ಹರಿದ್ವಾರ ಕುಂಭಮೇಳ ಕೊರೋನಾ ಸೂಪರ್​ ಸ್ಪ್ರೆಡರ್​ ಆಗಲಿದೆಯಾ? ಉನ್ನತ ಮಟ್ಟದ ಸಭೆಯಲ್ಲಿ ಅಧಿಕಾರಿಗಳ ಕಳವಳ

ಹರಿದ್ವಾರದಲ್ಲಿ ಏಪ್ರಿಲ್​ 1ರಿಂದ ಕುಂಭ ಮೇಳ ನಡೆಯುತ್ತಿದ್ದು, ಏಪ್ರಿಲ್​ 30ರವರೆಗೆ ನಡೆಯಲಿದೆ. ಇದು ಕೊರೋನಾ ಮತ್ತಷ್ಟು ಹರಡುವಿಕೆಗೆ ಕಾರಣವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ದೇಶದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಪ್ರಕರಣಗಳು ಹೆಚ್ಚುತ್ತಿದ್ದು, ಕೋವಿಡ್​ ಎರಡನೇ ಅಲೆ ನಿಯಂತ್ರಿಸಲು ಸರ್ಕಾರ ಹರಸಾಹಸ ನಡೆಸುತ್ತಿದೆ. ಈಗಾಗಲೇ ಮಹಾರಾಷ್ಟ್ರ, ದೆಹಲಿಯಲ್ಲಿ ನೈಟ್​ ಕರ್ಫ್ಯೂ ಜಾರಿ ಮಾಡುವ ಮೂಲಕ ಸರ್ಕಾರ ಕಟ್ಟುನಿಟ್ಟಿನ ಕ್ರಮ ವಹಿಸುತ್ತಿದೆ. ದೇಶದಲ್ಲಿ ತಗ್ಗಿದ್ದ ಸೋಂಕಿನ ಪ್ರಮಾಣ ಮತ್ತೆ ಏರುಗತಿ ಕಾಣುತ್ತಿರುವುದು ಸರ್ಕಾರಕ್ಕೆ ದೊಡ್ಡ ಸಮಸ್ಯೆಯಾಗಿದೆ. ಈ ನಡುವೆ ಸೋಂಕಿನ ಹರಡುವಿಕೆಗೆ ಕುಂಭ ಮೇಳವು ಕಾರಣವಾಗಿರುವ ಸಾಧ್ಯತೆ ಇದೆ ಎಂದು ಸರ್ಕಾರ ಉನ್ನತ ಮಟ್ಟದ ಅಧಿಕಾರಿಗಳ ತಂಡ ತಿಳಿಸಿದೆ. ಉತ್ತರಾಖಂಡದ ಹರಿದ್ವಾರದಲ್ಲಿ ಏಪ್ರಿಲ್​ 1ರಿಂದ ಕುಂಭ ಮೇಳ ನಡೆಯುತ್ತಿದ್ದು, ಇದು ಕೊರೋನಾ ಮತ್ತಷ್ಟು ಹರಡುವಿಕೆಗೆ ಕಾರಣವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಕೋವಿಡ್​ ಪರಿಸ್ಥಿತಿ ಕುರಿತು ಕಾರ್ಯದರ್ಶಿ ಮಟ್ಟದಲ್ಲಿ ಉನ್ನತ ಸಭೆ ನಡೆದಿದ್ದು, ಈ ವೇಳೆ ಕುಂಭ ಮೇಳ ನಡೆಯುತ್ತಿರುವ ಬಗ್ಗೆ ಕೆಲ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಕುಂಭ ಮೇಳವೂ ಕೊರೋನಾ ಸೂಪರ್​ ಸ್ಪ್ರೆಡರ್​ ಆಗಬಹುದಾಗಿದೆ. ಈ ಹಿನ್ನಲೆ ನಿಗದಿಗೂ ಮೊದಲೇ ಕಾರ್ಯಕ್ರಮವನ್ನು ಮುಗಿಸುವುದು ಒಳಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಧಿಕಾರಿಗಳು ಎಂದು ಎಎನ್​ಐ ವರದಿ ಮಾಡಿದೆ. ಇನ್ನು ಏಪ್ರಿಲ್​ 1 ರಿಂದ ಆರಂಭವಾಗಿರುವ ಈ ಕುಂಭಮೇಳ ಇದೇ ಏಪ್ರಿಲ್​ 30ರವರೆಗೆ ನಡೆಯಲಿದೆ.
  ಕುಂಭ ಮೇಳಕ್ಕೆ ಭೇಟಿ ನೀಡುವ ಸಾಧುಗಳು, ಭಕ್ತರು ಮಾಸ್ಕ್​ ಧರಿಸುವ ಬಗ್ಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವುದು ಅವಶ್ಯವಾಗಿದೆ, ಇದಕ್ಕಾಗಿ ಕೇಂದ್ರದಿಂದ ರಚನೆಯಾಗಿರುವ ತಂಡ ಧಾರ್ಮಿಕ ಮುಖಂಡರ ಸಹಾಯವನ್ನು ಪಡೆಯಬೇಕಿದೆ. ಅಲ್ಲದೇ ಸರ್ಕಾರವು ಕೂಡ ಸೋಂಕಿನ ಕುರಿತು ಜನರಿಗೆ ಟಿವಿ, ರೇಡಿಯೋ, ಸಾರ್ವಜನಿಕ ಪೋಸ್ಟರ್​ ಮಕೂಲಕ ಜಾಗೃತಿ ಮೂಡಿಸಬೇಕಿದೆ ಎಂದು ಸರ್ಕಾರ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

  ಇನ್ನು ಈ ಕುಂಭಮೇಳವನ್ನು ಸಮಯಕ್ಕೂ ಮೊದಲೇ ಮುಕ್ತಾಯಗೊಳಿಸುವ ಬಗ್ಗೆ ಕೇಂದ್ರ ಇನ್ನು ಯಾವುದೇ ಯೋಜನೆ ರೂಪಿಸಿಲ್ಲ. ಸರ್ಕಾರ ಸೋಂಕು ಹರಡುವಿಕೆಯನ್ನು ತಡೆಯಲು ಯಾವ ಮಾರ್ಗಸೂಚಿ ಕೈಗೊಳ್ಳಬಹುದು ಎಂಬ ಕುರಿತ ಆಲೋಚನೆಗಳೊಂದಿಗೆ ಬರುವಂತೆ ಅಧಿಕಾರಿಗಳಿಗೆ ತಿಳಿಸಿದೆ. ಜನರಿಗೆ ಕೊರೋನಾ ಸೋಂಕಿನ ಭಯ ಹೋಗಿದ್ದು, ಇದೇ ಹಿನ್ನಲೆ ನಿಯಮಗಳ ಉಲ್ಲಂಘನೆ ಮಾಡುತ್ತಿದ್ದಾರೆ. ಈ ಹಿನ್ನಲೆ ಈ ಕೊರೋನಾ ಬಗ್ಗೆ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಚಾರಣೆ ನಡೆಸ ಬೇಕು ಎಂದು ಸರ್ಕಾರ ತಿಳಿಸಿದೆ ಎಂದು ಮೂಲಗಳು ವರದಿ ಮಾಡಿದೆ.

  ಇದನ್ನು ಓದಿ: ಏ.10 ರಿಂದ 13ರ ತನಕ ಮಹದೇಶ್ವರ ಬೆಟ್ಟದ ಯುಗಾದಿ ಜಾತ್ರೆಗೆ ಭಕ್ತರ ಪ್ರವೇಶ ನಿಷೇಧ

  ಈಗಾಗಲೇ ಉತ್ತರಾಖಂಡ ಸರ್ಕಾರ ಕೋವಿಡ್​ ಮಾರ್ಗಸೂಚಿ ಪ್ರಕಟ ಮಾಡಿದ್ದು, ಅದನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ. ಕುಂಭ ಮೇಳಕ್ಕೆ ಆಗಮಿಸುವವರು 72ಗಂಟೆಗಳ ಮುನ್ನ ಆರ್​ಟಿಪಿಸಿಆರ್​ ಪರೀಕ್ಷೆಗೆ ಒಳಗಾಗಬೇಕಿದ್ದು, ನೆಗಟಿವ್​ ವರದಿ ಕಡ್ಡಾಯವಾಗಿದೆ.

  ಕೇಂದ್ರ ಸರ್ಕಾರವೂ ಕೂಡ ಕುಂಭ ಮೇಳದ ವೇಳೆ ಕೋವಿಡ್​ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಈಗಾಗಲೇ ಉತ್ತರಾಖಂಡ ಸರ್ಕಾರಕ್ಕೆ ಸೂಚನೆ ನೀಡಿದೆ.
  Published by:Seema R
  First published: