• Home
  • »
  • News
  • »
  • national-international
  • »
  • Cough Syrup: 66 ಮಕ್ಕಳ ಸಾವು; ಈ 4 ಕೆಮ್ಮಿನ ಸಿರಪ್‌ಗಳ ಉತ್ಪಾದನೆ ಬಂದ್

Cough Syrup: 66 ಮಕ್ಕಳ ಸಾವು; ಈ 4 ಕೆಮ್ಮಿನ ಸಿರಪ್‌ಗಳ ಉತ್ಪಾದನೆ ಬಂದ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಔಷಧವನ್ನು ಸೇವಿಸಿ ಉಂಟಾಗುವ ಮತ್ತಷ್ಟು ಸಾವು ನೋವುಗಳನ್ನು ತಡೆಯುವುದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಈ ಉತ್ಪನ್ನಗಳನ್ನು ಪತ್ತೆಹಚ್ಚಲು ಹಾಗೂ ಬಳಕೆಯಿಂದ ತೆಗೆದುಹಾಕುವಂತೆ ದೇಶಗಳಿಗೆ ಶಿಫಾರಸು ಮಾಡಿದೆ.

  • News18 Kannada
  • Last Updated :
  • Bangalore, India
  • Share this:

ಭಾರತದ ಔಷಧ ಕಂಪೆನಿಯು ತಯಾರಿಸಿರುವ ಕೆಮ್ಮಿನ ಸಿರಪ್‌ಗಳನ್ನು ಸೇವಿಸಿ ಗ್ಯಾಂಬಿಯಾದಲ್ಲಿ 66 ಮಕ್ಕಳು ಸಾವನ್ನಪ್ಪಿರಬಹುದು ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ವರದಿ ಮಾಡಿದ ಒಂದು ವಾರದ ನಂತರ ಹರಿಯಾಣ ಸರಕಾರವು ಅವುಗಳ ಉತ್ಪಾದನೆಯನ್ನು ನಿಲ್ಲಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಹರಿಯಾಣ (Haryana Cough Syrups) ಮೂಲದ ಮೈಡೆನ್ ಫಾರ್ಮಾಸ್ಯುಟಿಕಲ್ಸ್‌ ಕಂಪೆನಿಯು ಸಿರಪ್ ತಯಾರಿಯಲ್ಲಿ (Cough Syrups) ಪ್ರಮುಖ ಅಕ್ರಮಗಳನ್ನು ನಡೆಸಿದೆ ಎಂಬುದು ಪತ್ತೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿರುವಂತೆ ಈ ಔಷಧಿಗಳು ಮೈಡೆನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಉತ್ಪಾದಿಸಿದ ಔಷಧಗಳು ಕೆಮ್ಮು ಮತ್ತು ಶೀತ ಸಿರಪ್‌ಗಳಾಗಿವೆ.


ವಿಶ್ವಸಂಸ್ಥೆ ಭಾರತದಲ್ಲಿನ ಕಂಪನಿ ಹಾಗೂ ನಿಯಂತ್ರಕ ಅಧಿಕಾರಿಗಳೊಂದಿಗೆ ಹೆಚ್ಚಿನ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ. ಸಿರಪ್ ಸೇವಿಸಿ ಮರಣಹೊಂದಿರುವ ಮಕ್ಕಳ ಕುಟುಂಬಸ್ಥರಿಗೆ ಇದೊಂದು ಆಘಾತಕಾರಿಯಾಗಿರುವ ಪರಿಸ್ಥಿತಿಯಾಗಿದ್ದು ನಮಗೂ ದುಃಖವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.


ಇತರ ದೇಶಗಳಿಗೂ ಔಷಧಗಳ ವಿತರಣೆ
ಕಲುಷಿತ ಉತ್ಪನ್ನಗಳನ್ನು ಗ್ಯಾಂಬಿಯಾದಲ್ಲಿ ಮಾತ್ರವೇ ಪತ್ತೆಮಾಡಲಾಗಿದ್ದರೂ ಇತರ ದೇಶಗಳಿಗೂ ಔಷಧಗಳ ವಿತರಣೆಯಾಗಿದೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.


ಈ ಔಷಧವನ್ನು ಸೇವಿಸಿ ಉಂಟಾಗುವ ಮತ್ತಷ್ಟು ಸಾವು ನೋವುಗಳನ್ನು ತಡೆಯುವುದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಈ ಉತ್ಪನ್ನಗಳನ್ನು ಪತ್ತೆಹಚ್ಚಲು ಹಾಗೂ ಬಳಕೆಯಿಂದ ತೆಗೆದುಹಾಕುವಂತೆ ದೇಶಗಳಿಗೆ ಶಿಫಾರಸು ಮಾಡಿದೆ.


ಸಿರಪ್ ತಯಾರಿಕೆಯಲ್ಲಿ ಕಂಡುಬಂದಿರುವ 12 ನ್ಯೂನ್ಯತೆಗಳು
ವಿಶ್ವ ಆರೋಗ್ಯ ಸಂಸ್ಥೆ ಉಲ್ಲೇಖಿಸಿರುವ ಸೋನಿಪತ್‌ನ ಫಾರ್ಮಾಸ್ಯುಟಿಕಲ್ಸ್ ಕಂಪನಿಯ 3 ಔಷಧಿಗಳ ಮಾದರಿಗಳನ್ನು ಕೋಲ್ಕತ್ತಾದ ಸೆಂಟ್ರಲ್ ಡ್ರಗ್ ಲ್ಯಾಬ್‌ಗೆ ಕಳುಹಿಸಲಾಗಿದೆ. ವರದಿಗಳು ಇನ್ನೂ ಬಂದಿಲ್ಲ, ವರದಿಗಳು ದೊರೆತ ಒಡನೆಯೇ ಕ್ರಮ ತೆಗೆದುಕೊಳ್ಳಲಾಗುವುದು, ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.


ಆದರೂ ಕೇಂದ್ರ ಮತ್ತು ಹರಿಯಾಣ ರಾಜ್ಯ ಔಷಧ ಇಲಾಖೆಗಳ ಜಂಟಿ ತಪಾಸಣೆಯಲ್ಲಿ ಸಿರಪ್ ತಯಾರಿಕೆಯಲ್ಲಿ ಸುಮಾರು 12 ನ್ಯೂನತೆಗಳು ಕಂಡುಬಂದಿವೆ. ಈ ಅಂಶವನ್ನೇ ಗಮನದಲ್ಲಿರಿಸಿಕೊಂಡು ಸಿರಪ್‌ಗಳ ಒಟ್ಟು ಉತ್ಪಾದನೆಯನ್ನು ನಿಲ್ಲಿಸಲು ನಿರ್ಧರಿಸಲಾಗಿದೆ ಎಂದು ವಿಜ್ ತಿಳಿಸಿದ್ದಾರೆ.


ಕಂಪನಿಗೆ ಶೋಕಾಸ್ ನೋಟೀಸ್ ಜಾರಿ
ಕಂಪನಿಗೆ ಈ ಕುರಿತು ಶೋಕಾಸ್ ನೋಟೀಸ್ ಅನ್ನು ಜಾರಿ ಮಾಡಿದ್ದು ಪ್ರಶ್ನಾತೀತವಾಗಿರುವ ಔಷಧಿಗಳನ್ನು ತಯಾರಿಸಲು ಹಾಗೂ ಪರೀಕ್ಷಿಸಲು ಬಳಸುವ ಉಪಕರಣಗಳು ಹಾಗೂ ಉಪಕರಣಗಳ ದಾಖಲೆಯನ್ನು ತಯಾರಿಸಲು ಸಾಧ್ಯವಿಲ್ಲ ಎಂಬುದಾಗಿ ಉಲ್ಲೇಖಿಸುತ್ತದೆ.


ಇದನ್ನೂ ಓದಿ: Muslim Marriage: ಮುಸ್ಲಿಂ ಪುರುಷರ ಮದುವೆ ಬಗ್ಗೆ ಹೈಕೋರ್ಟ್​ನಿಂದ ಮಹತ್ವದ ಆದೇಶ


ಕೆಮ್ಮಿನ ಸಿರಪ್‌ಗಳ ತಯಾರಿಕೆಗಾಗಿ ಸ್ವಾಧೀನಪಡಿಸಿಕೊಂಡ ಅಪಾಯಕಾರಿ ರಾಸಾಯನಿಕಗಳ ಸಂಗ್ರಹ ಸಂಖ್ಯೆಗಳನ್ನು ಉಲ್ಲೇಖಿಸಲಾಗಿಲ್ಲ. ರಾಸಾಯನಿಕಗಳಲ್ಲಿ ಪ್ರೊಪಿಲೀನ್ ಗ್ಲೈಕಾಲ್, ಸೋರ್ಬಿಟೋಲ್ ಸೊಲ್ಯೂಷನ್ ಮತ್ತು ಸೋಡಿಯಂ ಮೀಥೈಲ್ ಪ್ಯಾರಾಬೆನ್ ಸೇರಿವೆ ಎಂಬುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಸಂದೇಹಾಸ್ಪದವಾಗಿರುವ ಸಿರಪ್‌ಗಳ ತಯಾರಿಕೆ ಯಲ್ಲಿನ ಪ್ರಕ್ರಿಯೆ ಮತ್ತು ವಿಧಾನಗಳನ್ನು ಮೌಲ್ಯೀಕರಿಸಲು ಕಂಪನಿಯು ವಿಫಲವಾಗಿದೆ. ಪ್ರೊಪಿಲೀನ್ ಗ್ಲೈಕೋಲ್‌ನ ಬ್ಯಾಚ್ ಅನ್ನು ಕಂಪನಿಯು ವಿಶ್ಲೇಷಿಸಿದೆ. ಪ್ರಮಾಣಿತ ಗುಣಮಟ್ಟ ಎಂದು ಘೋಷಿಸಿದ್ದರೂ ಇದು ಕೆಲವು ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿದೆ.


ಪರೀಕ್ಷಾ ವರದಿಗಳನ್ನು ಒದಗಿಸದೇ ಇರುವ ಕಂಪನಿ
ಸಂದೇಹಾಸ್ಪದ ಕೆಮ್ಮು ಸಿರಪ್‌ಗಳ ಕುರಿತು ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳಿಗೆ ಯಾವುದೇ ಪ್ರಕ್ರಿಯೆಯಲ್ಲಿನ ಪರೀಕ್ಷಾ ವರದಿಗಳನ್ನು ಒದಗಿಸಲಾಗಿಲ್ಲ ಎಂಬುದಾಗಿ ಅಧಿಕಾರಿಗಳು ಹೇಳಿದ್ದಾರೆ. ಉತ್ಪನ್ನದ ದಿನಾಂಕ ಹಾಗೂ ನೀಡಲಾದ ಉತ್ಪನ್ನ ಅನುಮತಿಗಳಲ್ಲಿ ವ್ಯತ್ಯಾಸಗಳಿವೆ ಎಂಬುದಾಗಿಯೂ ತನಿಖೆಯಲ್ಲಿ ಪತ್ತೆಯಾಗಿದೆ.


ಇದನ್ನೂ ಓದಿ: Explained: ದೇವರ ನಾಡಿನ ನರಭಕ್ಷಕರು! ಇದು ರಿಯಲ್ ‘ನೀಲಾಂಬರಿ’ ಕಥೆ!


ಹರಿಯಾಣ ರಾಜ್ಯ ಡ್ರಗ್ಸ್ ಕಂಟ್ರೋಲರ್ (ಹರಿಯಾಣ ರಾಜ್ಯ ಔಷಧ ನಿಯಂತ್ರಕ) ಕಂಪನಿಗೆ ನೀಡಿರುವ ಶೋಕಾಸ್‌ಗೆ ಪ್ರತಿಕ್ರಿಯೆ ನೀಡಲು ಸಂಸ್ಥೆಗೆ ಏಳು ದಿನಗಳ ಕಾಲಾವಕಾಶವನ್ನು ನೀಡಿದ್ದು, ಪ್ರತಿಕ್ರಿಯೆಯನ್ನು ಆಧರಿಸಿ ಉತ್ಪಾದನಾ ಪರವಾನಗಿಯನ್ನು ಅಮಾನತುಗೊಳಿಸಬಹುದು ಅಥವಾ ರದ್ದುಗೊಳಿಸಬಹುದು ಮತ್ತು ಮುಂದಿನ ಕಾನೂನು ಕ್ರಮ ಕೈಗೊಳ್ಳಬಹುದು ಎಂಬುದಾಗಿ ವರದಿಗಳು ತಿಳಿಸಿವೆ.

Published by:ಗುರುಗಣೇಶ ಡಬ್ಗುಳಿ
First published: