HOME » NEWS » National-international » HAVE EVIDENCE OF HOW I WAS ATTACKED DELHI POLICE BIASED JNUSU PRESIDENT AFTER COPS NAME HER AS ACCUSED RH

ನಾನು ದಾಳಿ ಮಾಡಿದ್ದೇನೆ ಎಂದು ಆರೋಪಿಸಿರುವ ಪೊಲೀಸರು ಸಾಕ್ಷ್ಯ ಬಹಿರಂಗಪಡಿಸಲಿ; ಜೆಎನ್​ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷಿ ಘೋಷ್

ಈ ದೇಶದ ಕಾನೂನು ಸುವ್ಯವಸ್ಥೆ ಬಗ್ಗೆ ತನಗೆ ನಂಬಿಕೆ ಇದೆ ಮತ್ತು ನ್ಯಾಯಯುತ ತನಿಖೆ ನಡೆಯುತ್ತದೆ ಎಂದು ನಂಬಿದ್ದೇನೆ. ನನಗೆ ನ್ಯಾಯ ಸಿಗುತ್ತದೆ  ಎಂದು ಘೋಷ್ ಹೇಳಿದರು. ಮುಂದುವರೆದು, ದೆಹಲಿ ಪೊಲೀಸರು ಏಕೆ ಪಕ್ಷಪಾತಿ ಧೋರಣೆ ಅನುಸರಿಸುತ್ತಿದ್ದಾರೆ? ನಾನು ನೀಡಿರುವ ದೂರಿಗೆ ಇನ್ನು ಎಫ್​ಐಆರ್ ದಾಖಲಿಸಿಲ್ಲ. ನಾನು ಯಾವುದೇ ಹಲ್ಲೆ ನಡೆಸಿಲ್ಲ ಎಂದು ಹೇಳಿದರು.

HR Ramesh | news18-kannada
Updated:January 10, 2020, 7:35 PM IST
ನಾನು ದಾಳಿ ಮಾಡಿದ್ದೇನೆ ಎಂದು ಆರೋಪಿಸಿರುವ ಪೊಲೀಸರು ಸಾಕ್ಷ್ಯ ಬಹಿರಂಗಪಡಿಸಲಿ; ಜೆಎನ್​ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷಿ ಘೋಷ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯಿಷಿ ಘೋಷ್.
  • Share this:
ನವದೆಹಲಿ: ಜೆಎನ್​ಯು ಕ್ಯಾಂಪಸ್​ನಲ್ಲಿರುವ ಪೆರಿಯಾರ್ ಹಾಸ್ಟೆಲ್​ನಲ್ಲಿ ಜ.5ರಂದು ನಡೆದ ದಾಳಿಯಲ್ಲಿ ವಿವಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷಿ ಘೋಷ್ ಗುಂಪಿನ ನೇತೃತ್ವ ವಹಿಸಿದ್ದರು ಎಂದು ಆರೋಪಿಸಿ ದೆಹಲಿ ಡಿಸಿಪಿ (ಅಪರಾಧ) ಜಾಯ್ ತಿರ್ಕಿ ಸಂಬಂಧಿತ ರೇಖಾಚಿತ್ರ ಬಿಡುಗಡೆ ಮಾಡಿದ್ದರು. ಅದಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯಿಷಿ ಘೋಷ್ ತಮ್ಮ ವಿರುದ್ಧ ಮಾಡಲಾಗಿರುವ ಆರೋಪಕ್ಕೆ ಸಾಕ್ಷ್ಯವನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ನಾವು ಯಾವುದೇ ತಪ್ಪು ಮಾಡಿಲ್ಲ. ನಾವು ದೆಹಲಿ ಪೊಲೀಸರಿಗೆ ಹೆದರುವುದಿಲ್ಲ. ನಾವು ಕಾನೂನು ಮುಖಾಂತರ ಹೋರಾಡುತ್ತೇವೆ ಹಾಗೂ ನಮ್ಮ ಚಳವಳಿಯನ್ನು ಶಾಂತಿಯುತವಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ಮುನ್ನಡೆಸುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ದೇಶದ ಕಾನೂನು ಸುವ್ಯವಸ್ಥೆ ಬಗ್ಗೆ ತನಗೆ ನಂಬಿಕೆ ಇದೆ ಮತ್ತು ನ್ಯಾಯಯುತ ತನಿಖೆ ನಡೆಯುತ್ತದೆ ಎಂದು ನಂಬಿದ್ದೇನೆ. ನನಗೆ ನ್ಯಾಯ ಸಿಗುತ್ತದೆ  ಎಂದು ಘೋಷ್ ಹೇಳಿದರು. ಮುಂದುವರೆದು, ದೆಹಲಿ ಪೊಲೀಸರು ಏಕೆ ಪಕ್ಷಪಾತಿ ಧೋರಣೆ ಅನುಸರಿಸುತ್ತಿದ್ದಾರೆ? ನಾನು ನೀಡಿರುವ ದೂರಿಗೆ ಇನ್ನು ಎಫ್​ಐಆರ್ ದಾಖಲಿಸಿಲ್ಲ. ನಾನು ಯಾವುದೇ ಹಲ್ಲೆ ನಡೆಸಿಲ್ಲ ಎಂದು ಹೇಳಿದರು.

ಜನವರಿ 5ರ ಸಂಜೆ ವಿವಿ ಕ್ಯಾಂಪಸ್​ಗೆ ನುಗ್ಗಿದ ದಾಳಿಕೋರರು ನನ್ನ ಮೇಲೆ ಹಲ್ಲೆ ಮಾಡಿರುವುದಕ್ಕೆ ನನ್ನ ಬಳಿ ಸಾಕ್ಷಿಗಳು ಇವೆ ಎಂದು ಘೋಷ್ ಹೇಳಿದರು.

ಇದನ್ನು ಓದಿ: ಜೆಎನ್​ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಪ್ರಕರಣ; ಇಬ್ಬರು ಎಬಿವಿಪಿ ಕಾರ್ಯಕರ್ತರೂ ಸೇರಿದಂತೆ 8 ಜನರ ಗುರುತು ಪತ್ತೆ
Published by: HR Ramesh
First published: January 10, 2020, 7:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories