ಚೆನ್ನೈ (ಸೆಪ್ಟೆಂಬರ್ 10); ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಆಢಳಿತರೂಢ ಪಕ್ಷ ಶಿವಸೇನೆ ಮತ್ತು ಬಾಲಿವುಡ್ ನಟಿ ಕಂಗನಾ ರನೌತ್ ನಡುವಿನ ಜಟಾಪಟಿ ದಿನದಿಂದ ದಿನಕ್ಕೆ ಕಾವೇರುತ್ತಲೇ ಇದೆ. ಈ ನಡುವೆ ಮುಂಬೈ ನಗರದ ಬಾಂದ್ರಾದಲ್ಲಿರುವ ಕಂಗನಾ ಕಚೇರಿ ಕಾನೂನು ಬಾಹೀರವಾಗಿ ನಿರ್ಮಿಸಲಾಗಿದೆ ಎಂದು ಮಹಾರಾಷ್ಟ್ರ ನಗರ ಪಾಲಿಕೆ ನಿನ್ನೆ ಕಟ್ಟಡವನ್ನು ನೆಲಸಮ ಮಾಡಿತ್ತು. ಇದರ ಬೆನ್ನಿಗೆ ನಟಿ ಕಂಗನಾಗೆ ರಾಷ್ಟ್ರಾದ್ಯಂತ ಹಲವರು ಬೆಂಬಲ ಸೂಚಿಸುತ್ತಿದ್ದಾರೆ. ಈ ಸಾಲಿಗೆ ಇದೀಗ ತಮಿಳುನಾಡಿನ ಖ್ಯಾತ ನಟ ವಿಶಾಲ್ ಸಹ ಸೇರ್ಪಡೆಯಾಗಿದ್ದಾರೆ, ಈ ಕುರಿತು ಇಂದು ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ಹೊರಹಾಕಿರುವ ವಿಶಾಲ್, ಕಂಗನಾ ಅವರ ಧೈರ್ಯವನ್ನು ಸ್ವಾತಂತ್ಯ್ರ ಹೋರಾಟಗಾರ ಭಗತ್ ಸಿಂಗ್‌ಗೆ ಹೋಲಿಕೆ ಮಾಡಿದ್ದಾರೆ. ಅಲ್ಲದೆ, ಸರ್ಕಾರದ ವಿರುದ್ಧವೇ ಧ್ವನಿ ಎತ್ತಿರುವ ಅವರ ಧೈರ್ಯಕ್ಕೆ ಪ್ರಶಂಶೆ ವ್ಯಕ್ತಪಡಿಸಿದ್ದಾರೆ.
ನಟ ವಿಶಾಲ್ ಮಾಡಿರುವ ಟ್ವೀಟ್‌ನಲ್ಲಿ, "ನಿಮ್ಮ ಧೈರ್ಯಕ್ಕೆ ಹ್ಯಾಟ್ಸ್ ಆಫ್, ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಧ್ವನಿ ನೀಡಲು ನೀವು ಎಂದಿಗೂ ಎರಡು ಬಾರಿ ಯೋಚಿಸಿಲ್ಲ. ಇದು ನಿಮ್ಮ ವೈಯಕ್ತಿಕ ಸಮಸ್ಯೆಯಲ್ಲ. ಆದರೆ ಆಗಲೂ ಸರ್ಕಾರದ ಕೋಪವನ್ನು ನೀವು ಎದುರಿಸುತ್ತಿದ್ದೀರ. ಆದರೂ ಎದೆಗುಂಡದ ನಿಮ್ಮ ದೃಢತೆ ಭವಿಷ್ಯದಲ್ಲಿ ದೊಡ್ಡ ಉದಾಹರಣೆಯಾಗಿ ಬಳಕೆಯಾಗಲಿದೆ. ಇದು 1920 ರ ದಶಕದಲ್ಲಿ ಭಗತ್ ಸಿಂಗ್ ತೋರಿದ ಧೈರ್ಯಕ್ಕೆ ಸಮನಾಗಿದೆ.
Dear @KanganaTeam pic.twitter.com/73BY631Kkx
— Vishal (@VishalKOfficial) September 10, 2020
ನಟ ವಿಶಾಲ್ ಸಹ ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಜಲ್ಲಿಕಟ್ಟುವಿಗೆ ಕೇಂದ್ರ ಸರ್ಕಾರ ತಡೆ ನೀಡಿದ್ದಾಗ ಸರ್ಕಾರದ ವಿರುದ್ಧ ಉಗ್ರ ಹೋರಾಟಕ್ಕೆ ಮುಂದಾಗಿದ್ದರು. ಅಲ್ಲದೆ ಇವರು ನಟ ರಾಜಕಾರಣಿ ಕಮಲಹಾಸನ್ ಅವರ ಆಪ್ತ ಎಂದೂ ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ