ಅಧಿಕಾರಕ್ಕೆ ಬರಲು ಇಂದಿರಾ ಗಾಂಧಿಯಂತೆ ಮೂಗಿದ್ದರೆ ಸಾಲದು; ಪ್ರಿಯಾಂಕಾ ಬಗ್ಗೆ ಕೇಂದ್ರ ಸಚಿವರ ಕುಚೋದ್ಯ

ಕಳೆದ ತಿಂಗಳಷ್ಟೇ ಬಿಜೆಪಿ ಸಂಸದ ಹರೀಶ್​ ದ್ವಿವೇದಿ, ದೆಹಲಿಯಲ್ಲಿ ಜೀನ್​ ಮತ್ತು ಟಾಪ್​ ಹಾಕಿಕೊಳ್ಳುವ ಪ್ರಿಯಾಂಕಾ ಚುನಾವಣಾ ಪ್ರಚಾರಕ್ಕೆ ಸೀರೆ- ಸಿಂಧೂರ ಧರಿಸಿ ಹೋಗುತ್ತಾರೆ ಎಂದು ಕುಹಕವಾಡಿದ್ದರು.

Sushma Chakre | news18
Updated:March 27, 2019, 9:28 AM IST
ಅಧಿಕಾರಕ್ಕೆ ಬರಲು ಇಂದಿರಾ ಗಾಂಧಿಯಂತೆ ಮೂಗಿದ್ದರೆ ಸಾಲದು; ಪ್ರಿಯಾಂಕಾ ಬಗ್ಗೆ ಕೇಂದ್ರ ಸಚಿವರ ಕುಚೋದ್ಯ
ಪ್ರಿಯಾಂಕಾ ಗಾಂಧಿ.
  • News18
  • Last Updated: March 27, 2019, 9:28 AM IST
  • Share this:
ನವದೆಹಲಿ (ಮಾ. 27): ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ವಿಪಕ್ಷಗಳ ನಾಯಕರ ಕಟು ಟೀಕೆಗೆ ಒಳಗಾಗಿದ್ದರು. ಇದೀಗ ಬಿಜೆಪಿ ನಾಯಕರು ಮತ್ತೆ ಪ್ರಿಯಾಂಕಾ ಬಗ್ಗೆ ವ್ಯಂಗ್ಯವಾಡಿದ್ದು, ಅಜ್ಜಿಯಂತೆ (ಇಂದಿರಾ ಗಾಂಧಿ) ಉದ್ದ ಮೂಗಿದ್ದ ಮಾತ್ರಕ್ಕೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದಿದ್ದಾರೆ.

ಪ್ರಿಯಾಂಕಾ ಸೌಂದರ್ಯದ ಬಗ್ಗೆ ಆಗಾಗ ಪ್ರಸ್ತಾಪಿಸುತ್ತಲೇ ಇರುವ ಬಿಜೆಪಿ ನಾಯಕರು ಮತ್ತೊಮ್ಮೆ ಆಕೆಯ ದೇಹದ ಬಗ್ಗೆ ಮಾತನಾಡಿದ್ದಾರೆ. ಕಳೆದ ತಿಂಗಳಷ್ಟೇ ಬಿಜೆಪಿ ಸಂಸದ ಹರೀಶ್​ ದ್ವಿವೇದಿ, ದೆಹಲಿಯಲ್ಲಿ ಜೀನ್​ ಮತ್ತು ಟಾಪ್​ ಹಾಕಿಕೊಳ್ಳುವ ಪ್ರಿಯಾಂಕಾ ಚುನಾವಣಾ ಪ್ರಚಾರಕ್ಕೆ ಸೀರೆ- ಸಿಂಧೂರ ಧರಿಸಿ ಹೋಗುತ್ತಾರೆ ಎಂದು ಕುಹಕವಾಡಿದ್ದರು.

ಭಾರತದ ವಿಮಾನ ಎಂದು ತಿಳಿದು ತನ್ನದೇ ವಿಮಾನ ಹೊಡೆದುರುಳಿಸಿದ ಪಾಕಿಸ್ತಾನ!

ನಿನ್ನೆ ಕೇಂದ್ರ ಸಚಿವ ಮಾನ್ಸುಖ್ ಮಾಂಡವಿಯ ಕೂಡ ಪ್ರಿಯಾಂಕಾ ಬಗ್ಗೆ ಟೀಕಾತ್ಮಕವಾಗಿ ಮಾತನಾಡಿದ್ದು, ಕಾಂಗ್ರೆಸ್​ ಯುವನಾಯಕಿ ಪ್ರಿಯಾಂಕಾ ತನ್ನ ಅಜ್ಜಿ ಇಂದಿರಾ ಗಾಂಧಿ ಅವರ ವರ್ಚಸ್ಸನ್ನು ಹೊಂದಿದ್ದಾರೆ ಎಂದು ಅವರ ಪಕ್ಷದಲ್ಲಿ ಹೇಳುತ್ತಿದ್ದಾರೆ. ಆದರೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಂತೆ ಮೂಗನ್ನು ಹೊಂದಿದ್ದಾರೆ ಎಂಬ ಕಾರಣಕ್ಕೆ ಪ್ರಿಯಾಂಕಾ ಅಧಿಕಾರಕ್ಕೆ ಬರುವುದಾದರೆ ಚೀನಾದ ಪ್ರತಿ ಮನೆಯಲ್ಲೂ ಓರ್ವ ಅಧ್ಯಕ್ಷರಿರುತ್ತಿದ್ದರು ಅಲ್ಲವೇ? ಎಂದು ಗುಜರಾತ್​ನಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಹೇಳಿದ್ದಾರೆ.

ತಡರಾತ್ರಿ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾದ ಗೋವಾ; ಬಿಜೆಪಿ ಸೇರಿದ ಇಬ್ಬರು ಎಂಜಿಪಿ ಶಾಸಕರು

ಪ್ರಿಯಾಂಕಾ ಗಾಂಧಿ ನೋಡಲು ಇಂದಿರಾ ಗಾಂಧಿಯಂತಿದ್ದಾರೆ, ಆಕೆಯ ವ್ಯಕ್ತಿತ್ವ ಇಂದಿರಾರನ್ನು ಹೋಲುತ್ತದೆ ಎಂದು ಕಾಂಗ್ರೆಸ್​ ನಾಯಕರು ಆಗಾಗ ಹೇಳುತ್ತಿರುತ್ತಾರೆ. ಹೀಗಾಗಿ, ಈ ಬಗ್ಗೆ ಟೀಕೆ ಮಾಡಿರುವ ಬಿಜೆಪಿ, ಹೋಲಿಕೆಯಿದ್ದ ಮಾತ್ರಕ್ಕೆ ಅಧಿಕಾರ ಪಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.

First published: March 27, 2019, 9:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading