ಹಾರ್ವರ್ಡ್​ ಯೂನಿವರ್ಸಿಟಿ ಲಂಡನ್​​ನಲ್ಲಿದೆ!; ವಿಚಿತ್ರ ಹೇಳಿಕೆ ನೀಡಿ ಟ್ರೋಲ್ ಆದ ತ್ರಿಪುರ ಸಿಎಂ

ನಾವು ಇಂಗ್ಲೆಂಡ್ ಅಥವಾ ಲಂಡನ್​ ಬಗ್ಗೆ ಯೋಚಿಸುವಾಗ, ನಮ್ಮ ತಲೆಗೆ ಬರುವುದು ಕೇಂಬ್ರಿಡ್ಜ್ ಯೂನಿವರ್ಸಿಟಿ ಮತ್ತು ಹಾರ್ವರ್ಡ್​ ಯೂನಿವರ್ಸಿಟಿ ಎಂದು ಹೇಳುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಬಿಪ್ಲಬ್ ದೇಬ್.

ಬಿಪ್ಲಬ್ ದೇಬ್.

 • Share this:
   ಸದಾ ಒಂದಿಲ್ಲೊಂದು ವಿಚಿತ್ರ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗುವ ತ್ರಿಪುರಾ ಸಿಎಂ ಬಿಪ್ಲಬ್​​ ದೇವ್, ಈಗ ಮತ್ತೆ ಅಂತಹದ್ದೇ ಒಂದು ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ತ್ರಿಪುರಾ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಮಾತನಾಡಿದ ಅವರು, ಹಾರ್ವರ್ಡ್​ ಯೂನಿವರ್ಸಿಟಿ ಇಂಗ್ಲೆಂಡ್​ನಲ್ಲಿದೆ ಎಂದು ಹೇಳಿದ್ದಾರೆ. ಆ ಮೂಲಕ ಸಾಕಷ್ಟು ನಗೆಪಾಟಲಿಗೀಡಾಗಿದ್ದಾರೆ.

  ನಾವು ಇಂಗ್ಲೆಂಡ್ ಅಥವಾ ಲಂಡನ್​ ಬಗ್ಗೆ ಯೋಚಿಸುವಾಗ, ನಮ್ಮ ತಲೆಗೆ ಬರುವುದು ಕೇಂಬ್ರಿಡ್ಜ್ ಯೂನಿವರ್ಸಿಟಿ ಮತ್ತು ಹಾರ್ವರ್ಡ್​ ಯೂನಿವರ್ಸಿಟಿ ಎಂದು ಹೇಳುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ. ಭೌಗೋಳಿಕವಾಗಿ ನೋಡುವುದಾದರೆ, ಹಾರ್ವರ್ಡ್​ ಯೂನಿವರ್ಸಿಟಿ ಅಮೆರಿಕದ ಅತ್ಯಂತ ಹಳೆಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಈ ವಿಶ್ವವಿದ್ಯಾಲಯವನ್ನು ಮ್ಯಾಸಚುಸೆಟ್ಸ್​ನಲ್ಲಿ 1636ರಲ್ಲಿ ಸ್ಥಾಪಿಸಲಾಯಿತು.

  Viral Video: ಸಖತ್ ವೈರಲ್ ಆದ ಬೆಳ್ಳುಳ್ಳಿ ಬಿಡಿಸುವ ವಿಡಿಯೋ; ನೀವು ನೋಡಿ ಸಿಪ್ಪೆ ಬಿಡಿಸುವ ವಿಧಾನ

  ನಾರ್ತ್​​ಈಸ್ಟ್​ ನೌ ಪ್ರಕಾರ, ಸಿಎಂ ಬಿಪ್ಲವ್​ ದೇವ್ ಅವರು ಮಂಗಳವಾರ ತ್ರಿಪುರಾ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಒಂದು ನಗರ ಅಥವಾ ಸ್ಥಳ ಅಲ್ಲಿನ ಯೂನಿವರ್ಸಿಟಿಯಿಂದ ಹೆಚ್ಚು ಜನಪ್ರಿಯತೆ ಗಳಿಸುತ್ತದೆ ಎಂದು ಸಿಎಂ ಹೇಳಿದರು. ಇದೇ ವೇಳೆ, ಹಾರ್ವರ್ಡ್​ ಎನ್ನುವ ಬದಲಾಗಿ ಕವರ್ಡ್​ ಎಂದು ತಪ್ಪಾಗಿ ಉಚ್ಚರಿಸಿ ನಗೆಪಾಟಲಿಗೀಡಾದರು. ಭೌಗೋಳಿಕತೆಯ ಬಗ್ಗೆ ತಲೆಕೆಡಿಸಿಕೊಳ್ಳದ ಬಿಪ್ಲಬ್ ದೇವ್, ಹೀಗೆ ಹೇಳಿಕೆ ನೀಡಿದ್ದಾರೆ.

  ಕಳೆದ ವರ್ಷ ಕೂಡ, ಕಾರ್ಯಕ್ರಮವೊಂದರಲ್ಲಿ ಅಮೆಜಾನ್ ಮಳೆ ಕಾಡುಗಳು ಆಫ್ರಿಕಾದಲ್ಲಿವೆ ಎಂದು ಹೇಳಿದ್ದರು. ಆದರೆ ಅಮೆಜಾನ್ ಮಳೆಕಾಡುಗಳು ಇರುವುದು ಬ್ರೆಜಿಲ್​ನಲ್ಲಿ. ಅಲ್ಲಿಂದ ಕೊಲಂಬಿಯಾ, ಪೆರು ಹಾಗೂ ದಕ್ಷಿಣ ಅಮೆರಿಕಾ ದೇಶಗಳಿಗೂ ಹರಡಿಕೊಂಡಿವೆ.
  Published by:Latha CG
  First published: