Haryana politics: ಎಲ್ಲೆನಾಬಾದ್ ಉಪಚುನಾವಣೆ: ರಾಷ್ಟ್ರ ರಾಜಕಾರಣದ ದಿಕ್ಸೂಚಿಯಾಗಲಿದೆಯೇ?!

ಲಖಿಂಪುರ್ ಖೇರಿ ಹಿಂಸಾಚಾರದ ಬಗ್ಗೆ ರೈತರ ಪ್ರತಿಭಟನೆ ತೀವ್ರಗೊಂಡ ನಂತರ ಇದು ಮೊದಲ ಪ್ರಮುಖ ಚುನಾವಣಾ ಪರೀಕ್ಷೆಯಾಗಿದೆ.

ಎಲ್ಲೆನಾಬಾದ್ ಉಪಚುನಾವಣೆ

ಎಲ್ಲೆನಾಬಾದ್ ಉಪಚುನಾವಣೆ

  • Share this:
 Haryana politics: ಮೇಲ್ನೋಟಕ್ಕೆ ಇದು ಇನ್ನೊಂದು ಉಪಚುನಾವಣೆ. ಆದರೆ ಅಕ್ಟೋಬರ್ 30 ರಂದು ಎಲ್ಲೆನಾಬಾದ್ ಉಪಚುನಾವಣೆಯು (Ellenabad bypoll) ಕೇಂದ್ರದ ಹೊಸ ಕೃಷಿ ಮಾರುಕಟ್ಟೆ ಕಾನೂನುಗಳ ವಿರುದ್ಧ ನಡೆಯುತ್ತಿರುವ ಹೈ-ವೋಲ್ಟೇಜ್ ರೈತರ ಪ್ರತಿಭಟನೆಯ ಮಧ್ಯೆ ನಡೆಯುತ್ತಿರುವ ಕಾರಣ ಅತ್ಯಂತ ಕುತೂಹಲಕಾರಿ ಚುನಾವಣೆಯಾಗಿ ಮಾರ್ಪಟ್ಟಿದೆ. ಹರಿಯಾಣ ರಾಜಕೀಯದ ಮೇಲೆ ದೀರ್ಘಕಾಲೀನ ಪರಿಣಾಮವನ್ನು ಈ ಉಪ ಚುನಾವಣೆ ಬೀರುತ್ತದೆ ಎಂದು ರಾಜಕೀಯ ಪಂಡಿತರು ಲೆಕ್ಕಚಾರ ಹಾಕುತ್ತಾ ಕುಳಿತಿದ್ದಾರೆ.

ನವೆಂಬರ್ 2 ಕ್ಕೆ ಮತ ಎಣಿಕೆ ನಿಗದಿಯಾಗಿದ್ದು, ಈ ಕ್ಷೇತ್ರದ ಉಪ ಚುನಾವಣೆ ಅಕ್ಟೋಬರ್ 30 ರಂದು ನಡೆಯುತ್ತದೆ. ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್ಎಲ್​ಡಿ) ಮತ್ತು ರಾಜ್ಯದಲ್ಲಿ ಬಿಜೆಪಿ-ಜೆಜೆಪಿ ಮೈತ್ರಿಕೂಟಕ್ಕೆ ಉಪ ಚುನಾವಣೆಯಲ್ಲಿ ಒಂದು ನಿರ್ಣಾಯಕವಾದ ಆಟವಾಗಲಿದೆ.


ಚೌಟಾಲಾಗೆ ಇದು ಸುಲಭದ ತುತ್ತಲ್ಲ

ಐಎನ್‌ಎಲ್‌ಡಿಯ ಏಕೈಕ ಶಾಸಕ ಅಭಯ್ ಚೌಟಾಲಾ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಿ ಜನವರಿಯಲ್ಲಿ ರಾಜೀನಾಮೆ ನೀಡಿದ ನಂತರ ಎಲ್ಲೆನಾಬಾದ್ ಸೀಟು ಖಾಲಿಯಾಯಿತು. ಈ ಕರಾಳ ಕಾನೂನು ವಿರೋಧಿಸಿ ಅಧಿಕಾರ ತೊರೆದ ರಾಜ್ಯದ ಮೊದಲ ಶಾಸಕರಾಗಿದ್ದಾರೆ. ಆದರೆ ಈ ಪ್ರದೇಶದಲ್ಲಿ ಒಂದು ಅಸಾಧಾರಣ ರಾಜಕೀಯ ಶಕ್ತಿಯಾಗಿದ್ದರೂ, ಕುಟುಂಬದ ಪ್ರಾಬಲ್ಯದ ಪ್ರಭಾವದಿಂದ ಸತತ ನಾಲ್ಕನೇ ಅವಧಿಗೆ ಪ್ರಯತ್ನಿಸುತ್ತಿರುವ ಚೌಟಾಲಾಗೆ ಇದು ಸುಲಭದ ತುತ್ತಾಗುವುದಿಲ್ಲ ಎಂದು ವೀಕ್ಷಕರು ಹೇಳುತ್ತಾರೆ.

ಅವರು ಬಿಜೆಪಿ-ಜನನಾಯಕ್ ಜನತಾ ಪಾರ್ಟಿ (ಜೆಜೆಪಿ) ಮತ್ತು ಕಾಂಗ್ರೆಸ್-ಗೋವಿಂದ್ ಕಂದಾ ಮತ್ತು ಪವನ್ ಬೆನಿವಾಲ್ ಅವರಂತಹ ಪ್ರಬಲ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿದ್ದಾರೆ.


ಚೌಟಾಲಾ ರಾಜಕೀಯಕ್ಕೆ ತಿರುವು

ಚೌಟಾಲಾ ಅವರ ಗೆಲುವು, ಅವರ ರಾಜೀನಾಮೆ ಮತ್ತು ರೈತರ ಬೆಂಬಲದ ಅನುಮೋದನೆ ಇಲ್ಲಿ ಪ್ರಮುಖವಾಗಿ ಕಾಣುತ್ತದೆ. ಹರಿಯಾಣ ರಾಜಕೀಯದಲ್ಲಿ INLD ಯನ್ನು ಜೀವಂತವಾಗಿರಿಸಲು ಇದೂ ಒಂದು ಪ್ರಮುಖ ಅಂಶವಾಗಿದೆ. ಸೋಲು ಏನಾದರೂ ಉಂಟಾದರೆ ಒಂದು ಕುಟುಂಬದ ಭದ್ರಕೋಟೆ ಹಾಗೂ ಒಂದು ಜನಪ್ರಿಯ ಸಮಸ್ಯೆಯ ಮೇಲೆ ರಾಜೀನಾಮೆ ನೀಡಿದಂತಹ ನಾಟಕೀಯ ಬೆಳವಣಿಗೆಯ ಹೊರತಾಗಿಯೂ ಪಕ್ಷದ ಭವಿಷ್ಯದ ಮತ್ತು ಪ್ರಸ್ತುತತೆಯ ಮೇಲೆ ದೊಡ್ಡ ಪೆಟ್ಟು ಬೀಳುತ್ತದೆ ಎಂದು ಹೇಳಲಾಗುತ್ತಿದೆ.


ಲಖಿಂಪುರ್ ಖೇರಿ ಹಿಂಸಾಚಾರ ಪರಿಣಾಮ ಬೀರುವ ಸಾಧ್ಯತೆ

 ಯುಪಿಯಲ್ಲಿ ಲಖಿಂಪುರ್ ಖೇರಿ ಹಿಂಸಾಚಾರದ ಬಗ್ಗೆ ರೈತರ ಪ್ರತಿಭಟನೆ ತೀವ್ರಗೊಂಡ ನಂತರ ಇದು ಮೊದಲ ಪ್ರಮುಖ ಚುನಾವಣಾ ಪರೀಕ್ಷೆಯಾಗಿದೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಂದಾ ವಿರುದ್ಧ ರೈತ ಸಂಘಟನೆಗಳು ಸೋಲಿಸಲು ನಿರ್ಧರಿಸಿದರೂ,  ಮೊದಲು ಇದ್ದಂತಹ ಪ್ರತಿಭಟನೆಯ ಕಾವು ಈಗ ದುರ್ಬಲವಾಗಿದೆ. ಇದೂ ಸಹ ಯಾರಿಗೆ ವರದಾನವಾಗಲಿದೆ ಎನ್ನುವುದು ಸಹ ಯಕ್ಷಪ್ರಶ್ನೆಯಾಗಿ ಉಳಿದಿದೆ.


ಇದನ್ನು ಓದಿ: ಕಡೆಗೂ ಆಗ್ರಾಕ್ಕೆ ಭೇಟಿ ನೀಡಲು ಪ್ರಿಯಾಂಕಾ ಗಾಂಧಿಗೆ ಅನುಮತಿ

ಅಧಿಕಾರ ಹಿಡಿಯುವ ವಿಶ್ವಾಸದಲ್ಲಿ ಬಿಜೆಪಿ

ಗೋವಿಂದ್, ವಿವಾದಿತ ಶಾಸಕ ಗೋಪಾಲ್ ಕಂದಾ ಅವರ ಸಹೋದರ, ಇತ್ತೀಚೆಗೆ ಬಿಜೆಪಿಗೆ ಪ್ರವೇಶ ಪಡೆದಿದ್ದಾರೆ. ಎಲ್ಲಾನಾಬಾದ್ ಅನ್ನು ಒಳಗೊಂಡಿರುವ ಸಿರ್ಸಾ ಲೋಕಸಭಾ ಕ್ಷೇತ್ರದಲ್ಲಿ ಸಹೋದರರು ಸಾಕಷ್ಟು ಹಿಡಿತ ಹೊಂದಿದ್ದಾರೆ. ಆದರೆ ಈ ಚುನಾವಣೆಯ ಗೆಲುವು ಪ್ರತಿಭಟನೆಗಳ ನಡುವಿನ ಯಾವುದೇ ಕಾರಣ ಮತ್ತು ಪರಿಣಾಮದ ಸಿದ್ಧಾಂತಗಳನ್ನು ನಿರ್ಮೂಲನೆ ಮಾಡುತ್ತದೆ, ವಿಶೇಷವಾಗಿ ಮುಂದಿನ ವರ್ಷ ಪಂಜಾಬ್ ಮತ್ತು ಯುಪಿಯಲ್ಲಿ ಬಿಜೆಪಿ ಅಧಿಕಾರ ಹಿಡಿಯುತ್ತದೆ ಎನ್ನುವ ವಿಶ್ವಾಸದಿಂದ ಇದೆ. 90 ಸ್ಥಾನಗಳ ವಿಧಾನಸಭೆಯಲ್ಲಿ BJP ಬಿಜೆಪಿಯ ಸಂಖ್ಯಾಬಲ 41 ಕ್ಕೆ ತಲುಪುತ್ತದೆ ಎಂದು ಹೇಳಲಾಗುತ್ತಿದೆ.

Also read: Rajasthana: ರಾಜಸ್ಥಾನ ಸಂಪುಟ ವಿಸ್ತರಣೆ ಸಾಧ್ಯತೆ; ಅಂಬಿಕಾ ಸೋನಿ ಭೇಟಿಯಾದ ಅಶೋಕ್ ಗೆಹ್ಲೋಟ್

ಕಾಂಗ್ರೆಸ್ ಕೂಡ ಇಲ್ಲಿ ತನ್ನದೇ ಆದ ಒಂದು ಚಾಪು ಮೂಡಿಸಲು ಒದ್ದಾಡುತ್ತಿದೆ. - ಪವನ್ ಬೆನಿವಾಲ್ ಬಿಜೆಪಿಯಿಂದ ಹೊರ ನಡೆದ ಅಭ್ಯರ್ಥಿ. ಬೆನಿವಾಲ್ 2014 ಮತ್ತು 2019 ರ ಎರಡೂ ಚುನಾವಣೆಗಳಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು, ಆದರೆ ಎರಡೂ ಸಂದರ್ಭಗಳಲ್ಲಿ ಚೌಟಾಲಾ ವಿರುದ್ಧ ಸೋತರು. ಕಾಂಗ್ರೆಸ್ ಗೆಲುವಿಗಾಗಿ ಕಾಯುತ್ತಿದೆ, ಏಕೆಂದರೆ ಇದು ರಾಜ್ಯದ ಸಮ್ಮಿಶ್ರ ಸರ್ಕಾರದ ಮೇಲೆ ಹೆಚ್ಚು ಒತ್ತಡ ಹೇರಲು ಮತ್ತು ರಾಜ್ಯ ರಾಜಕೀಯದಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಇದು ನಂಬಿದೆ.
First published: