HOME » NEWS » National-international » HARYANA GIRL CHANGE HER SEX TO GET MARRIED WITH HER GIRLFRIEND

ಪ್ರೀತಿಗಾಗಿ ಅವನಾದ ಅವಳ ಕತೆ: ಆದರೆ ನಂತರ ಆಗಿದ್ದೇನು ಗೊತ್ತಾ..?

ಅವರಿಬ್ಬರದ್ದು ಬಾಲ್ಯದ ಸ್ನೇಹ. ಆದರೆ ಇಬ್ಬರೂ ಹುಡುಗಿಯರ ನಡುವೆ ಚಿಗುರೊಡೆದಿತ್ತು ಪ್ರೀತಿಯ ಮೊಳಕೆ. ಅದಕ್ಕಾಗಿ ಒಬ್ಬಳು ಹುಡುಗಿ ಹುಡುಗನಾಗಿ ಲಿಂಗಪರಿವರ್ತನೆ ಮಾಡಿಸಿಕೊಂಡಳು... ವಿವಾಹವೂ ನಡೆಯಿತು... ಆದರೆ ಮೂರು ತಿಂಗಳ ದಾಂಪತ್ಯ ಜೀವನದ ನಂತರ ನಡೆದದ್ದೆನು ಗೊತ್ತಾ..?

Anitha E | news18
Updated:January 6, 2019, 5:22 PM IST
ಪ್ರೀತಿಗಾಗಿ ಅವನಾದ ಅವಳ ಕತೆ: ಆದರೆ ನಂತರ ಆಗಿದ್ದೇನು ಗೊತ್ತಾ..?
ಸಾಂದರ್ಭಿಕ ಚಿತ್ರ
  • News18
  • Last Updated: January 6, 2019, 5:22 PM IST
  • Share this:
ಅವರಿಬ್ಬರು ಬಾಲ್ಯದ ಸ್ನೇಹಿತರು. ಜೊತೆಯಲ್ಲೇ ಬಾಲ್ಯವನ್ನು ಹಂಚಿಕೊಂಡ ಈ ಸ್ನೇಹ ದೊಡ್ಡವರಾಗುವವರೆಗೂ ಮುಂದುವರೆದಿತ್ತು. ಅದು ಎಷ್ಟರ ಮಟ್ಟಿಗೆ ಅಂದರೆ, ಒಬ್ಬರನ್ನೊಬ್ಬರು ಬಿಟ್ಟು ಬದುಕಲಾರದಷ್ಟು ಗಾಢವಾಗಿತ್ತು ಅವರ ಸ್ನೇಹ. ಅದಕ್ಕಾಗಿಯೇ ಇಬ್ಬರೂ ವಿವಾಹವಾಗುವ ನಿರ್ಧಾರಕ್ಕೆ ಬಂದಿದ್ದರು.

ಇದನ್ನೂ ಓದಿ: ಆಕೆ ನಿತ್ಯ ಸುಮಂಗಲಿ: 11 ಗಂಡಂದಿರು...ಲೆಕ್ಕವಿಲ್ಲದಷ್ಟು ಬಾಯ್​ಫ್ರೆಂಡ್ಸ್ ಜತೆ ಪ್ರೇಮದಾಟ​...!

ಆದರೆ ಇಬ್ಬರು ಹೆಣ್ಣು ಮಕ್ಕಳು ವಿವಾಹವಾಗಲು ಸಮಾಜದ ಜೊತೆಗೆ ಮನೆಯವರಿಂದಲೇ ವಿರೋಧವಿತ್ತು. ಇದರಿಂದಾಗಿ ಇವರಲ್ಲಿ ಒಬ್ಬಳು ಹುಡುಗಿ ಲಿಂಗ ಪರಿವರ್ತನೆ ಮಾಡಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಳು.

ಅದಕ್ಕಾಗಿ 10 ಲಕ್ಷ ವೆಚ್ಚದಲ್ಲಿ ದೆಹಲಿಯಲ್ಲಿ ಶಸ್ತ್ರ ಚಿಕಿತ್ಸೆಯೂ ನಡೆಯಿತು. ನಂತರ ದೆಹಲಿಯ ದೇವಾಲಯವೊಂದರಲ್ಲಿ ಈ ಇಬ್ಬರು ವಿವಾಹವನ್ನೂ ಆದರು. ನಂತರ ಮೂರು ತಿಂಗಳು ಸತಿ-ಪತಿಯಾಗಿ ಸಂಸಾರ ಮಾಡಿದ ನಂತರ, ಹೆಂಡತಿಯಾಗಿದ್ದ ಹುಡುಗಿ ಒಂದು ಶಾಕಿಂಗ್​ ಸುದ್ದಿ ಕೊಟ್ಟಿದ್ದಳು.

ಅದು ಪ್ರೀತಿಗಾಗಿ ಲಿಂಗ ಪರಿವರ್ತನೆ ಮಾಡಿಕೊಂಡು ಗಂಡಾಗಿದ್ದ ಗಂಡನೊಂದಿಗೆ ತನಗೆ ಜೀವಸಲು ಸಾಧ್ಯವಿಲ್ಲ ಎಂದಿದ್ದಲು. ಇದರಿಂದ ದಿಕ್ಕು ತೋಚದ ಗಂಡ ಮಹಿಳಾ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ. ಈ ಘಟನೆ ನಡೆದದ್ದು ಹರಿಯಾಣದಲ್ಲಿ.

ಇದನ್ನೂ ಓದಿ: ದೀಪಿಕಾ-ರಣವೀರ್​ ಇನ್ನೂ ಒಂದು ವರ್ಷ ಇರಬೇಕು ದೂರ-ದೂರ..!

ಪತ್ನಿಯ ಮನೆಯವರು ಆಕೆಯನ್ನು ಬಲವಂತವಾಗಿ ಬಂಧಿಸಿಟ್ಟಿದ್ದು, ನನ್ನನ್ನು ನೋಡಲು ಬಿಡುತ್ತಿಲ್ಲವೆಂದು ಹುಡುಗನಾಗಿ ಲಿಂಗ ಪರಿವರ್ತನೆ ಮಾಡಿಕೊಂಡಿರುವ ಯುವಕ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದರು.ನಂತರ ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು, ಲಿಂಗ ಪರಿವರ್ತನೆ ಮಾಡಿಕೊಂಡ ಯುವಕನ ಮನೆಯಲ್ಲಿ ವಿಚಾರಿಸಿದಾಗ ಬಾಲ್ಯದ ಸ್ನೇಹ-ಪ್ರೀತಿಯಾಗಿ ವಿವಾಹದವರೆಗೂ ಬಂದಿದ್ದು, ನಂತರ ಪ್ರೀತಿಗಾಗಿ ಸಾಲ ಮಾಡಿ ಲಿಂಗ ಪರಿವರ್ತನೆ ಮಾಡಿಕೊಂಡಿದ ವಿಷಯ ಪೊಲೀಸರಿಗೆ ತಿಳಿದಿದೆ.

ಇದನ್ನೂ ಓದಿ: ಗೋವಾ ಬೀಚ್​ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ 70 ವರ್ಷದ ಕಾಮುಕ..!

ನಂತರ ಪೊಲೀಸರು ಯುವತಿ ಹಾಗೂ ಅವರ ಮನೆಯವರನ್ನು ವಿಚಾರಿಸಿದಾಗ, ಯುವತಿ ಖುದ್ದು ತನಗೆ ಆತನೊಂದಿಗೆ ಜೀವಿಸಲು ಇಷ್ಟ ಇಲ್ಲ ಎಂದು ಹೇಳಿಕೆ ನೀಡಿದ್ದಾಳೆ. ಆದರೆ ಈ ವಿಷಯದಲ್ಲಿ ಪತಿ-ಪತ್ನಿ ಇಬ್ಬರೂ ವಯಸ್ಕರಾಗಿರುವುದರಿಂದ ಅವರಿಗೆ ಅವರ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ. ಹೀಗಾಗಿ ಅವರ ವಿವಾಹದ ವಿಷಯದಲ್ಲಿ ಅವರ ನಿರ್ಧಾರವೇ ಮುಖ್ಯ ಎಂದು ಎಸ್​ಪಿ ಸ್ಮಿತಾ ಚೌಧರಿ ಹೇಳಿಕೆ ನೀಡಿದ್ದಾರೆ.

ಕಳೆದ 2017ರ ಸೆಪ್ಟೆಂಬರ್​ನಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ನಡೆದಿದ್ದು, ಇದಾಗಿ ಒಂದು ವರ್ಷದ ನಂತರ ಅಂದರೆ ಕಳೆದ ಅಕ್ಟೋಬರ್​ನಲ್ಲಿ ಈ ಜೋಡಿ ವಿವಾಹವಾಗಿದ್ದಾರೆ. ಆದರೆ ಮದುವೆಯಾಗಿ ಕೇವಲ ಮೂರೇ ತಿಂಗಳಿಗೆ ಈಗ ಹೆಂಡತಿ, ಗಂಡನೊಂದಿಗೆ ಇರಲಾಗದು ಎಂದು ದೂರಾಗಿದ್ದಾಳೆ.

ಈ ವಿಚಿತ್ರ ಪ್ರೇಮಕತೆ ಯಾವ ಹಂತಕ್ಕೆ ಹೋಗಲಿದೆಯೋ ತಿಳಿಯದು. ಆದರೆ ಬಾಲ್ಯದ ಸ್ನೇಹ ಹಾಗೂ ಯೌವ್ವನದ ಪ್ರೀತಿಗಾಗಿ ಎಲ್ಲರನ್ನೂ ಎದುರಾಕಿಕೊಂಡ ಈ ಜೋಡಿಯ ಕತೆ ಸುಖಾಂತ್ಯವಾಗಲೆಂದು ಹಾರೈಸೋಣ.

First published: January 6, 2019, 2:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories