HOME » NEWS » National-international » HAS THE CENTRAL GOVERNMENT TRY TO PEOPLES ATTENTION AWAY FROM THE RECESSION ACTOR KAMAL HASAN EXPRESSED DOUBTS MAK

ಆರ್ಥಿಕ ಹಿಂಜರಿತದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಭಾಷೆಯ ಕಿಡಿ ಹೊತ್ತಿಸಿದೆಯೇ?; ಅನುಮಾನ ವ್ಯಕ್ತಪಡಿಸಿದ ಕಮಲಹಾಸನ್

ಪ್ರಸ್ತುತ ಭಾರತದ ಆರ್ಥಿಕ ಪರಿಸ್ಥಿತಿ ತೀರಾ ಚಿಂತಾಜನಕವಾಗಿದೆ. ದೇಶದ ಜಿಡಿಪಿ ದರ ತೀರಾ ಕೆಳಮಟ್ಟಕ್ಕೆ ಕುಸಿದಿದೆ. ನಿರುದ್ಯೋಗದ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದ್ದು, ವಿದ್ಯಾವಂತ ಯುವಕರು ಕೆಲಸವಿಲ್ಲದೆ ಭವಿಷ್ಯದ ಚಿಂತೆಯಲ್ಲಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಜನ ಸಾಮಾನ್ಯರ ಗಮನವನ್ನು ವಾಸ್ತವ ಸಮಸ್ಯೆಯಿಂದ ಬೇರೆಡೆ ಸೆಳೆಯಲು ಬಾಷಾ ಕಿಡಿ ಹೊತ್ತಿಸಲು ಪ್ರಯತ್ನಿಸುತ್ತಿದೆಯೇ? ಎಂದು ನಟ ಕಮಲಹಾಸನ್ ಅನುಮಾನ ವ್ಯಕ್ತಪಡಿಸಿದ್ದಾರೆ.

MAshok Kumar | news18-kannada
Updated:September 17, 2019, 10:32 PM IST
ಆರ್ಥಿಕ ಹಿಂಜರಿತದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಭಾಷೆಯ ಕಿಡಿ ಹೊತ್ತಿಸಿದೆಯೇ?; ಅನುಮಾನ ವ್ಯಕ್ತಪಡಿಸಿದ ಕಮಲಹಾಸನ್
ಕಮಲ್​ ಹಾಸನ್​​
  • Share this:
ಚೆನ್ನೈ (ಸೆಪ್ಟೆಂಬರ್.17); ಪ್ರಸ್ತುತ ಭಾರತ ತೀವ್ರವಾದ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದೆ. ಪರಿಣಾಮ ದೇಶದಾದ್ಯಂತ ಹಿಂದೆಂದೂ ಕಾಣದ ಮಟ್ಟದ ನಿರುದ್ಯೋಗ ತಾಂಡವವಾಡುತ್ತಿದೆ. ಹೀಗಾಗಿ ವಾಸ್ತವ ಸಮಸ್ಯೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ಕೇಂದ್ರ ಸರ್ಕಾರ ಭಾಷೆಯ ವಿಚಾರವನ್ನು ಕೆಣಕುತ್ತಿದೆಯೇ ಎಂದು ತಮಿಳುನಾಡಿನ ನಟ ಮತ್ತು ರಾಜಕಾರಣಿ ಗಂಭೀರ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಸೆಪ್ಟೆಂಬರ್.14 ರ ಹಿಂದಿ ದಿವಸದಂದು ಟ್ವೀಟ್ ಮಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಭಾರತದಲ್ಲಿ ಅಸಂಖ್ಯಾತ ಭಾಷೆಗಳಿವೆ. ಪ್ರತಿಯೊಂದು ಭಾಷೆಗೂ ಅದರದೇಯಾದ ಸಾಂಸ್ಕೃತಿಕ ಶ್ರೀಮಂತಿಕೆ ಇದೆ. ಆದರೆ, ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲು ಏಕ ಭಾಷೆಯ ಅಗತ್ಯವಿದೆ. ದೇಶದಲ್ಲಿ ಅಧಿಕ ಸಂಖ್ಯೆಯ ಜನ ಬಳಸುವ ಹಿಂದಿ ಭಾಷೆಗೆ ದೇಶವನ್ನು ಒಗ್ಗೂಡಿಸುವ ಶಕ್ತಿ ಇದೆ” ಎಂದು ಟ್ವೀಟ್ ಮಾಡಿದ್ದರು.

ಗೃಹ ಸಚಿವ ಅಮಿತ್ ಶಾ ಟ್ವೀಟ್​ಗೆ ಪ್ರತಿಕ್ರಿಯೆ ನೀಡುವ ನಿಟ್ಟಿನಲ್ಲಿ ಸೋಮವಾರ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದ ನಟ ಕಮಲಹಾಸನ್, “ಶಾ, ಸುಲ್ತಾನ್, ಅಥವಾ ಸಾಮ್ರಾಟ್ ಯಾರೇ ಬಂದರೂ ಭಾರತದ ದೇಶದಲ್ಲಿ ಎಲ್ಲೆಡೆ ಅಂತರ್ಗತವಾಗಿರುವ ಏಕತೆಯನ್ನು ಪ್ರತ್ಯೇಕಿಸುವುದು ಸಾಧ್ಯವಿಲ್ಲ. ಹೀಗಾಗಿ ಇಂತಹ ಪ್ರತ್ಯೇಕತಾವಾದಿಗಳ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಜನರಿಗೆ ಎಚ್ಚರಿಕೆ ನೀಡಿದ್ದರು.


ಅಲ್ಲದೆ, ಜಲ್ಲಿಕಟ್ಟು ಸಂದರ್ಭದಲ್ಲಿ ಕೇಂದ್ರದ ನಿಯಮವನ್ನು ವಿರೋಧಿಸಿ ಚೆನ್ನೈನಲ್ಲಿ ನಡೆದದ್ದು ಕೇವಲ ಒಂದು ಪ್ರತಿಭಟನೆಯಷ್ಟೇ. ಆದರೆ, ಮಾತೃಭಾಷೆಯ ವಿಚಾರಕ್ಕೆ ಬಂದರೆ ಇಡೀ ತಮಿಳುನಾಡು ಹಾಗೂ ಭಾರತ ದೇಶ ದೊಡ್ಡದೊಂದು ಯುದ್ಧಕ್ಕೆ ಸಾಕ್ಷಿಯಾಗಲಿದೆ ಹಾಗೂ ಆ ಯುದ್ಧವನ್ನು ಬರಿಸುವ ಶಕ್ತಿ ಯಾರಿಗೂ ಇಲ್ಲ. ನಾವು ಎಲ್ಲಾ ಭಾಷೆಯನ್ನೂ ಗೌರವಿಸುತ್ತೇವೆ ಆದರೆ, ನಮ್ಮ ಭಾಷೆ ಯಾವಾಗಲೂ ಮಾತೃಭಾಷೆ ತಮಿಳು ಆಗಿರುತ್ತದೆ” ಎಂದು ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದರು.

ಈ ಪ್ರಕರಣದ ಕುರಿತು ಇಂದು ಮತ್ತೆ ಕಳವಳ ವ್ಯಕ್ತಪಡಿಸಿರುವ ಕಮಲಹಾಸನ್, “ಪ್ರಸ್ತುತ ಭಾರತದ ಆರ್ಥಿಕ ಪರಿಸ್ಥಿತಿ ತೀರಾ ಚಿಂತಾಜನಕವಾಗಿದೆ. ದೇಶದ ಜಿಡಿಪಿ ದರ ತೀರಾ ಕೆಳಮಟ್ಟಕ್ಕೆ ಕುಸಿದಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದೆ. ಇದು ಜನ ಸಾಮಾನ್ಯರ ಮೇಲೆ ಪರಿಣಾಮ ಬೀರುತ್ತಿದೆ. ನಿರುದ್ಯೋಗದ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದ್ದು, ವಿದ್ಯಾವಂತ ಯುವಕರು ಕೆಲಸವಿಲ್ಲದೆ ಭವಿಷ್ಯದ ಚಿಂತೆಯಲ್ಲಿದ್ದಾರೆ.

ಆರ್ಥಿಕ ಹಿಂಜರಿತ ಪ್ರಸ್ತುತ ದೇಶದ ಅತಿದೊಡ್ಡ ಸಮಸ್ಯೆಯಾಗಿದೆ. ಭವಿಷ್ಯದಲ್ಲಿ ಈ ಸಮಸ್ಯೆ ಮತ್ತಷ್ಟು ಉಲ್ಭಣಿಸುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ವಾಸ್ತವ ಸಮಸ್ಯೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ಕೇಂದ್ರ ಸರ್ಕಾರ ಹೀಗೆ ಭಾಷೆಯ ಕುರಿತ ಕಿಡಿಯನ್ನು ಜನರ ನಡುವೆ ಹರಡಲು ಬಿಟ್ಟಿದೆಯೇ? ಎಂಬ ಅನುಮಾನ ನನಗೆ ಮೂಡುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : ಜಲ್ಲಿಕಟ್ಟು ಒಂದು ಹೋರಾಟವಷ್ಟೇ, ಮಾತೃಭಾಷೆಯ ವಿಚಾರಕ್ಕೆ ಬಂದರೆ ಯುದ್ಧವೇ ಜರುಗಲಿದೆ; ಕೇಂದ್ರವನ್ನು ಎಚ್ಚರಿಸಿದ ಕಮಲಹಾಸನ್

First published: September 17, 2019, 10:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories