Miss Universe: ನಾನು ಭಾರತದ ಹೆಮ್ಮೆಯಾಗಲು ಬಯಸಿದ್ದೆ: ಮಿಸ್ ಯೂನಿವರ್ಸ್ ಹರ್ನಾಜ್ ಸಂಧು

Miss Universe: ಈ ಸಮಯದಲ್ಲಿ ನನ್ನ ವಿಜಯದಲ್ಲಿ ಅವರದ್ದೂ ಸಮಪಾಲು ಇದೆ. ನನ್ನ ತಾಯ್ನಾಡು ಹಾಗೂ ನನ್ನ ಜನರಿಗೆ ನನ್ನ ಗೆಲುವನ್ನು ಮುಡಿಪಾಗಿಡಲು ಬಯಸುತ್ತೇನೆ.

ಹರ್ನಾಜ್ ಸಂಧು

ಹರ್ನಾಜ್ ಸಂಧು

  • Share this:
ಭುವನ ಸುಂದರಿ ಪಟ್ಟ ಅಲಂಕರಿಸಿದ ಮೂರನೇ ಭಾರತೀಯ ಮಹಿಳೆ ಎನ್ನುವ ಖ್ಯಾತಿಗೆ ಹರ್ನಾಜ್ ಸಂಧು(Harnaz Sandhu) ಪಾತ್ರರಾಗಿದ್ದಾರೆ. ಈ ಮೂಲಕ ವಿಜಯಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ(70th Miss World pageant) ಪಂಜಾಬ್‌ನ 21 ವರ್ಷದ ನಟಿ(Actress) ಮತ್ತು ರೂಪದರ್ಶಿ ಹರ್ನಾಜ್ ದಕ್ಷಿಣ ಆಫ್ರಿಕಾದ ಲಾಲೆಲಾ ಮ್ಸ್ವಾನೆ ( South Africa's Lalela Mwasane ) ಮತ್ತು ಪರಾಗ್ವೆಯ ನಾಡಿಯಾ ಫೆರೇರಾರನ್ನು(Nadia Ferrera of Paraguay) ಸೋಲಿಸಿ ಕಿರೀಟ ಮುಡಿಗೇರಿಸಿಕೊಂಡರು. ಲಾರಾ ದತ್ತ ನಂತರ ಬರೋಬ್ಬರಿ 21 ವರ್ಷಗಳ ಬಳಿಕ ಕಿರೀಟ ಭಾರತಕ್ಕೆ ಸಂದಿದೆ. ಹಾಗಾಗಿಯೇ ಹರ್ನಾಜ್ ಸಂಧು ಗೆಲುವನ್ನು ಸಂಪೂರ್ಣ ಭಾರತೀಯರ ಗೆಲುವಾಗಿ(Victory) ಆಚರಿಸಲಾಗುತ್ತಿದೆ.

ಮನದಾಳದ ಮಾತು
ಕಿರೀಟ ಮುಡಿಗೇರಿಸಿಕೊಂಡ ನಂತರ ವಿಜಯದ ಸಂಭ್ರಮದಲ್ಲಿದ್ದ ಹರ್ನಾಜ್ ಅವರು, ನ್ಯೂಸ್ 18ನೊಂದಿಗೆ ಇಸ್ರೇಲ್‌ನಿಂದ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ಹರ್ನಾಜ್ ತನ್ನ ದೇಶ ಭಾರತವನ್ನು ವಿಜಯಿಯಾಗಿ ಘೋಷಿಸಿದಾಗ ಆಕೆಗಾದ ಸಂತಸ ಹಾಗೂ ತಾಯ್ನಾಡಿಗೆ ಮರಳಿದ ನಂತರ ಆಕೆಯನ್ನು ಸ್ವಾಗತಿಸುವ ಪರಿಯ ಬಗ್ಗೆ ಆಕೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Miss Universe: 21 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಭುವನ ಸುಂದರಿ ಪಟ್ಟ, ಮಿಸ್ ಯೂನಿವರ್ಸ್ ಆಗಿ ಹೊರ ಹೊಮ್ಮಿದ ಹರ್ನಾಜ್ ಸಂಧು

ಅಭಿನಂದನೆಗಳು, 21 ವರ್ಷಗಳ ಬಳಿಕ ಮಿಸ್ ಯೂನಿವರ್ಸ್ (ಭುವನ ಸುಂದರಿ) ವಿಜಯಿಯಾಗಿರುವಿರಿ. ದೇಶ ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ.ನಾನು ಇದಕ್ಕಾಗಿ ಸಂಪೂರ್ಣ ದೇಶಕ್ಕೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ಏಕೆಂದರೆ ಜನತೆಯ ಬೆಂಬಲ ಹಾಗೂ ಪ್ರಾರ್ಥನೆ ಇಲ್ಲದಿದ್ದರೆ ನಾನು ಈ ಮಟ್ಟಕ್ಕೆ ಏರಲು ಸಾಧ್ಯವಿರುತ್ತಿರಲಿಲ್ಲ.

ನಿಮ್ಮನ್ನು ವಿಜಯಿಯೆಂದು ಘೋಷಿಸಿದ ಆ ಕ್ಷಣವನ್ನು ನೀವು ಹೇಗೆ ವಿವರಿಸಬಲ್ಲಿರಿ?
ಕಳೆದ ವರ್ಷ ಅಡೆಲಿನ್ ಕ್ಯಾಸ್ಟೆಲಿನೊ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಮತ್ತು 2001ರಿಂದ ಮೊದಲ ಬಾರಿಗೆ ಟಾಪ್ ಐದನೇ ಸುತ್ತನ್ನು ತಲುಪಿದರು. ಸ್ಪರ್ಧೆಯಲ್ಲಿ ನೀವು ಇದಕ್ಕಿಂತಲೂ ಇನ್ನೂ ಮುನ್ನೇರಬೇಕು ಎಂಬುದಾಗಿ ಜನರು ನನ್ನನ್ನು ಒತ್ತಾಯಪಡಿಸಿದ್ದರಿಂದ ನಾನು ಹೆಚ್ಚಿನ ಒತ್ತಡಕ್ಕೆ ಒಳಗಾಗಿದ್ದೆ.

ಟಾಪ್ 2ನಲ್ಲಿ ನನ್ನ ಹೆಸರನ್ನು ಘೋಷಿಸಿದಾಗ, ನಾಡಿಯಾ ಫೆರೀರಾ (ಪೆರುಗ್ವೆ, ರನ್ನರ್-ಅಪ್) ಅವರ ಕೈ ಹಿಡಿದುಕೊಂಡು ನಾನು ನಿಂತಾಗ, ಇಲ್ಲಿಯವರೆಗೆ ನಾನು ತಲುಪಿದ್ದೇನೆ. ಹೀಗಾಗಿ ಕಿರೀಟವನ್ನು ನಾನು ಅಲಂಕರಿಸಬೇಕೆಂಬ ತುಡಿತವನ್ನು ನಾನು ಹೊಂದಿದ್ದೆ. ನಾನು ಭಾರತದ ಹೆಮ್ಮೆಯಾಗಲು ಬಯಸುತ್ತೇನೆ ಎಂದು ತಿಳಿಸಿದ್ದೆ. ದೇಶವನ್ನು ಈ ಮೂಲಕ ಪ್ರತಿನಿಧಿಸಿದ ಭಾರತ ಹೆಮ್ಮೆಪಡುವಂತೆ ಮಾಡಬೇಕು ಎಂದು ನಾನು ಆಶಿಸಿದ್ದೆ.

ಈ ಕ್ಷಣವನ್ನು ಆದಷ್ಟು ಬೇಗನೇ ತೀರ್ಪುಗಾರರು ಘೋಷಿಸಲು ಎಂದು ನಾನು ಕಾಯುತ್ತಿದ್ದೆ. ಅಂತಿಮವಾಗಿ ಭಾರತದ ಹೆಸರನ್ನು ಅವರು ಘೋಷಿಸಿದಾಗ ಖುಷಿಯ ಆಶ್ರುತರ್ಪಣ ನನ್ನ ಕಣ್ಣುಗಳನ್ನು ತೇವಗೊಳಿಸಿತು. ನನಗೆ ಅಳು ತಡೆಯಲಾಗಲಿಲ್ಲ. ಏಕೆಂದರೆ ಈ ಕ್ಷಣಕ್ಕಾಗಿ ನನ್ನ ತಾಯ್ನಾಡು ಹಾಗೂ ಭಾರತೀಯರು ಕಾಯುತ್ತಿದ್ದರು. ಈ ಕ್ಷಣ ನನ್ನಿಂದ ಸಫಲವಾಯಿತು ಎಂಬ ಸಂತಸದ ಉದ್ವೇಗವನ್ನು ನನಗೆ ತಡೆದುಕೊಳ್ಳಲಾಗಲಿಲ್ಲವೆಂದು ಹರ್ನಾಜ್ ಭಾವುಕರಾದರು.

ನಿಮ್ಮ ಈ ಗೆಲುವನ್ನು ನೀವು ಯಾರಿಗೆ ಅರ್ಪಿಸಲು ಬಯಸುತ್ತೀರಿ?
ವೈಯಕ್ತಿಕವಾಗಿ ಹೇಳುವುದಾದರೆ ನನ್ನ ಒಳ್ಳೆಯ ಸ್ನೇಹಿತೆ ಹಾಗೂ ನನಗೆ ಎಲ್ಲಾ ರೀತಿಯಲ್ಲೂ ಬೆಂಬಲ ನೀಡುವ ನನ್ನ ಅಮ್ಮನಿಗೆ ನನ್ನ ಗೆಲುವನ್ನು ಸಮರ್ಪಿಸುತ್ತಿದ್ದೇನೆ. ರಾಷ್ಟ್ರೀಯ ನಿರ್ದೇಶಕಿ ನತಾಶಾ ಗ್ರೋವರ್ ಮತ್ತು ವಿನೀತ್ ಜೈನ್ (ಟೈಮ್ಸ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರು) ಈ ಸಮಯದಲ್ಲಿ ನನಗೆ ಹೆಚ್ಚು ಬೆಂಬಲ ಸಹಕಾರ ನೀಡಿದ್ದಾರೆ ಹಾಗೂ ಈ ಸಮಯದಲ್ಲಿ ನನ್ನ ವಿಜಯದಲ್ಲಿ ಅವರದ್ದೂ ಸಮಪಾಲು ಇದೆ.

ನನ್ನ ತಾಯ್ನಾಡು ಹಾಗೂ ನನ್ನ ಜನರಿಗೆ ನನ್ನ ಗೆಲುವನ್ನು ಮುಡಿಪಾಗಿಡಲು ಬಯಸುತ್ತೇನೆ. ಏಕೆಂದರೆ ಜನರ ಪ್ರೀತಿ, ಬೆಂಬಲ ಇಲ್ಲದೇ ಇರುತ್ತಿದ್ದರೆ ನಾನಿಂದು ಈ ಸ್ಥಾನದಲ್ಲಿ ಇರುತ್ತಿರಲಿಲ್ಲ.

ನಿಮ್ಮ ಗೆಲುವಿಗೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರ ಪ್ರತಿಕ್ರಿಯೆ ಹೇಗಿದೆ?
ನಾನು ತಾಯ್ನಾಡಿಗೆ ಮರಳಲು ಹೆಚ್ಚು ಉತ್ಸುಕಳಾಗಿರುವೆ ಹಾಗೂ ಕಾತರದಿಂದ ಕಾಯುತ್ತಿರುವೆ. ಮಿಸ್ ದಿವಾ (ಸಪ್ಟೆಂಬರ್ 30ರಂದು ಅಂತಿಮ ಸ್ಪರ್ಧೆ ನಡೆಯಿತು) ಪ್ರಶಸ್ತಿ ಗೆದ್ದಲ್ಲಿಂದ ನನ್ನ ತಾಯಿಯನ್ನು ನಾನು ಭೇಟಿಯಾಗಿಲ್ಲ. ಹಾಗಾಗಿ ನಾನು ಆಕೆಯನ್ನು ಪ್ರೀತಿಯಿಂದ ತಬ್ಬಿಕೊಳ್ಳಲು ಬಯಸುತ್ತೇನೆ ಹಾಗೂ ಅವರೊಂದಿಗೆ ಭಾಂಗ್ರಾ ಮಾಡಲು ಬಯಸುತ್ತೇನೆ. ನಾನು ಗೋಲ್ಡನ್ ಟೆಂಪಲ್‌ಗೆ ಹೋಗಲು ಬಯಸುತ್ತೇನೆ. ಏಕೆಂದರೆ ಕಿರೀಟ ನನಗೆ ದೊರೆಯುವಂತಾಗಲು ನಾನು ಇಲ್ಲಿ ಬೇಡಿಕೊಂಡಿರುವೆ ಹಾಗೂ ನನ್ನ ಪ್ರಾರ್ಥನೆ ಕನಸು ಈಡೇರಿದೆ. ಹಾಗಾಗಿ ಕಿರೀಟವನ್ನು ಗೋಲ್ಡನ್ ಟೆಂಪಲ್‌ಗೆ ತೆಗೆದುಕೊಂಡು ಹೋಗಿ ಪ್ರಾರ್ಥಿಸಲು ಬಯಸಿರುವೆ.

ಇದನ್ನೂ ಓದಿ: ಸೌಂದರ್ಯ ಸ್ಪರ್ಧೆಯಲ್ಲಿ ಬೊಟಾಕ್ಸ್ ಪಡೆದ ಒಂಟೆಗಳಿಗೆ ಗೆಟ್​ಔಟ್, ಅವುಗಳಿಗೂ ಸೌಂದರ್ಯ ಪ್ರಜ್ಞೆ!?

ನಿಮ್ಮ ಸೌಂದರ್ಯ ಲೋಕದ ಪ್ರಯಾಣ ಎಷ್ಟು ಕಠಿಣವಾಗಿತ್ತು? ನೀವು ಮಿಸ್ ಯುನಿವರ್ಸ್ ಗೆಲ್ಲಲು ಸಾಧ್ಯವಾಗುತ್ತದೆ ಎಂದು ನೀವು ಎಂದಾದರೂ ಭಾವಿಸಿದ್ದೀರಾ?
ಪಂಜಾಬ್‌ನ ಇತಿಹಾಸವೇ ಕಷ್ಟಕರ ಹಾದಿಯಲ್ಲಿ ರೂಪುಗೊಂಡಿದೆ ಎಂಬುದನ್ನು ನಾನು ಹೇಳಲು ಬಯಸುತ್ತೇನೆ. ಗುರುಗಳ ನಾಡು ಇದಾಗಿರುವುದರಿಂದ ಅಸಾಧ್ಯವಾದುದನ್ನು ಸಾಧಿಸುವ ಶಕ್ತಿಯ ಭಾವನೆ ಇಲ್ಲಿ ಯಾವಾಗಲೂ ಒಡಮೂಡುತ್ತದೆ. ಭಾರತೀಯರಾಗಿ ನಾವು ನಿಜವಾಗಲೂ ಆತ್ಮವಿಶ್ವಾಸ ಹಾಗೂ ಧೈರ್ಯಕ್ಕೆ ಹೆಸರುವಾಸಿಯಾಗಿರುವೆವು. ನಮ್ಮ ರಾಷ್ಟ್ರದಿಂದ ನಾನು ಶಕ್ತಿಯನ್ನು ಪಡೆದುಕೊಂಡಿದ್ದೇನೆ. ಭಾರತದ ಧ್ವಜನವನ್ನು ನಾನು ನೋಡಿದಾಗಲೆಲ್ಲಾ ಸಂಪೂರ್ಣ ದೇಶ ನನ್ನೊಂದಿಗೆ ಇದೆ ಎಂಬ ಭಾವನೆ ನನ್ನಲ್ಲಿತ್ತು. ಹಾಗಾಗಿ ನಾನು ಇದನ್ನು ಸಾಧಿಸುತ್ತೇನೆ ಎಂಬ ಛಲ ನನ್ನಲ್ಲಿ ಹುಟ್ಟಿತ್ತು.
Published by:vanithasanjevani vanithasanjevani
First published: