DSP Murder: ರೇಡ್ ಮಾಡಿದ ವೇಳೆ ಪೊಲೀಸ್ ಅಧಿಕಾರಿ ಮೇಲೆ ಟ್ರಕ್ ಹರಿಸಿ ಕೊಂದ ಗಣಿ ಮಾಫಿಯಾ!

ಕಲ್ಲು ತುಂಬಿದ ಟ್ರಕ್ ಅನ್ನು ನಿಧಾನಗೊಳಿಸುವಂತೆ ಸೂಚಿಸಿದರು, ಆದರೆ ಅದರ ಬದಲಾಗಿ ಚಾಲಕನು ವೇಗವಾಗಿ ಓಡಿಸಿ ಅವರಿಗೆ ಗುದ್ದಿದ್ದಾನೆ. ಮೃತ ಪೊಲೀಸ್​​ ಅಧಿಕಾರಿ ಸುರೇಂದ್ರ ಸಿಂಗ್ ಬಿಷ್ಣೋಯ್ ಈ ವರ್ಷ ನಿವೃತ್ತಿಯಾಗಬೇಕಿತ್ತು.

ಒಳಚಿತ್ರದಲ್ಲಿ ಮೃತ ಅಧಿಕಾರಿ

ಒಳಚಿತ್ರದಲ್ಲಿ ಮೃತ ಅಧಿಕಾರಿ

  • Share this:
ಚಂಡೀಗಢ: ಗಣಿ ಅಕ್ರಮದ (Mining Mafia) ಮೇಲೆ ದಾಳಿ ಮಾಡಿದ ಪೊಲೀಸ್​ ಅಧಿಕಾರಿಯ ಮೇಲೆಯೇ ಟ್ರಕ್​​​ (Truck) ಹತ್ತಿಸಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ನುಹ್ ಜಿಲ್ಲೆಯ ಪಚ್‌ಗಾಂವ್‌ನಲ್ಲಿ ಡಿಎಸ್‌ಪಿ ಸುರೇಂದ್ರ ಸಿಂಗ್ ಬಿಷ್ಣೋಯ್ (DSP Surendra Singh Bishnoi) ಅವರನ್ನು ಗಣಿ ಮಾಫಿಯಾ ಹತ್ಯೆ ಮಾಡಿದೆ. ವರದಿಗಳ ಪ್ರಕಾರ, ಪಚಗಾಂವ್‌ನ ಬೆಟ್ಟಗಳಲ್ಲಿ ಮರಳು ಮಾಫಿಯಾದ ಮೇಲೆ ದಾಳಿ ನಡೆಸಿದಾಗ ಡಿಎಸ್‌ಪಿ ಬಿಷ್ಣೋಯ್​​ ಅವರಿಗೆ ಟ್ರಕ್‌ನಿಂದ ಡಿಕ್ಕಿ ಹೊಡೆದಿದ್ದಾರೆ. ಪೊಲೀಸ್ ಅಧಿಕಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪಚಗಾಂವ್ ಬಳಿ ಅಕ್ರಮ ಗಣಿಗಾರಿಕೆ ಮಾಫಿಯಾ ಸಕ್ರಿಯವಾಗಿರುವ ಪ್ರದೇಶದ ಮೇಲೆ  ಡಿಎಸ್ಪಿ ದಾಳಿ ನಡೆಸುತ್ತಿದ್ದರು. ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಬಿಷ್ಣೋಯ್ ಸ್ಥಳಕ್ಕೆ ಆಗಮಿಸಿದ್ದರು. ಅವರು ಕಲ್ಲು ತುಂಬಿದ ಟ್ರಕ್ ಅನ್ನು ನಿಧಾನಗೊಳಿಸುವಂತೆ ಸೂಚಿಸಿದರು, ಆದರೆ ಅದರ ಬದಲಾಗಿ ಚಾಲಕನು ವೇಗವಾಗಿ ಓಡಿಸಿ ಅವರಿಗೆ ಗುದ್ದಿದ್ದಾನೆ. ಮೃತ ಪೊಲೀಸ್​​ ಅಧಿಕಾರಿ ಸುರೇಂದ್ರ ಸಿಂಗ್ ಬಿಷ್ಣೋಯ್ ಈ ವರ್ಷ ನಿವೃತ್ತಿಯಾಗಬೇಕಿತ್ತು.

ಟ್ರಕ್​​ನಿಂದ ಡಿಕ್ಕಿ ಹೊಡೆದು ಕೊಲೆ

ಮಾಹಿತಿ ಆಧಾರದ ಮೇಲೆ ಡಿಎಸ್​​ಪಿ ದಿಢೀರ್ ತಪಾಸಣೆಗೆ ಬಂದಿದ್ದರು. ಸಮಯ ಸಿಗದ ಕಾರಣ ಹೆಚ್ಚುವರಿ ಸಿಬ್ಬಂದಿ ಅವರೊಂದಿಗೆ ಬಂದಿರಲಿಲ್ಲ. ಈ ವೇಳೆ ಟ್ರಕ್​​ನಿಂದ ಡಿಕ್ಕಿ ಹೊಡೆದು ಕೊಂಡಿದ್ದಾರೆ. ಆರೋಪಿಗಳು ಯಾವುದೇ ಶಸ್ತ್ರಾಸ್ತ್ರಗಳನ್ನು ಬಳಸಿಲ್ಲ  ಎಡಿಜಿ ರವಿಕಿರಣ್ ಹೇಳಿದ್ದಾರೆ. ಆರೋಪಿ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ನುಹ್ ಇನ್ಸ್‌ಪೆಕ್ಟರ್ ಜನರಲ್ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ನೀಡಿದ ಹರಿಯಾಣ ಪೊಲೀಸರು, "ಡಿಎಸ್ಪಿ ಸುರೇಂದ್ರ ಸಿಂಗ್ ಬಿಷ್ಣೋಯ್ ಅವರು ಕರ್ತವ್ಯದ ಸಂದರ್ಭದಲ್ಲಿ ಇಂದು ತಮ್ಮ ಪ್ರಾಣವನ್ನು ತ್ಯಜಿಸಿದ್ದಾರೆ. ವೀರ ಅಧಿಕಾರಿಯ ಕುಟುಂಬಕ್ಕೆ ಹರಿಯಾಣ ಪೊಲೀಸರು ಆಳವಾದ ಸಂತಾಪಗಳು ಎಂದಿದ್ದಾರೆ.

ಇದನ್ನೂ ಓದಿ: Nupur Sharma: ನೂಪುರ್ ಶರ್ಮಾ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು; ಸುಪ್ರೀಂಕೋರ್ಟ್

ಡಿಎಸ್ಪಿ ಕುಟುಂಬಕ್ಕೆ ₹1 ಕೋಟಿ ಪರಿಹಾರ

ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಕಠಿಣ ಕ್ರಮಕ್ಕೆ ಭರವಸೆ ನೀಡಿದ್ದಾರೆ. ತಪ್ಪಿತಸ್ಥರನ್ನು ಬಿಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಡಿಎಸ್ಪಿ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಲಾಗುವುದು. ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಲಾಗುವುದು ಮತ್ತು ಮೃತರನ್ನು ಹುತಾತ್ಮರೆಂದು ಪರಿಗಣಿಸಲಾಗುವುದು ಎಂದು ಸಿಎಂ ಖಟ್ಟರ್ ಘೋಷಿಸಿದರು.

ಹರಿಯಾಣ ಗೃಹ ಸಚಿವ ಅನಿಲ್ ವಿಜ್, ಆರೋಪಿಗಳನ್ನು ಬಿಡುವುದಿಲ್ಲ ಮತ್ತು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. "ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾನು ಆದೇಶಿಸಿದ್ದೇನೆ ಎಂದಿದ್ದಾರೆ. ಆದರೆ, ಹರ್ಯಾಣದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರತಿಪಕ್ಷಗಳು ರಾಜ್ಯ ಸರ್ಕಾರವನ್ನು ಟೀಕಿಸಿವೆ.

ಪೊಲೀಸರಿಗೇ ರಕ್ಷಣೆ ಇಲ್ಲ, ಇನ್ನು ಜನರಿಗೆಲ್ಲಿದೆ?

ಕಳೆದ 10 ದಿನಗಳಲ್ಲಿ ಹರಿಯಾಣದ 5 ​​ಶಾಸಕರಿಗೆ ಜೀವ ಬೆದರಿಕೆಗಳು ಬಂದಿವೆ ಮತ್ತು ಸರ್ಕಾರವು ಅಪರಾಧಿಗಳನ್ನು ಪತ್ತೆಹಚ್ಚಲು ಅಥವಾ ಶಾಸಕರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸಲು ಸಾಧ್ಯವಾಗಲಿಲ್ಲ. ಗಣಿಗಾರಿಕೆ ಮಾಫಿಯಾ ತನ್ನ ಕೊಳಕು ಮುಖವನ್ನು ತೋರಿಸುತ್ತಿದೆ. ಸಿಎಂ ಜವಾಬ್ದಾರಿ ವಹಿಸಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಹೇಳಿದ್ದಾರೆ.

ಇದು ನಾಚಿಕೆಗೇಡಿನ ಸಂಗತಿ. ಗಣಿಗಾರಿಕೆ ಮಾಫಿಯಾ ಕೈ ಮೀರುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ. ಶಾಸಕರಿಗೆ ಬೆದರಿಕೆ ಇದೆ, ಪೊಲೀಸರೂ ಸುರಕ್ಷಿತವಾಗಿಲ್ಲ. ಸಾರ್ವಜನಿಕರು ಸುರಕ್ಷಿತವಾಗಿರುವುದು ಹೇಗೆ? ಸರ್ಕಾರವು ತ್ವರಿತವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡ ಭೂಪಿಂದರ್ ಹೂಡಾ ಆಗ್ರಹಿಸಿದರು.
Published by:Kavya V
First published: