Harsimrat Kaur Badal: ಕೃಷಿ ಮಸೂದೆಗೆ ವಿರೋಧ: ಕೇಂದ್ರ ಸಚಿವ ಸ್ಥಾನಕ್ಕೆ ಹರ್ಸಿಮ್ರತ್​ ಕೌರ್​ ಬಾದಲ್​ ರಾಜೀನಾಮೆ

ಈ ಮಸೂದೆಗೆ ಲೋಕಸಭೆಯಲ್ಲಿ ತೀವ್ರ ವಿರೋಧ ಕೂಡ ವ್ಯಕ್ತವಾಗಿದೆ. ಈ ಕೃಷಿ ಮಸೂದೆ ವಿರೋಧಿಸಿ ಪಂಜಾಬ್​ ಕಾಂಗ್ರೆಸ್​ ಸಂಸದರು ಅದರ ಪ್ರತಿಗೆ ಬೆಂಕಿ ಹಚ್ಚಿ ವಿರೋಧವಿದೆ ಎಂದು ಬಿಜೆಪಿ ಮೈತ್ರಿ ಪಕ್ಷ ಶಿರೋಮಣಿ ಅಕಾಲಿ ದಳ ತಿಳಿಸಿದೆ

Harsimrat Kaur Badal

Harsimrat Kaur Badal

 • Share this:
  ಕೇಂದ್ರ ಸರ್ಕಾರದ ಕೃಷಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಶಿರೋಮಣಿ ಅಕಾಲಿ ದಳದ ಸದಸ್ಯೆ ಹರ್ಸಿಮ್ರತ್​ ಕೌರ್​ ಬಾದಲ್​ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್​ ಸಿಂಗ್​ ಬಾದಲ್ ಈ ವಿಷಯವನ್ನು​ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬಿಜೆಪಿ ಸರ್ಕಾರ ಮಂಡಿಸಲಿರುವ ಮೂರು ಕೃಷಿ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಇದಕ್ಕೆ ಅಂಕಿತ ಆಗುವಂತೆ ವಿಪ್​ ಜಾರಿ ಮಾಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಹರ್ಸಿಮ್ರತ್​ ಕೌರ್​ ಬಾದಲ್​ ಸಚಿವ ಸ್ಥಾನ ತೊರೆಯಲು ನಿರ್ಧರಿಸಿದ್ದಾರೆ. ಈ ಮಸೂದೆಗೆ ಲೋಕಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕೃಷಿ ಮಸೂದೆ ವಿರೋಧಿಸಿ ಪಂಜಾಬ್​ ಕಾಂಗ್ರೆಸ್​ ಸಂಸದರು ಅದರ ಪ್ರತಿಗೆ ಬೆಂಕಿ ಹಚ್ಚಿ ವಿರೋಧವಿದೆ ಎಂದು ಬಿಜೆಪಿ ಮೈತ್ರಿ ಪಕ್ಷ ಶಿರೋಮಣಿ ಅಕಾಲಿ ದಳ ತಿಳಿಸಿದೆ. ಅಲ್ಲದೇ ಕಾಂಗ್ರೆಸ್​ ಕೂಡ ಬಿಜೆಪಿ ಸರ್ಕಾರದ ಈ ಮೂರು ಕೃಷಿ ಮಸೂದೆಗೆ ವಿರುದ್ಧ ಧ್ವನಿ ಎತ್ತಿದ್ದವು.  ಈ ಮಸೂದೆ ರೈತ ವಿರೋಧಿಯಾಗಿದ್ದು, ಮಸೂದೆಗೆ ಒಪ್ಪಿಗೆ ನೀಡಲೇಬೇಕೆಂಬ ಕೇಂದ್ರದ ನಿರ್ಧಾರ ಮೈತ್ರಿ ಪಕ್ಷದ ನಾಯಕರಲ್ಲಿ ಅಸಮಾಧಾನ ತಂದಿತ್ತು. ಕೇಂದ್ರದ ಈ ನಡೆಯಿಂದ ಪಂಜಾಬ್​ ರೈತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದಾರೆ.  ಈ ಮಸೂದೆ ಕುರಿತು ಬಿಜೆಪಿ ನಾಯಕ ಸುಬ್ರಹ್ಮಣ್ಯ ಸ್ವಾಮಿ ಕೂಡ ಅಪಸ್ವರ ಎತ್ತಿದ್ದಾರೆ. ಲೋಕಸಭೆಯಲ್ಲಿ ಬಹುಮತ ಹೊಂದಿದ್ದರೂ ಎನ್​ಡಿಎ ಸರ್ಕಾರ ರಚಿಸಿರುವ ಬಿಜೆಪಿ ಮೈತ್ರಿ ಪಕ್ಷ ಹಾಗೂ ರೈತರ ಅಭಿಪ್ರಾಯ ಪಡೆದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
  Published by:Seema R
  First published: