• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Life Outside Earth: ಅನ್ಯಗ್ರಹ ಜೀವಿಗಳು ನಮ್ಮನ್ನು ಪತ್ತೆ ಹಚ್ಚಿವೆಯಾ? ವಿಜ್ಞಾನಿಗಳಿಗೆ ಪುರಾವೆ ಸಿಕ್ಕಿದೆ !

Life Outside Earth: ಅನ್ಯಗ್ರಹ ಜೀವಿಗಳು ನಮ್ಮನ್ನು ಪತ್ತೆ ಹಚ್ಚಿವೆಯಾ? ವಿಜ್ಞಾನಿಗಳಿಗೆ ಪುರಾವೆ ಸಿಕ್ಕಿದೆ !

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಒಂದು ಅಧ್ಯಯನದ ಪ್ರಕಾರ ಕ್ಷುದ್ರಗ್ರಹದ ಗಾತ್ರವು 940 ಕಿ.ಮೀ ವ್ಯಾಸದಿಂದ ಎರಡು ಮೀಟರ್ ಅಗಲದವರೆಗೆ ಬದಲಾಗಬಹುದು ಎನ್ನಲಾಗಿದೆ. ಲೋಯೆಬ್ ಹೇಳುವಂತೆ ಭೂಮಿಯಿಂದ ಚಿಮುಕಿಸಲಾದ ಶೋಧಕಗಳಿಂದ ವಿವರಗಳನ್ನು ಪಡೆಯಲು ಬಂದಿರಬಹುದಾದಂತಹ ರಿಸೀವರ್ ಆಗಿರಬಹುದು.

  • Share this:

ಅಕ್ಟೋಬರ್ 19, 2017 ರಂದು ಖಗೋಳ ವಿಜ್ಞಾನಿ ರಾಬರ್ಟ್ ಹೆರಿಕ್ ಅವರು ‘ಓಮುವಾಮುವಾ’ ಎಂಬ ಮೊದಲ ತಾರಾಂತರೀಯ ವಸ್ತುವನ್ನು ಕಂಡುಹಿಡಿದರು. ಓಮುವಾಮುವಾ ಎಂದರೆ ಹವಾಯಿಯನ್ ಭಾಷೆಯಲ್ಲಿ ಕ್ಷುದ್ರಗ್ರಹ ಅಥವಾ ಧೂಮಕೇತು ಎಂದಾಗಿದೆ. ಸೂರ್ಯನಿಗೆ ಸಮೀಪದಲ್ಲಿದ್ದರೂ ಇದು ತಾಪಮಾನವನ್ನು ಪ್ರದರ್ಶಿಸಲಿಲ್ಲ. ಇದು ಧೂಮಕೇತುವಿನ ಒಂದು ವೈಶಿಷ್ಟ್ಯವಾಗಿದೆ. ಅದಾಗ್ಯೂ ಧೂಮಕೇತು ತನ್ನದೇ ವೇಗವನ್ನು ಪಡೆಯುತ್ತಿತ್ತು. ಈಗ ವಿಜ್ಞಾನಿಗಳು ಹೇಳುವಂತೆ ಓಮುವಾಮುವಾ ಪ್ರತೀ ವರ್ಷ ನಮ್ಮ ಸೌರವ್ಯೂಹವನ್ನು ದಾಟಿ ಹೋಗುತ್ತದೆ ಎಂದಾಗಿದೆ. ಬಾಹ್ಯಾಕಾಶಕ್ಕೆ ಸಮೀಪದಲ್ಲಿ ಹಾದುಹೋಗದ ಕಾರಣ ಅವು ನಮಗೆ ಕಂಡುಬಂದಿಲ್ಲವಂತೆ.


ಈ ಕ್ಷುದ್ರಗ್ರಹದ ಮೂಲವನ್ನು ಕೆದಕುತ್ತಾ ಹೋದರೆ ಇದು ಸೋಜಿಗವನ್ನುಂಟು ಮಾಡುವುದು ಸಹಜವಾಗಿದೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಭೌತಶಾಸ್ತ್ರಜ್ಞ ಅವಿ ಲೋಯೆಬ್‌ನ ಕ್ಷುದ್ರಗ್ರಹದ ಕುರಿತು ತಮ್ಮದೇ ಆದ ಕೆಲವೊಂದು ಸಿದ್ಧಾಂತಗಳನ್ನು ಕಲ್ಪನೆಗಳನ್ನು ಸೈಂಟಿಫಿಕ್ ಅಮೇರಿಕನ್‌ನಲ್ಲಿ ಪ್ರಕಟಪಡಿಸಿದ್ದಾರೆ. ಅವರು ಇದನ್ನು ಗುರುತಿಸಲಾಗದ ವೈಮಾನಿಕ ವಿದ್ಯಮಾನ ಎಂದು ವಿವರಿಸಿದ್ದು (ಯುಎಪಿ) ಇದು ಸತ್ಯವಾಗಿದ್ದು ಯುಎಪಿಗಳು ನೈಸರ್ಗಿಕವಾಗಿವೆ ಮತ್ತು ಭೂಮಿಯಲ್ಲಿ ಕಂಡುಬರುವ ಹಾರುವ ತಟ್ಟೆಗಳು ಮತ್ತು ಕ್ಷುದ್ರಗ್ರಹಗಳಿಗೆ ಏನಾದರೂ ಸಂಬಂಧವಿದೆಯೇ ಎಂದು ತಮ್ಮ ಆಶ್ಚರ್ಯವನ್ನು ಹೊರಹಾಕಿದ್ದಾರೆ.


ಲೋಯೆಬ್ ಅವರು ಹೇಳುವಂತೆ ವಿಜ್ಞಾನಿಗಳು ಓಮುವಾಮುವಾದಂತಹ ವಸ್ತುಗಳ ಬಗ್ಗೆ ಅಂದಾಜು ಮಾಡಿದ್ದು ಅವುಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಆದರೆ ಇವುಗಳು ನೈಸರ್ಗಿಕ ಮೂಲದವು ಎಂದು ಹೇಳಲು ಯಾವುದೇ ದಾಖಲೆಗಳಿಲ್ಲ ಎಂದು ತಿಳಿಸಿದ್ದಾರೆ. ಸೂರ್ಯನ ಸುತ್ತ ವಾಸಿಸಲು ಯೋಗ್ಯವಾಗಿರುವ ಸ್ಥಳದ ವಿವರಗಳನ್ನು ಸಂಗ್ರಹಿಸುವುದಕ್ಕಾಗಿ ಬಾಹ್ಯಾಕಾಶಕ್ಕೆ ಕಳುಹಿಸಲಾದ ವಸ್ತುವಾಗಿ ಓಮುವಾಮುವಾ ಅನ್ನು ಪರಿಗಣಿಸಲಾಗಿದೆ.


ಇದನ್ನೂ ಓದಿ: ನೀವು ಕೊರಿಯನ್ ಹುಡುಗಿಯರಂತೆ ಕಾಣಬೇಕಾ? ಹಾಗಿದ್ದರೆ, ಮುಖಕ್ಕೆ ಜಮ್ಸು ಹ್ಯಾಕ್ ಟ್ರೈ ಮಾಡಿ!

ಇವುಗಳು ಗ್ರಹಗಳಿಗಿಂತ ಚಿಕ್ಕದಾಗಿವೆ. ಅವುಗಳನ್ನು ಸಣ್ಣ ಗ್ರಹಗಳು ಎಂದೂ ಕರೆಯುತ್ತಾರೆ. ಒಟ್ಟಾರೆಯಾಗಿ 994,383 ಕ್ಷುದ್ರಗ್ರಹಗಳನ್ನು ಪತ್ತೆಹಚ್ಚಲಾಗಿದೆ ಎಂದು ವಿವರಗಳು ತಿಳಿಸಿವೆ. ಕ್ಷುದ್ರಗ್ರಹಗಳು ಭೂಮಿಯ ವಾತಾವರಣಕ್ಕೆ ಪ್ರವೇಶಿಸುವುದಿಲ್ಲವಾದರೂ ಗ್ರಹದ ಗುರುತ್ವಾಕರ್ಷಣೆಗೆ ಒಳಪಟ್ಟಂತೆ ಅದರ ಪಥವು ಬದಲಾಗುತ್ತಿರುತ್ತದೆ. ಒಂದು ಅಧ್ಯಯನದ ಪ್ರಕಾರ ಕ್ಷುದ್ರಗ್ರಹದ ಗಾತ್ರವು 940 ಕಿ.ಮೀ ವ್ಯಾಸದಿಂದ ಎರಡು ಮೀಟರ್ ಅಗಲದವರೆಗೆ ಬದಲಾಗಬಹುದು ಎನ್ನಲಾಗಿದೆ. ಲೋಯೆಬ್ ಹೇಳುವಂತೆ ಭೂಮಿಯಿಂದ ಚಿಮುಕಿಸಲಾದ ಶೋಧಕಗಳಿಂದ ವಿವರಗಳನ್ನು ಪಡೆಯಲು ಬಂದಿರಬಹುದಾದಂತಹ ರಿಸೀವರ್ ಆಗಿರಬಹುದು. ಲೋಯೆಬ್ ತಮ್ಮ ಮಾತಿಗೆ ಏಕೆ ಬದ್ಧವಾಗಿದ್ದರೆಂದರೆ ಅವರು ಹೇಳುವಂತೆ ಲಾಂಚರ್‌ಗಳನ್ನು ನಾವು ಕಂಡಿಲ್ಲ. ಶೋಧಕಗಳು ನಮ್ಮ ಬಳಿಗೆ ಬರುವುದು ನಾವು Pan-STARRS ಎಂಬ ಶಕ್ತಿಯುತ ಟೆಲಿಸ್ಕೋಪ್ ಅನ್ನು ಲಾಂಚ್ ಮಾಡಿರುವುದರಿಂದಾಗಿದೆ. ಈ ಬಾಹ್ಯಾಕಾಶ ಟೆಲಿಸ್ಕೋಪ್‌ಗಳು ಓಮುವಾಮುವಾ ಅನ್ನು ಪತ್ತೆಹಚ್ಚಲು ಪ್ರಬಲವಾಗಿವೆ. ಓಮುವಾಮುವಾ ಗೆ ಸಮನಾಗಿರುವ 2020 SO ಎಂಬ ಇನ್ನೊಂದು ವಸ್ತುವನ್ನು ಉಲ್ಲೇಖಿಸುವ ಮೂಲಕ ಲೋಯೆಬ್ ತಮ್ಮ ಕಲ್ಪನೆಯನ್ನು ದೃಢೀಕರಿಸುತ್ತಾರೆ. 2020 SO ಎನ್ನುವುದು ಓಮುವಾಮುವಾ ಗೆ ಸಮನಾಗಿದ್ದರೂ 1966 ರಲ್ಲಿ ಮಾನವರು ಉಡಾವಣೆ ಮಾಡಿದ ರಾಕೆಟ್ ಬೂಸ್ಟರ್ ಆಗಿದೆ ಎಂದು ಹೇಳಿದ್ದಾರೆ.
ಇನ್ನೂ ಕೆಲವು ವರದಿಗಳ ಪ್ರಕಾರ ಹೆಚ್ಚಿನ ಕ್ಷುದ್ರಗ್ರಹಗಳು ಭೂಮಿಯ ಮೇಲೆ ಹಾದುಹೋಗುವಾಗ ಪರಿಣಾಮವನ್ನುಂಟು ಮಾಡುವುದಿಲ್ಲ ಎಂದಾಗಿದೆ. ಕೆಲವೊಂದು ಕ್ಷುದ್ರಗ್ರಹಗಳು ಸ್ಫೋಟಗೊಂಡಾಗ ಭಾರೀ ಹಾನಿಯನ್ನುಂಟು ಮಾಡದೇ ಇದ್ದರೂ ಕೆಲವೊಂದೆಡೆಗಳಲ್ಲಿ ಸಣ್ಣ ಪುಟ್ಟ ಹಾನಿಗಳನ್ನುಂಟು ಮಾಡುತ್ತವೆ.

top videos
    First published: