ಸೋನೆಪತ್​ನ 21 ವರ್ಷದ ಟಿಕ್ ಟಾಕ್ ಸ್ಟಾರ್ ಕೊಲೆ; ಕಾರಣವಾಯಿತಾ ಲವ್ ಬ್ರೇಕಪ್?

ಆರಿಫ್ ತನಗೆ ಬಹಳ ಕಿರುಕುಳ ನೀಡುತ್ತಿದ್ದನೆಂದು ಶಿವಾನಿ ನನಗೆ ಹೇಳಿದ್ದಳು. ಈ ಕಾರಣದಿಂದ ಆಕೆ ಆತನೊಂದಿಗೆ ಮಾತನಾಡುವುದನ್ನ ನಿಲ್ಲಿಸಿದ್ದಳು ಎಂದು ಆಕೆಯ ತಂದೆ ವಿನೋದ್ ಹೇಳುತ್ತಾರೆ.

news18-kannada
Updated:June 29, 2020, 4:37 PM IST
ಸೋನೆಪತ್​ನ 21 ವರ್ಷದ ಟಿಕ್ ಟಾಕ್ ಸ್ಟಾರ್ ಕೊಲೆ; ಕಾರಣವಾಯಿತಾ ಲವ್ ಬ್ರೇಕಪ್?
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಜೂನ್ 29): ಒನ್ ಸೈಡ್ ಲವ್​ನಿಂದ ಕ್ರುದ್ಧಗೊಂಡ ಯುವಕನೊಬ್ಬ 21 ವರ್ಷದ ಟಕ್ ಟಾಕ್ ಸ್ಟಾರ್ ಶಿವಾನಿಯನ್ನ ಕೊಂದಿರುವ ಘಟನೆ ಹರಿಯಾಣ ಜಿಲ್ಲೆಯ ಸೋನೆಪತ್ ಜಿಲ್ಲೆಯಲ್ಲಿ ನಡೆದಿದೆ. ಅರಿಫ್ ಎಂಬಾತ ತನ್ನ ಮಗಳನ್ನ ಕೊಂದಿದ್ದಾನೆ ಎಂದು ಶಿವಾನಿಯ ತಂದೆ ವಿನೋದ್ ಅವರು ಕುಂಡ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ಧಾರೆ. ನಿನ್ನೆ ಭಾನುವಾರ ಶಿವಾನಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಲಾಗಿರುವುದು ತಿಳಿದುಬಂದಿದೆ. ಪೊಲೀಸರು ಆರೋಪಿ ಆರಿಫ್​ನನ್ನು ಹಿಡಿಯಲು ಬಲೆ ಬೀಸಿದ್ಧಾರೆ.

ವಿನೋದ್ ನೀಡಿರುವ ದೂರಿನ ಪ್ರಕಾರ, ಶಿವಾನಿ ಮತ್ತು ಆರಿಫ್ ಇಬ್ಬರೂ ಸ್ನೇಹಿತರಾಗಿದ್ದರು. ಆದರೆ, ಆರಿಫ್​ನ ಅನುಚಿತ ವರ್ತನೆಯಿಂದಾಗಿ ಶಿವಾನಿ ಕಳೆದ 15 ದಿನಗಳಿಂದ ದೂರವಾಗಿದ್ದಳು. ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಳು. ಇದೇ ಕೋಪದಲ್ಲಿ ಆತ ಕೊಲೆ ಮಾಡಿರಬಹುದು.

ಆರಿಫ್ ತನಗೆ ಬಹಳ ಕಿರುಕುಳ ನೀಡುತ್ತಿದ್ದನೆಂದು ಶಿವಾನಿ ನನಗೆ ಹೇಳಿದ್ದಳು. ಈ ಕಾರಣದಿಂದ ಆಕೆ ಆತನೊಂದಿಗೆ ಮಾತನಾಡುವುದನ್ನ ನಿಲ್ಲಿಸಿದ್ದಳು ಎಂದು ವಿನೋದ್ ಹೇಳುತ್ತಾರೆ.

ಇದನ್ನೂ ಓದಿ: ಸೋಂಕಿತನೊಂದಿಗೆ ಕ್ರಿಕೆಟ್ ಆಡಿದ 11 ಮಂದಿಗೆ ಕೊರೋನಾ ಭೀತಿ; ಕ್ವಾರಂಟೈನ್​ನಲ್ಲಿ ಯುವಕರು

ಕುಂಡ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯು ಶಿವಾನಿ ವಿಚಾರದಲ್ಲಿ ಬಹಳ ಹಠಮಾರಿಯಾಗಿದ್ದಂತಿದೆ. ತನ್ನೊಂದಿಗೆ ಮಾತು ಬಿಟ್ಟಿದ್ದನ್ನ ಸಹಿಸಿಕೊಳ್ಳಲಾಗದೇ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ತೋರುತ್ತದೆ ಎಂದು ಕುಂಡ್ಲಿಯ ಠಾಣಾಧಿಕಾರಿ ಅಭಿಪ್ರಾಯಪಟ್ಟಿದ್ಧಾರೆ.ಶಿವಾನಿ ಟಿಕ್ ಟಾಕ್​ನಲ್ಲಿ ಸಾಕಷ್ಟು ಖ್ಯಾತಿ ಪಡೆದಿದ್ದಾರೆ ಈಕೆಯ ವಿಡಿಯೋಗಳು ಬಹಳ ಜನಪ್ರಿಯವಾಗಿವೆ. ಕುಂಡ್ಲಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ತಂದೆ ಮತ್ತು ಸಹೋದರಿಯೊಂದಿಗೆ ಈಕೆ ವಾಸವಾಗಿದ್ದಳು. ಫ್ಲಾಟ್​ವೊಂದರಲ್ಲಿ ಸಲೂನ್ ಕೂಡ ಈಕೆ ನಡೆಸುತ್ತಿದ್ದಳೆನ್ನಲಾಗಿದೆ.
First published:June 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading