಸಾಚಾರ ಹೆಚ್ಚುತ್ತಲ್ಲೇ ಇದೆ. ಈ ಬೆನ್ನಲ್ಲೇ ಎಚ್ಚೆತ್ತ ದೆಹಲಿ ಪೊಲೀಸರು ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಿದ್ದಾರೆ. ಈ ಆದೇಶ ಈಶಾನ್ಯ ದೆಹಲಿಯ ಹಲವೆಡೆ ಜಾರಿಯಲ್ಲಿದ್ದು, ಹಿಂಸಾಚಾರ ತಡೆಗಟ್ಟಲು ಕಠಿಣ ಆದೇಶ ಹೊರಡಿಸಲಾಗಿದೆ. ಈ ಮಧ್ಯೆ ಸಿಎಎ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡುವವರನ್ನು ವಿರುದ್ಧ ಕಠಿಣ ಕ್ರಮಕೈಗೊಳ್ಳಿ ಎಂದು ಸುಪ್ರೀಂಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿತ್ತು.

    ದೆಹಲಿ ಹಿಂಸಾಚಾರ ಸಂಬಂಧ ಸುಪ್ರೀಂಕೋರ್ಟ್​ಗೆ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ. ಇಲ್ಲಿನ ಹಿಂಸಾಚಾರವೂ ದೆಹಲಿ ಹೈಕೋರ್ಟ್ ವ್ಯಾಪ್ತಿಗೆ ಬರಲಿದೆ. ಯಾರೇ ಆಗಲಿ ಅಲ್ಲಿಯೇ ಸರ್ಜಿ ಸಲ್ಲಿಸಬಹುದು. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ದ್ವಿಸದಸ್ಯ ಪೀಠವು ತಿಳಿಸಿತ್ತು. ಅದರಂತೆಯೇ ದೆಹಲಿ ಹಿಂಸಾಚಾರದ ಸಂಬಂಧ ಹಲವು ಅರ್ಜಿಗಳು ಇಲ್ಲಿನ ಹೈಕೋರ್ಟ್​ಗೆ ಸಲ್ಲಿಕೆಯಾಗಿವು. ಇದರ ವಿಚಾರಣೆ ನಡೆಸುತ್ತಿರುವ ದೆಹಲಿ ಹೈಕೋರ್ಟ್​ ಹೀಗೆ ಆದೇಶ ನೀಡಿ ಪ್ರಕರಣ ಇತ್ಯರ್ಥ ಮಾಡುತ್ತಿದೆ.
    First published: