ಸಂತ್ರಸ್ತೆಗೆ ನ್ಯಾಯ ನೀಡಿ, ಪ್ರತಿಷ್ಠೆಗೆ ಧಕ್ಕೆ ತರುವ ಮಾತುಗಳನ್ನಲ್ಲ; ಪ್ರಿಯಾಂಕಾ ಗಾಂಧಿ

ದಲಿತ ಯುವತಿ ಮೇಲೆ ಅತ್ಯಾಚಾರ, ಕೊಲೆಯಿಂದ ಹಿಡಿದು ಆಕೆಯ ಪೋಷಕರ ಅನುಪಸ್ಥಿತಿಯಲ್ಲಿ ಸಂಶಯಾಸ್ಪದವಾಗಿ ಶವಸಂಸ್ಕಾರ ಮಾಡುವವರೆಗೆ ಈ ಪ್ರಕರಣದ ಎಳೆ ಎಳೆಯನ್ನೂ ತನಿಖೆಗೆ ಒಳಪಡಿಸಬೇಕು ಎಂದು ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದರು.

ರಾಹುಲ್ ಗಾಂಧಿ-ಪ್ರಿಯಾಂಕಾ ಗಾಂಧಿ

ರಾಹುಲ್ ಗಾಂಧಿ-ಪ್ರಿಯಾಂಕಾ ಗಾಂಧಿ

 • Share this:
  ಲಕ್ನೋ: ದೇಶಾದ್ಯಂತ ಸುದ್ದಿಯಾಗಿರುವ ಉತ್ತರ ಪ್ರದೇಶದ ಹಾಥರಸ್ ಅತ್ಯಾಚಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಳೆದವಾರ ಆದೇಶ ಹೊರಡಿಸಿದ್ದರು. ಶನಿವಾರ ನಡೆದ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯ ಬಳಿಕ ಸಿಎಂ ಈ ನಿರ್ಧಾರ ತೆಗೆದುಕೊಂಡಿದ್ದರು. ದಲಿತ ಯುವತಿ ಮೇಲೆ ಅತ್ಯಾಚಾರ, ಕೊಲೆಯಿಂದ ಹಿಡಿದು ಆಕೆಯ ಪೋಷಕರ ಅನುಪಸ್ಥಿತಿಯಲ್ಲಿ ಸಂಶಯಾಸ್ಪದವಾಗಿ ಶವಸಂಸ್ಕಾರ ಮಾಡುವವರೆಗೆ ಈ ಪ್ರಕರಣದ ಎಳೆ ಎಳೆಯನ್ನೂ ತನಿಖೆಗೆ ಒಳಪಡಿಸಬೇಕು ಎಂದು ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್​ ನಾಯಕಿ ಪ್ರೀಯಾಂಕಾ ಗಾಂಧಿ ವಾದ್ರಾ, ಹಾಥರಸ್ ಸಂತ್ರಸ್ತೆಗೆ ನ್ಯಾಯ ನೀಡಬೇಕೆ ಹೊರತೂ ಪ್ರತಿಷ್ಠೆಗೆ ಧಕ್ಕೆ ತರುವ ಸುಳ್ಳು ಮಾತುಗಳನ್ನಲ್ಲ ಎಂದಿದ್ದಾರೆ.

  ಮಹಿಳೆಗೆ ಮಾನ ಹಾನಿ ಮಾಡುವುದು ಮತ್ತು ಅವಳ ವಿರುದ್ಧ ಆಗಿರುವ ಅಪರಾಧಕ್ಕೆ ಅವಳನ್ನೇ ತಪ್ಪಿತಸ್ಥಳನ್ನಾಗಿ ಮಾಡುವುದು ಸರಿಯಲ್ಲ. 20 ವರ್ಷದ ದಲಿತ ಯುವತಿ ಮೃತಪಟ್ಟಿದ್ದಾಳೆ. ಮನೆಯವರ ಒಪ್ಪಿಗೆಯನ್ನೂ ಪಡೆಯದೇ ಆಕೆಯ ಹೆಣವನ್ನು ಸುಟ್ಟು ಹಾಕಲಾಗಿತ್ತು. ಆಕೆಗೆ ನಾವು ನ್ಯಾಯ ಒದಗಿಸಬೇಕೆ ಹೊರತೂ ಸುಳ್ಳು ಸುದ್ದಿಗಳನ್ನಲ್ಲ ಎಂದು ಪ್ರಿಯಾಂಕಾ ಹೇಳಿದ್ದಾರೆ.

  ಮತ್ತೊಂದೆಡೆ  ದಲಿತ ಯುವತಿಯ ಅತ್ಯಾಚಾರ ಕೊಲೆ ಸಂಭವಿಸಿದ ಉತ್ತರ ಪ್ರದೇಶದ ಹಾಥ್ರಸ್ ಜಿಲ್ಲೆಗೆ ಹೊರಟಿದ್ದ ನಾಲ್ವರು ವ್ಯಕ್ತಿಗಳನ್ನು ಮಥುರಾದಲ್ಲಿ ಪೊಲೀಸರು ಇತ್ತೀಚೆಗೆ ಬಂದಿಸಿದ್ದರು. ಇದೀಗ ಈ ನಾಲ್ವರಿಗೆ ಉಗ್ರ ಸಂಘಟನೆ ಪಿಎಫ್​ಐನ ನಂಟಿರುವ ಶಂಕೆಯ ಮೇಲೆ ಪೊಲೀಸರು ದೇಶದ್ರೋಹ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಪಿಎಫ್​ಐ ಜೊತೆ ಸಂಬಂಧ ಇರುವ ಈ ನಾಲ್ವರು ಅಕ್ಟೋಬರ್ 5ರಂದು ಶಾಂತಿ ಕದಡುವ ಉದ್ದೇಶದಿಂದ ಹಾಥ್ರಸ್​ಗೆ ಹೋಗುತ್ತಿದ್ದರು ಎಂದು ಎಫ್​ಐಆರ್​ನಲ್ಲಿ ಆರೋಪಿಸಲಾಗಿದೆ.
  Published by:Rajesh Duggumane
  First published: