Taliban| ಸಂಕಷ್ಟದಲ್ಲಿರುವ ಭಾರತೀಯ ಕಾಶ್ಮೀರದ ಮುಸ್ಲೀಮರಿಗಾಗಿ ಧ್ವನಿ ಎತ್ತುವ ಹಕ್ಕು ನಮಗಿದೆ; ತಾಲಿಬಾನ್ ವಕ್ತಾರ

ಕಾಶ್ಮೀರದಲ್ಲಿ ಮುಸ್ಲೀಮರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ, ಕಾಶ್ಮೀರ ಸೇರಿದಂತೆ ವಿಶ್ವದ ಯಾವುದೇ ಮೂಲೆಯಲ್ಲಿ ಮುಸ್ಲಿಮರಿಗಾಗಿ ಧ್ವನಿ ಎತ್ತುವ ಹಕ್ಕು ತಾಲಿಬಾನಿಗಳಿಗೆ ಇದೆ ಎಂದು ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಹೇಳಿಕೆ ನೀಡಿದ್ದಾರೆ.

ತಾಲಿಬಾನ್ ಉಗ್ರರು.

ತಾಲಿಬಾನ್ ಉಗ್ರರು.

 • Share this:
  ಕಾಬೂಲ್ (ಸೆಪ್ಟೆಂಬರ್​ 04); ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಅಧಿಕಾರ ಹಿಡಿದು ಸರ್ಕಾರವನ್ನೂ ರಚನೆ ಮಾಡಿದ್ದಾರೆ. ಆದರೆ, ಅಫ್ಘಾನ್​ನಲ್ಲಿ ತಾಲಿಬಾನಿ ಗಳು 20 ವರ್ಷಗಳ ನಂತರ ಮತ್ತೆ ಅಧಿಕಾರ ಹಿಡಿಯಲು ಚೀನಾ ಮತ್ತು ಪಾಕಿಸ್ತಾನ ಸರ್ಕಾರಗಳು ಪ್ರತ್ಯಕ್ಷವಾಗಿಯೇ ಸಹಕಾರ ನೀಡಿದ್ದವು. ಅಲ್ಲದೆ, ಪಾಕಿಸ್ತಾನದ ಸಚಿವ ಶೇಕ್ ರಶೀದ್​, "ನಾವು ತಾಲಿಬಾನ್ ನಾಯಕರ ಪಾಲಕರು. ನಾವು ಅವರನ್ನು ದೀರ್ಘಕಾಲ ನೋಡಿಕೊಂಡಿದ್ದೇವೆ. ಅವರು ಪಾಕಿಸ್ತಾನದಲ್ಲಿ ಆಶ್ರಯ, ಶಿಕ್ಷಣ ಮತ್ತು ಮನೆ ಪಡೆದರು. ನಾವು ಅವರಿಗಾಗಿ ಎಲ್ಲವನ್ನೂ ಮಾಡಿದ್ದೇವೆ "ಎಂದು ಹೇಳುವ ಮೂಲಕ ಸಂಚಲವನ್ನು ಸೃಷ್ಟಿಸಿದ್ದರು. ಹೀಗಾಗಿ ತಾಲಿಬಾನ್ ಆಡಳಿತದಲ್ಲಿ ಅಫ್ಘಾನಿಸ್ತಾನ ಪ್ರದೇಶವನ್ನು ಮತ್ತು ತಾಲಿಬಾನ್ ಉಗ್ರರನ್ನು ಪಾಕಿಸ್ತಾನ ಸರ್ಕಾರ ಭಾರತ ವಿರೋಧಿ ಚಟುವಟಿಕೆಗೆ ಬಳಸಬಹುದೆಂಬ ಆತಂಕ ಇದೆ. ಈ ನಡುವೆ ತಾಲಿಬಾನ್ ವಕ್ತಾರ ಕಾಶ್ಮೀರದ ಮುಸ್ಲೀಮರ ಬಗ್ಗೆ ಹೇಳಿಕೆ ನೀಡಿರುವುದು ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

  ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಬಿಬಿಸಿ ಉರ್ದು ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ, "ಕಾಶ್ಮೀರದಲ್ಲಿ ಮುಸ್ಲೀಮರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ, ಕಾಶ್ಮೀರ ಸೇರಿದಂತೆ ವಿಶ್ವದ ಯಾವುದೇ ಮೂಲೆಯಲ್ಲಿ ಮುಸ್ಲಿಮರಿಗಾಗಿ ಧ್ವನಿ ಎತ್ತುವ ಹಕ್ಕು ತಾಲಿಬಾನಿಗಳಿಗೆ ಇದೆ. ಆದರೆ, ಯಾವುದೇ ದೇಶದ ವಿರುದ್ಧ ಶಸ್ತ್ರಾಸ್ತ್ರಗಳನ್ನು ಬಳಸುವ ನೀತಿಯನ್ನು ನಮ್ಮ ಗುಂಪು ಹೊಂದಿಲ್ಲ" ಎಂದು ನೀಡಿರುವ ಹೇಳಿಕೆ ಇದೀಗ ಸಾಕಷ್ಟು ಸಂಚಲನವನ್ನು ಉಂಟು ಮಾಡಿದೆ. ಭಾರತದ ವಿರುದ್ಧ ಹಿಂಸಾ ಪ್ರವೃತ್ತಿಯಲ್ಲಿ ತೊಡಗಿರುವ ಭಯೋತ್ಪಾದಕರಿಗೆ ಮತ್ತು ಪಾಕಿಸ್ತಾನದ ಐಎಸ್​ಐಗೆ ತಾಲಿಬಾನಿಗಳು ಸಹಾಯ ಮಾಡುವರೇ? ಎಂಬ ಪ್ರಶ್ನೆಯನ್ನು ಮುಂದಿಟ್ಟಿದೆ.

  ಸಂದರ್ಶನದಲ್ಲಿ ಮತ್ತಷ್ಟು ವಿವರವಾಗಿ ಮಾತನಾಡಿರುವ ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್, "ಮುಸ್ಲಿಮರು ಯಾವ ದೇಶದಲ್ಲಿದ್ದರು ಅವರೂ ಸಹ ನಿಮ್ಮ ಸ್ವಂತ ಜನರು, ನಿಮ್ಮ ಸ್ವಂತ ಪ್ರಜೆಗಳು ಎಂದು ಅಲ್ಲಿನ ಸರ್ಕಾರಗಳಿಗೆ ಮನವರಿಕೆ ಮಾಡಿ ಕೊಡುತ್ತೇವೆ. ನಿಮ್ಮ ಕಾನೂನುಗಳ ಅಡಿಯಲ್ಲಿ ಅವರಿಗೆ ಸಮಾನ ಹಕ್ಕುಗಳಿವೆ ಎಂದು ಮುಸ್ಲಿಮರಿಗಾಗಿ ಧ್ವನಿ ಎತ್ತುತ್ತೇವೆ" ಎಂದು ಹೇಳಿಕೆ ನೀಡಿದ್ದಾರೆ.

  ಆದರೆ, ಈ ಹಿಂದೆ ಕಾಶ್ಮೀರದ ಬಗ್ಗೆ ಹೇಳಿಕೆ ನೀಡಿದ್ದ ತಾಲಿಬಾನ್, ಕಾಶ್ಮೀರದ ಸಮಸ್ಯೆ ಅವರ ಆಂತರಿಕ ವಿಷಯ ಎಂದಿತ್ತು. "ಅಫ್ಘಾನಿಸ್ತಾನದ ಭೂಮಿಯನ್ನು ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಅಫ್ಘನ್ ನೆಲವನ್ನು ಭಾರತದ ವಿರುದ್ಧ ಯಾರೇ ಬಳಸಿಕೊಳ್ಳಲೂ ಸಹ ಅನುಮತಿ ನೀಡುವುದಿಲ್ಲ" ಎಂದು ತಾಲಿಬಾನಿಗಳು ವಿಶ್ವಾಸ ನೀಡಿದ್ದರು. ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಾಗ್ಚಿ ಸಹ ಕಳೆದ ಗುರುವಾರ ಇದೇ ವಾಕ್ಯವನ್ನು ಒತ್ತಿ  ಹೇಳಿದ್ದರು.

  ಇದನ್ನೂ ಓದಿ: Bhowanipore Bypolls: ಭವಾನಿಪುರ ಉಪ ಚುನಾವಣೆ ಘೋಷಣೆ; ಸಿಎಂ ಸ್ಥಾನ ಉಳಿಸಿಕೊಳ್ಳಲು ಸಜ್ಜಾದ ಮಮತಾ ಬ್ಯಾನರ್ಜಿ

  ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆ, ಭದ್ರತೆ ಮತ್ತು ಆರಂಭಿಕ ವಾಪಸಾತಿ ಮತ್ತು ಅಫ್ಘಾನ್ ಪ್ರಜೆಗಳು, ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ಭಾರತಕ್ಕೆ ಪ್ರಯಾಣಿಸುವ ಬಗ್ಗೆಯೂ ಚರ್ಚೆಗಳು ಕೇಂದ್ರೀಕೃತವಾಗಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

  ಜಮ್ಮು ಮತ್ತು ಕಾಶ್ಮೀರದಲ್ಲಿನ ಭದ್ರತಾ ಪರಿಸ್ಥಿತಿಯ ಬಗ್ಗೆ ಆತಂಕ ಹೆಚ್ಚಾಗಿದ್ದು, ಈ ಪ್ರದೇಶದಲ್ಲಿ ಭದ್ರತಾ ನಿಗಾ ಹೆಚ್ಚಿಸುವ ನಿರೀಕ್ಷೆಯಿದೆ. "ಕಾಶ್ಮೀರದಲ್ಲಿ ಭದ್ರತೆ ಹೆಚ್ಚಿಸಲಾಗುವುದು. ಆದರೆ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿವೆ ಮತ್ತು ಅಫ್ಘಾನಿಸ್ತಾನದಲ್ಲಿರುವ ಪಾಕಿಸ್ತಾನ ಮೂಲದ ಗುಂಪುಗಳು ಪರಿಸ್ಥಿತಿಯನ್ನು ಬಳಸಿಕೊಳ್ಳುವ ಸಾಮರ್ಥ್ಯ ಕಡಿಮೆ" ಎಂದು ANI ಕಳೆದ ತಿಂಗಳು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿತ್ತು.

  ಇದನ್ನೂ ಓದಿ: Afghanistan Crisis| ಕಳೆದ 20 ವರ್ಷಗಳಿಂದ ತಾಲಿಬಾನಿಗಳನ್ನು ಪೋಷಿಸಿದ್ದು ನಾವೇ; ಪಾಕಿಸ್ತಾನಿ ಸಚಿವನ ಬಹಿರಂಗ ಹೇಳಿಕೆ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: