ಕೆಟ್ಟ ಹಣಕಾಸು ಸಚಿವೆ ಎಂಬ ಪ್ರತಿಪಕ್ಷಗಳ ಟೀಕೆಗೆ ನಿರ್ಮಲಾ ಸೀತಾರಾಮನ್​ ತಿರುಗೇಟು

ನಮ್ಮ ಸರ್ಕಾರದ ಕುರಿತು ಟೀಕಿಸಿದರೆ, ಅದನ್ನು ಸುಧಾರಿಸಿ ಆಡಳಿತವನ್ನು ಅಭಿವೃದ್ಧಿ ಪಡಿಸಲು ನಾವು ಸಿದ್ಧರಿದ್ದೇವೆ. ಮೋದಿ ಸರ್ಕಾರದಿಂದ ಪಾರದರ್ಶಕ ಆಡಳಿತ ಹೊಂದಿದ್ದು, ಯಾವುದೇ ಟೀಕೆಗೆ ಹೆದರುವುದಿಲ್ಲ ಎಂದರು. 

Seema.R | news18-kannada
Updated:December 2, 2019, 8:17 PM IST
ಕೆಟ್ಟ ಹಣಕಾಸು ಸಚಿವೆ ಎಂಬ ಪ್ರತಿಪಕ್ಷಗಳ ಟೀಕೆಗೆ ನಿರ್ಮಲಾ ಸೀತಾರಾಮನ್​ ತಿರುಗೇಟು
ನಿರ್ಮಲಾ ಸೀತಾರಾಮನ್​
  • Share this:
ನವದೆಹಲಿ (ಡಿ.2): ಕೇಂದ್ರ ಸರ್ಕಾರದ ಕುರಿತ ಟೀಕೆಗೆ ಉತ್ತರಿಸಲು ಹಾಗೂ ಅದನ್ನು ಕೇಳಿಸಿಕೊಳ್ಳಲು ನಾವು ಸದಾ ಸಿದ್ಧರಾಗಿರುತ್ತೇವೆ ಎನ್ನುವ ಮೂಲಕ ತಮ್ಮ ವಿರುದ್ದದ ಟೀಕೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ತಿರುಗೇಟು ನೀಡಿದ್ದಾರೆ

ದೇಶದ ಆರ್ಥಿಕ ಸ್ಥಿತಿ ಸೇರಿದಂತೆ ಹಲವು ವಿಷಯಗಳ ಕುರಿತ ಕೈಗಾರಿಕೋದ್ಯಮಿ ರಾಹುಲ್​ ಬಜಾಜ್​  ಹಾಗೂ ಪ್ರತಿಪಕ್ಷಗಳ ಟೀಕೆಗೆ ಲೋಕಸಭೆಯಲ್ಲಿ ಉತ್ತರಿಸಿದ ಅವರು, ತಮ್ಮನ್ನು ಕೆಟ್ಟ ಹಣಕಾಸು ಸಚಿವೆ ಎಂದು ಟೀಕಿಸುತ್ತಾರೆ. ನನ್ನ ಮಾತು ಮುಗಿಯುವವರೆಗೂ ಅವರು ಕಾಯುವುದಿಲ್ಲ. ಆರ್ಥಿಕತೆ ಸುಧಾರಿಸಲು ಸಲಹೆಗಳನ್ನು ನೀಡಿ ಎಂದು ನಾನು ಕೇಳಿದ್ದೇನೆ. ನಾವು ಅದರ ಕುರಿತು ಕೆಲಸಮಾಡಲು ಕೂಡ  ಸಿದ್ದವಿದ್ದೇವೆ ಎಂದು ಕೂಡ ತಿಳಿಸಿದ್ದೇವೆ.

ನಮ್ಮ ಸರ್ಕಾರದ ಕುರಿತು ಟೀಕಿಸಿದರೆ, ಅದನ್ನು ಸುಧಾರಿಸಿ ಆಡಳಿತವನ್ನು ಅಭಿವೃದ್ಧಿ ಪಡಿಸಲು ನಾವು ಸಿದ್ಧರಿದ್ದೇವೆ. ಮೋದಿ ಸರ್ಕಾರದಿಂದ ಪಾರದರ್ಶಕ ಆಡಳಿತ ಹೊಂದಿದ್ದು, ಯಾವುದೇ ಟೀಕೆಗೆ ಹೆದರುವುದಿಲ್ಲ. ಯಾವುದಾದರೂ ಸರ್ಕಾರ ಪ್ರತಿಪಕ್ಷಗಳಿಂದ ಸಲಹೆಗಳನ್ನು ಕೇಳುತ್ತದೆ ಎಂದರೆ  ಅದು ಮೋದಿ ಸರ್ಕಾರ ಮಾತ್ರ ಎಂದು ಸಮರ್ಥಿಸಿಕೊಂಡರು .

ಭಾರತದ ಆರ್ಥಿಕತೆ ಕುಸಿತ ಕಾಣುತ್ತಿರುವ ಹಿನ್ನೆಲೆ ಇತ್ತೀಚೆಗೆ ನಿರ್ಮಲಾ ಸೀತಾರಾಮನ್​ ಅವರ ಮೇಲೆ ಟೀಕೆಗಳ ಸುರಿಮಳೆ ಕೇಳಿ ಬಂದಿತು.  ಎರಡನೇ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ಮತ್ತೆ  4.5ರಷ್ಟು ಕುಸಿತ ಗೊಂಡಿತು. ಈ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದರು.

ಕೈಗಾರಿಕಾ ವಲಯವೂ ಕೂಡ ಎರಡನೇ ಅವಧಿಯಲ್ಲಿ ನಕಾರಾತ್ಮಕ ಬೆಳವಣಿಗೆ ಕಾಣುತ್ತಿದೆ. ಭಾರತದ ಬೆನ್ನೆಲುಬು ಎಂದು ಕರೆಯುವ ಉತ್ಪಾದಕ ವಲಯ ಕೂಡ ಜುಲೈ-ಸೆಪ್ಟೆಂಬರ್​ನಲ್ಲಿ ತ್ರೈಮಾಸಿಕ ಅವಧಿಯಲ್ಲಿ ಶೇ 1ರಷ್ಟು ಬೆಳವಣಿಗೆ ಕಂಡಿದೆ ಎಂದರು.

ಇದನ್ನು ಓದಿ: ಎಸ್​ಪಿಜಿ ಹಿಂಪಡೆದ ವಾರದೊಳಗೆ ಪ್ರಿಯಾಂಕಾ ಗಾಂಧಿ ಭದ್ರತೆಗೆ ಧಕ್ಕೆ: ಮನೆಯೊಳಗೆ ನುಗ್ಗಿದ ಐವರು

ಸಂಸತ್ತಿನಲ್ಲಿ ನನ್ನನ್ನು ದೂಷಿಸುವವರೆ ಹೆಚ್ಚು. ಪ್ರಶ್ನೆ ಕೇಳಿ ಉತ್ತರ ಆಲಿಸುವ ಮುನ್ನವೇ ತಪ್ಪಿಸಿಕೊಂಡು ಹೋಗುವುದು ಬೇರೆ ಪಕ್ಷದವರೇ ಹೊರತು, ನಮ್ಮ ಪಕ್ಷದವರಲ್ಲ. ಪ್ರತಿ ಬಾರಿಯೂ ನಮ್ಮನ್ನು ಟೀಕಿಸಿದಾಗಲೂ ನಾವು ಅದಕ್ಕೆ ಸಮರ್ಥ ಉತ್ತರ ನೀಡಿದ್ದೇವೆ ಎಂದರು.
First published:December 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading