ಹರಿಯಾಣ (ಫೆಬ್ರವರಿ 01); ಭಾರತದಲ್ಲಿ ಕೋಟ್ಯಾಂತರ ಜನರಿಗೆ ಕೊರೋನಾ ಸೋಂಕು ತಗುಲಿದೆ. ಸುಮಾರು 1.51 ಲಕ್ಷ ಜನ ಈ ಮಾರಣಾಂತಿಕ ಸೋಂಕಿಗೆ ಬಲಿಯಾಗಿದ್ದಾರೆ. ಇದೇ ಕಾರಣಕ್ಕೆ ಸತತ ಒಂದು ವರ್ಷ ಸಂಶೋಧನಾ ಫಲವಾಗಿ ಭಾರತದ ವಿಜ್ಞಾನಿಗಳು ಕೊರೋನಾ ಸೋಂಕನ್ನು ದೇಶದಿಂದ ತೊಲಗಿಸಲು ಎರಡು ಲಸಿಕೆಯನ್ನು ಕಂಡು ಹಿಡಿದಿದ್ದಾರೆ. ಮೊದಲ ಲಸಿಕೆ ಅಭಿಯಾನದಲ್ಲಿ ಲಕ್ಷಾಂತರ ಜನರಿಗೆ ಈ ಲಸಿಕೆಯನ್ನು ದೇಶದಾದ್ಯಂತ ನೀಡಲಾಗಿದೆ. ಇಂದು ಎರಡನೇ ಲಸಿಕಾ ಅಭಿಯಾನ ಆರಂಭವಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಭಿಯಾನದ ಮೊದಲ ಫಲಾನುಭವಿಯಾಗಿ ಚುಚ್ಚುಮದ್ದನ್ನೂ ಸಹ ಪಡೆದಿದ್ದಾರೆ. ಆದರೆ, ಹರಿಯಾಣದ ಬಿಜೆಪಿ ಸರ್ಕಾರದ ಆರೋಗ್ಯ ಸಚಿವ ಅನಿಲ್ ವಿಜ್ ಮಾತ್ರ ತಮಗೆ ಲಸಿಕೆಯ ಅಗತ್ಯವಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿದ್ದಾರೆ.
आज आम जनता के लिए कोरोना वैक्सीन शुरू होने जा रही है । सब को निस्संकोच लगवानी चाहिए । मैं तो नही लगवा पाऊंगा क्योंकि कोविड होने के बाद मेरी एंटीबाडी 300 बनी है जोकि बहुत ज्यादा है । शायद मैंने जो ट्रायल वैक्सीन लगवाई थी इसमे उसका भी योगदान हो । मुझे अभी वैक्सीन की जरूरत नही है ।
— ANIL VIJ MINISTER HARYANA (@anilvijminister) March 1, 2021
"ಇಂದು ಸಾಮಾನ್ಯ ಜನರಿಗೆ ಕೊರೋನಾ ಲಸಿಕೆ ಕಾರ್ಯಕ್ರಮ ಪ್ರಾರಂಭವಾಗುತ್ತಿದೆ. ಈಗ ಯಾವುದೇ ಹಿಂಜರಿಕೆ ಇರಬಾರದು. ಕೋವಿಡ್ ಸೋಂಕು ತಗುಲಿ ಆರಾಮಾದ ನಂತರ ನನಗೆ ಡೋಸೇಜ್ ಸ್ವೀಕರಿಸಲು ಸಾಧ್ಯವಾಗುವುದಿಲ್ಲ, ಏಕೆಂದರೆ, ನನ್ನ ಪ್ರತಿಕಾಯಗಳ ಸಂಖ್ಯೆ 300 ಇದ್ದು, ಇದು ಸಿಕ್ಕಾಪಟ್ಟೆ ಅನಿಸುತ್ತದೆ. ಬಹುಶಃ ನಾನು ಪಡೆದಿದ್ದ ಪ್ರಯೋಗ ಲಸಿಕೆ ( ಟ್ರಯಲ್ ವ್ಯಾಕ್ಸಿನ್) ಯಲ್ಲಿಯೇ ಈ ಪ್ರತಿರೋಧಕತೆ ಲಭಿಸಿದೆ. ನನಗೆ ಈಗ ಲಸಿಕೆ ಅಗತ್ಯವಿಲ್ಲ”ಎಂದು ಅನಿಲ್ ವಿಜ್ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಜ್ ಅವರನ್ನು ಡಿಸೆಂಬರ್‌ನಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನವೆಂಬರ್‌ನಲ್ಲಿ ಅವರಿಗೆ ಕೊವಾಕ್ಸಿನ್ ಲಸಿಕೆ ನೀಡಲಾಯಿತು, ಅದರ ಮೂರನೇ ಹಂತದ ಪ್ರಯೋಗದ ಭಾಗವಾಗಿ ಅವರು ಸ್ವಯಂಪ್ರೇರಿತ ಕಾರ್ಯಕರ್ತರಾಗಿದ್ದರು.
ಇದನ್ನೂ ಓದಿ: ಭಾರತವನ್ನು ಕತ್ತಲಲ್ಲಿ ಮುಳುಗಿಸಲು ಚೀನಾ ಪ್ಲಾನ್? 12 ಸರ್ಕಾರಿ ಘಟಕಗಳನ್ನ ಹ್ಯಾಕ್ ಮಾಡಿದ ಚೀನೀಯರು
ವ್ಯಾಕ್ಸಿನೇಷನ್ ನಂತರ ಅವರು ಕೋವಿಡ್ ಸೋಂಕಿಗೆ ತುತ್ತಾದರು ಎಂಬುದು ಚರ್ಚೆಗೆ ಕಾರಣವಾಯಿತು, ಆದರೂ ಅವರು ಕೇವಲ ಒಂದು ಡೋಸ್ ಮಾತ್ರ ತೆಗೆದುಕೊಂಡಿದ್ದಾರೆ ಮತ್ತು ಎರಡನೆಯದು ಬಾಕಿ ಇದೆ ಎಂದು ಸ್ಪಷ್ಟಪಡಿಸಲಾಗಿತ್ತು. ಭಾರತವು 11 ದಶಲಕ್ಷಕ್ಕೂ ಹೆಚ್ಚು ಕೊರೋನವೈರಸ್ ಸೋಂಕುಗಳು ಮತ್ತು 157,000 ಕ್ಕೂ ಹೆಚ್ಚು ಸಾವುಗಳನ್ನು ಕಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ