ತಂದೆ ಮಗನನ್ನು ಬಲಿ ಪಡೆದ ವಿಜಯವಾಡ ಹೆದ್ದಾರಿ: ಕೂದಲೆಳೆ ಅಂತರದಲ್ಲಿ ಪಾರಾದ ಜೂ.ಎನ್​ಟಿಆರ್​

news18
Updated:August 29, 2018, 4:09 PM IST
ತಂದೆ ಮಗನನ್ನು ಬಲಿ ಪಡೆದ ವಿಜಯವಾಡ ಹೆದ್ದಾರಿ: ಕೂದಲೆಳೆ ಅಂತರದಲ್ಲಿ ಪಾರಾದ ಜೂ.ಎನ್​ಟಿಆರ್​
news18
Updated: August 29, 2018, 4:09 PM IST
ಅನಿತಾ. ಈ, ನ್ಯೂಸ್ 18 ಕನ್ನಡ

ನಂದಮುರಿ ಹರಿಕೃಷ್ಣ ಅವರ ಕುಟುಂಬಕ್ಕೂ ವಿಜಯವಾಡ ಹೆದ್ದಾರಿಗೂ ಯಾವ ಜನ್ಮದ ವೈರತ್ವವೋ ತಿಳಿಯದು. ಒಂದೇ ಕುಟುಂಬದ ಎರಡು ಜೀವಗಳನ್ನು ಈ ರಸ್ತೆ ಬಲಿ ಪಡೆದಿದೆ. ಹೌದು ಇಂದು (ಆ.29) ಮುಂಜಾನೆ ತಮ್ಮ ಅಭಿಮಾನಿಯೊಬ್ಬರ ಮಗನ ವಿವಾಹಕ್ಕೆ ಹೈದರಾಬಾದಿನಿಂದ ಎಸ್​ಯುವಿ ಕಾರಿನಲ್ಲಿ ಮೂರು ಜನರೊಂದಿಗೆ ಹೊರಟ್ಟಿದ್ದ ಹರಿಕೃಷ್ಣ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಬೆಳಗಿನ ಜಾವ ಕಾರು ಚಾಲನೆ ಮಾಡುತ್ತಲೇ ನೀರಿನ ಬಾಟಲಿಗಾಗಿ ಹುಟುಕಾಟ ನಡೆಸುವಾಗ ಕಾರು ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಅಲ್ಲದೆ ಈ ವೇಳೆ ಹರಿಕೃಷ್ಣ ಸೀಟ್​ ಬೆಲ್ಟ್​ ಹಾಕಿರದ ಕಾರಣ ಅವರು ಅಪಘಾತವಾದ ಕೂಡಲೇ ಕಾರಿನಿಂದ ಕೆಳಗೆ ಬಿದ್ದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕುಟುಂಬಕ್ಕೆ ಕಂಠಕವಾದ ಇದೇ ರಸ್ತೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಅಂದರೆ ಹರಿಕೃಷ್ಣ ಅವರ ದೊಡ್ಡ ಮಗ ನಂದಮುರಿ ಜಾನಕಿರಾಮ್​ ಸಹ ರಸ್ತೆ ಅಪಘಾತದಲ್ಲೇ ಸಾವನ್ನಪ್ಪಿದ್ದರು. ಅದೂ ಸಹ ಅವರೇ ಚಾಲನೆ ಮಾಡುತ್ತಿದ್ದ ಎಸ್​ಯುವಿ ಕಾರಿಗೆ ಟ್ಯ್ರಾಕ್ಟರ್​ ಒಂದು ಡಿಕ್ಕಿ ಹೊಡೆದು ಅವರು ಮೃತಪಟ್ಟಿದ್ದರು. ಇನ್ನೂ 2009ರಲ್ಲಿ ಜೂನಿಯರ್​ ಎನ್​ಟಿಆರ್​ ಅವರಿಗೂ ಇದೇ ಮಾರ್ಗವಾಗಿ ಕಾರಿನಲ್ಲಿ ಹೋಗುವಾಗ ಅಪಘಾತವಾಗಿ ಗಾಯಗೊಂಡಿದ್ದರು. ಒಟ್ಟಾರೆ ಹರಿಕೃಷ್ಣ ಕುಟುಂಬಕ್ಕೂ ಈ ವಿಜಯವಾಡ ಹೆದ್ದಾರಿಗೂ ಅದ್ಯಾವ ವೈರತ್ವವಿದೆಯೋ ತಿಳಿಯದು.

ಮಗನ ಸಾವಿನ ನಂತರ ಹರಿಕೃಷ್ಣ ಮನೆಯಗೆ ಬರುವ ಸ್ನೇಹಿತರು ಹಾಗೂ ಸಂಬಂಧಿಕರಿಗೆ ರಾತ್ರಿವೇಳೆ ವಾಹನ ಚಾಲನೆ ಮಾಡದಂತೆ ಹೇಳುತ್ತಿದ್ದರಂತೆ. ಅಲ್ಲದೆ ಆ ಘಟನೆ ನಂತರ ತಮ್ಮ ಸಿನಿಮಾಗಳ ಆರಂಭದಲ್ಲೂ ರಾತ್ರಿ ವೇಳೆ ವಾಹನ ಚಾಲನೆ ಮಾಡದಂತೆ ಹಾಗೂ ವೇಗವಾಗಿ ವಾಹನ ಚಲಿಸಬಾದೆಂದು ಅರಿವು ಮೂಡಿಸುವ ಪ್ರಕಟಣೆಗಳನ್ನು ನೀಡಲು ಆರಂಭಿಸಿದ್ದರಂತೆ. ಇಷ್ಟಾದರೂ ಹರಿಕೃಷ್ಣ ಅವರೇ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವುದು ವಿರ್ಯಾಸವೇ ಸರಿ.

ಕಾರು ಚಾಲನೆಯಲ್ಲಿ ಅನುಭವಿಯಾಗಿದ್ದ ಹರಿಕೃಷ್ಣ ಈ ರೀತಿ ಅಪಘಾತದಲ್ಲಿ ಸಾವನ್ನಪ್ಪಿರುವುದು ನಿಜಕ್ಕೂ ವಿಷಾದದ ವಿಷಯ. ಎನ್​ಟಿಆರ್​ ಅವರ ಚೈತನ್ಯರಥ ಯಾತ್ರೆಯಲ್ಲಿ ತಂದೆಯ ಚೈತನ್ಯ ರಥಕ್ಕೆ ಸಾರಥಿಯಾಗಿ ಲಕ್ಷ ಕಿ.ಮೀ. ವಾಹನ ಚಾಲನೆ ಮಾಡಿದ್ದು ಸಹ ಇದೇ ಹರಿಕೃಷ್ಣ. ಕಾಲಿನಲ್ಲಿ ಬೊಬ್ಬೆ ಬಂದರೂ ರಥ ಇಳಿಯದ ತನ್ನ ತಂದೆಯ ಬಗ್ಗೆ ಮಗ ಕಲ್ಯಾಣ ರಾಮ್​ ಖಾಸಗಿ ಕಾರ್ಯಕ್ರಮದಲ್ಲಿ ಖುದ್ದು ಹೇಳಿಕೊಂಡಿದ್ದಾರೆ.
Loading...

ಹರಿಕೃಷ್ಣ ಮಾತ್ರವಲ್ಲದೆ ಅವರ ಮಕ್ಕಳಾದ ಜಾನಕಿ ರಾಮ್​ ಹಾಗೂ ಜೂನಿಯರ್​ ಎನ್​ಟಿಆರ್​ ಸಹ ಎಲ್ಲೇ ಹೋದರೇ ತಾವೇ ಕಾರು ಚಾಲನೆ ಮಾಡುತ್ತಾರೆ. ಅದರಲ್ಲೂ ಹರಿಕೃಷ್ಣ ಮಕ್ಕಳ ಚಿತ್ರೀಕರಣದ ಸ್ಥಳಕ್ಕೆ ಅಥವಾ ಸಂಬಂಧಿಕರ ಮನೆಗಳಿಗೆ ತೆರೆಳಿದರೂ ತಾವೇ ಕಾರು ಚಾಲನೆ ಮಾಡುತ್ತಿದ್ದರಂತೆ. ಅವರು ಕೇವಲ ಕಾರು ಮಾತ್ರವಲ್ಲದೆ, ಟ್ರ್ಯಾಕ್ಟರ್​, ಲಾರಿ ಎಲ್ಲವನ್ನೂ ಬಹಳ ಸುಲಭವಾಗಿ ಹಾಗೂ ಜಾಗರೂಕತೆಯಿಂದ ಓಡಿಸುತ್ತಿದ್ದರಂತೆ.

ಮುಹೂರ್ತವನ್ನು ನಂಬುತ್ತಿದ್ದರಂತೆ ಹರಿಕೃಷ್ಣ

ಮಗನ ಸಾವಿನಿಂದ ಕುಗ್ಗಿ ಹೋಗಿದ್ದ ಹರಿಕೃಷ್ಣ ಒಬ್ಬರೇ ಕಾರಿನಲ್ಲಿ ಪ್ರಯಾಣಿಸುವುದನ್ನೇ ಬಿಟ್ಟಿದ್ದರಂತೆ. ಅದರಲ್ಲೂ ಐದು ಮಂದಿ ಜತೆಗಿದ್ದರೆ ಮಾತ್ರ ಅವರು ಕಾರು ಹತ್ತುತ್ತಿದ್ದರಂತೆ. ಮನೆಯಿಂದ ಹೊರಗಡೆ ಹೋಗುವಾಗ ಪ್ರತಿ ಬಾರಿಯೂ ಮುಹೂರ್ತ ಹಾಗೂ ಒಳ್ಳೆಯ ಸಮಯವನ್ನು ನೋಡಿಕೊಂಡೇ ಮನೆಯಿಂದ ಹೋಗುತ್ತಿದ್ದರಂತೆ. ಅಲ್ಲದೆ ಮಗನ ಸಾವಿನಿಂದಾಗಿ ಕಾರಿನ ಚಾಲನೆಯಲ್ಲಿ ಮತ್ತಷ್ಟು ಜಾಗರೂಕತೆಗಳನ್ನು ಪಾಲಿಸುತ್ತಿದ್ದರಂತೆ ಎಂದು ಅವರ ಸ್ನೇಹಿತ ಪ್ರಕಾಶ್​ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ದೊಡ್ಡ ಮಗನ ಸಾವಿನ ನಂತರ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡಿದ್ದ ಹರಿಕೃಷ್ಣ ಕೇವಲ ತಮ್ಮ ಮಕ್ಕಳ ಸಿನಿಮಾ ಕಾರ್ಯಕ್ರಮ ಹಾಗೂ ತಂದೆಯ ಜಯಂತಿಯಲ್ಲಿ  ಭಾಗವಹಿಸಲು ಮಾತ್ರ ಮನೆಯಿಂದ ಹೊರ ಬರುತ್ತಿದ್ದರು ಎನ್ನಲಾಗುತ್ತಿದೆ.

 
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...