Hathras Rape Case: ಹತ್ರಾಸ್​ ಅತ್ಯಾಚಾರ ಪ್ರಕರಣ: ಅಕ್ಷಯ್​ ಕುಮಾರನ್ನು ಟ್ವೀಟ್​ ಮೂಲಕ ಪ್ರಶ್ನಿಸಿದ ನಟಿ ರಮ್ಯಾ..!

Ramya And Akshay Kumar Tweet: ನಟ ಅಕ್ಷಯ್​ ಕುಮಾರ್ ಸಹ ಈ ಅಮಾನವೀಯ ಘಟನೆ ಬಗ್ಗೆ ಟ್ವೀಟ್​ ಮಾಡಿದ್ದು, ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಯಾವಾಗ ಇಂತಹ ಕೃತ್ಯಗಳು ನಿಲ್ಲುತ್ತವೆ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಈ ನಿಟ್ಟಿನಲ್ಲಿ ಕಾನೂನು ಸಹ ಬಲಗೊಳ್ಳಬೇಕಿದೆ ಎಂದಿದ್ದಾರೆ.

ರಮ್ಯಾ ಹಾಗೂ ಅಕ್ಷಯ್​ ಕುಮಾರ್​

ರಮ್ಯಾ ಹಾಗೂ ಅಕ್ಷಯ್​ ಕುಮಾರ್​

  • Share this:
ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಉತ್ತರ ಪ್ರದೇಶದ ಹತ್ರಾಸ್‌ನ 19 ವರ್ಷದ ಯುವತಿಯನ್ನು ಚಿಕಿತ್ಸೆಗಾಗಿ ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ಯುವತಿ ಮೃತಪಟ್ಟಿದ್ದು, ಉತ್ತರ ಪ್ರದೇಶದ ಪೊಲೀಸರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ  ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ಇನ್ನು ಕುಟುಂಬದವರಿಗೆ ಯುವತಿಯ ಮೃತ ದೇಹವನ್ನು ನೀಡದ ಉತ್ತರಪ್ರದೇಶದ ಪೊಲೀಸರು ನಿನ್ನೆ ಮಧ್ಯರಾತ್ರಿ 2.30ರ ವೇಳೆಗೆ ಅಂತ್ಯಕ್ರಿಯೆ ಮಾಡಿದ್ದಾರೆ. ಪೊಲೀಸರ ನಡೆಯ ಬಗ್ಗೆ ಈಗ ಅನುಮಾನ ವ್ಯಕ್ತವಾಗಿದೆ. ಜೊತೆಗೆ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಸೆಲೆಬ್ರಿಟಿಗಳೂ ಈ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ರಿಯಾ ಚಡ್ಡಾ. ಕಂಗನಾ ರನೌತ್​, ಅಕ್ಷಯ್​ ಕುಮಾರ್​ ಟ್ವೀಟ್​ ಮಾಡಿದ್ದಾರೆ. 

ನಟ ಅಕ್ಷಯ್​ ಕುಮಾರ್ ಸಹ ಈ ಅಮಾನವೀಯ ಘಟನೆ ಬಗ್ಗೆ ಟ್ವೀಟ್​ ಮಾಡಿದ್ದು, ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಯಾವಾಗ ಇಂತಹ ಕೃತ್ಯಗಳು ನಿಲ್ಲುತ್ತವೆ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಈ ನಿಟ್ಟಿನಲ್ಲಿ ಕಾನೂನು ಸಹ ಬಲಗೊಳ್ಳಬೇಕಿದೆ ಎಂದಿದ್ದಾರೆ.ಅಕ್ಷಯ್​ ಕುಮಾರ್ ಅವರು ಮಾಡಿರುವ ಟ್ವೀಟ್​ಗೆ ರಮ್ಯಾ ಕೊಂಚ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಇನ್ನು ಮುಂದೆಯೂ ನೀವು ನಿರಾಶರಾಗಿ ಹತಾಶೆಗೊಳ್ಳುವುದು ಮುಂದುವರೆಯುತ್ತಲೇ ಇರುತ್ತದೆ. ಇದಕ್ಕೆ ಕೊನೆಯೇ ಇಲ್ಲ. ದ್ವೇಷಪೂರಿತ ಮನಸ್ಥಿತಿಯೇ ಇಂತಹ ಘಟನೆಗಳು ನಡೆಯಲು ಕಾರಣವಾಗುತ್ತಿವೆ. ಮಹಿಳೆಯರಿಗೆ ಅತ್ಯಾಚಾರದ ಬೆದರಿಕೆ ಹಾಕುವವರನ್ನೇ ಪ್ರಧಾಣಿ ಮೋದಿ ಸಾಮಾಜಿಕ ಜಾಲತಾಣದಲ್ಲಿ ಅನುಸರಿಸುತ್ತಿದ್ದಾರೆ. ಬದಲಾವಣೆ ಮೇಲಿನಿಂದ ಆರಂಭವಾಗಬೇಕೆಂದು ನೀವು ಯೋಚಿಸುವುದಿಲ್ಲವೇ ಎಂದು ರಮ್ಯಾ ಅಕ್ಷಯ್​ ಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.


ರಮ್ಯಾ ನಟ ಅಕ್ಷಯ್​ ಕುಮಾರ್ ಅವರ ಟ್ವೀಟ್​ಗೆ ಪ್ರತಿಕ್ರಿಯಿಸಲು ಕಾರಣವಿದೆ. ಅಕ್ಷಯ್​ ಕುಮಾರ್​ ಮೋದಿ ಅವರೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಜೊತೆಗೆ ಪ್ರಧಾನಿ ಪರಿಹಾರ ನಿಧಿಗೆ ಹಣವನ್ನೂ ನೀಡುತ್ತಿರುತ್ತಾರೆ. ಇದೇ ಕಾರಣದಿಂದ ರಮ್ಯಾ ಟ್ವೀಟ್​ ಮೈಲಕ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.
Published by:Anitha E
First published: