• Home
 • »
 • News
 • »
 • national-international
 • »
 • Religious Conversion: ಈ ರಾಜ್ಯದಲ್ಲಿನ್ನು ಮತಾಂತರ ಸಾಧ್ಯವಿಲ್ಲ, ಸರ್ಕಾರದಿಂದ ಹೊಸ ಕಾನೂನು ಜಾರಿ!

Religious Conversion: ಈ ರಾಜ್ಯದಲ್ಲಿನ್ನು ಮತಾಂತರ ಸಾಧ್ಯವಿಲ್ಲ, ಸರ್ಕಾರದಿಂದ ಹೊಸ ಕಾನೂನು ಜಾರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಧಾರ್ಮಿಕ ಮತಾಂತರ ಪ್ರಕರಣದಲ್ಲಿ ಸ್ವಯಂ ಪ್ರೇರಿತರಾಗಿ ಮತಾಂತರಗೊಂಡರೆ ಆ ಬಗ್ಗೆ ಮೊದಲು ಜಿಲ್ಲಾ ಡಿಸಿ ಮಾಹಿತಿ ನೀಡಬೇಕು ಎಂಬ ನಿಯಮವಿದೆ. ಡಿಸಿ ಕಚೇರಿಯ ಸೂಚನಾ ಫಲಕದಲ್ಲಿ ಆ ವ್ಯಕ್ತಿಯ ಧರ್ಮ ಬದಲಾವಣೆಯ ಎಲ್ಲಾ ಮಾಹಿತಿಯನ್ನು ಅಂಟಿಸಲಾಗುತ್ತದೆ.

 • News18 Kannada
 • 5-MIN READ
 • Last Updated :
 • Haryana, India
 • Share this:

  ಚಂಡೀಗಢ(ಡಿ.20): ದೇಶಾದ್ಯಂತ ಬಲವಂತದ ಮತಾಂತರ (Conversion) ಪ್ರಕರಣಗಳು ನಿರಂತರವಾಗಿ ಮುನ್ನೆಲೆಗೆ ಬರುತ್ತಿವೆ. ಈ ನಿಟ್ಟಿನಲ್ಲಿ ಹಲವು ರಾಜ್ಯಗಳು ಕಾನೂನು ಕೂಡ ರೂಪಿಸಿವೆ. ಇದೀಗ ಹರ್ಯಾಣದಲ್ಲಿ ಮದುವೆಗಾಗಿ ಮತಾಂತರಕ್ಕೆ ಸಂಬಂಧಿಸಿದ ಕಾನೂನು ಜಾರಿಗೆ ಬಂದಿದೆ. ಮಂಗಳವಾರ, ಹರಿಯಾಣದ (Haryana) ರಾಜ್ಯಪಾಲರು ಧಾರ್ಮಿಕ ಮತಾಂತರವನ್ನು ನಿಷೇಧಿಸುವ ಕಾನೂನಿಗೆ ಅನುಮೋದನೆ ನೀಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಹರಿಯಾಣದಲ್ಲಿ ಯಾವುದೇ ಮಹಿಳೆ ಅಥವಾ ಪುರುಷ ಮದುವೆಗಾಗಿ ತಮ್ಮ ಧರ್ಮವನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ.


  ಈ ಸಂಬಂಧ ಹರಿಯಾಣ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯ ಪ್ರಕಾರ, ಬಲವಂತದ ಮತಾಂತರಕ್ಕೆ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಯಾರಾದರೂ ಕಾನೂನನ್ನು ಉಲ್ಲಂಘಿಸಿದರೆ, 10 ವರ್ಷಗಳ ಶಿಕ್ಷೆ ಮತ್ತು 5 ಲಕ್ಷದವರೆಗೆ ದಂಡ ವಿಧಿಸಬಹುದು. ಹರಿಯಾಣ ಕಾನೂನುಬಾಹಿರ ಮತಾಂತರ ತಡೆ ಕಾಯ್ದೆಯಡಿ ಆರೋಪಿಗಳು ಸಂತ್ರಸ್ತೆಗೆ ಜೀವನಾಂಶವನ್ನೂ ಪಾವತಿಸಬೇಕಾಗುತ್ತದೆ. ಇದರೊಂದಿಗೆ, ಮತಾಂತರದ ನಂತರ ವಿವಾಹದಿಂದ ಜನಿಸಿದ ಮಕ್ಕಳು ಸಹ ನಿರ್ವಹಣೆ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಆರೋಪಿ ಮೃತಪಟ್ಟರೆ, ಸ್ಥಿರಾಸ್ತಿಯನ್ನು ಹರಾಜು ಮಾಡುವ ಮೂಲಕ ಸಂತ್ರಸ್ತರಿಗೆ ಪರಿಹಾರ ನೀಡಲಾಗುತ್ತದೆ.


  ಇದನ್ನೂ ಓದಿ:  Sonali Phogat: ಮಗಳ ಸಾವಿನ ಬಗ್ಗೆ ಸೋನಾಲಿ ಫೋಗಟ್ ತಾಯಿ ಪ್ರತಿಕ್ರಿಯೆ, ಕೇಸ್ ಸಿಬಿಐಗೆ? 


  ಗಮನಾರ್ಹವಾಗಿ, ಮಾರ್ಚ್ 2022 ರಲ್ಲಿ ಬಜೆಟ್ ಅಧಿವೇಶನದಲ್ಲಿ, ಹರಿಯಾಣ ಸರ್ಕಾರವು ಈ ಮಸೂದೆಯನ್ನು ತಂದಿತ್ತು. ವಿಧಾನಸಭೆಯಲ್ಲಿ ಅಂಗೀಕಾರವಾದ ಬಳಿಕ ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿತ್ತು. ಇದೀಗ ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದ್ದು, ರಾಜ್ಯದಲ್ಲಿ ಈ ಕಾನೂನು ಜಾರಿಗೆ ಬಂದಿದೆ.


  ಇದನ್ನೂ ಓದಿ: Haryana Govt School: ಪ್ರೈವೆಟ್ ಸ್ಕೂಲ್​​ಗಳನ್ನು ಬಿಟ್ಟು ಈ ಸರ್ಕಾರಿ ಶಾಲೆಗೆ ಮುಗಿಬಿದ್ದ ಪೋಷಕರು: ಏನಿದರ ವಿಶೇಷತೆ? 


  ಧಾರ್ಮಿಕ ಮತಾಂತರ ಪ್ರಕರಣದಲ್ಲಿ ಸ್ವಯಂ ಪ್ರೇರಿತರಾಗಿ ಮತಾಂತರಗೊಂಡರೆ ಆ ಬಗ್ಗೆ ಮೊದಲು ಜಿಲ್ಲಾ ಡಿಸಿ ಮಾಹಿತಿ ನೀಡಬೇಕು ಎಂಬ ನಿಯಮವಿದೆ. ಆ ವ್ಯಕ್ತಿಯ ಧರ್ಮ ಬದಲಾವಣೆ ಕುರಿತು ಡಿಸಿ ಕಚೇರಿಯ ಸೂಚನಾ ಫಲಕದಲ್ಲಿ ಎಲ್ಲ ಮಾಹಿತಿ ಅಂಟಿಸಲಿದ್ದು, ನಂತರ ಮತಾಂತರಗೊಂಡ ವ್ಯಕ್ತಿಗೆ ಏನಾದರೂ ತೊಂದರೆಯಾದರೆ 30ರೊಳಗೆ ಲಿಖಿತವಾಗಿ ದೂರು ನೀಡಬಹುದು.

  Published by:Precilla Olivia Dias
  First published: