ನವದೆಹಲಿ: ದ್ವೇಷ ಮತ್ತು ಹಿಂಸಾಚಾರ ಅಭಿವೃದ್ಧಿಯ ಶತ್ರುಗಳು. ವಿಭಜನೆ ಹರಡುವುದರಿಂದ ಭಾರತ ಮಾತೆಗೆ ಪ್ರಯೋಜನವಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಇಂದು ಕಾಂಗ್ರೆಸ್ನ ಎರಡು ನಿಯೋಗಗಳು ಗಲಭೆ ನಡೆದ ಈಶಾನ್ಯ ದೆಹಲಿಯ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿತ್ತು. ಇದರಲ್ಲಿ ರಾಹುಲ್ ಗಾಂಧಿ ಒಂದು ನಿಯೋಗದ ನೇತೃತ್ವ ವಹಿಸಿ ಹಿಂಸಾಚಾರ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಈ ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ನಿಯೋಗದಲ್ಲಿ ಕೆ.ಸಿ.ವೇಣುಗೋಪಾಲ್, ಅದೀರ್ ರಂಜನ್ ಚೌಧುರಿ, ಕೆ.ಸುರೇಶ್, ಮುಕುಲ್ ವಾಸ್ನಿಕ್, ಕುಮಾರಿ ಸೆಲ್ಜಾ, ಗೌರವ್ ಗೊಗೊಯ್ ಮತ್ತು ರಣದೀಪ್ ಸುರ್ಜೆವಾಲಾ ಇದ್ದರು. ಈಶಾನ್ಯ ದೆಹಲಿಯ ಬ್ರಿಜ್ಪುರಿ ನಗರದಲ್ಲಿ ಹಿಂಸಾಚಾರದಿಂದ ಧ್ವಂಸಗೊಂಡ ಮತ್ತು ಬೆಂಕಿಗೆ ಆಹುತಿಯಾದ ಖಾಸಗಿ ಶಾಲೆಗೆ ಈ ನಿಯೋಗ ಭೇಟಿ ನೀಡಿತ್ತು.
ಹಿಂಸಾಚಾರದಲ್ಲಿ ಭಾರೀ ಪ್ರಮಾಣದಲ್ಲಿ ಸುಟ್ಟು ಹೋದ 32 ವರ್ಷ ಹಳೆಯದಾದ ಅರುಣ್ ಮಾಡರ್ನ್ ಪಬ್ಲಿಕ್ ಸೀನಿಯರ್ ಸೆಕೆಂಡರಿ ಶಾಲೆಗೆ ಭೇಟಿ ನೀಡಿದ ನಿಯೋಗ ಸುಟ್ಟು ಕರಕಲಾದ ಶಾಲೆಯ ಕೊಠಡಿಗಳನ್ನು ವೀಕ್ಷಿಸಿತು. ಹಾಗೆಯೇ ಸುಟ್ಟು ಹೋದ ಬಸ್ಸುಗಳನ್ನು ವೀಕ್ಷಿಸಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಇದು (ಶಾಲೆ) ಭಾರತದ ಭವಿಷ್ಯ. ದ್ವೇಷ ಮತ್ತು ಹಿಂಸೆ ಅದನ್ನು ಸರ್ವನಾಶ ಮಾಡಿದೆ. ಇದರಿಂದ ಯಾರೊಬ್ಬರಿಗೂ ಪ್ರಯೋಜನವಾಗುವುದಿಲ್ಲ. ದ್ವೇಷ ಮತ್ತು ಹಿಂಸೆ ಅಭಿವೃದ್ಧಿಯ ಶತ್ರುಗಳು. ವಿಭಜನೆಯಿಂದ ಭಾರತ ಸುಡುತ್ತಿದೆ. ಇದರಿಂದ ಭಾರತ ಭಾತೆಗೂ ಪ್ರಯೋಜನವಿಲ್ಲ ಎಂದು ಹೇಳಿದರು.
ಇದನ್ನು ಓದಿ: ಅತ್ಯಾಚಾರದ ಕೇಸ್ ಹಿಂಪಡೆಯಲು ಒಪ್ಪದ ಮಹಿಳೆಗೆ ಥಳಿಸಿ, ಬೆತ್ತಲಾಗಿಸಿ ವಿಡಿಯೋ ಮಾಡಿದ ನೀಚರು
ಹಿಂಸಾಚಾರಕ್ಕೆ ತುತ್ತಾದ ಅದೇ ಶಾಲೆಯ ಪಕ್ಕದಲ್ಲಿರುವ ಮಸೀದಿಗೂ ರಾಹುಲ್ ಗಾಂಧಿ ಮತ್ತು ಇತರೆ ನಾಯಕರು ಭೇಟಿ ನೀಡಿದ್ದರು. ಬ್ರಿಜ್ಪುರಿ ನುಲ್ಲಾಹ ಮೀರಿ ಹೋಗದಂತೆ ಪೊಲೀಸರು ರಾಹುಲ್ ಗಾಂಧಿ ಅವರಿಗೆ ಹೇಳಿದ್ದರು ಎಂದು ಮೂಲಗಳು ತಿಳಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ