Rajasthan: ಮದುವೆಯಾದ ಎರಡೇ ದಿನಕ್ಕೆ ಬಯಲಾಯ್ತು ಪತ್ನಿಯ ರಹಸ್ಯ, ವರ ಕಕ್ಕಾಬಿಕ್ಕಿ, ಕ್ಷಣಾರ್ಧದಲ್ಲಿ ಪೊಲೀಸರ ಎಂಟ್ರಿ!

ರಾಜಸ್ಥಾನದ ಸಿಕಾರ್‌ನಲ್ಲಿ ಮದುವೆಯಾದ ಎರಡು ದಿನಗಳ ನಂತರ, ವಧು ತನ್ನ ಅತ್ತೆಯ ಮನೆಯಿಂದ ಓಡಿಹೋಗಲು ಯತ್ನಿಸಿದ್ದಾಳೆ. ಹೀಗಿರುವಾಗ ಇದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾಳೆ. ಯುವತಿಯ ಪರಿಸ್ಥಿತಿ ಅರಿತ ಕುಟುಂಬಸ್ಥರು ಗೊಂದಲಕ್ಕೀಡಾಗಿದ್ದಾರೆ. ಸದ್ಯ ಪ್ರಕರಣದಲ್ಲಿ ಪೊಲೀಸರು ಎಂಟ್ರಿ ಕೊಟ್ಟಿದ್ದು, ಯುವತಿಯನ್ನು ರಾಜಸ್ಥಾನದಿಂದ ಹರ್ಯಾಣಕ್ಕೆ ಕರೆದೊಯ್ಯಲಾಗಿದೆ.

Haryana News

Haryana News

  • Share this:
ಜೈಪುರ(ಅ.04): ಹರ್ಯಾಣದಿಂದ (Haryana) ಕಿಡ್ನ್ಯಾಪ್​ ಮಾಡಿದ ಯುವತಿಯನ್ನು ದಲ್ಲಾಳಿಗಳು ಸಿಕರ್‌ನ ಖಂಡೇಲಾ ಪ್ರದೇಶದಲ್ಲಿ ವಾಸಿಸುವ ಯುವಕನೊಂದಿಗೆ ಮದುವೆ ಮಾಡಿಸಿದ್ದಾರೆ. ದಲ್ಲಾಳಿಗಳು ಮದುವೆಗಾಗಿ ಹುಡುಗನ ಕುಟುಂಬದಿಂದ 3.3 ಲಕ್ಷ ರೂ ಮೊತ್ತ ಪಡೆದಿದ್ದಾರೆ. ಆದರೆ ಮದುವೆಯಾದ ಎರಡು ದಿನಗಳ ನಂತರ ಹುಡುಗಿ ಮನೆಯಿಂದ ಓಡಿಹೋಗಲು ಪ್ರಯತ್ನಿಸಿದಾಗ, ಹುಡುಗನ ಮನೆಯವರು ಅಕೆಯನ್ನು ಹಿಡಿದಿದ್ದಾರೆ. ಹೀಗಿರುವಾಗ ಯುವತಿ ತನ್ನ ಪರಿಸ್ಥಿತಿಯನ್ನು ವಿವರಿಸಿದ್ದಾಳೆ. ಇನ್ನು ಹರ್ಯಾಣದಲ್ಲೂ ಯುವತಿ ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಹರ್ಯಾಣ ಪೊಲೀಸರು (Haryana Police) ಆಕೆಯನ್ನು ಕರೆದೊಯ್ದಿದ್ದಾರೆ. ಇದೀಗ ವರ ತನಗೆ ಮೋಸ ಮಾಡಿದ ದಲ್ಲಾಳಿಗಳ ವಿರುದ್ಧ ಪೊಲೀಸರಿಗೆ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಖಂಡೇಲಾ ಪ್ರದೇಶದ ನಿವಾಸಿ ರಾಜೇಶ್ ಈ ಬಗ್ಗೆ ವಿವರಿಸಿದ್ದು, ಕೆಲವು ದಿನಗಳ ಹಿಂದೆ ಗಾಯತ್ರಿ ಸರ್ವ ಸಮಾಜ ಫೌಂಡೇಶನ್‌ನಿಂದ ಮದುವೆ ಮಾಡಿಸುವ ಬಗ್ಗೆ ಮೊಬೈಲ್‌ಗೆ ಸಂದೇಶ ಬಂದಿತ್ತು. ಈ ನಂಬರ್​ಗೆ ಕರೆ ಮಾಡಿದಾಗ ಒಬ್ಬ ಮಹಿಳೆ ಮಾತನಾಡಿದ್ದಾಳೆ. ಜುಲೈ 11ರಂದು ಯುವತಿ ಮತ್ತು ಆಕೆಯ ತಾಯಿ ಗ್ರಾಮಕ್ಕೆ ಬಂದಿದ್ದರು. ಅವರ ಜೊತೆ ಗಾಯತ್ರಿ ದೇವಿ ಎಂಬ ಮತ್ತೊಬ್ಬ ಮಹಿಳೆ ಕೂಡ ಬಂದಿದ್ದರು. ಈ ವೇಳೆ ಹುಡುಗ ನಮಗೆ ಇಷ್ಟವಾಗಿದ್ದಾನೆ ಎಂದು ಅವರು ಹೇಳಿದ್ದರು. ಇನ್ನು ಮದುವೆಯ ವ್ಯವಸ್ಥೆಗೆ 1.25 ಲಕ್ಷ ರೂ. ಕೇಳಿದಾಗ ರಾಜೇಶ್ ಮನೆಯವರು ಸವಾಲೆಸೆಯದೆ ಕೊಟ್ಟಿದ್ದರು. ಇದಾದ ಬಳಿಕ ಜೈಪುರಕ್ಕೆ ಬರುವಂತೆ ಹೇಳಿದ್ದರು. ಜುಲೈ 13 ರಂದು ರಾಜೇಶ್‌ನ ಮಾವನಿಗೆ ಗಾಯತ್ರಿದೇವಿಯಿಂದ ಕರೆ ಬಂದಿದ್ದು, ಯುವತಿ ಮದುವೆಗೆ ಬಂದಿದ್ದಾರೆ, ಹುಡುಗನನ್ನು ಕರೆದುಕೊಂಡು ಬನ್ನಿ ಎಂದು ಹೇಳಿದ್ದರು.

ಇದನ್ನೂ ಓದಿ:  ಸಿನಿಮೀಯ ರೀತಿಯಲ್ಲಿ Kidnap: ಪೊಲೀಸರ ವಶದಲ್ಲಿ ಭರ್ಜರಿ-KGF ಸಿನಿಮಾ ಖ್ಯಾತಿಯ ಕಲಾವಿದ

ಓಡಿ ಹೋಗಲು ಯತ್ನಿಸಿದ ವಧು

ಜುಲೈ 13 ರಂದು, ಇಡೀ ಕುಟುಂಬ ಜೈಪುರಕ್ಕೆ ತೆರಳಿತು, ಅಲ್ಲಿ ಗಾಯತ್ರಿ ದೇವಿ ಅವರನ್ನು ಆಗ್ರಾ ರಸ್ತೆಯಲ್ಲಿರುವ ಕಚೇರಿಯಲ್ಲಿ ಭೇಟಿಯಾದರು. ಅಲ್ಲಿದ್ದವರಿಗೆ ರಾಜೇಶನ ಕುಟುಂಬವನ್ನು ಪರಿಚಯಿಸಿದರು. ಗಾಯತ್ರಿ ದೇವಿ ಅಲ್ಲಿ ರಾಜೇಶನ ಕುಟುಂಬವನ್ನು ಹುಡುಗಿ ಪ್ರೀತಿ ಮತ್ತು ಅವಳ ತಾಯಿ ಆರತಿಗೆ ಪರಿಚಯಿಸಿದರು. ಗಾಯತ್ರಿದೇವಿ ಮದುವೆಗೆ ಎರಡೂವರೆ ಲಕ್ಷ ರೂಪಾಯಿ ಹೆಚ್ಚುವರಿಯಾಗಿ ಕೇಳಿದ್ದರು ಎನ್ನಲಾಗಿದೆ. ರಾಜೇಶನ ಮನೆಯವರು ಆಗಲೂ ಹಣ ಕೊಟ್ಟರು. ಜುಲೈ 15 ರಂದು ಗಾಯತ್ರಿ ದೇವಿ ಅವರು ರಾಜೇಶ್ ಮತ್ತು ಅವರ ಕುಟುಂಬವನ್ನು ಜೈಪುರಕ್ಕೆ ಮರಳಿ ಕರೆದು ಮದುವೆ ಮಾಡಿದರು. ಮದುವೆಯಾದ ಒಂದು ದಿನದ ನಂತರ, ವಧು ಮನೆಯಿಂದ ಓಡಿ ಹೋಗಲು ಯತ್ನಿಸಿದ್ದಾಳೆ. ಹೀಗಿರುವಾಗ ರಾಜೇಶ ಆಕೆಯನ್ನು ತಡೆದಿದ್ದಾನೆ. ಮರುದಿನವೂ ಬೆಳಗಿನ ಜಾವ 5 ಗಂಟೆ ಸುಮಾರಿಗೆ ವಧು ಪ್ರೀತಿ ಮನೆಯಿಂದ ಹೊರಹೋಗಲು ಯತ್ನಿಸಿದ್ದು, ಈ ವೇಳೆ ಗ್ರಾಮಸ್ಥರು ತಡೆದಿದ್ದಾರೆ.

ಬಯಲಾಯ್ತು ಕಿಡ್ನ್ಯಾಪ್​ ರಹಸ್ಯ

ಬಳಿಕ ಗ್ರಾಮಸ್ಥರು ವಿಚಾರಿಸಿದಾಗ ವಧು ಪ್ರೀತಿ ತನ್ನನ್ನು ಇಲ್ಲಿ ಅಪಹರಣ ಮಾಡಿ ಕರೆತಂದಿರುವುದಾಗಿ ತಿಳಿಸಿದ್ದಾಳೆ. ಜುಲೈ 9 ರಂದು ಹರಿಯಾಣದಿಂದ ತನ್ನನ್ನು ಅಪಹರಿಸಲಾಯಿತು, ದಾರಿಯಲ್ಲಿ ಕಕಛೋರಿ ತಿನ್ನಲು ಕೊಟ್ಟಿದ್ದರು. ಇದಾದ ಬಳಿಕ ನನಗೆ ಏನು ನಡೆಯಿತೆಂದು ಗೊತ್ತಿಲ್ಲ, ಎಚ್ಚರವಾದಾಗ ಜೈಪುರದಲ್ಲಿದ್ದೆ. ನನ್ನ ಜೊತೆ ಇನ್ನಿಬ್ಬರು ಹುಡುಗಿಯರಿದ್ದರು. ಗಾಯತ್ರಿ ದೇವಿ ಮತ್ತು ಅವರ ಸಹಚರರು ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾರೆ ಎಂದು ವಧು ಪ್ರೀತಿ ಹೇಳಿದ್ದಾರೆ. ತನ್ನ ನಿಜವಾದ ಹೆಸರು ಸಪ್ನಾ. ಇಲ್ಲಿಗೆ ಕತರೆತರುವುದಕ್ಕೂ ಮುನ್ನ ತನ್ನನ್ನು ಜೈಪುರದಲ್ಲಿ ಎರಡು ಸ್ಥಳಗಳಲ್ಲಿ ಇರಿಸಲಾಗಿತ್ತು ಎಂದು ಯುವತಿ ಹೇಳಿದ್ದಾಳೆ. ಇದಾದ ಬಳಿಕ ರಾಜೇಶ್ ಮನೆಯವರು ವಧು ಪ್ರೀತಿಯನ್ನು ಠಾಣೆಗೆ ಕರೆತಂದಿದ್ದಾರೆ. ಜುಲೈ 29 ರಂದು ಹರಿಯಾಣ ಪೊಲೀಸರು ಆಕೆಯನ್ನು ಕರೆದೊಯ್ದಿದ್ದಾರೆ.

ಇದನ್ನೂ ಓದಿ:  ಮದುವೆಯಾದ 6 ದಿನದಲ್ಲಿಯೇ ಮಗಳನ್ನ Kidnap ಮಾಡಿದ ಪೋಷಕರು: ಯಾಕೆ ಗೊತ್ತಾ?

ಯುವತಿಯನ್ನು ಕರೆದೊಯ್ದ ಹರ್ಯಾಣ ಪೊಲೀಸರು

ಪ್ರಕರಣದಲ್ಲಿ, ಖಂಡೇಲಾ ಪೊಲೀಸ್ ಅಧಿಕಾರಿ ಮುಖೇಶ್ ಕುಮಾರ್ ಅವರು ಹರಿಯಾಣದಿಂದ ಹುಡುಗಿ ಕಾಣೆಯಾಗಿದ್ದಾರೆ ಎಂದು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹರಿಯಾಣ ಪೊಲೀಸರು ಆಕೆಯನ್ನು ಕರೆದೊಯ್ದಿದ್ದಾರೆ. ಮತ್ತೊಂದೆಡೆ ರಾಜೇಶ್ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Published by:Precilla Olivia Dias
First published: