ಅನಾರೋಗ್ಯ ಹಿನ್ನೆಲೆಯಲ್ಲಿ ವಿಲ್​ ಘೋಷಿಸಿದ ಹಾರ್ದಿಕ್​ ಪಟೇಲ್​; 9 ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ

news18
Updated:September 3, 2018, 5:02 PM IST
ಅನಾರೋಗ್ಯ ಹಿನ್ನೆಲೆಯಲ್ಲಿ ವಿಲ್​ ಘೋಷಿಸಿದ ಹಾರ್ದಿಕ್​ ಪಟೇಲ್​; 9 ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ
Ahmedabad: A doctor checks the health of Patidar Anamat Andolan Samiti (PAAS) leader Hardik Patel on the 7th day of his indefinite hunger strike for reservation, in Ahmedabad on Friday, Aug 31, 2018. (PTI Photo/Santosh Hirlekar) (PTI8_31_2018_000071B)
news18
Updated: September 3, 2018, 5:02 PM IST
ನ್ಯೂಸ್​18 ಕನ್ನಡ

ಅಹಮದಾಬಾದ್​ (ಸೆ. 3): ಪಟೇಲ್ ಸಮುದಾಯದ ಮೀಸಲಾತಿ, ರೈತರ ಸಾಲಮನ್ನಾ, ಪಟೇಲ್ ಸಮುದಾಯಕ್ಕಾಗಿ ಉದ್ಯೋಗ, ಶಿಕ್ಷಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 9ನೇ ದಿನಕ್ಕೆ ಕಾಲಿಟ್ಟಿದೆ.

ಈ ಸತ್ಯಾಗ್ರಹದ ಪ್ರಮುಖ ರೂವಾರಿ ಪಾಟೀದಾರ್​ ಅನಾಮತ್​ ಆಂದೋಲನ್​ ಸಮಿತಿ (ಪಾಸ್​) ನಾಯಕ ಹಾರ್ದಿಕ್ ಪಟೇಲ್ ಅವರು ಆಗಸ್ಟ್​ 25ರಿಂದ ಉಪವಾಸವಿರುವುದರಿಂದ ಅವರ ಆರೋಗ್ಯ ಕ್ಷೀಣಿಸಿದೆ. 9 ದಿನಗಳಿಂದ ನೀರು ಸಹ ಸೇವಿಸದೆ ಸತ್ಯಾಗ್ರಹ ನಡೆಸಿರುವ ಹಾರ್ದಿಕ್​ ಅವರ ತೂಕ ಕಡಿಮೆಯಾಗಿದ್ದು, ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣವೂ ಇಳಿಮುಖವಾಗುತ್ತಿದೆ. ಈ ಮಧ್ಯೆ, ಹಾರ್ದಿಕ್​ ಪಟೇಲ್​ ತಾವು ಬರೆದಿರುವ ವಿಲ್​ ಅನ್ನು ಬಹಿರಂಗಪಡಿಸಿದ್ದಾರೆ.

ಪಾಸ್​ ವಕ್ತಾರ ಮನೋಜ್​ ಪನಾರ ಅವರು ಹಾರ್ದಿಕ್ ಪಟೇಲ್​ ಆರೋಗ್ಯಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದು, ಆತ ಮಾತನಾಡಲು ಅಥವಾ ನಡೆಯುವ ಸಾಧ್ಯತೆ ಕಡಿಮೆ. ಅವರ ದೇಹದ ಪ್ರಮುಖ ಅಂಗಾಂಗಗಳ ಸಾಮರ್ಥ್ಯ ಕೂಡ ಕುಸಿಯುತ್ತಿದೆ ಎಂದು ತಿಳಿಸಿದ್ದಾರೆ.

ಹೀಗಾಗಿ, ಕೇಂದ್ರ ಸರ್ಕಾರ ಆದಷ್ಟು ಬೇಗ ತಮ್ಮ ಬೇಡಿಕೆಗೆ ಸ್ಪಂದಿಸಲಿದ್ದರೆ ಉಪವಾಸದಿಂದ ಆರೋಗ್ಯಸ್ಥಿತಿ ಇನ್ನಷ್ಟು ಹದಗೆಡುವ ಭಯ ಹಾರ್ದಿಕ್​ ಪಟೇಲ್​ ಮತ್ತು ಇತರೆ ಪಾಸ್​ ನಾಯಕರನ್ನು ಕಾಡುತ್ತಿದೆ. ಹೀಗಾಗಿ, ವಿಲ್​ ಬರೆದಿರುವ ಹಾರ್ದಿಕ್​ ಪಟೇಲ್​, ತನ್ನ ಅಪ್ಪ-ಅಮ್ಮ, ತಂಗಿ, ಗೋಶಾಲೆ ಹೆಸರನ್ನು ವಿಲ್​ನಲ್ಲಿ ಬರೆದಿದ್ದಾರೆ.

ಉಪವಾಸ ಸತ್ಯಾಗ್ರಹದಲ್ಲಿ ಒಂದು ವೇಳೆ ನಾನು ಸತ್ತರೆ ನನ್ನ ಕಣ್ಣುಗಳನ್ನು ಕುರುಡರಿಗೆ ದಾನ ಮಾಡಿ. ನನ್ನ ಆಕ್ಸಿಸ್​ ಬ್ಯಾಂಕ್ ಖಾತೆಯಲ್ಲಿ 50 ಸಾವಿರ ರೂ.ಗಳಿದ್ದು, ಈ ಪೈಕಿ 30 ಸಾವಿರ ರೂಗಳನ್ನು ನನ್ನ ಕುಟುಂಬಕ್ಕೆ ನೀಡಿ. ಉಳಿದ ಹಣವನ್ನು ರಾಜ್​ಕೋಟ್​ನಲ್ಲಿರುವ ಗೋಶಾಲೆಗೆ ಮತ್ತು 2015ರ ಪಾಟೀದಾರ್​ ಮೀಸಲಾತಿ ಹೋರಾಟದಲ್ಲಿ ಗುಂಡೇಟಿಗೆ ಬಲಿಯಾಗಿ ಪ್ರಾಣ ಕಳೆದಕೊಂಡ ಯುವಕರ ಕುಟುಂಬಸ್ಥರಿಗೆ ನೀಡುವಂತೆ ಹಾರ್ದಿಕ್ ಪಟೇಲ್ ಮನವಿ ಮಾಡಿದ್ದಾರೆ.
Loading...

ಜೊತೆಗೆ, ಒಂದು ಜೀವವಿಮೆ, ಒಂದು ಕಾರ್​ ಇದೆ ಎಂದು ಕೂಡ ವಿಲ್​ನಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್​ ನಾಯಕರು ಅಹಮದಾಬಾದ್​ನಲ್ಲಿರುವ ಹಾರ್ದಿಕ್​ ಪಟೇಲ್​ ಅವರ ಮನೆಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿದ್ದಾರೆ. ಕಾಂಗ್ರೆಸ್ ಜೊತೆಗೆ ರಾಷ್ಟ್ರೀಯ ಜನತಾದಳ, ಆಮ್​ ಆದ್ಮಿ ಪಾರ್ಟಿ ನಾಯಕರು ಕೂಡ ಹಾರ್ದಿಕ್​ ಮನೆಗೆ ತೆರಳಿ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಆದರೆ, ಇದುವರೆಗೂ ಗುಜರಾತ್​ ರಾಜ್ಯ ಸರ್ಕಾರ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...