ಹರಿಯಾಣ: ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವಿನ ಸಂಬಂಧವು ಪವಿತ್ರವಾದುದು ಎಂದು ಹೇಳಲಾಗುತ್ತದೆ. ಆದರೆ ಹರಿಯಾಣದ ಪಾಣಿಪತ್ ನಗರದಲ್ಲಿ ಈ ಸಂಬಂಧವು ಕಳಂಕಿತವಾಗಿದೆ. ಅಲ್ಲಿ ಬೋಧನಾ ಶಿಕ್ಷಕಿಯೊಬ್ಬಳು ಹನ್ನೊಂದನೇ ತರಗತಿಯ ವಿದ್ಯಾರ್ಥಿಯೊಂದಿಗೆ ಓಡಿಹೋಗಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಕಳೆದ ವಾರ ಖಾಸಗಿ ಶಾಲಾ ಶಿಕ್ಷಕಿ ಅಪ್ರಾಪ್ತ ವಯಸ್ಕ ಹುಡುಗನೊಂದಿಗೆ ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ನಾಪತ್ತೆಯಾದ ನಂತರ, ವಿದ್ಯಾರ್ಥಿಯ ಪೋಷಕರು ಆಕೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಮಹಿಳೆ ಕಳೆದ ಎರಡು ಮೂರು ತಿಂಗಳಿನಿಂದ ಮಗನಿಗೆ ಟ್ಯೂಷನ್ ನೀಡುತ್ತಿದ್ದಳು. ಈ ವೇಳೆ ಆತನ ಜೊತೆ ಸಲುಗೆ ಬೆಳೆಸಿ ಇದೀಗ ಓಡಿ ಹೋಗಿದ್ದಾಳೆ ಎಂದು ಪೋಷಕರು ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.
ಪೋಷಕರ ಪ್ರಕಾರ, ಮೇ 29 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವರ 17 ವರ್ಷದ ಮಗ ದೇಸರಾಜ್, ಕಾಲೋನಿಯಲ್ಲಿರುವ ತನ್ನ ಶಿಕ್ಷಕಿಯ ಮನೆಗೆ ಹೋಗಿದ್ದಾನೆ. ಲಾಕ್ಡೌನ್ ಸಮಯದಲ್ಲಿ, ಅವರು ಪ್ರತಿದಿನ ಸುಮಾರು ನಾಲ್ಕು ಗಂಟೆಗಳ ಕಾಲ ಆತನಿಗೆ ಪಾಠ ಕಲಿಸುತ್ತಿದ್ದರು. ಆದರೆ, ಆ ದಿನ ಸಂಜೆಯಾದರೂ ಆತ ಮನೆಗೆ ಹಿಂದಿರುಗದಿದ್ದನ್ನು ಗಮನಿಸಿ ಗಾಬರಿಯಾಗಿದ್ದ ಪೋಷಕರು ಕೊನೆಗೆ ಪೊಲೀಸರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ವಿಚ್ಚೇಧನದ ನಂತರ ಅವಳು ತನ್ನ ಹೆತ್ತವರೊಂದಿಗೆ ಆ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಘಟನೆಯ ನಂತರ ಶಿಕ್ಷಕಿಯ ಕುಟುಂಬವು ಏನನ್ನೂ ಬಹಿರಂಗಪಡಿಸಲಿಲ್ಲ. ಆದರೆ, ಆಕೆಯ ತಂದೆ ಹುಡುಗ ಜೊತೆ ತಮ್ಮ ಮಗಳು ಓಡಿಹೋಗಿರುವದನ್ನು ಹುಡುಗನ ಪೋಷಕರಿಗೆ ನಂತರ ತಿಳಿಸಿದ್ದಾರೆ. ಆನಂತರ ಬಾಲಕನ ಪೋಷಕರು ಕೋಟೆ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ದೂರಿನ ಆಧಾರದ ಮೇಲೆ, 20 ರ ಹರೆಯದ ಮಹಿಳೆಯ ಮೇಲೆ ಅಪಹರಣ ಪ್ರಕರಣ ದಾಖಲಿಸಲಾಗಿದೆ. ಓಡಿ ಹೋಗುವಾಗ ಅವರಲ್ಲಿ ಯಾರೂ ಯಾವುದೇ ಬೆಲೆಬಾಳುವ ವಸ್ತುಗಳನ್ನು ಹೊಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಾಪತ್ತೆಯಾದಾಗ ಮಹಿಳೆ ಬೆರಳಿನಲ್ಲಿ ಚಿನ್ನದ ಉಂಗುರ ಮಾತ್ರ ಇತ್ತು. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಇವರಿಬ್ಬರ ಹುಡುಕಾಟದಲ್ಲಿದ್ದಾರೆ. ಆದಾಗ್ಯೂ, ಅವರು ಇರುವ ಸ್ಥಳದ ಬಗ್ಗೆ ಯಾವುದೇ ಸುಳಿವು ಕಂಡುಬಂದಿಲ್ಲ. ನಾಪತ್ತೆಯಾದಾಗಿನಿಂದ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ.
ತನಿಖಾ ಅಧಿಕಾರಿ ರಾಣಾ ಪ್ರತಾಪ್ ಪ್ರಕಾರ, ಪೊಲೀಸರು ಶಿಕ್ಷಕ ಮತ್ತು ವಿದ್ಯಾರ್ಥಿ ಇಬ್ಬರ ಮೊಬೈಲ್ ಸ್ಥಳವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಪ್ರಕರಣದಲ್ಲಿ ಕೆಲವು ಮಾಹಿತಿ ಬಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ