Haunted House: ದಿ ಕಂಜ್ಯೂರಿಂಗ್ ಸಿನಿಮಾದಲ್ಲಿದ್ದ ಭೂತ ಬಂಗಲೆ ಸೇಲ್! ಇದರ ಬೆಲೆ ಕೇಳಿದ್ರೆ ನೀವು ಶಾಕ್ ಆಗೋದು ಪಕ್ಕಾ

ನಮ್ಮ ದೇಶದಲ್ಲಿ ಸಾಮಾನ್ಯವಾಗಿ, ಯಾವುದಾದರೂ ಕಟ್ಟಡವನ್ನು, ಜನರು ಭೂತ ಬಂಗಲೆ ಅಥವಾ ದೆವ್ವದ ಮನೆಯಾಗಿ ಪರಿಗಣಿಸಿದ್ದಾರೆ ಎಂದುಕೊಳ್ಳಿ. ಆ ಕಟ್ಟಡವನ್ನು ಯಾರಾದರೂ ಖರೀದಿಸಲು ಮುಂದೆ ಬರುತ್ತಾರೆಯೇ? ಅಯ್ಯೋ, ಖರೀದಿಸುವ ಮಾತು ಹಾಗಿರಲಿ, ಹಗಲು ಹೊತ್ತಲ್ಲೂ ಅದರ ಮುಂದೆ ನಡೆದುಕೊಂಡು ಹೋಗಲು ಕೂಡ ಭಯ ಪಡುವವರಿದ್ದಾರೆ.

ದಿ ಕಂಜ್ಯೂರಿಂಗ್ ಸಿನಿಮಾಗೆ ಸ್ಪೂರ್ತಿಯಾಗಿದ್ದ ಭೂತ ಬಂಗಲೆ

ದಿ ಕಂಜ್ಯೂರಿಂಗ್ ಸಿನಿಮಾಗೆ ಸ್ಪೂರ್ತಿಯಾಗಿದ್ದ ಭೂತ ಬಂಗಲೆ

  • Share this:
ನಮ್ಮ ದೇಶದಲ್ಲಿ ಸಾಮಾನ್ಯವಾಗಿ, ಯಾವುದಾದರೂ ಕಟ್ಟಡವನ್ನು (Building) ಜನರು ಭೂತ ಬಂಗಲೆ (Ghost Bungalow) ಅಥವಾ ದೆವ್ವದ ಮನೆಯಾಗಿ ಪರಿಗಣಿಸಿದ್ದಾರೆ ಎಂದುಕೊಳ್ಳಿ. ಆ ಕಟ್ಟಡವನ್ನು ಯಾರಾದರೂ ಖರೀದಿಸಲು ಮುಂದೆ ಬರುತ್ತಾರೆಯೇ? ಅಯ್ಯೋ, ಖರೀದಿಸುವ (Buy) ಮಾತು ಹಾಗಿರಲಿ, ಹಗಲು ಹೊತ್ತಲ್ಲೂ ಅದರ ಮುಂದೆ ನಡೆದುಕೊಂಡು ಹೋಗಲು ಕೂಡ ಭಯ ಪಡುವವರಿದ್ದಾರೆ. ಇನ್ನು ರಾತ್ರಿಯಂತೂ ಆ ಕಡೆಗೆ ಸುಳಿಯುವವರಿಲ್ಲ ಅಲ್ಲವೇ? ಆದರೆ, ಯುಎಸ್‍ನಲ್ಲಿ (US) ದೆವ್ವ ಬಂಗಲೆ ಎಂದೇ ಕರೆಸಿಕೊಳ್ಳಲ್ಪಡುತ್ತಿದ್ದ ಬಂಗಲೆಯೊಂದು ಬರೋಬ್ಬರಿ 1.5 ಮಿಲಿಯನ್ ಡಾಲರ್​ಗೆ , ಅಂದರೆ ಸರಿ ಸುಮಾರು 11,63,65,125 ರೂ.ಗಳಿಗೆ ಮಾರಾಟವಾಗಿದೆಯಂತೆ!

ರೋಡ್ ಐಲ್ಯಾಂಡ್‍ನಲ್ಲಿರುವ ಭೂತ ಬಂಗಲೆ
ಅಬ್ಬಬ್ಬಾ ದೆವ್ವದ ಮನೆಯನ್ನು ಖರೀದಿಸುವವರೂ ಇದ್ದಾರೆಯೇ ಎಂದು ಗಾಬರಿ ಪಡಬೇಡಿ. ದೆವ್ವ ಪಿಶಾಚಿಗಳ ಹೆಸರನ್ನು ಕಂಡರೆ ಭಯದಿಂದ ಕಂಪಿಸುವವರ ಸಂಖ್ಯೆ ಹೆಚ್ಚಿದ್ದರೂ, ಅಂತಹ ಅಲೌಕಿಕ ಶಕ್ತಿಗಳ ಬಗ್ಗೆ ತಿಳಿದುಕೊಳ್ಳಲು ಬಯಸುವ ಅಥವಾ ಅವುಗಳಿಗೆ ಹತ್ತಿರ ಇರ ಬಯಸುವ ಜನರು ಕೂಡ ಇಲ್ಲವೆಂದಲ್ಲ.

ಅಷ್ಟಕ್ಕೂ ಈ ಬಂಗಲೆಯ ಇನ್ನೊಂದು ವಿಶೇಷವೇನು ಗೊತ್ತೇ? ಇದು 2013 ರಲ್ಲಿ ಬಿಡುಗಡೆಯಾಗಿದ್ದ ಅಲೌಕಿಕ ಶಕ್ತಿಗಳ ಕುರಿತ ಹಾರರ್ ಸಿನಿಮಾ 'ದಿ ಕಂಜ್ಯೂರಿಂಗ್‍'ಗೆ ಸ್ಪೂರ್ತಿ ನೀಡಿದ್ದ ರೋಡ್ ಐಲ್ಯಾಂಡ್‍ನಲ್ಲಿರುವ ಭೂತ ಬಂಗಲೆ. 1726 ರಲ್ಲಿ ಕಟ್ಟಲಾಗಿರುವ ಈ ಬಂಗಲೆಯನ್ನು, ಅಮೇರಿಕಾ ಅತೀ ಭಯಾನಕ ಹಾಂಟೆಡ್ ಮನೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಮನೆಯಲ್ಲಿ ನಡೆದಿದೆ ಚಿತ್ರ-ವಿಚಿತ್ರ ಘಟನೆ
ವಾಲ್‍ಸ್ಟ್ರೀಟ್ ಜರ್ನಲ್ ಪ್ರಕಾರ, 1971 ರಿಂದ 1980 ರ ವರೆಗೆ ಈ ಮನೆಯಲ್ಲಿ ವಾಸಿಸಿದ್ದ ಆ್ಯಂಡ್ರಿಯಾ ಪೆರೋನ್ ಅವರು, ಆ ಮನೆಯಲ್ಲಿ ತನ್ನ ಕುಟುಂಬದವರು ಅನೇಕ ಬಾರಿ ಅಲೌಕಿಕ ಸಂಗತಿಗಳು ಅಥವಾ ಅನುಭವಗಳನ್ನು ಎದುರಿಸಬೇಕಾಗಿ ಬಂದಿತ್ತು ಎಂದು ಹೇಳಿದ್ದಾರೆ. ತನ್ನ ವಯಸ್ಸಾದ ತಾಯಿ ಗಾಳಿಯಲ್ಲಿ ತೇಲಾಡಿದ್ದರಿಂದ ಹಿಡಿದು ಕಣ್ಣಿಗೆ ಕಾಣದ ಶಕ್ತಿಯೊಂದು ಕೆನ್ನೆಗೆ ಹೊಡೆದಿದ್ದರ ವರೆಗೆ ಹಲವಾರು ಘಟನೆಗಳನ್ನು ಮನೆಯವರು ಕಂಡಿದ್ದಾರೆ.

ಇದನ್ನೂ ಓದಿ: Love Story: ಈ ಜೋಡಿಯ ಒಂದು ಕಪ್ ಚಹಾದಿಂದ ವೈರಲ್ ಆಗ್ತಿದೆ ಇವರಿಬ್ಬರ ಲವ್ ಸ್ಟೋರಿ

ಆ ಭೂತ ಬಂಗಲೆಯಲ್ಲಿ ನಡೆದಿದ್ದ ಘಟನೆಗಳ ಬಗ್ಗೆ ತಿಳಿದ, ಪ್ರಸಿದ್ಧ ಪ್ಯಾರನಾರ್ಮಲ್ ಇನ್‍ವೆಸ್ಟಿಗೇಟರ್‍ಗಳಾದ ಎಡ್ ಮತ್ತು ಲೊರೈನೆ ವಾರನ್ ಸ್ವಯಂ ಪ್ರೇರಿತರಾಗಿ ಕುಟುಂಬಕ್ಕೆ ಸಹಾಯ ಮಾಡಲು ಮುಂದೆ ಬಂದರು.

ಈ ಹಾರರ್ ಮನೆ ಖರೀದಿಸಿದವರು ಯಾರು?
ಮತ್ತೊಂದು ಪ್ಯಾರನಾರ್ಮಲ್ ಇನ್‍ವೆಸ್ಟಿಗೇಟರ್ ಜೋಡಿ, ಜೆನ್ ಮತ್ತು ಕೋರಿ ಹೇನ್ಜೆನ್, 2019 ರಲ್ಲಿ ಆ ಭೂತ ಬಂಗಲೆಯನ್ನು 4,39,00 ಡಾಲರ್‍ಗೆ ಅಂದರೆ ಸರಿ ಸುಮಾರು 3,40,57, 620 ರೂ.ಗಳಿಗೆ ಖರೀದಿಸಿದರು. 2021ರ ಸೆಪ್ಟೆಂಬರ್ ನಲ್ಲಿ ಅವರು ಅದನ್ನು ಮಾರಾಟಕ್ಕೆ ಇಟ್ಟರು.ರಿಯಲ್ ಎಸ್ಟೇಟ್ ಡೆವಲಪರ್ ಆಗಿರುವ ಜಾಕ್ವೆಲಿನ್ ನ್ಯೂನೆಜ್ ಇದೀಗ ಆ ಬಂಗಲೆಯ ಹೊಸ ಮಾಲೀಕರು. “ಆ ಮನೆ ನಮ್ಮನ್ನು ಆರಿಸಿಕೊಂಡ ರೀತಿಯಲ್ಲೇ ಜಾಕ್ವೇಲಿನ್ ಅವರನ್ನು ಆರಿಸಿಕೊಂಡಿದೆ ಎಂದು ನಾನು ನಂಬುತ್ತೇನೆ. ಅದು ಅವಳ ಬೆಳಕನ್ನು ಬಯಸುತ್ತಿದೆ” ಎಂದು ಆ್ಯಂಡ್ರಿಯಾ ಪೆರೋನ್ ಹೇಳಿದ್ದಾರೆ. ಜೆನ್ ಮತ್ತು ಕೋರಿ ಹೇನ್ಜೆನ್ ಫೇಸ್‍ಬುಕ್‍ನಲ್ಲಿ ಈ ಬಂಗಲೆ ಮಾರಾಟವಾಗಿರುವ ಕುರಿತು ಮಾಹಿತಿ ನೀಡಿದ್ದಾರೆ. “ಕೋರಿ ಮತ್ತು ನಾನು ಗುರುವಾರ ವಿಶೇಷ ಪ್ರಕಟಣೆಯನ್ನು ಮಾಡಲಿದ್ದೇವೆ” ಎಂಬ ಶೀರ್ಷಿಕೆಯನ್ನು ಪೋಸ್ಟಿಗೆ ನೀಡಲಾಗಿದೆ.

3,100 ಚದರ ಅಡಿಯ ಬಂಗಲ
ಮೂರು ಬೆಡ್‍ರೂಂಗಳನ್ನು ಹೊಂದಿರುವ, ಸರಿಸುಮಾರು 3,100 ಚದರ ಅಡಿಯ ಈ ಬಂಗಲೆಯನ್ನು ಮಾರಾಟ ಮಾಡುವುದಾಗಿ ಪ್ರಕಟಿಸಿದಾಗ, ಅವರಿಗೆ 10 ಕ್ಕಿಂತ ಹೆಚ್ಚು ಆಫರ್ ಗಳು ಬಂದವಂತೆ. “ನಮಗೆ ಹಲವಾರು ಹಾಸ್ಯಾಸ್ಪದ ಬಿಡ್‍ಗಳು ಬಂದವು, ಆದರೆ ಜನ ಸಂದರ್ಶನಕ್ಕೆ ಬರಲು ನಿರಾಕರಿಸಿದರು” ಎಂದಿದ್ದಾರೆ ಜೆನ್.

ಇದನ್ನೂ ಓದಿ: Viral Video: ಮುದ್ದು ಮಗಳಿಗೆ ಭಯಾನಕ ಗೊಂಬೆ ಗಿಫ್ಟ್ ಕೊಟ್ಟ ಅಮ್ಮ! ಮಗುವಿನ ರಿಯಾಕ್ಷನ್ ಹೀಗಿತ್ತು

ಆ ಬಂಗಲೆ ಖರೀದಿದಾರರ ಅವಶ್ಯಕಗಳಿಗೆ ತಕ್ಕದಿದೆಯೇ ಎಂದು ನೋಡಲು ಜೆನ್ ಮತ್ತು ಕೋರಿ ಒತ್ತಾಯಿಸಿದ್ದರು. ಆ ಮನೆಯಲ್ಲಿ ರಾತ್ರಿ ಇಡೀ ತಂಗುವ ಮತ್ತು ಅಲ್ಲಿನ ಅಲೌಕಿಕ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸುವುದಕ್ಕೆ ಅವಕಾಶ ನೀಡಲು ಅವರು ಸಿದ್ಧರಿದ್ದರು.
Published by:Ashwini Prabhu
First published: